ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಬೇಸ್ ವೆರಿಯೆಂಟ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಇಂಡಿಯಾ ತನ್ನ ಎಸ್‍ಯುವಿ ಪೋರ್ಟ್ಫೋಲಿಯೊವನ್ನು ಮತ್ತಷ್ಟು ಬಲಪಡಿಸಲು 7-ಸೀಟರ್ ಅಲ್ಕಾಜರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತು. ಈ ಹೊಸ ಹ್ಯುಂಡೈ ಅಲ್ಕಾಜರ್ 7-ಸೀಟರ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಬೇಸ್ ವೆರಿಯೆಂಟ್

ಹ್ಯುಂಡೈ ಕಂಪನಿಯು ತನ್ನ ಅಲ್ಕಾಜರ್ ಎಸ್‌ಯುವಿ ಮಾರಾಟವನ್ನು ಇನ್ನಷ್ಟು ಹೆಚ್ಚಿಸಲು ಇದರ ಎಕ್ಸಿಕ್ಯುಟಿವ್ ಎಂಬ ಬೇಸ್ ವೆರಿಯೆಂಟ್ ಅನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಹುಂಡೈ ಅಲ್ಕಾಜರ್ ಎಸ್‌ಯುವಿಯ ಈ ಹೊಸ ವೆರಿಯೆಂಟ್ ಕಡಿಮೆ ಬೆಲೆಯೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಪ್ರಸ್ತುತ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.16.44 ಲಕ್ಷದಿಂದ ಪ್ರಾರಂಭವಾಗುತ್ತದೆ.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಬೇಸ್ ವೆರಿಯೆಂಟ್

ಈ ಹೊಸ ವೆರಿಯೆಂಟ್ ರಚನೆಯು ಎಸ್‍ಯುವಿಯನ್ನು ವ್ಯಾಪಕ ಶ್ರೇಣಿಯ ಗ್ರಾಹಕರನ್ನು ಸುಲಭವಾಗಿ ಆಕರ್ಷಿಸುತ್ತದೆ. ಹೀಗಾಗಿ ಎಸ್‍ಯುವಿಯ ಮಾರಾಟವನ್ನು ಸುಧಾರಿಸುತ್ತದೆ. ಈ ಹ್ಯುಂಡೈ ಅಲ್ಕಾಜರ್ ಮಾರಾಟದ ಪ್ರಮಾಣದಲ್ಲಿ ಟಾಟಾ ಸಫಾರಿ ಮತ್ತು ಎಂಜಿ ಹೆಕ್ಟರ್ ಗಿಂತ ಮುಂದಿದ್ದರೂ, ಎಸ್‍ಯುವಿಯ ಮಾರಾಟದ ಅಂಕಿಅಂಶಗಳನ್ನು ಇನ್ನಷ್ಟು ಸುಧಾರಿಸುವ ಗುರಿಯನ್ನು ಹ್ಯುಂಡೈ ಹೊಂದಿದೆ.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಬೇಸ್ ವೆರಿಯೆಂಟ್

ವರದಿಗಳ ಪ್ರಕಾರ, ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಮುಂಬರುವ 'ಎಕ್ಸಿಕ್ಯುಟಿವ್' ರೂಪಾಂತರವು ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ. ಆದರೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಎಸ್‍ಯುವಿಯ ಡೀಸೆಲ್ ರೂಪಾಂತರದೊಂದಿಗೆ ಮಾತ್ರ ಲಭ್ಯವಿದೆ.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಬೇಸ್ ವೆರಿಯೆಂಟ್

ಹುಂಡೈ ಅಲ್ಕಾಜರ್‌ನ ಮುಂಬರುವ ಹೊಸ ಮೂಲ ರೂಪಾಂತರವು ಒಳಗೆ ಮತ್ತು ಹೊರಗೆ ಕೆಲವು ವೈಶಿಷ್ಟ್ಯಗಳನ್ನು ಕಳೆದುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಹೊರಭಾಗದಲ್ಲಿ ಹ್ಯುಂಡೈ ಅಲ್ಕಾಜರ್‌ನ ಮುಂಬರುವ ಹೊಸ ಬೇಸ್ ರೂಪಾಂತರವು ಡ್ಯುಯಲ್-ಟೋನ್ ಬಣ್ಣದ ಆಯ್ಕೆ, ಸೈಡ್ ಫೂಟ್ ಸ್ಟೆಪ್, ಪಡ್ಲ್ ಲ್ಯಾಂಪ್, ರಿಯರ್ ಸ್ಪಾಯ್ಲರ್, ಶಾರ್ಕ್ ಫಿನ್ ಆಂಟೆನಾ, ರೂಫ್ ರೈಲ್‌ಗಳಂತಹ ಕೆಲವು ವಿನ್ಯಾಸ ಮತ್ತು ಕ್ರಿಯಾತ್ಮಕ ಅಂಶಗಳನ್ನು ಕಳೆದುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಬೇಸ್ ವೆರಿಯೆಂಟ್

