ಆಕರ್ಷಕ ವಿನ್ಯಾಸದ ಹೊಸ ಸ್ಟಾರ್‌ಗೇಜರ್ ಎಂಪಿವಿಯನ್ನು ಪರಿಚಯಿಸಿದ ಹ್ಯುಂಡೈ

ಕೊರಿಯಾದ ವಾಹನ ತಯಾರಕ, ಹ್ಯುಂಡೈ ಅಂತಿಮವಾಗಿ ಹೊಸ ಸ್ಟಾರ್‌ಗೇಜರ್ 3-ಸಾಲಿನ ಎಂಪಿವಿಯನ್ನು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಈ ಹೊಸ ಮಾದರಿಯನ್ನು ಇಂಡೋನೇಷ್ಯಾದಲ್ಲಿ ಸ್ಥಳೀಯವಾಗಿ ಉತ್ಪಾದಿಸಲಾಗಿದೆ.

ಆಕರ್ಷಕ ವಿನ್ಯಾಸದ ಹೊಸ ಸ್ಟಾರ್‌ಗೇಜರ್ ಎಂಪಿವಿಯನ್ನು ಪರಿಚಯಿಸಿದ ಹ್ಯುಂಡೈ

ಹ್ಯುಂಡೈ ಸ್ಟಾರ್‌ಗೇಜರ್ ಆಗಸ್ಟ್‌ನಲ್ಲಿ 2022 GIIAS (ಗೈಕಿಂಡೋ ಇಂಡೋನೇಷ್ಯಾ ಇಂಟರ್‌ನ್ಯಾಶನಲ್ ಆಟೋ ಶೋ) ನಲ್ಲಿ ಸಾರ್ವಜನಿಕವಾಗಿ ಪಾದಾರ್ಪಣೆ ಮಾಡಲಿದೆ. ಹೊಸ ಸ್ಟಾರ್‌ಗೇಜರ್ 3-ಸಾಲಿನ ಎಂಪಿವಿ 4 ರೂಪಾಂತರಗಳಲ್ಲಿ ಲಭ್ಯವಿದೆ. ಇದು ಆಕ್ಟಿವ್, ಟ್ರೆಂಡ್, ಸ್ಟೈಲ್ ಮತ್ತು ಪ್ರೈಮ್ ಆಗಿದೆ, ಆರು ಆಸನಗಳ ಆವೃತ್ತಿಯು ಟ್ರೆಂಡ್, ಸ್ಟೈಲ್ ಮತ್ತು ಪ್ರೈಮ್ ರೂಪಾಂತರಗಳೊಂದಿಗೆ ಮಾತ್ರ ಲಭ್ಯವಿದೆ. ಆರು ಆಸನಗಳ ಮಾದರಿಯಲ್ಲಿ ಕ್ಯಾಪ್ಟನ್ ಸೀಟ್‌ಗಳಿಗಾಗಿ ಗ್ರಾಹಕರು ಹೆಚ್ಚುವರಿ IDR 1000000 (ಅಂದಾಜು ರೂ.5308) ಪಾವತಿಸಬೇಕಾಗುತ್ತದೆ. ಎರಡು-ಟೋನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿದೆ.

ಆಕರ್ಷಕ ವಿನ್ಯಾಸದ ಹೊಸ ಸ್ಟಾರ್‌ಗೇಜರ್ ಎಂಪಿವಿಯನ್ನು ಪರಿಚಯಿಸಿದ ಹ್ಯುಂಡೈ

3-ಸಾಲು ಸ್ಟಾರ್‌ಗೇಜರ್ ಎಂಪಿವಿ ಒನ್ ಕರ್ವ್ ವಿನ್ಯಾಸದೊಂದಿಗೆ ಸ್ಲೀಕ್ ಒನ್ ಬಾಕ್ಸ್ ಟೈಪೊಲಾಜಿಯನ್ನು ಹೊಂದಿದೆ ಎಂದು ಹ್ಯುಂಡೈ ಹೇಳಿಕೊಂಡಿದೆ. ಕರ್ವ್ ವಿನ್ಯಾಸವು ಎಂಪಿವಿಗೆ ಎತ್ತರದ, ಹೆಚ್ಚು ವಿಶಾಲವಾದ ನೋಟವನ್ನು ನೀಡಲು ಸಹಾಯ ಮಾಡುತ್ತದೆ. ಇದು ಹ್ಯುಂಡೈನ ಹೊಸ ಪ್ಯಾರಾಮೆಟ್ರಿಕ್ ಗ್ರಿಲ್‌ನೊಂದಿಗೆ ಬರುತ್ತದೆ,

