ಭಾರತಕ್ಕೆ ಕಾಲಿಡಲಿದೆ ಹ್ಯುಂಡೈ ನಿರ್ಮಾಣದ ಮತ್ತೊಂದು ಹೊಸ ಪ್ರೀಮಿಯಂ ಎಸ್‌ಯುವಿ

ಭಾರತದ ಅತ್ಯಂತ ಜನಪ್ರಿಯ ಕಾರು ತಯಾರಿಕಾ ಕಂಪನಿಯಾದ ಹ್ಯುಂಡೈ ತನ್ನ ಹೊಸ ಟ್ಯುಸಾನ್ ಎಸ್‌ಯುವಿಯ ಟೀಸರ್‌ ಇನ್ನು ಬಿಡುಗಡೆ ಮಾಡಿದೆ. ಹೊಸ ಮಾದರಿಯ ಹಲವಾರು ಬದಲಾವಣೆಗಳೊಂದಿಗೆ ಬಿಡುಗಡೆ ಸಜ್ಜಾಗುತ್ತಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸುವ ಭರವಸೆ ಮೂಡಿಸಿದೆ.

ಭಾರತಕ್ಕೆ ಕಾಲಿಡಲಿದೆ ಹ್ಯುಂಡೈ ನಿರ್ಮಾಣದ ಮತ್ತೊಂದು ಹೊಸ ಪ್ರೀಮಿಯಂ ಎಸ್‌ಯುವಿ

ಹ್ಯುಂಡೈ ಟ್ಯುಸಾನ್‌ ಮಾದರಿಯ 20 ಸೆಕೆಂಡ್‌ನ ಟೀಸರ್‌ನಲ್ಲಿ ಕಾರ್‌ನ ಹೊರಾಂಗಣ ವಿನ್ಯಾಸವನ್ನು ಬಹಿರಂಗಪಡಿಸಲಾಗಿದ್ದು, ನಾಲ್ಕನೇ ತಲೆಮಾರಿನ ಈ ಎಸ್‌ಯುವಿಯು ಇದೇ ತಿಂಗಳ 12 ರಂದು ಬಿಡುಗಡೆಯಾಗುತ್ತಿದೆ. ಇನ್ನು ಭಾರತದಲ್ಲಿ ಎಸ್‌ಯುವಿ ವಿಭಾಗವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು ಹ್ಯುಂಡೈ, ತನ್ನ ಹೊಸ ಕಾರಿನ ಮೇಲೆ ತುಂಬಾ ನಿರೀಕ್ಷೆಗಳನ್ನು ಇಟ್ಟಿದೆ.

ಭಾರತಕ್ಕೆ ಕಾಲಿಡಲಿದೆ ಹ್ಯುಂಡೈ ನಿರ್ಮಾಣದ ಮತ್ತೊಂದು ಹೊಸ ಪ್ರೀಮಿಯಂ ಎಸ್‌ಯುವಿ

ಈಗಾಗಲೇ ಹ್ಯುಂಡೈ ಟ್ಯುಸಾನ್‌ ಹೊಸ ಮಾದರಿಯು ಕೊರಿಯಾದಲ್ಲಿ ಬಿಡುಗಡೆಯಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಆದರೆ ಭಾರತದಲ್ಲಿ ಇದು ಬಿಡುಗಡೆಯ ನಂತರ ಗ್ರಾಹಕರು ಎಷ್ಟರ ಮಟ್ಟಿಗೆ ಈ ಕಾರನ್ನು ಸ್ವೀಕರಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

