ಮಾರುತಿ ಸ್ವಿಫ್ಟ್‌ಗೆ ಸೆಡ್ಡು ಹೊಡೆಯಲು ಸಿದ್ದವಾಗುತ್ತಿದೆ 'ಹ್ಯುಂಡೈ ಐ10 ನಿಯೋಸ್' ಫೇಸ್‌ಲಿಫ್ಟ್: ಸೆರೆಯಾಯ್ತು ಟೆಸ್ಟಿಂಗ್ ಮಾಡಲ್

ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಕಾರು ತಯಾರಕ ಸಂಸ್ಥೆಯಾದ 'ಹ್ಯುಂಡೈ' ಕಂಪನಿಯ 'i10' ಬಿಡುಗಡೆಯಾದಾಗಿನಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ವಾಹನ ಮಾರುಕಟ್ಟೆಯಲ್ಲಿನ ತೀವ್ರ ಪೈಪೋಟಿ ಹಾಗೂ ಗ್ರಾಹಕರ ಬೇಡಿಕೆ ಅನುಗುಣವಾಗಿ i10 ಕಾರನ್ನು ನವೀಕರಿಸಲಾಗಿದೆ. ಇದರ ಭಾಗವಾಗಿ ಮೊದಲು ಬಂದದ್ದು i10 Nios ಆದರೆ ಈಗ 'i10 Nios ಫೇಸ್‌ಲಿಫ್ಟ್' ಆಗಮಿಸಲು ಸಿದ್ಧವಾಗುತ್ತಿದೆ.

ಕಳೆದ ಕೆಲವು ವರ್ಷಗಳಿಂದ, ಹ್ಯುಂಡೈ ತನ್ನ 'ಗ್ರ್ಯಾಂಡ್ i10 Nios' ನ ಫೇಸ್‌ಲಿಫ್ಟ್ ಆವೃತ್ತಿಯನ್ನು ತರಲು ಶ್ರಮಿಸುತ್ತಿದೆ, ಆದರೆ ಈಗ ಆ ಕನಸು ನನಸಾಗುವ ಸಮಯ ಬಂದಿದೆ. ಇತ್ತೀಚೆಗೆ ಈ ಫೇಸ್ ಲಿಫ್ಟ್ ಆವೃತ್ತಿಯನ್ನು ಟೆಸ್ಟಿಂಗ್ ವೇಳೆ ಗುರ್ತಿಸಲಾಗಿದೆ. ಆದರೆ ಈ ಆವೃತ್ತಿಯು ಚೆನ್ನೈನಲ್ಲಿರುವ ಕಂಪನಿಯ ಸ್ಥಾವರದ ಬಳಿ ಪರೀಕ್ಷೆಯ ಸಮಯದಲ್ಲಿ ಕಂಡುಬಂದಿದೆ, ಆದ್ದರಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಇದು ಅದರ ಹಿಂದಿನ ಮಾದರಿಯನ್ನು ನೆನಪಿಸುತ್ತದೆ.

ಮುಂಬರುವ i10 Nios ಫೇಸ್‌ಲಿಫ್ಟ್‌ನ ನಿಖರವಾದ ವಿನ್ಯಾಸವನ್ನು ಬಹಿರಂಗಪಡಿಸಲಾಗಿಲ್ಲ. ಏಕೆಂದರೆ ಹೆಚ್ಚಿನ ಮುಂಭಾಗ ಮತ್ತು ಹಿಂಭಾಗವನ್ನು ಮುಚ್ಚಲಾಗಿದೆ, ಆದರೆ ನಮಗಿರುವ ಮಾಹಿತಿಯ ಪ್ರಕಾರ ಇದು ನವೀಕರಿಸಿದ LED DRL ಅನ್ನು ಹೊಂದಿದೆ. ಹಾಗೆಯೇ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು ಫಾಗ್ ಲ್ಯಾಂಪ್ ಕೇಸಿಂಗ್ ವಿನ್ಯಾಸವು ಮೊದಲಿನಂತೆಯೇ ಇದೆ. ಮುಂಭಾಗದ ಗ್ರಿಲ್ ಕೂಡ ಕೆಲವು ನವೀಕರಣಗಳನ್ನು ಪಡೆಯುವ ಸಾಧ್ಯತೆಯಿದೆ. ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ ಫೇಸ್‌ಲಿಫ್ಟ್‌ನ ಸೈಡ್ ಪ್ರೊಫೈಲ್ ಸಹ ಅದರ ಪೂರ್ವವರ್ತಿಗೆ ಹೋಲುತ್ತದೆ.

