ಕಾರು ಮಾರಾಟದಲ್ಲಿ ಟಾಟಾ ಮೋಟಾರ್ಸ್ ಹಿಂದಿಕ್ಕಿ ಎರಡನೇ ಸ್ಥಾನ ಉಳಿಸಿಕೊಂಡ ಹ್ಯುಂಡೈ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ 2022ರ ಜುಲೈ ತಿಂಗಳಿನ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳಿನಲ್ಲಿ ಕೊರಿಯನ್ ವಾಹನ ತಯಾರಕ ಹ್ಯುಂಡೈ ಒಟ್ಟು 63,851 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ.

ಕಾರು ಮಾರಾಟದಲ್ಲಿ ಎರಡನೇ ಸ್ಥಾನ ಉಳಿಸಿಕೊಂಡ ಪಡೆದ ಹ್ಯುಂಡೈ

ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಹ್ಯುಂಡೈ ಕಂಫನಿಯು 60,249 ಯುನಿಟ್‌ಗಳನ್ನು ಮಾರಾಟ ಮಾಡಿದ್ದರು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.6 ರಷ್ಟು ಏರಿಕೆಯನ್ನು ಕಂಡಿದೆ. ಇನ್ನು ದೇಶೀಯ ಮಾರುಕಟ್ಟೆಯಲ್ಲಿ, ಹ್ಯುಂಡೈ ಕಂಪನಿಯು ಕಳೆದ ತಿಂಗಳು 50,500 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2021ರ ಜುಲೈ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 48,042 ಯುನಿಟ್‌ಗಳನ್ನು ಮಾರಾಟ ಮಾಡಿತು, ಇದನ್ನು ಕಂಪನಿಯು ವರ್ಷದಿಂದ ವರ್ಷಕ್ಕೆ ಶೇಕಡಾ 5.1 ರಷ್ಟು ಮಾರಾಟದ ಬೆಳವಣಿಗೆಯನ್ನು ವರದಿ ಮಾಡಿದೆ.

ಕಾರು ಮಾರಾಟದಲ್ಲಿ ಎರಡನೇ ಸ್ಥಾನ ಉಳಿಸಿಕೊಂಡ ಪಡೆದ ಹ್ಯುಂಡೈ

2022ರ ಜುಲೈ ತಿಂಗಳಿನಲ್ಲಿ ಹ್ಯುಂಡೈ ಕಂಪನಿಯು 13,351 ಯುನಿಟ್‌ಗಳನ್ನು ರಫ್ತು ಮಾಡಿದೆ. ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಹ್ಯುಂಡೈ ಕಂಪನಿಯು 12,207 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇ.9.4 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಕಾರು ಮಾರಾಟದಲ್ಲಿ ಎರಡನೇ ಸ್ಥಾನ ಉಳಿಸಿಕೊಂಡ ಪಡೆದ ಹ್ಯುಂಡೈ

ಸೆಮಿಕಂಡಕ್ಟರ್ ಪರಿಸ್ಥಿತಿಯಲ್ಲಿ ಸುಧಾರಣೆಯೊಂದಿಗೆ, ಪ್ರಯಾಣಿಕರ ವಾಹನ ವಿಭಾಗವು ಮತ್ತು ವೈಯಕ್ತಿಕ ಚಲನಶೀಲತೆಯತ್ತ ಗ್ರಾಹಕರ ಬಯಕೆಯ ಮೇಲೆ ಸಕಾರಾತ್ಮಕ ಪ್ರವೃತ್ತಿಯನ್ನು ತೋರಿಸುತ್ತಿದೆ" ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಸೇಲ್ಸ್, ಮಾರ್ಕೆಟಿಂಗ್ ಮತ್ತು ಸರ್ವಿಸ್ ವಿಭಾಗದ ನಿರ್ದೇಶಕ ತರುಣ್ ಗಾರ್ಗ್ ಅವರು ಹೇಳಿದರು.

