ಪೆಟ್ರೋಲ್ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಆಫರ್ ಘೋಷಣೆ ಮಾಡಿದ ಹ್ಯುಂಡೈ

ಮಧ್ಯಮ ಕ್ರಮಾಂಕದ ಪ್ರಮುಖ ಕಾರು ಮಾದರಿಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಇಂಡಿಯಾ ಕಂಪನಿಯು ಗ್ರಾಹಕರಿಗೆ ಹಲವಾರು ಆಫರ್ ನೀಡುತ್ತಿದ್ದು, ಇದೀಗ ಪೆಟ್ರೋಲ್ ಕಾರುಗಳ ಮಾಲೀಕರಿಗೆ ವಿಸ್ತರಿತ ವಾರಂಟಿ ಪರಿಚಯಿಸಿದೆ.

ಪೆಟ್ರೋಲ್ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಆಫರ್ ಘೋಷಣೆ ಮಾಡಿದ ಹ್ಯುಂಡೈ

ಹೊಸ ಕಾರುಗಳಿಗೆ ನೀಡಲಾಗುವ ಸ್ಟ್ಯಾಂಡರ್ಡ್ ವಾರಂಟಿ ಹೊರತುಪಡಿಸಿ ಇದೀಗ ಕಂಪನಿಯು ವಿಸ್ತರಿತ ವಾರಂಟಿ ಬಯಸುವ ಗ್ರಾಹಕರಿಗಾಗಿ ರಿಯಾಯ್ತಿದರಗಳಲ್ಲಿ ಹೊಸ ವಾರಂಟಿ ಪ್ಯಾಕೇಜ್ ಪರಿಚಯಿಸಿದ್ದು, ಪೆಟ್ರೋಲ್ ಕಾರುಗಳ ಮಾಲೀಕರಿಗೆ ಮಾತ್ರ ಈ ಹೊಸ ವಾರಂಟಿ ಪ್ಯಾಕೇಜ್ ಅನ್ವಯಿಸಲಿದೆ.

ಪೆಟ್ರೋಲ್ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಆಫರ್ ಘೋಷಣೆ ಮಾಡಿದ ಹ್ಯುಂಡೈ

ವಿಸ್ತರಿತ ವಾರಂಟಿ ಪ್ಯಾಕೇಜ್‌ನಲ್ಲಿ ಹಳೆಯ ಮಾದರಿಗಳಾದ ಐಯಾನ್, ಸ್ಯಾಂಟ್ರೋ, ಎಲೈಟ್ ಐ20, ಐ20, ಗ್ರ್ಯಾಂಡ್ ಐ10 ನಿಯೋಸ್, ಆಕ್ಸೆಂಟ್, ವೆರ್ನಾ ಸೇರಿದಂತೆ ಇತ್ತೀಚೆಗೆ ಬಿಡುಗಡೆಯಾದ

ನ್ಯೂ ಜನರೇಷನ್ ಕ್ರೆಟಾ, ಅಲ್ಕಾಜರ್, ವೆನ್ಯೂ ಮಾದರಿಗಳಿಗೆ ವಿಸ್ತರಿತ ಅವಧಿಯ ವಾರಂಟಿ ಪ್ಯಾಕೇಜ್ ಖರೀದಿಸಬಹುದಾಗಿದೆ.

ಪೆಟ್ರೋಲ್ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಆಫರ್ ಘೋಷಣೆ ಮಾಡಿದ ಹ್ಯುಂಡೈ

ವಿಸ್ತರಿತ ವಾರಂಟಿ ಪ್ಯಾಕೇಜ್‌ನಲ್ಲಿ ಗ್ರಾಹಕರು ತಮ್ಮ ಕಾರುಗಳಿಗೆ 5ನೇ ವರ್ಷ, 6ನೇ ವರ್ಷ ಮತ್ತು 7ನೇ ವರ್ಷದ ವಾರಂಟಿ ಖರೀದಿಸಬಹುದಾಗಿದ್ದು, ಹೊಸ ವಾರಂಟಿ ಪ್ಯಾಕೇಜ್‌ಗಳು ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ. 6,989 ರಿಂದ ರೂ. 27,762 ಬೆಲೆ ಹೊಂದಿದೆ.

