ಐ10 ಎಲೆಕ್ಟ್ರಿಕ್ ಸೇರಿದಂತೆ 11 ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ ಇಂಡಿಯಾ

ಎಲೆಕ್ಟ್ರಿಕ್ ಕಾರು ಬೇಡಿಕೆ ಹೆಚ್ಚುತ್ತಿರುವುದರಿಂದ ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ಹಂತ-ಹಂತವಾಗಿ ಇವಿ ಕಾರುಗಳ ಬಿಡುಗಡೆಯತ್ತ ಗಮನಹರಿಸುತ್ತಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ಸಹ ಇವಿ ಕಾರುಗಳ ಬಿಡುಗಡೆ ಕುರಿತಂತೆ ಮಹತ್ವದ ಮಾಹಿತಿ ಹಂಚಿಕೊಂಡಿದೆ.

ಐ10 ಎಲೆಕ್ಟ್ರಿಕ್ ಸೇರಿದಂತೆ 11 ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ ಇಂಡಿಯಾ

ಬ್ಯಾಟರಿ ಚಾಲಿತ ಕಾರುಗಳ ಯೋಜನೆ ಕುರಿತಂತೆ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿರುವ ಹ್ಯುಂಡೈ ಕಾರು ಉತ್ಪಾದನಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರು 2030ರ ವೇಳೆ ಜಾಗತಿಕ ಮಾರುಕಟ್ಟೆಯಲ್ಲಿ ಶೇ. 50 ರಷ್ಟು ಕಾರುಗಳನ್ನು ಇವಿ ಮಾದರಿಗಳತ್ತ ಬದಲಾಯಿಸುವ ಗುರಿ ಹೊಂದಿರುವ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಐ10 ಎಲೆಕ್ಟ್ರಿಕ್ ಸೇರಿದಂತೆ 11 ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ ಇಂಡಿಯಾ

ಭಾರತದಲ್ಲೂ ಸಹ ವಿವಿಧ ಜನಪ್ರಿಯ ಕಾರುಗಳ ಎಲೆಕ್ಟ್ರಿಕ್ ಆವೃತ್ತಿಯನ್ನು ಪರಿಚಯಿಸುವ ಸುಳಿವು ನೀಡಿರುವ ಹ್ಯುಂಡೈ ಕಂಪನಿಯು ಐ10 ಎಲೆಕ್ಟ್ರಿಕ್ ಮಾದರಿ ಸೇರಿದಂತೆ 11 ಇವಿ ಕಾರುಗಳನ್ನು ಪರಿಚಯಿಸಿದೆ.

ಐ10 ಎಲೆಕ್ಟ್ರಿಕ್ ಸೇರಿದಂತೆ 11 ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ ಇಂಡಿಯಾ

ಸದ್ಯ ಜಾಗತಿಕ ಮಾರುಕಟ್ಟೆಗಳಲ್ಲಿ ಹ್ಯುಂಡೈ ಕಂಪನಿಯು ಕೋನಾ ಇವಿ ಮತ್ತು ಐಯಾನಿಕ್ 5 ಇವಿ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, 2023ರಿಂದ ವಿವಿಧ ಇವಿ ಮಾದರಿಗಳನ್ನು ಒಂದೊಂದಾಗಿ ರಸ್ತೆಗಿಳಿಸಲಿದೆ.

ಐ10 ಎಲೆಕ್ಟ್ರಿಕ್ ಸೇರಿದಂತೆ 11 ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ ಇಂಡಿಯಾ

ಸುಧಾರಿತ ವೈಶಿಷ್ಟ್ಯತೆಗಳೊಂದಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸದ್ಯ ಭಾರೀ ಸಂಚಲನಕ್ಕೆ ಕಾರಣವಾಗಿರುವ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕ್ರಾಸ್ ಓವರ್ ಎಸ್‌ಯುವಿ ಮಾದರಿಯು ಶೀಘ್ರದಲ್ಲಿಯೇ ಭಾರತದಲ್ಲೂ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಮಾದರಿಯಾದ ಕಿಯಾ ಇವಿ6 ಮಾದರಿಗಿಂತಲೂ ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದೆ.