ಆಕರ್ಷಕ ವಿನ್ಯಾಸದ ಹೊಸ ಸ್ಟಾರ್‌ಗೇಜರ್ ಎಂಪಿವಿಯನ್ನು ಪರಿಚಯಿಸಿದ ಹ್ಯುಂಡೈ

ಹ್ಯುಂಡೈ ಸ್ಟಾರ್‌ಗೇಜರ್ ಎಂಪಿವಿ ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್‌ನಿಂದ ಸುತ್ತುವರೆದಿದೆ. ಸ್ಲಿಮ್ ಹಾರಿಜಾಂಟಲ್ ಎಲ್ಇಡಿ ಡಿಆರ್ಎಲ್ ಗಳನ್ನು (ಡೇಟೈಮ್ ರನ್ನಿಂಗ್ ಲೈಟ್ಸ್) ಮೇಲ್ಭಾಗದಲ್ಲಿ ಇರಿಸಲಾಗಿದೆ, ಆದರೆ ಮುಖ್ಯ ಎಲ್ಇಡಿ ಹೆಡ್‌ಲ್ಯಾಂಪ್ ಕ್ಲಸ್ಟರ್ ಕೆಳ ಬಂಪರ್‌ನಲ್ಲಿ ಇರಿಸಲಾಗಿದೆ.

ಆಕರ್ಷಕ ವಿನ್ಯಾಸದ ಹೊಸ ಸ್ಟಾರ್‌ಗೇಜರ್ ಎಂಪಿವಿಯನ್ನು ಪರಿಚಯಿಸಿದ ಹ್ಯುಂಡೈ

ಇನ್ನು ಈ ಎಂಪಿವಿಯಲ್ಲಿ 15-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಹಿಂಭಾಗದಲ್ಲಿ, ಹೊಸ ಸ್ಟಾರ್‌ಗೇಜರ್ ಹೊಸ ವೆನ್ಯೂ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ನಾವು ಈಗಾಗಲೇ ನೋಡಿರುವ 'H' ಮಾದರಿಯ LED ಟೈಲ್-ಲೈಟ್‌ಗಳನ್ನು ಪಡೆಯುತ್ತದೆ.

ಆಕರ್ಷಕ ವಿನ್ಯಾಸದ ಹೊಸ ಸ್ಟಾರ್‌ಗೇಜರ್ ಎಂಪಿವಿಯನ್ನು ಪರಿಚಯಿಸಿದ ಹ್ಯುಂಡೈ

ಈ ಹೊಸ ಹುಂಡೈ ಸ್ಟಾರ್‌ಗೇಜರ್ ಸಾಂಪ್ರದಾಯಿಕ ಎಂಪಿವಿ ವಿನ್ಯಾಸವನ್ನು ಹೊಂದಿದೆ. ಈ ಎಂಪಿವಿಯು ಚಿಕ್ಕದಾದ ಬಾನೆಟ್ ಮತ್ತು ಮುಂಭಾಗಕ್ಕೆ ಉದ್ದವಾದ -ಪಿಲ್ಲರ್‌ಗಳನ್ನು ಹೊಂದಿದ್ದು ಅದು ಕ್ಯಾಬಿನ್‌ನೊಳಗೆ ಹೆಚ್ಚಿನ ಸ್ಥಳಾವಕಾಶವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಇದು ಉದ್ದದ ಉದ್ದಕ್ಕೂ ಚಲಿಸುವ ಬಲವಾದ ಕ್ರೀಸ್‌ಗಳನ್ನು ಪಡೆಯುತ್ತದೆ.

