Just In
Don't Miss!
- News
Breaking; ತೈಲ ಕೊರತೆ, ಶ್ರೀಲಂಕಾದಲ್ಲಿ ವಾಹನ ಸಂಚಾರಕ್ಕೆ ಹೊಸ ನಿಯಮ
- Sports
ಕಿವೀಸ್ ವಿರುದ್ಧ ಸರಣಿ ಗೆದ್ದು ಭಾರತಕ್ಕೆ ಎಚ್ಚರಿಕೆ ಸಂದೇಶ ನೀಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್
- Movies
ಕೌಟುಂಬಿಕ ಸಮಸ್ಯೆ ಬದಿಗೊತ್ತಿ 'ಮಾವು-ಬೇವು' ಕಥೆ ಹೇಳಲು ಹೊರಟ ಸುಚೇಂದ್ರ ಪ್ರಸಾದ್!
- Lifestyle
ನಿಮ್ಮಿಬ್ಬರ ಸಂಬಂಧ ಹೀಗಿದ್ದರೆ ಒಟ್ಟಿಗಿದ್ದು ಪಡುವ ನರಕಕ್ಕಿಂತ ಗುಡ್ಬೈ ಹೇಳುವುದೇ ಬೆಸ್ಟ್!
- Finance
ಜೂ.27ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Education
UAS Dharwad Recruitment 2022 : ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ಜು.2ಕ್ಕೆ ನೇರ ಸಂದರ್ಶನ
- Technology
‘ಫಾಸ್ಟ್ಯಾಗ್' ನಲ್ಲಿರುವ ಹಣವನ್ನು ಕದಿಯಬಹುದಾ? ವೈರಲ್ ವೀಡಿಯೊದ ಅಸಲಿಯತೆ ಏನು?
- Travel
ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022
ಭಾರತದಲ್ಲಿ ಹೊಸ ಐಯಾನಿಕ್ 5 ಎಲೆಕ್ಟ್ರಿಕ್ ಕಾರು ಬಿಡುಗಡೆ ಯೋಜನೆ ಖಚಿತಪಡಿಸಿದ ಹ್ಯುಂಡೈ
ಹ್ಯುಂಡೈ ಕಂಪನಿಯು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣಾಗಿ ಮುಂಬರುವ ಕೆಲವೇ ದಿನಗಳಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದು, ಕಂಪನಿಯು ಭಾರತದಲ್ಲೂ ಸಹ ತನ್ನ ಹೊಸ ಇವಿ ಕಾರುಗಳ ಬಿಡುಗಡೆಯಾಗಿ ಬೃಹತ್ ಯೋಜನೆಗೆ ಚಾಲನೆ ನೀಡಿದೆ.

2028ರ ವೇಳೆಗೆ ಜಾಗತಿಕ ಮಾರುಕಟ್ಟೆಯಲ್ಲಿ 30ಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಹೊಂದುವುದಾಗಿ ಹೇಳಿಕೊಂಡಿರುವ ಹ್ಯುಂಡೈ ಮೋಟಾರ್ಸ್ ಕಂಪನಿಯು ಭಾರತದಲ್ಲೂ ಗ್ರಾಹಕರ ಬೇಡಿಕೆಯೆಂತೆ ಮುಂದಿನ ಐದು ವರ್ಷಗಳಲ್ಲಿ ಆರು ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಯೋಜನೆಗಾಗಿ ಕಂಪನಿಯು ಸುಮಾರು ರೂ. 4 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದೆ.

ಹ್ಯುಂಡೈ ಕಂಪನಿಯು ಸದ್ಯ ಭಾರತದಲ್ಲಿ ಕೊನಾ ಇವಿ ಕಾರು ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಕಂಪನಿಯು ಮುಂಬರುವ ದಿನಗಳಲ್ಲಿ ಕೊನಾ ಮಾದರಿಗಿಂತಲೂ ಹೆಚ್ಚು ಮೈಲೇಜ್ ಪ್ರೇರಿತ ಕಾರುಗಳ ಜೊತೆ ಬಜೆಟ್ ಕಾರು ಮಾದರಿಗಳನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಪ್ರೀಮಿಯಂ ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಬಜೆಟ್ ಬೆಲೆಯ ಎಲೆಕ್ಟ್ರಿಕ್ ವಾಹನಗಳನ್ನು ಸಹ ಮಾರಾಟ ಮಾಡಲು ಉದ್ದೇಶಿಸಿರುವ ಹ್ಯುಂಡೈ ಕಂಪನಿಯು ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದ್ದು, ಕಂಪನಿಯು 2028ರ ವೇಳೆಗೆ ವಿವಿಧ ಸೆಗ್ಮೆಂಟ್‌ಗಳಲ್ಲಿ ಆರು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿದೆ.