ಐ10 ಎಲೆಕ್ಟ್ರಿಕ್ ಸೇರಿದಂತೆ 11 ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ ಇಂಡಿಯಾ

ಹ್ಯುಂಡೈ ಕಂಪನಿಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣಾಗಿ ಮುಂಬರುವ ಕೆಲವೇ ದಿನಗಳಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದು, ಕಂಪನಿಯು ಭಾರತದಲ್ಲೂ ಸಹ ತನ್ನ ಹೊಸ ಇವಿ ಕಾರುಗಳ ಬಿಡುಗಡೆಯಾಗಿ ಬೃಹತ್ ಯೋಜನೆಗೆ ರೂಪಿಸುತ್ತಿದೆ.

ಐ10 ಎಲೆಕ್ಟ್ರಿಕ್ ಸೇರಿದಂತೆ 11 ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ ಇಂಡಿಯಾ

2030ರ ವೇಳೆಗೆ ಜಾಗತಿಕ ಮಾರುಕಟ್ಟೆಯಲ್ಲಿ 30ಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಹೊಂದುವುದಾಗಿ ಹೇಳಿಕೊಂಡಿರುವ ಹ್ಯುಂಡೈ ಮೋಟಾರ್ಸ್ ಕಂಪನಿಯು ಭಾರತದಲ್ಲೂ ಗ್ರಾಹಕರ ಬೇಡಿಕೆಯೆಂತೆ ಮುಂದಿನ ಎಂಟ ವರ್ಷಗಳಲ್ಲಿ ಒಟ್ಟು 11 ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ.

ಐ10 ಎಲೆಕ್ಟ್ರಿಕ್ ಸೇರಿದಂತೆ 11 ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ ಇಂಡಿಯಾ

ಹ್ಯುಂಡೈ ಕಂಪನಿಯು ಹೊಸ ಇವಿ ಕಾರುಗಳ ಉತ್ಪಾದನೆಗೆ ಪೂರಕವಾದ ಮತ್ತು ಗುಣಮಟ್ಟದ ಮಾದರಿಗಳನ್ನು ಸಿದ್ದಪಡಿಸಲು ಆಧುನಿಕ ತಂತ್ರಜ್ಞಾನ ಪ್ರೇರಿತ ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಇ-ಜಿಎಂಪಿ) ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಲು ಉದ್ದೇಶಿಸಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಕಂಪನಿಯು ವಿವಿಧ ಸೆಗ್ಮೆಂಟ್‌ ಇವಿ ಪರಿಚಯಿಸಲಿದೆ.

ಐ10 ಎಲೆಕ್ಟ್ರಿಕ್ ಸೇರಿದಂತೆ 11 ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ ಇಂಡಿಯಾ

ಎಲೆಕ್ಟ್ರಿಕ್ ಜೊತೆಗೆ ಭವಿಷ್ಯದಲ್ಲಿ ಸದ್ದುಮಾಡಬಹುದಾದ ಹೈಡ್ರೊಜನ್ ಫ್ಯೂಲ್ ಸೆಲ್ಸ್ ವಾಹನಗಳನ್ನು ಉತ್ಪಾದನೆ ಆರಂಭಿಸುತ್ತಿದ್ದು, ಹೊಸ ಮಾದರಿಯ ವಾಹನಗಳ ಸಂಶೋಧನೆ ಮತ್ತು ಅಭಿವೃದ್ದಿ ಮೇಲೆ ಹೆಚ್ಚಿನ ಗಮನಹರಿಸಿರುವ ಹ್ಯುಂಡೈ ಕಂಪನಿಯು ಶೀಘ್ರದಲ್ಲೇ ತನ್ನ ಬಹುನೀರಿಕ್ಷಿತ ಪ್ರಮುಖ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ.

ಐ10 ಎಲೆಕ್ಟ್ರಿಕ್ ಸೇರಿದಂತೆ 11 ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ ಇಂಡಿಯಾ

ಹ್ಯುಂಡೈ ಕಂಪನಿಯು ಬಿಡುಗಡೆ ಮಾಡಲಿರುವ ಆರು ಹೊಸ ಎಲೆಕ್ಟ್ರಿಕ್ ಕಾರುಗಳ ಪೈಕಿ ಐಯಾನಿಕ್ 5 ಕ್ರಾಸ್ಓವರ್ ಎಸ್‌ಯುವಿ ಮಾದರಿಯು ಕೂಡಾ ಒಂದಾಗಿದ್ದು, ಹೊಸ ಕಾರು ಮಾದರಿಯನ್ನು ಹ್ಯುಂಡೈ ಕಂಪನಿಯು ಭಾರತದಲ್ಲಿ ಮಾತ್ರವಲ್ಲ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ಪರಿಚಯಿಸಲಿದೆ.