ಪೆಟ್ರೋಲ್ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಆಫರ್ ಘೋಷಣೆ ಮಾಡಿದ ಹ್ಯುಂಡೈ

ವಾರಂಟಿ ವಿಸ್ತರಣೆ ಸಂದರ್ಭದಲ್ಲಿ ಗ್ರಾಹಕರು 5ನೇ ವರ್ಷ, 6ನೇ ವರ್ಷ ಮತ್ತು 7ನೇ ವರ್ಷದ ವಾರಂಟಿ ಇಲ್ಲವೆ 1 ಲಕ್ಷ ಕಿ.ಮೀ ಮೇಲೆ ವಾರಂಟಿ ಆಯ್ಕೆ ಮಾಡಬಹುದಾಗಿದ್ದು, ಐಯಾನ್ ಹೊರತುಪಡಿಸಿ ಇನ್ನುಳಿದ ಮಾದರಿಗಳಿಗೆ 4ನೇ, 5ನೇ, 6ನೇ ಮತ್ತು 7ನೇ ವರ್ಷ ಅಥವಾ 1 ಲಕ್ಷ ಕಿಮೀ ವಿಸ್ತೃತ ವಾರಂಟಿ ಸಹ ಖರೀದಿಸಬಹುದಾಗಿದೆ.

ಪೆಟ್ರೋಲ್ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಆಫರ್ ಘೋಷಣೆ ಮಾಡಿದ ಹ್ಯುಂಡೈ

4ನೇ, 5ನೇ, 6ನೇ ಮತ್ತು 7ನೇ ವರ್ಷದ ವಾರಂಟಿ ಖರೀದಿಸುವ ಗ್ರಾಹಕರು ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ. 15,154 ರಿಂದ ರೂ. 46,530 ತನಕ ಹಣ ಪಾವತಿ ಹೊಸ ಪ್ಯಾಕೇಜ್ ಹೊಂದಬಹುದಾಗಿದ್ದು, ಎಂಜಿನ್‌ಗೆ ಇದು ಗರಿಷ್ಠ ಸುರಕ್ಷತೆ ನೀಡಲಿದೆ.

ಪೆಟ್ರೋಲ್ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಆಫರ್ ಘೋಷಣೆ ಮಾಡಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಈಗಾಗಲೇ ಪ್ರಮುಖ ಕಾರುಗಳ ಖರೀದಿ ಮೇಲೆ 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ನೀಡುತ್ತಿದ್ದು, ವಾರಂಟಿ ಮುಗಿದ ನಂತರ ಎಂಜಿನ್‌ಗೆ ಸುರಕ್ಷತೆಗಾಗಿ ಗ್ರಾಹಕರಿಗೆ ಇದೀಗ ಅತಿ ಕಡಿಮೆ ಪ್ರೀಮಿಯಂನೊಂದಿಗೆ ವಾರಂಟಿ ಘೋಷಣೆ ಮಾಡಿದೆ.

ಪೆಟ್ರೋಲ್ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಆಫರ್ ಘೋಷಣೆ ಮಾಡಿದ ಹ್ಯುಂಡೈ

ಇದಲ್ಲದೆ ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ಜುಲೈ ಅವಧಿಗಾಗಿ ಹಲವು ಹೊಸ ಆಫರ್ ಪ್ರಕಟಿಸಿದ್ದು, ಪ್ರೀಮಿಯಂ ಕಾರುಗಳ ಖರೀದಿಗೆ ಪೂರಕವಾದ ಹಲವು ಆಫರ್ ನೀಡುತ್ತಿದೆ.

ಪೆಟ್ರೋಲ್ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಆಫರ್ ಘೋಷಣೆ ಮಾಡಿದ ಹ್ಯುಂಡೈ

ಸೆಮಿಕಂಡಕ್ಟರ್ ಪರಿಣಾಮ ಕುಸಿತ ಕಂಡಿದ್ದ ಹೊಸ ವಾಹನಗಳ ಮಾರಾಟ ಇದೀಗ ಸಾಕಷ್ಟು ಸುಧಾರಿಸಿದ್ದು, ಪ್ರಮುಖ ಕಾರು ಕಂಪನಿಗಳು ಕಳೆದ ಕೆಲ ತಿಂಗಳಿನಿಂದ ಉತ್ತಮ ಬೇಡಿಕೆ ಪಡೆದುಕೊಂಡಿವೆ. ಹ್ಯುಂಡೈ ಕಂಪನಿಯು ಸಹ ವಿವಿಧ ಮಾದರಿಗಳೊಂದಿಗೆ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಕಾರು ಮಾರಾಟದಲ್ಲಿ ಸ್ಥಿರತೆಗಾಗಿ ಕಂಪನಿಯು ಗ್ರಾಹಕರಿಗೆ ಗರಿಷ್ಠ ಪ್ರಮಾಣದ ಆಫರ್ ಘೋಷಣೆ ಮಾಡಿದೆ.