ಕಾರು ಮಾರಾಟದಲ್ಲಿ ಎರಡನೇ ಸ್ಥಾನ ಉಳಿಸಿಕೊಂಡ ಪಡೆದ ಹ್ಯುಂಡೈ

ಹ್ಯುಂಡೈ ಮಾರಾಟದ ಚಾರ್ಟ್‌ಗಳಲ್ಲಿ ಮುಂಚೂಣಿಯಲ್ಲಿರುವದು ಕ್ರೆಟಾ, ವೆನ್ಯೂ, ಐ20, ಗ್ರಾಂಡ್ ಐ10 ನಿಯೋಸ್, ಅಲ್ಕಾಜರ್, ಔರಾ, ಇತ್ಯಾದಿ.ಈಗ ಪರಿಸ್ಥಿತಿ ಹೆಚ್ಚು ಸುಧಾರಿಸಿರುವುದರಿಂದ, ಮಾರುಕಟ್ಟೆಯ ನಿರೀಕ್ಷೆಗಳು ಕೂಡ ಸುಧಾರಿಸಿವೆ. ವಿಶೇಷವಾಗಿ ಮುಂದೆ ಹಬ್ಬದ ಸೀಸನ್ ಬರಲಿದೆ,

ಕಾರು ಮಾರಾಟದಲ್ಲಿ ಎರಡನೇ ಸ್ಥಾನ ಉಳಿಸಿಕೊಂಡ ಪಡೆದ ಹ್ಯುಂಡೈ

ಹ್ಯುಂಡೈ ಕಂಪನಿಯು 2023 ರಲ್ಲಿ ಭಾರತದಲ್ಲಿ ತನ್ನ ಹೊಸ ಇವಿಅನ್ನು ಪರಿಚಯಿಸುವುದಾಗಿ ದೃಢಪಡಿಸಿದೆ. ಹ್ಯುಂಡೈ Ioniq 5 ಎಂದು ಕರೆಯಲಾಗುವ ಎಲೆಕ್ಟ್ರಿಕ್ ಕ್ರಾಸ್ಒವರ್ ಅನ್ನು CKD (ಸಂಪೂರ್ಣವಾಗಿ ನಾಕ್ಡ್ ಡೌನ್) ಕಿಟ್ ಮೂಲಕ ಇಲ್ಲಿ ಜೋಡಿಸಲಾಗುತ್ತದೆ. ಇದು ಹೊಸದಾಗಿ ಬಿಡುಗಡೆಯಾದ ಕಿಯಾ ಇವಿ6 ಮಾದರಿಗೆ ಪೈಪೋಟಿ ನೀಡುತ್ತದೆ.

ಕಾರು ಮಾರಾಟದಲ್ಲಿ ಎರಡನೇ ಸ್ಥಾನ ಉಳಿಸಿಕೊಂಡ ಪಡೆದ ಹ್ಯುಂಡೈ

ಈ ಹಿಂದೆ ಹ್ಯುಂಡೈ ಇಂಡಿಯಾದ ಸೇಲ್ಸ್, ಮಾರ್ಕೆಟಿಂಗ್ ಮತ್ತು ಸರ್ವಿಸ್ ವಿಭಾಗದ ನಿರ್ದೇಶಕ ತರುಣ್ ಗಾರ್ಗ್ ಅವರು, ಕಂಪನಿಯ ಭಾರತದಲ್ಲಿ ವಿವಿಧ ವಿಭಾಗಗಳು ಚಾರ್ಜಿಂಗ್ ವ್ಯವಸ್ಥೆ, ಮಾರಾಟ ಜಾಲ, ಉತ್ಪಾದನೆ ಮತ್ತು ಕಾರ್‌ಮೇಕರ್ ತನ್ನ ಎಲೆಕ್ಟ್ರಿಕ್ ಕಾರ್ ಲೈನ್‌ಅಪ್‌ಗಾಗಿ ಅನುಸರಿಸಬೇಕಾದ ಅಸೆಂಬ್ಲಿ ಪ್ರಕ್ರಿಯೆಯಂತಹ ವಿಷಯಗಳ ಕುರಿತು ಕೆಲಸ ಮಾಡುತ್ತಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಾರು ಮಾರಾಟದಲ್ಲಿ ಎರಡನೇ ಸ್ಥಾನ ಉಳಿಸಿಕೊಂಡ ಪಡೆದ ಹ್ಯುಂಡೈ

ಇನ್ನು ಹೊಸ ಸಣ್ಣ ಎಲೆಕ್ಟ್ರಿಕ್ ಕಾರು 2028ರ ವೇಳೆಗೆ ಭಾರತದಲ್ಲಿ ಆರು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲು ರೂ.40 ಬಿಲಿಯನ್ ($512 ಮಿಲಿಯನ್) ಹೂಡಿಕೆ ಮಾಡುವ ಹುಂಡೈನ ಯೋಜನೆಗಳ ಭಾಗವಾಗಿದೆ. ಹುಂಡೈ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಕೋನಾ ಎಲೆಕ್ಟ್ರಿಕ್ ಎಸ್‍ಯುವಿ ರೂಪದಲ್ಲಿ ಒಂದು ಎಲೆಕ್ಟ್ರಿಕ್ ಕಾರನ್ನು ಹೊಂದಿದೆ. ಈ ಹೊಸ ಹ್ಯುಂಡೈ ಐಯಾನಿಕ್ 5 ತನ್ನ ಬ್ಯಾಟರಿ ಪ್ಯಾಕ್‌ಗಳನ್ನು ಇವಿ6 ನೊಂದಿಗೆ ಹಂಚಿಕೊಳ್ಳುತ್ತದೆ.