ಹ್ಯುಂಡೈ ಕಂಪನಿಯು ಹೊಸ ಇವಿ ಕಾರುಗಳ ಉತ್ಪಾದನೆಗೆ ಪೂರಕವಾದ ಮತ್ತು ಗುಣಮಟ್ಟದ ಮಾದರಿಗಳನ್ನು ಸಿದ್ದಪಡಿಸಲು ಆಧುನಿಕ ತಂತ್ರಜ್ಞಾನ ಪ್ರೇರಿತ ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಇ-ಜಿಎಂಪಿ) ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಲು ಉದ್ದೇಶಿಸಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಕಂಪನಿಯು ವಿವಿಧ ಸೆಗ್ಮೆಂಟ್ ಇವಿ ಪರಿಚಯಿಸಲಿದೆ.

ಎಲೆಕ್ಟ್ರಿಕ್ ಜೊತೆಗೆ ಭವಿಷ್ಯದಲ್ಲಿ ಸದ್ದುಮಾಡಬಹುದಾದ ಹೈಡ್ರೊಜನ್ ಫ್ಯೂಲ್ ಸೆಲ್ಸ್ ವಾಹನಗಳನ್ನು ಉತ್ಪಾದನೆ ಆರಂಭಿಸುತ್ತಿದ್ದು, ಹೊಸ ಮಾದರಿಯ ವಾಹನಗಳ ಸಂಶೋಧನೆ ಮತ್ತು ಅಭಿವೃದ್ದಿ ಮೇಲೆ ಹೆಚ್ಚಿನ ಗಮನಹರಿಸಿರುವ ಹ್ಯುಂಡೈ ಕಂಪನಿಯು ಶೀಘ್ರದಲ್ಲೇ ತನ್ನ ಬಹುನೀರಿಕ್ಷಿತ ಪ್ರಮುಖ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ.

ಹ್ಯುಂಡೈ ಕಂಪನಿಯು ಬಿಡುಗಡೆ ಮಾಡಲಿರುವ ಆರು ಹೊಸ ಎಲೆಕ್ಟ್ರಿಕ್ ಕಾರುಗಳ ಪೈಕಿ ಐಯಾನಿಕ್ 5 ಕ್ರಾಸ್ಓವರ್ ಎಸ್‌ಯುವಿ ಮಾದರಿಯು ಕೂಡಾ ಒಂದಾಗಿದ್ದು, ಹೊಸ ಕಾರು ಮಾದರಿಯನ್ನು ಹ್ಯುಂಡೈ ಕಂಪನಿಯು ಭಾರತದಲ್ಲಿ ಮಾತ್ರವಲ್ಲ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ಪರಿಚಯಿಸಲಿದೆ.

ಹೊಸ ಐಯಾನಿಕ್ 5 ಮಾದರಿಯನ್ನು ಈಗಾಗಲೇ ಯುಎಸ್ಎ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವ ಹ್ಯುಂಡೈ ಇದೀಗ ಭಾರತ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡುತ್ತಿದೆ.

ಹೊಸ ಐಕಾನಿಕ್ 5 ಎಲೆಕ್ಟ್ರಿಕ್ ಕಾರನ್ನು ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಇ-ಜಿಎಂಪಿ) ತಂತ್ರಜ್ಞಾನದಡಿ ನಿರ್ಮಾಣ ಮಾಡಲಾಗಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಹೊಸ ಕಾರು 58 ಕಿ.ವ್ಯಾ ಮತ್ತು 72.6 ಕಿ.ವ್ಯಾ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.