ಆಕರ್ಷಕ ವಿನ್ಯಾಸದ ಹೊಸ ಸ್ಟಾರ್‌ಗೇಜರ್ ಎಂಪಿವಿಯನ್ನು ಪರಿಚಯಿಸಿದ ಹ್ಯುಂಡೈ

ಇದು ಸ್ಕ್ವಾರಿಶ್ ವೀಲ್ ಆರ್ಚ್‌ಗಳು, ಫ್ಲೋಟಿಂಗ್ ರೂಫ್‌ಲೈನ್, ಕ್ರೋಮ್ ಡೋರ್ ಹ್ಯಾಂಡಲ್‌ಗಳು, ರೂಫ್-ಇಂಟಿಗ್ರೇಟೆಡ್ ಸ್ಪಾಯ್ಲರ್ ಮತ್ತು ಹಿಂಭಾಗದಲ್ಲಿ ಬಲವಾದ ಕರ್ವ್‌ಗಳನ್ನು ಹೊಂದಿದೆ. ಕ್ಯಾಬಿನ್ ಒಳಗೆ, ಹೊಸ ಹ್ಯುಂಡೈ ಸ್ಟಾರ್‌ಗೇಜರ್ 3-ಸಾಲು ಎಂಪಿವಿ ಸಣ್ಣ ಟ್ರೇಗಳು, ಕಪ್ ಹೋಲ್ಡರ್‌ಗಳು, ಹೆಚ್ಚುವರಿ ಪಾಕೆಟ್‌ಗಳು, ಪಿಕ್ನಿಕ್ ಟೇಬಲ್‌ಗಳು ಮತ್ತು ಇತರವುಗಳನ್ನು ಒಳಗೊಂಡಂತೆ ಬಹು ಶೇಖರಣಾ ಸ್ಥಳಗಳನ್ನು ನೀಡುತ್ತದೆ.

ಆಕರ್ಷಕ ವಿನ್ಯಾಸದ ಹೊಸ ಸ್ಟಾರ್‌ಗೇಜರ್ ಎಂಪಿವಿಯನ್ನು ಪರಿಚಯಿಸಿದ ಹ್ಯುಂಡೈ

ಇದು AC ಮತ್ತು ಇತರ ನಿಯಂತ್ರಣಗಳಿಗಾಗಿ ಕನಿಷ್ಠ ಬಟನ್‌ಗಳೊಂದಿಗೆ ಉದ್ದವಾದ ಮತ್ತು ಸ್ಲಿಮ್ ಡ್ಯಾಶ್‌ಬೋರ್ಡ್‌ನೊಂದಿಗೆ ಬರುತ್ತದೆ. ಹೊಸ ಮಾದರಿಯು ಎರಡು ಆಸನ ವಿನ್ಯಾಸಗಳೊಂದಿಗೆ ನೀಡಲಾಗುವುದು - 6 ಮತ್ತು 7-ಆಸನಗಳು ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳನ್ನು ಹೊಂದಿದೆ. ಕ್ಯಾಪ್ಟನ್ ಸೀಟ್‌ಗಳು ಆರ್ಮ್‌ರೆಸ್ಟ್‌ನೊಂದಿಗೆ ಬರುತ್ತವೆ.

ಆಕರ್ಷಕ ವಿನ್ಯಾಸದ ಹೊಸ ಸ್ಟಾರ್‌ಗೇಜರ್ ಎಂಪಿವಿಯನ್ನು ಪರಿಚಯಿಸಿದ ಹ್ಯುಂಡೈ

ಇದಲ್ಲದೆ, ಆಸನಗಳನ್ನು ಮುಂದಕ್ಕೆ, ಹಿಂದಕ್ಕೆ, ನೆಟ್ಟಗೆ ಅಥವಾ ಒರಗುವಂತೆ ಸರಿಹೊಂದಿಸಬಹುದು. ಇದು ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಸೀಟ್ ಬ್ಯಾಕ್ ಟೇಬಲ್, 4.2-ಇಂಚಿನ TFT ಬಣ್ಣದ LCD ಕ್ಲಸ್ಟರ್ ಮತ್ತು ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದ ಹೊಸ ಸ್ಟಾರ್‌ಗೇಜರ್ ಎಂಪಿವಿಯನ್ನು ಪರಿಚಯಿಸಿದ ಹ್ಯುಂಡೈ

ಹೊಸ ಹ್ಯುಂಡೈ ಸ್ಟಾರ್‌ಗೇಜರ್ 3-ಸಾಲು ಎಂಪಿವಿ ಹ್ಯುಂಡೈ ಬ್ಲೂಲಿಂಕ್ ಸಂಪರ್ಕಿತ ಕಾರ್ ತಂತ್ರಜ್ಞಾನವನ್ನು ಹೊಂದಿದೆ, ಇದು ಗ್ರಾಹಕರು ತಮ್ಮ ಕಾರಿಗೆ ಸ್ಮಾರ್ಟ್‌ಫೋನ್ ಮೂಲಕ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ವಾಹನದ ಪ್ರಸ್ತುತ ಸ್ಥಿತಿಯನ್ನು ತಿಳಿದುಕೊಳ್ಳುವುದು, ಎಂಜಿನ್ ಅನ್ನು ಆನ್/ಆಫ್ ಮಾಡುವುದು, ಕ್ಯಾಬಿನ್ ತಾಪಮಾನವನ್ನು ಸರಿಹೊಂದಿಸುವುದು, ಬಾಗಿಲನ್ನು ಲಾಕ್ ಮಾಡುವುದು/ಅನ್ಲಾಕ್ ಮಾಡುವುದು, ಲ್ಯಾಂಪ್ ಗಳನ್ನು ಆನ್/ಆಫ್ ಮಾಡುವುದು ಮುಂತಾದ ಅಗತ್ಯ ವೈಶಿಷ್ಟ್ಯಗಳನ್ನು ಹೊಂದಿವೆ.