ಕಾರು ಮಾರಾಟದಲ್ಲಿ ಎರಡನೇ ಸ್ಥಾನ ಉಳಿಸಿಕೊಂಡ ಪಡೆದ ಹ್ಯುಂಡೈ

ಇನ್ನು ಹ್ಯುಂಡೈ ಇಂಡಿಯಾ ತನ್ನ ನಾಲ್ಕನೇ ಜನರೇಷನ್ ಟ್ಯೂಸಾನ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಬಹುನಿರೀಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು 2022ರ ಆಗಸ್ಟ್ 4 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯನ್ನು ಇದರ ಹಿಂದಿನ ಮಾದರಿಗೆ ಹೋಲಿಸಿದರೆ ಸಾಕಷ್ಟು ಬದಲಾವಣೆಗಳಿವೆ. ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಹ್ಯುಂಡೈನ 'ಸೆನ್ಶುಯಲ್ ಸ್ಪೋರ್ಟಿನೆಸ್' ವಿನ್ಯಾಸ ಶೈಲಿಯನ್ನು ಹೊಂದಿದೆ. ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಈಗಾಗಲೇ ಹಲವು ವಿದೇಶದ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ.

ಕಾರು ಮಾರಾಟದಲ್ಲಿ ಎರಡನೇ ಸ್ಥಾನ ಉಳಿಸಿಕೊಂಡ ಪಡೆದ ಹ್ಯುಂಡೈ

ಇದೀಗ ಈ ನ್ಯೂ ಜನರೇಷನ್ ಹೊಸ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗಿದೆ. ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಇಂದು ದೇಶೀಯ ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ ಟ್ಯೂಸಾನ್ ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಎಸ್‍ಯುವಿಯನ್ನು ಖರೀದಿಸಲು ಹ್ಯುಂಡೈನ ಸಿಗ್ನೇಚರ್ ಔಟ್‌ಲೆಟ್‌ಗಳಲ್ಲಿ ಅಥವಾ ಆನ್‌ಲೈನ್ ಮೂಲಕ ನೀವು ಬುಕ್ಕಿಂಗ್ ಮಾಡಬಹುದು.

ಕಾರು ಮಾರಾಟದಲ್ಲಿ ಎರಡನೇ ಸ್ಥಾನ ಉಳಿಸಿಕೊಂಡ ಪಡೆದ ಹ್ಯುಂಡೈ

ಇನ್ನು ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಅತ್ಯಂತ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ಜನಪ್ರಿಯ ಮಾದರಿಯಾಗಿದೆ. ಹೊಸ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯನ್ನು 2021ರ ಗೈಕಿಂಡೋ ಇಂಡೋನೇಷ್ಯಾ ಇಂಟರ್‌ನ್ಯಾಶನಲ್ ಆಟೋ ಶೋ (GIIAS) ನಲ್ಲಿ ಜಾಗತಿಕವಾಗಿ ಇತ್ತೀಚೆಗೆ ಹ್ಯುಂಡೈ ಕಂಪನಿಯು ಅನಾವರಣಗೊಳಿಸಿತ್ತು. 2022ರ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್(Hyundai Creta Facelift) ಎಸ್‍ಯುವಿಯು ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

ಕಾರು ಮಾರಾಟದಲ್ಲಿ ಎರಡನೇ ಸ್ಥಾನ ಉಳಿಸಿಕೊಂಡ ಪಡೆದ ಹ್ಯುಂಡೈ

ಬ್ರ್ಯಾಂಡ್ ಈಗ ಕಾರಿನ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಈ ಕ್ಯಾಲೆಂಡರ್ ವರ್ಷದ ದ್ವಿತೀಯಾರ್ಧದಲ್ಲಿ ಕ್ರೆಟಾದ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿದೆ.

Most Read Articles

Kannada
English summary
Hyundai motor india sells 63851 units in july 2022 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X