ಐ10 ಎಲೆಕ್ಟ್ರಿಕ್ ಸೇರಿದಂತೆ 11 ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ ಇಂಡಿಯಾ

ಹೊಸ ಐಯಾನಿಕ್ 5 ಮಾದರಿಯನ್ನು ಈಗಾಗಲೇ ಯುಎಸ್ಎ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವ ಹ್ಯುಂಡೈ ಇದೀಗ ಭಾರತ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡುತ್ತಿದ್ದು, ಒಂದೇ ಪ್ಲ್ಯಾಟ್‌ಫಾರ್ಮ್ ಹೊಂದಿರುವ ಕಿಯಾ ಇವಿ6 ಮಾದರಿಗಿಂತಲೂ ಐಯಾನಿಕ್ 5 ಭಾರತದಲ್ಲಿ ಬೆಲೆ ವಿಚಾರವಾಗಿ ಗಮನಸೆಳೆಯಲಿದೆ.

ಐ10 ಎಲೆಕ್ಟ್ರಿಕ್ ಸೇರಿದಂತೆ 11 ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ ಇಂಡಿಯಾ

ಹೊಸ ಐಕಾನಿಕ್ 5 ಎಲೆಕ್ಟ್ರಿಕ್ ಕಾರನ್ನು ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಇ-ಜಿಎಂಪಿ) ತಂತ್ರಜ್ಞಾನದಡಿ ನಿರ್ಮಾಣ ಮಾಡಲಾಗಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಹೊಸ ಕಾರು 58 ಕಿ.ವ್ಯಾ ಮತ್ತು 72.6 ಕಿ.ವ್ಯಾ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.

ಐ10 ಎಲೆಕ್ಟ್ರಿಕ್ ಸೇರಿದಂತೆ 11 ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ ಇಂಡಿಯಾ

ಐಯಾನಿಕ್ 5 ಕಾರು ಬ್ಯಾಟರಿ ಪ್ಯಾಕ್ ಆಧಾರದ ಪ್ರತಿ ಚಾರ್ಜ್‌ಗೆ ಗರಿಷ್ಠ ಮೈಲೇಜ್ ಹಿಂದಿಗಿರುಗಿಸಲಿದ್ದು, ಯಎಸ್ ಎನ್ವಿರೋನ್ಮೆಂಟ್ ಪ್ರೊಟೆಕ್ಷನ್ ಎಜೆನ್ಸಿ(EPA) ಸಂಸ್ಥೆಯು ನೀಡಿರುವ ಪ್ರಮಾಣ ಪತ್ರದಲ್ಲಿ ಹೊಸ ಕಾರಿ ಅಧಿಕೃತ ಮೈಲೇಜ್ ಪ್ರಮಾಣವು ಪ್ರತಿ ಚಾರ್ಜ್‌ಗೆ 488 ಕಿ.ಮೀ ಆಗಿದೆ.

ಐ10 ಎಲೆಕ್ಟ್ರಿಕ್ ಸೇರಿದಂತೆ 11 ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ ಇಂಡಿಯಾ

ಈ ಮೂಲಕ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಿಗೆ ಸಮನಾದ ಫೀಚರ್ಸ್ ಹೊಂದಿರವ ಹೊಸ ಐಯಾನಿಕ್ 5 ಕಾರು ಭಾರತದಲ್ಲಿ ರೂ. 35 ಲಕ್ಷದಿಂದ ರೂ. 50 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಈ ವರ್ಷದ ಮೂರನೇ ತ್ರೈಮಾಸಿಕ ಅವಧಿಗೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

More from DriveSpark

Article Published On: Thursday, July 21, 2022, 8:45 [IST]
English summary
Hyundai i10 successor may go electric 11 more evs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+