ಆಕರ್ಷಕ ವಿನ್ಯಾಸದ ಹೊಸ ಸ್ಟಾರ್‌ಗೇಜರ್ ಎಂಪಿವಿಯನ್ನು ಪರಿಚಯಿಸಿದ ಹ್ಯುಂಡೈ

ಅನುಪಾತಕ್ಕೆ ಸಂಬಂಧಿಸಿದಂತೆ, ಹೊಸ ಸ್ಟಾರ್‌ಗೇಜರ್ 3-ಸಾಲಿನ ಎಂಪಿವಿ 4,460 ಎಂಎಂ ಉದ್ದ, 1,780 ಎಂಎಂ ಅಗಲ ಮತ್ತು 1,695 ಎಂಎಂ ಎತ್ತರ ಮತ್ತು 2,780 ಎಂಎಂ ವ್ಹೀಲ್‌ಬೇಸ್ ಹೊಂದಿದೆ. ಎಂಪಿವಿ 200-ಲೀಟರ್‌ಗಳ ಬೂಟ್ ಸ್ಪೇಸ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ಇದನ್ನು ಮೂರನೇ ಸಾಲಿನ ಆಸನವನ್ನು ಮಡಿಚಿದಾಗ 585-ಲೀಟರ್‌ಗಳಷ್ಟು ವಿಸ್ತರಿಸಬಹುದು.

ಆಕರ್ಷಕ ವಿನ್ಯಾಸದ ಹೊಸ ಸ್ಟಾರ್‌ಗೇಜರ್ ಎಂಪಿವಿಯನ್ನು ಪರಿಚಯಿಸಿದ ಹ್ಯುಂಡೈ

ಹೊಸ ಹ್ಯುಂಡೈ ಸ್ಟಾರ್‌ಗೇಜರ್ ಎಂಪಿವಿ 1.5-ಲೀಟರ್ 4-ಸಿಲಿಂಡರ್ ನ್ಯಾಚುರಲ್-ಆಸ್ಪೈರಡ್ ಪೆಟ್ರೋಲ್ ಎಂಜಿನ್ ಆಗಿದ್ದು, ಇದು 115 ಬಿಹೆಚ್‍ಪಿ ಪವರ್ ಮತ್ತು 144 ಎನ್ಎಂ ಟಾರ್ಕ್ ಅನ್ನು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟ್ರಾನ್ಸ್ಮಿಷನ್ ಆಯ್ಕೆಗಳು 6-ಸ್ಪೀಡ್ ಮ್ಯಾನುವಲ್ ಮತ್ತು IVT (ಇಂಟೆಲಿಜೆಂಟ್ ವೇರಿಯಬಲ್ ಟ್ರಾನ್ಸ್ಮಿಷನ್) ಅನ್ನು ಒಳಗೊಂಡಿರುತ್ತದೆ. ಈ ಎಂಪಿವಿ 40-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ನೀಡುತ್ತದೆ.

ಆಕರ್ಷಕ ವಿನ್ಯಾಸದ ಹೊಸ ಸ್ಟಾರ್‌ಗೇಜರ್ ಎಂಪಿವಿಯನ್ನು ಪರಿಚಯಿಸಿದ ಹ್ಯುಂಡೈ

ಭಾರತದಲ್ಲಿ ಹೊಸ ಹ್ಯುಂಡೈ ಸ್ಟಾರ್‌ಗೇಜರ್ ಎಂಪಿವಿಯು ಬಿಡುಗಡೆಯಾದ ಬಳಿಕ ಸುಜುಕಿ ಎರ್ಟಿಗಾ ಮತ್ತು ಎಕ್ಸ್‌ಎಲ್ 7, ಕಿಯಾ ಕಾರೆನ್ಸ್, ಟೊಯೊಟಾ ಇನೋವಾ ಮುಂತಾದವುಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಹೊಸ ಹುಂಡೈ ಸ್ಟಾರ್‌ಗೇಜರ್ ಎಂಪಿವಿಯು ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ.

Most Read Articles

Kannada
English summary
Hyundai introduced new stargazer mpv features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X