ಪೆಟ್ರೋಲ್ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಆಫರ್ ಘೋಷಣೆ ಮಾಡಿದ ಹ್ಯುಂಡೈ

ಹೊಸ ವಾಹನ ಮಾರಾಟವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಮುಖ ಕಾರು ಕಂಪನಿಗಳು ವಿವಿಧ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ಕೂಡಾ 2022ರ ಮೇ ಅವಧಿಗೆ ವಿವಿಧ ಆಫರ್‌ಗಳನ್ನು ನೀಡುತ್ತಿವೆ.

ಪೆಟ್ರೋಲ್ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಆಫರ್ ಘೋಷಣೆ ಮಾಡಿದ ಹ್ಯುಂಡೈ

ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಕಾರು ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ಲಭ್ಯವಿದೆ.

ಪೆಟ್ರೋಲ್ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಆಫರ್ ಘೋಷಣೆ ಮಾಡಿದ ಹ್ಯುಂಡೈ

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಆಫರ್ ನೀಡುತ್ತಿರುವುದಲ್ಲದೆ ಸರಳ ಸಾಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಹ್ಯುಂಡೈ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳಾದ ಗ್ರಾಂಡ್ ಐ10 ನಿಯೋಸ್, ಔರಾ ಮತ್ತು ವೆರ್ನಾ ಕಾರುಗಳ ಮೇಲೆ ಉತ್ತಮ ಆಫರ್‌ಗಳನ್ನು ನೀಡುತ್ತಿದೆ.

ಪೆಟ್ರೋಲ್ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಆಫರ್ ಘೋಷಣೆ ಮಾಡಿದ ಹ್ಯುಂಡೈ

ಹೊಸ ಆಫರ್‌ಗಳಲ್ಲಿ ಔರಾ, ಗ್ರಾಂಡ್ ಐ10 ನಿಯೋಸ್, ಐ20 ಮತ್ತು ವೆರ್ನಾ ಹೊರತುಪಡಿಸಿ ವೆನ್ಯೂ, ಕ್ರೆಟಾ, ಅಲ್ಕಾಜರ್ ಮತ್ತು ಕೊನಾ ಇವಿ ಕಾರುಗಳ ಮೇಲೆ ಯಾವುದೇ ಆಫರ್ ನೀಡಲಾಗಿಲ್ಲ.

ಪೆಟ್ರೋಲ್ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಆಫರ್ ಘೋಷಣೆ ಮಾಡಿದ ಹ್ಯುಂಡೈ

ಇನ್ನು ಹ್ಯುಂಡೈ ಕಂಪನಿಯು ಹೊಸ ಕಾರು ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಳ್ಳುತ್ತಿದ್ದು, ಕಳೆದ ತಿಂಗಳು ಕಂಪನಿಯು ಒಟ್ಟು 49,001 ವಾಹನಗಳನ್ನು ಮಾರಾಟ ಮಾಡುವ ಮೂಲಕ ಟಾಟಾ ಮೋಟಾರ್ಸ್ ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಮರಳಿ ಬಂದಿದೆ.

ಪೆಟ್ರೋಲ್ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಆಫರ್ ಘೋಷಣೆ ಮಾಡಿದ ಹ್ಯುಂಡೈ

ಕಳೆದ ವರ್ಷದ ಜೂನ್ ತಿಂಗಳಿನಲ್ಲಿ 40,496 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ. 21 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಹ್ಯುಂಡೈನ ಮಾರಾಟ ಸಂಖ್ಯೆಯು ಕಳೆದ ತಿಂಗಳು ವರ್ಷದಿಂದ ವರ್ಷಕ್ಕೆ ಶೇ. 21 ರಷ್ಟು (8,505 ಯುನಿಟ್‌ಗಳು) ಹೆಚ್ಚಾಗಿದೆ. ಹುಂಡೈನ ಮಾರಾಟವು 2022ರ ಮೇ ತಿಂಗಳಿಗೆ ಹೋಲಿಸಿದರೆ 42,293 ಯುನಿಟ್‌ಗಳೊಂದಿಗೆ ಶೇಕಡಾ.15.86 (6,708 ಯುನಿಟ್‌ಗಳು) ಹೆಚ್ಚಾಗಿದೆ.

Most Read Articles

Kannada
English summary
Hyundai india offering extended warranty on selected petrol models
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X