ಇದು ನವೀಕರಿಸಿದ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಹಿಂಭಾಗದ ಪ್ರೊಫೈಲ್ ರಿಫ್ರೆಶ್ ಮಾಡಿದ ಟೈಲ್ ಲ್ಯಾಂಪ್‌ಗಳನ್ನು ಪಡೆದಿದೆ. ಇದು ಇಂಟೀರಿಯರ್‌ನಲ್ಲಿ ಕೆಲವು ಸಣ್ಣ ನವೀಕರಣಗಳನ್ನು ಸಹ ಒಳಗೊಂಡಿರಬಹುದು. ಒಟ್ಟಾರೆಯಾಗಿ ಬಾಹ್ಯ ವಿನ್ಯಾಸವು ಅದರ ಹಿಂದಿನ ಮಾದರಿಯನ್ನು ನೆನಪಿಸುವಂತಿದ್ದರೂ, ಫೇಸ್‌ಲಿಫ್ಟ್‌ ಆದ ಕಾರಣ ಇದು ಕೆಲವು ನವೀಕರಣಗಳನ್ನು ಸ್ವೀಕರಿಸಿದೆ. ಉಳಿದಂತೆ ಎಲ್ಲವೂ ಹಿಂದಿನ ಜನ್ ಮಾದರಿಯಂತೆ ಉಳಿದಿರುವಂತೆ ಕಂಡಿದೆ. ಹೆಚ್ಚಿನ ಮಾಹಿತಿ ಮುಂಬರುವ ದಿನಗಳಲ್ಲಿ ಹೊರಬರಲಿದೆ.

ಉಳಿದಂತೆ ಮುಂಬರುವ 2023 i10 Nios ಫೇಸ್‌ಲಿಫ್ಟ್ ನವೀಕರಿಸಿದ ಡ್ಯಾಶ್‌ಬೋರ್ಡ್, ಹೊಸ ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ರಿಫ್ರೆಶ್ ಮಾಡಿದ ಅಪ್ಹೋಲ್‌ಸ್ಟರಿಯಂತಹ ವೈಶಿಷ್ಟ್ಯಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಆವೃತ್ತಿಯು ಈಗಾಗಲೇ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಒಟ್ಟಾರೆಯಾಗಿ, ಆಂತರಿಕ ವೈಶಿಷ್ಟ್ಯಗಳು ಖಂಡಿತವಾಗಿಯೂ ವಾಹನದ ಬಳಕೆದಾರರ ಮೊಜಿನ ಅನುಭವವನ್ನು ಬೆಂಬಲಿಸುತ್ತವೆ ಎಂದು ನಾವು ಭಾವಿಸುತ್ತೇವೆ.

2023 ಗ್ರಾಂಡ್ i10 ಫೇಸ್‌ಲಿಫ್ಟ್ ಅದೇ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಇದು 83 PS ಪವರ್ ಮತ್ತು 113.8 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 5 ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 100PS ಪವರ್ ಮತ್ತು 172Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ ಇದು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಲಭ್ಯವಿದೆ.

ಈ ಹಿಂದೆ ಜರ್ಮನಿಯಲ್ಲಿ ಸ್ಪಾಟ್ ಟೆಸ್ಟ್‌ನಲ್ಲಿ ಗುರುತಿಸಲಾದ i10 ಟೆಸ್ಟ್ ಮಾಡಲ್, ಸ್ಕೈ ಬ್ಲೂ ಬಣ್ಣದ ಛಾಯೆಯಲ್ಲಿ ಬರುತ್ತದೆ. ಆಗ ಭಾರತದ ಮಾರುಕಟ್ಟೆಯಲ್ಲೂ ಆ ಬಣ್ಣವನ್ನು ಪರಿಚಯಿಸುವ ಸಾಧ್ಯತೆ ಇದೆ ಎಂದು ಭಾವಿಸಲಾಗಿತ್ತು. ಆದರೆ ಇದು ನಮ್ಮ ದೇಶದಲ್ಲಿ ಕೆಂಪು ಮತ್ತು ಆಕ್ವಾ ಟೀಲ್ ಬಣ್ಣಗಳಲ್ಲಿ ಮಾತ್ರವಲ್ಲದೆ ಸಾಮಾನ್ಯ ಬಿಳಿ, ಸಿಲ್ವರ್ ಮತ್ತು ಬೂದು ಬಣ್ಣಗಳಲ್ಲಿಯೂ ಲಭ್ಯವಿರುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ.

ಹುಂಡೈ ಗ್ರಾಂಡ್ i10 ನಿಯೋಸ್ ಫೇಸ್‌ಲಿಫ್ಟ್ 2023 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಮುಂಬರುವ ನವೀಕರಿಸಿದ 'ಮಾರುತಿ ಸುಜುಕಿ ಸ್ವಿಫ್ಟ್' ಗೆ ಪ್ರಮುಖ ಪ್ರತಿಸ್ಪರ್ಧಿಯಾಗಲಿದೆ. ಮುಂಬರುವ ಈ ಹೊಸ ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್ ಕುರಿತು ನವೀಕರಿಸಿದ ಮಾಹಿತಿಯನ್ನು ತಿಳಿಯಲು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಹೊಸ ಕಾರುಗಳು ಮತ್ತು ಬೈಕ್‌ಗಳನ್ನು ಬಿಡುಗಡೆ ಮಾಡುವ ಕುರಿತು ತಿಳಿಯಲು ಕನ್ನಡ ಡ್ರೈವ್‌ಸ್ಪಾರ್ಕ್ ವೆಬ್‌ತಾಣದೊಂದಿಗೆ ಸಂಪರ್ಕದಲ್ಲಿರಿ.

Most Read Articles

Kannada
English summary
Hyundai i10 nios facelift to rival maruti swift test model captured
Story first published: Wednesday, November 30, 2022, 9:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X