ಒಳಭಾಗದಲ್ಲಿ, ಹೊಸ ಬೇಸ್ ರೂಪಾಂತರವು ಕೆಲವು ವೈಶಿಷ್ಟ್ಯಗಳಿಗಿಂತ ಹೆಚ್ಚಿನದನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ ಮತ್ತು ಕಂದು ಮತ್ತು ಬ್ಲ್ಯಾಕ್ ಲೆದರ್ ಅಂಶ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಏರ್ ಪ್ಯೂರಿಫೈಯರ್, 2 ನೇ-ಸಾಲಿನ ಹ್ಯಾಂಡ್ ರೆಸ್ಟ್‌ಗಳು, ಪ್ರೀಮಿಯಂ-ಕಾಣುವ ಬಿಟ್‌ಗಳು ಕಾರ್ ಟೆಕ್, ಮತ್ತು ದೊಡ್ಡ 10.25-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಆಗಿದೆ.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಬೇಸ್ ವೆರಿಯೆಂಟ್

ಇನ್ನು ಹ್ಯುಂಡೈ ಅಲ್ಕಾಜಾರ್ ಕ್ರೆಟಾವನ್ನು ಆಧರಿಸಿದೆ ಆದರೆ, ಅದರ ಕೆಲವು ಸ್ಪರ್ಧಿಗಳಿಗಿಂತ ಭಿನ್ನವಾಗಿ, ಹ್ಯುಂಡೈ ಎರಡೂ ಎಸ್‌ಯುವಿಗಳನ್ನು ಪ್ರತ್ಯೇಕಿಸಲು ಕಾರಿನಲ್ಲಿ ಕೆಲವು ವಿನ್ಯಾಸ ಮತ್ತು ಯಾಂತ್ರಿಕ ಬದಲಾವಣೆಗಳನ್ನು ಮಾಡಿದೆ.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಬೇಸ್ ವೆರಿಯೆಂಟ್

ಈ ಹ್ಯುಂಡೈ ಅಲ್ಕಾಜರ್ ಮಾದರಿಯನ್ನು 6 ಮತ್ತು 7 ಆಸನಗಳ ಸಂರಚನೆಗಳಲ್ಲಿ ಅನ್ನು ನೀಡುತ್ತದೆ. ಈ ಅಲ್ಕಾಜಾರ್ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳನ್ನು ಸೆಂಟರ್ ಕನ್ಸೋಲ್‌ನೊಂದಿಗೆ ಪಡೆಯುತ್ತದೆ, ಇದರಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಕಪ್‌ಹೋಲ್ಡರ್‌ಗಳಿವೆ. ಎಲ್ಲಾ ಮೂರು ಸಾಲುಗಳ ಸೀಟುಗಳೊಂದಿಗೆ 180 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಬೇಸ್ ವೆರಿಯೆಂಟ್

ಈ ಹ್ಯುಂಡೈ ಅಲ್ಕಾಜರ್ ಮಾದರಿಯಲ್ಲಿ 579 ಲೀಟರ್ ನಷ್ಟು ಬೂಟ್ ಸ್ಪೇಸ್ ಅನ್ನು ಹೊಂದಿದೆ. ಇದನ್ನು 1051 ಲೀಟರ್'ಗೆ ಹೆಚ್ಚಿಸಬಹುದು. ಇನ್ನು ಈ ಎಸ್‍ಯುವಿಯ ಡೈವಿಂಗ್ ಸೀಟ್ ಎಲೆಕ್ಟ್ರಿಕ್ ಆಗಿ ಅಡೆಜಸ್ಟ್ ಮಾಡಿಕೊಳ್ಳಬಹುದು. ಇದರ ಎರಡನೇ ಸಾಲಿನ ಸೀಟನ್ನು ಮಡಿಚುವ ಮೂಲಕ ಮೂರನೇ ಸಾಲಿನ ಸೀಟನ್ನು ಸುಲಭವಾಗಿ ಪ್ರವೇಶಿಸಬಹುದು.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಬೇಸ್ ವೆರಿಯೆಂಟ್

ಎರಡನೇ ಸಾಲಿನ ಅಥವಾ ಮೂರನೇ ಸಾಲಿನ ಪ್ರಯಾಣಿಕರಿಗೆ ಹೆಚ್ಚು ಲೆಗ್ ರೂಂ ರಚಿಸಲು ಎರಡನೇ ಸಾಲಿನ ಸೀಟುಗಳನ್ನು ಸರಿಹೊಂದಿಸಬಹುದು. ಅಲ್ಕಾಜಾರ್ ಎಸ್‍ಯುವಿ ನೀಡುತ್ತಿರುವ ಮತ್ತೊಂದು ಆರಾಮದಾಯಕ ವೈಶಿಷ್ಟ್ಯವೆಂದರೆ ಎರಡನೇ ಸಾಲಿನ ಪ್ರಯಾಣಿಕರಿಗೆ ಟ್ರೇ ಟೇಬಲ್ ಲಭ್ಯವಿರುತ್ತದೆ, ಪ್ರಯಾಣಿಕರಿಗೆ ಹುಂಡೈ ಎಸಿ ವೆಂಟ್‌ಗಳನ್ನು ನೀಡುತ್ತಿದ್ದು, ಕಾರಿನಲ್ಲಿ ಇಂಟಿಗ್ರೇಟೆಡ್ ಏರ್ ಪ್ಯೂರಿಫೈಯರ್ ಅನ್ನು ಸಹ ಹೊಂದಿದೆ,

