ಕ್ರೆಟಾ ಮತ್ತು ವೆನ್ಯೂ ಎಸ್‌ಯುವಿ ಕಾರುಗಳಲ್ಲಿ ಆಯ್ದ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಸದ್ಯ ಮುಂಚೂಣಿ ಹೊಂದಿರುವ ಹ್ಯುಂಡೈ ಕಂಪನಿಯು ಪ್ರಮುಖ ಕಾರು ಮಾದರಿಗಳ ಮೂಲಕ ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಕಂಪನಿಯು ಗ್ರಾಹಕರ ಬೇಡಿಕೆ ಆಧರಿಸಿ ಕ್ರೆಟಾ ಮತ್ತು ವೆನ್ಯೂ ಮಾದರಿಗಳಲ್ಲಿನ ಕೆಲವು ವೆರಿಯೆಂಟ್‌ಗಳ ಮಾರಾಟವನ್ನು ಸ್ಥಗಿತಗೊಳಿಸಿದೆ.

ಕ್ರೆಟಾ ಮತ್ತು ವೆನ್ಯೂ ಎಸ್‌ಯುವಿ ಕಾರುಗಳಲ್ಲಿ ಆಯ್ದ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಹೊಸ ಕಾರು ಮಾದರಿಗಳಿಗೆ ಹೆಚ್ಚಿನ ಬೇಡಿಕೆಯಿದ್ದರೂ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಸೆಮಿಕಂಡಕ್ಟರ್ ಪೂರೈಕೆಯಲ್ಲಿನ ಅಸಮತೋಲನವು ಆಟೋಮೊಬೈಲ್ ಮಾರುಕಟ್ಟೆ ಮೇಲೆ ತೀವ್ರ ಹೊಡೆತ ನೀಡುತ್ತಿದ್ದು, ಬಿಡಿಭಾಗಗಳ ಪೂರೈಕೆ ಆಧರಿಸಿ ಹ್ಯುಂಡೈ ಕಂಪನಿಯು ಸಹ ತನ್ನ ಪ್ರಮುಖ ಕಾರುಗಳ ಮಾರಾಟದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದೆ.

ಕ್ರೆಟಾ ಮತ್ತು ವೆನ್ಯೂ ಎಸ್‌ಯುವಿ ಕಾರುಗಳಲ್ಲಿ ಆಯ್ದ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಸೆಮಿಕಂಡಕ್ಟರ್ ಕೊರತೆಯಿಂದಾಗಿ ಕ್ರೆಟಾ ಮತ್ತು ವೆನ್ಯೂ ಮಾದರಿಗಳಲ್ಲಿ ಕೆಲವು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದೆ ಎನ್ನಲಾಗಿದ್ದು, ವೆನ್ಯೂ ಮಾದರಿಯಲ್ಲಿ ಏಳು ವೆರಿಯೆಂಟ್ ಮತ್ತು ಕ್ರೆಟಾ ಮಾದರಿಯಲ್ಲಿ ಎರಡು ವೆರಿಯೆಂಟ್ ಸ್ಥಗಿತಗೊಂಡಿವೆ.

ಕ್ರೆಟಾ ಮತ್ತು ವೆನ್ಯೂ ಎಸ್‌ಯುವಿ ಕಾರುಗಳಲ್ಲಿ ಆಯ್ದ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ವೆನ್ಯೂ ಪೆಟ್ರೋಲ್ ಮಾದರಿಯ 1.0 ಲೀಟರ್ ರೂಪಾಂತರಗಳೆಂದರೆ S (O) DCT, SX + DCT ಡ್ಯುಯಲ್ ಟೋನ್, S (O) IMT, SX (O) IMT ಮತ್ತು SX (O) ಡ್ಯುಯಲ್ ಟೋನ್ IMT ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳಲ್ಲಿ S (O) ಮತ್ತು SX (O) ಡ್ಯುಯಲ್ ಟೋನ್ ಮಾದರಿಗಳನ್ನು ಸ್ಥಗಿತಗೊಳಿಸಲಾಗಿದೆ.

ಕ್ರೆಟಾ ಮತ್ತು ವೆನ್ಯೂ ಎಸ್‌ಯುವಿ ಕಾರುಗಳಲ್ಲಿ ಆಯ್ದ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಕ್ರೆಟಾ ರೂಪಾಂತರಗಳಿಗೆ ಸಂಬಂಧಿಸಿದಂತೆ 1.4-ಲೀಟರ್ ಟರ್ಬೊ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿರುವ SX DCT ಮತ್ತು SX AT ವೆರಿಯೆಂಟ್ ಸ್ಥಗಿತಗೊಳಿಸಿದ್ದು, ವೆರಿಯೆಂಟ್ ಸ್ಧಗಿತಕ್ಕೆ ನಿಖರ ಕಾರಣವನ್ನು ಕಂಪನಿಯು ಸ್ಪಷ್ಟಪಡಿಸಿಲ್ಲ.