ಐಯಾನಿಕ್ 5 ಕಾರು ಬ್ಯಾಟರಿ ಪ್ಯಾಕ್ ಆಧಾರದ ಪ್ರತಿ ಚಾರ್ಜ್‌ಗೆ ಗರಿಷ್ಠ ಮೈಲೇಜ್ ಹಿಂದಿಗಿರುಗಿಸಲಿದ್ದು, ಯಎಸ್ ಎನ್ವಿರೋನ್ಮೆಂಟ್ ಪ್ರೊಟೆಕ್ಷನ್ ಎಜೆನ್ಸಿ(EPA) ಸಂಸ್ಥೆಯು ನೀಡಿರುವ ಪ್ರಮಾಣ ಪತ್ರದಲ್ಲಿ ಹೊಸ ಕಾರಿ ಅಧಿಕೃತ ಮೈಲೇಜ್ ಪ್ರಮಾಣವು ಪ್ರತಿ ಚಾರ್ಜ್‌ಗೆ 488 ಕಿ.ಮೀ ಆಗಿದೆ.

ಜೊತೆಗೆ ಆಧುನಿಕ ತಂತ್ರಜ್ಞಾನ ಪ್ರೇರಿತ ಸೂಪರ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಹೊಸ ಕಾರನ್ನು ಕೇವಲ 5 ನಿಮಿಷಗಳ ಕಾಲ ಚಾರ್ಜ್ ಮಾಡಿದರೂ ಕನಿಷ್ಠ 100 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಹೊಸ ಕಾರು ಗ್ರಾಹಕರ ಬೇಡಕೆಯೆಂತೆ ಎರಡು ಪ್ರಮುಖ ಪವರ್‌ಟ್ರೇನ್ ಸೆಟಪ್ ಮತ್ತು ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದ್ದು, ಹೊಸ ಕಾರಿನಲ್ಲಿ ಚಾರ್ಜಿಂಗ್ ತಂತ್ರಜ್ಞಾನವು ಎಲೆಕ್ಟ್ರಿಕ್ ವಾಹನ ಮಾರಾಟದಲ್ಲೇ ಹೊಸ ಆವಿಷ್ಕಾರಗಳಿಗೆ ಮುನ್ನಡೆ ಬರೆದಿದೆ.

ಐಯಾನಿಕ್ 5 ಕಾರಿನಲ್ಲಿ ಹ್ಯುಂಡೈ ಕಂಪನಿಯು 58 ಕಿ.ವ್ಯಾ ಮತ್ತು 72.6 ಕಿ.ವ್ಯಾ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲು ನಿರ್ಧರಿಸಿದ್ದು, ಆರಂಭಿಕ ಮಾದರಿಯು 167 ಬಿಹೆಚ್‌ಪಿ ಉತ್ಪಾದಿಯೊಂದಿಗೆ ಕೇವಲ 8.5 ಸೆಕೆಂಡುಗಳಲ್ಲಿ ಗಂಟೆಗೆ ಸೊನ್ನೆಯಿಂದ ನೂರು ಕಿಮೀ ವೇಗವನ್ನು ತಲುಪುತ್ತದೆ.

ದೊಡ್ಡ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರುವ ಐಯಾನಿಕ್ 5 ಮಾದರಿಯು 302 ಬಿಹೆಚ್‌ಪಿ ಮತ್ತು 605 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಈ ಕೇವಲ 5.2 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗದೊಂದಿಗೆ ಪ್ರತಿ ಗಂಟೆಗೆ 185 ಕಿ.ಮೀ ಟಾಪ್ ಸ್ಪೀಡ್ ತಲುಪುತ್ತದೆ.

ಆಕರ್ಷಕ ವಿನ್ಯಾಸ ಹೊಂದಿರುವ ಹೊಸ ಐಯಾನಿಕ್ 5 ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಡ್ಯುಯಲ್ ಸ್ಕ್ರೀನ್ ಸೆಟಪ್‌ನೊಂದಿಗೆ ಬ್ಲ್ಯೂ ಲಿಂಕ್ ಕಾರ್ ಕನೆಕ್ಟ್ ಒಳಗೊಂಡ 12 ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಸಮಾನವಾದ ದೊಡ್ಡ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದೆ.

ಈ ಮೂಲಕ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಿಗೆ ಸಮನಾದ ಫೀಚರ್ಸ್ ಹೊಂದಿರವ ಹೊಸ ಐಯಾನಿಕ್ 5 ಕಾರು ಭಾರತದಲ್ಲಿ ರೂ.35 ಲಕ್ಷದಿಂದ ರೂ.50 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದ್ದ, ದೇಶಿಯ ಮಾರುಕಟ್ಟೆಯಲ್ಲಿ ಈ ವರ್ಷದ ಮೂರನೇ ತ್ರೈಮಾಸಿಕ ಅವಧಿಗೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.