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಬೇಸ್ ವೆರಿಯೆಂಟ್

ಇನ್ನು ಈ ಎಸ್‍ಯುವಿಯಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಗಳನ್ನು ಹೊಂದಿವೆ. ಇದರಲ್ಲಿ 2.0 ಲೀಟರ್ ಎಂಜಿನ್ 159 ಬಿಹೆಚ್‍ಪಿ ಪವರ್ ಮತ್ತು 191 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುಸುವ ಸಾಮರ್ಥ್ಯವನ್ನು ಹೊಂದಿದ್ದರೆ, 1.5-ಲೀಟರ್ ಡೀಸೆಲ್ ಎಂಜಿನ್ 115 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಬೇಸ್ ವೆರಿಯೆಂಟ್

ಈ ಹ್ಯುಂಡೈ ಅಲ್ಕಾಜರ್ ಎಸ್‍ಯುವಿಯು ಸ್ಪ್ಲಿಟ್-ಶೈಲಿಯ ಎಲ್ಇಡಿ ಹೆಡ್‌ಲ್ಯಾಂಪ್‌, 3ಡಿ ಹನಿಕೊಂಬ್ ಗ್ರಿಲ್, ಹೊಸ ವಿನ್ಯಾಸದ ಬಂಪರ್ ವಿನ್ಯಾಸ, ಎಲ್ಇಡಿ ಟೈಲ್ ಲ್ಯಾಂಪ್, ಎಲ್ಇಡಿ ಟರ್ನ್ ಇಂಡಿಕೇಟರ್, ವಿವಿಧ ಮಾದರಿಗಳಿಗೆ ಅನುಗುಣವಾಗಿ 17 ಮತ್ತು 18-ಇಂಚಿನ ಅಲಾಯ್ ವೀಲ್ಹ್, ರೂಫ್ ರೈಲ್ಸ್, ಫ್ಲಕ್ಸ್ ಸ್ಕಫ್ ಪ್ಲೇಟ್, ಶಾರ್ಕ್ ಫಿನ್ ಅಂಟೆನಾ ಮತ್ತು ಬಾಡಿ ಕ್ಲ್ಯಾಡಿಂಗ್ ಅನ್ನು ಹೊಂದಿದೆ..

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಬೇಸ್ ವೆರಿಯೆಂಟ್

ಈ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗಿದೆ. ಈ ಹೊಸ ಎಸ್‍ಯುವಿ ಟೈಪೂನ್ ಸಿಲ್ವರ್, ಟೈಟಾನ್ ಗ್ರೇ, ಟೈಗಾ ಬ್ರೌನ್, ಸ್ಟೇರಿ ನೈಟ್, ಪೊಲಾರ್ ವೈಟ್ ಮತ್ತು ಪ್ಯಾಂಥಮ್ ಬ್ಲ್ಯಾಕ್ ಬಣ್ಣಗಳು ಸೇರಿ ಎರಡು ಡ್ಯುಯಲ್ ಟೋನ್ ಮಾದರಿಗಳು ಕೂಡ ಖರೀದಿಗೆ ಲಭ್ಯವಿದೆ.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಬೇಸ್ ವೆರಿಯೆಂಟ್

ಪ್ರಯಾಣಿಕರ ಸುರಕ್ಷತೆಗಾಗಿ ಹ್ಯುಂಡೈ ಅಲ್ಕಾಜರ್ ಎಸ್‍ಯುವಿಯಲ್ಲಿ ಕ್ರೂಸ್ ಕಂಟ್ರೋಲ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆ ಇಬಿಡಿ, ಬ್ಲೈಂಡ್ ವ್ಯೂ ಮಾನಿಟರ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ಸ್ ಗಳನ್ನು ಹೊಂದಿವೆ.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಬೇಸ್ ವೆರಿಯೆಂಟ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಹೊಸ ಬೇಸ್ ವೆರಿಯೆಂಟ್ ಕಡಿಮೆ ಬೆಲೆಯೊಂದಿಗೆ ಬಿಡುಗಡೆಯಾಗುವುದರ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಈ ಹ್ಯುಂಡೈ ಅಲ್ಕಾಜರ್ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್, ಟಾಟಾ ಸಫಾರಿ ಮತ್ತು ಇತ್ತೀಚೆಗೆ ಬಿಡುಗಡೆಯಾದ ಮಹೀಂದ್ರಾ XUV700 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ..

Most Read Articles

Kannada
English summary
Hyundai planning to launch new base variant for alcazar india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X