ಕ್ರೆಟಾ ಮತ್ತು ವೆನ್ಯೂ ಎಸ್‌ಯುವಿ ಕಾರುಗಳಲ್ಲಿ ಆಯ್ದ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ವಿತರಕರಿಗೆ ಕಂಪನಿಯ ಸೂಚನೆಯ ಪ್ರಕಾರ ಸ್ಥಗಿತಗೊಳಿಸಲಾದ ಮಾದರಿಗಳನ್ನು ಲಭ್ಯವಿರುವ ತನಕ ಮಾರಾಟಕ್ಕೆ ಸೂಚನೆ ನೀಡಲಾಗಿದ್ದು, ಗ್ರಾಹಕರು ಯಾವುದೇ ಸ್ಥಗಿತಗೊಂಡ ರೂಪಾಂತರಗಳನ್ನು ಖರೀದಿಗೆ ಬಯಸಿದರೆ ಈ ಹಿಂದಿನ ಆಫರ್‌ಗೆ ಸರಿಹೊಂದುವಂತೆ ಇತರೆ ವೆರಿಯೆಂಟ್‌ಗಳ ಆಯ್ಕೆಗಳ ಖರೀದಿಗೆ ಅವಕಾಶ ನೀಡಲಿದೆ.

ಕ್ರೆಟಾ ಮತ್ತು ವೆನ್ಯೂ ಎಸ್‌ಯುವಿ ಕಾರುಗಳಲ್ಲಿ ಆಯ್ದ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಕ್ರೆಟಾ ಮತ್ತು ವೆನ್ಯೂ ಮಾದರಿಗಳಿಗೆ ಸದ್ಯ ಹೆಚ್ಚಿನ ಬೇಡಿಕೆಯಿಂದಾಗಿ ಹೆಚ್ಚಿನ ಗ್ರಾಹಕರು ಕೆಲವು ಹೆಚ್ಚುವರಿ ವೈಶಿಷ್ಟ್ಯತೆಗಳನ್ನು ಹೊಂದಿರದ ಮಾದರಿಗಳನ್ನು ಸಹ ಖರೀದಿಸುತ್ತಿದ್ದು, ಕ್ರೆಟಾ ಮಾದರಿಗೆ ಕನಿಷ್ಠ 6 ರಿಂದ 8 ತಿಂಗಳು ಮತ್ತು ವೆನ್ಯೂ ಮಾದರಿಗೆ 4 ರಿಂದ 6 ತಿಂಗಳು ಕಾಲ ಕಾಯಬೇಕಾಗುತ್ತದೆ.

ಕ್ರೆಟಾ ಮತ್ತು ವೆನ್ಯೂ ಎಸ್‌ಯುವಿ ಕಾರುಗಳಲ್ಲಿ ಆಯ್ದ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಆದರೆ ಸೆಮಿಕಂಡಕ್ಟರ್ ಕೊರತೆಯು ಹೊಸ ಕಾರು ವಿತರಣೆಯನ್ನು ಹೆಚ್ಚಿಸುವ ಯೋಜನೆಗೆ ಅಡ್ಡಿಯಾಗಿದ್ದು, ಉತ್ಪಾದನೆಗೊಂಡಿರುವ ಹಲವು ಕಾರುಗಳಲ್ಲಿ ಹೆಚ್ಚುವರಿ ಫೀಚರ್ಸ್ ಜೋಡಣೆ ಮಾಡದೇ ಹಾಗೆಯೇ ಕಾರುಗಳನ್ನು ವಿತರಣೆ ಮಾಡಲಾಗುತ್ತಿದೆ.

ಕ್ರೆಟಾ ಮತ್ತು ವೆನ್ಯೂ ಎಸ್‌ಯುವಿ ಕಾರುಗಳಲ್ಲಿ ಆಯ್ದ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಸೆಮಿಕಂಡಕ್ಟರ್ ಪೂರೈಕೆ ಸುಧಾರಿಸಿದ ನಂತರವಷ್ಟೇ ಹೆಚ್ಚುವರಿ ಫೀಚರ್ಸ್‌ಗಳನ್ನು ಅಪ್‌ಡೆಟ್ ಮಾಡುವುದಾಗಿ ಗ್ರಾಹಕರಲ್ಲಿ ಮಾಡುತ್ತಿದ್ದು, ಸದ್ಯಕ್ಕೆ ಬೆಸಿಕ್ ಮಾದರಿಗಳಂತೆಯೇ ಹೈ ಎಂಡ್ ಮಾದರಿಗಳನ್ನು ಪಡೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಕ್ರೆಟಾ ಮತ್ತು ವೆನ್ಯೂ ಎಸ್‌ಯುವಿ ಕಾರುಗಳಲ್ಲಿ ಆಯ್ದ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಇನ್ನು 2020ರ ಮಾರ್ಚ್ 16ರಂದು ನ್ಯೂ ಜನರೇಷನ್ ಕ್ರೆಟಾ ಕಾರು ಮಾದರಿಯನ್ನು ಭಾರೀ ಬದಲಾವಣೆಯೊಂದಿಗೆ ಬಿಡುಗಡೆಗೊಳಿಸಿದ್ದ ಹ್ಯುಂಡೈ ಕಂಪನಿಯು ಹೊಸ ಕಾರನ್ನು ಅತಿ ಕಡಿಮೆ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟಗೊಳಿಸಿದೆ.

ಕ್ರೆಟಾ ಮತ್ತು ವೆನ್ಯೂ ಎಸ್‌ಯುವಿ ಕಾರುಗಳಲ್ಲಿ ಆಯ್ದ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಕೈಗೆಟುಕುವ ಬೆಲೆ, ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿರುವ ಕ್ರೆಟಾ ಕಾರು ಕಾಲ ಕಾಲಕ್ಕೆ ಹಲವಾರು ಬದಲಾವಣೆಗಳನ್ನು ಪಡೆದುಕೊಳ್ಳುತ್ತಾ ಗ್ರಾಹಕರ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಕ್ರೆಟಾ ಮತ್ತು ವೆನ್ಯೂ ಎಸ್‌ಯುವಿ ಕಾರುಗಳಲ್ಲಿ ಆಯ್ದ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯ ಇತರೆ ಕಾರುಗಳ ಮಾದರಿಗಳ ಪೈಕಿ ಕ್ರೆಟಾ ಮಾದರಿಯು ಭಾರೀ ಪ್ರಮಾಣದ ಆದಾಯ ತಂದುಕೊಟ್ಟಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳ ಮಾರಾಟದಲ್ಲಿ ಇತರೆ ಮಾದರಿಗಳಿಂತಲೂ ಹೆಚ್ಚು ದುಬಾರಿಯಾಗಿದ್ದರೂ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ.

ಕ್ರೆಟಾ ಮತ್ತು ವೆನ್ಯೂ ಎಸ್‌ಯುವಿ ಕಾರುಗಳಲ್ಲಿ ಆಯ್ದ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಹೊಸ ಕಾರು ಹಳೆಯ ತಲೆಮಾರಿನ ಆವೃತ್ತಿಗಿಂತಲೂ ಹೆಚ್ಚು ಬಲಿಷ್ಠ, ಪ್ರೀಮಿಯಂ ಫೀಚರ್ಸ್ ಮತ್ತು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಗ್ರಾಹಕರ ಬೇಡಿಕೆಯೆಂತೆ ಒಟ್ಟು 5 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಕ್ರೆಟಾ ಮತ್ತು ವೆನ್ಯೂ ಎಸ್‌ಯುವಿ ಕಾರುಗಳಲ್ಲಿ ಆಯ್ದ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಬಿಎಸ್-6 ಎಂಜಿನ್ ಜೋಡಣೆ ನಂತರ ಹೊಸ ಕಾರಿನಲ್ಲಿ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.

ಕ್ರೆಟಾ ಮತ್ತು ವೆನ್ಯೂ ಎಸ್‌ಯುವಿ ಕಾರುಗಳಲ್ಲಿ ಆಯ್ದ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಕ್ರೆಟಾ ಆವೃತ್ತಿಯಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 1.6-ಲೀಟರ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಅನ್ನು ತೆಗೆದುಹಾಕಲಾಗಿದ್ದು, ಸಾಮಾನ್ಯ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಯನ್ನು ಹಾಗೂ ಪರ್ಫಾಮೆನ್ಸ್ ಪ್ರಿಯರು 1.4-ಲೀಟರ್ ಟರ್ಬೋ ಪೆಟ್ರೋಲ್ ಖರೀದಿಸಬಹುದಾಗಿದೆ.

ಕ್ರೆಟಾ ಮತ್ತು ವೆನ್ಯೂ ಎಸ್‌ಯುವಿ ಕಾರುಗಳಲ್ಲಿ ಆಯ್ದ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

1.5-ಲೀಟರ್ ಪೆಟ್ರೋಲ್ ಆವೃತ್ತಿಯು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.5-ಲೀಟರ್ ಡೀಸೆಲ್ ಮಾದರಿಯು ಸಹ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಕ್ರೆಟಾ ಮತ್ತು ವೆನ್ಯೂ ಎಸ್‌ಯುವಿ ಕಾರುಗಳಲ್ಲಿ ಆಯ್ದ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಕ್ರೆಟಾ ಕಂಪ್ಯಾಕ್ಟ್ ಎಸ್‌ಯವಿ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10.23 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.17.94 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರು ಮುಂಬರುವ ದಿನಗಳಲ್ಲಿ ಕೆಲವೇ ದಿನಗಳಲ್ಲಿ 2022ರ ಮಾದರಿಯೊಂದಿಗೆ ಮಾರುಕಟ್ಟೆ ಪ್ರವೇಶಿಸುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Hyundai india discontinues selected variants in creta and venue
Story first published: Tuesday, March 8, 2022, 22:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X