ಭಾರತಕ್ಕೆ ಕಾಲಿಡಲಿದೆ ಹ್ಯುಂಡೈ ನಿರ್ಮಾಣದ ಮತ್ತೊಂದು ಹೊಸ ಪ್ರೀಮಿಯಂ ಎಸ್‌ಯುವಿ

ಹೊಸ ಹ್ಯುಂಡೈ ಟ್ಯುಸಾನ್‌ನ ಜಾಗತಿಕ ಯಶಸ್ಸಿನ ಬಗ್ಗೆ ನೋಡುವುದಾದರೆ, ಇದು ಬಿಡುಗಡೆಗೊಂಡು ಇಲ್ಲಿಯವರೆಗೆ ಸುಮಾರು 7 ಲಕ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ. ಯುರೋಪ್‌ ಮತ್ತು ಜಪಾನ್‌ನ ಪ್ರತಿಷ್ಠಿತ ಕಾರ್‌ ಕಂಪನಿಗಳ ಸ್ಪರ್ಧೆಯೊಂದಿಗೆ ಇಷ್ಟು ದೊಡ್ಡ ಮೊತ್ತದಲ್ಲಿ ಈ ಕಾರು ಮಾರಾಟವಾಗಿರುವುದು ಸುಲಭದ ವಿಷಯವೇನಲ್ಲ.

ಭಾರತಕ್ಕೆ ಕಾಲಿಡಲಿದೆ ಹ್ಯುಂಡೈ ನಿರ್ಮಾಣದ ಮತ್ತೊಂದು ಹೊಸ ಪ್ರೀಮಿಯಂ ಎಸ್‌ಯುವಿ

ಭಾರತದಲ್ಲಿ ಹ್ಯುಂಡೈ ಟ್ಯುಸಾನ್‌ ಇನ್ನು ಬಿಡುಗಡೆಯಾಗಬೇಕಾಗಿದ್ದರೂ ಜಾಗತಿಕವಾಗಿ ಇದು 2020ರಲ್ಲಿಯೇ ಬಿಡುಗಡೆಯಾಗಿದೆ. ಭಾರತದಲ್ಲಿ ಇದಕ್ಕೂ ಮುಂಚೆ ಈ ಕಾರನ್ನು ಪರೀಕ್ಷಾರ್ಥವಾಗಿ ಚಲಾಯಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸುದ್ದಿ ಮಾಡುತ್ತಿತ್ತು.

ಭಾರತಕ್ಕೆ ಕಾಲಿಡಲಿದೆ ಹ್ಯುಂಡೈ ನಿರ್ಮಾಣದ ಮತ್ತೊಂದು ಹೊಸ ಪ್ರೀಮಿಯಂ ಎಸ್‌ಯುವಿ

ಟೀಸರ್‌ನಲ್ಲಿ ತೋರಿಸಿರುವಂತೆ ಈ ಕಾರ್‌ನ ಹೊರಾಂಗಣದ ವಿನ್ಯಾಸವು ತುಂಬಾ ತಾಜಾತನದಿಂದ ಕೂಡಿದೆ. ಇದರ ವಿನ್ಯಾಸವು ಹೊಸತನ ಹಾಗೂ ಸ್ಪೋರ್ಟಿನೆಸ್‌ ನಿಂದ ಕೂಡಿದೆ. ಇದೇ ಕಾರಣದಿಂದಾಗಿ ಕಾರ್‌ ಪ್ರೇಮಿಗಳು ಇದನ್ನು ಇಷ್ಟಪಡುವುದರಲ್ಲಿ ಸಂದೇಹವಿಲ್ಲ.

ಭಾರತಕ್ಕೆ ಕಾಲಿಡಲಿದೆ ಹ್ಯುಂಡೈ ನಿರ್ಮಾಣದ ಮತ್ತೊಂದು ಹೊಸ ಪ್ರೀಮಿಯಂ ಎಸ್‌ಯುವಿ

ಹೊರ ವಿಭಾಗದಲ್ಲಿ ಹ್ಯುಂಡೈ ಟ್ಯುಸಾನ್‌ ಎಸ್‌ಯುವಿಯ ಮುಂಭಾಗದ ಹೊಸ 3ಡಿ ಗ್ರಿಲ್‌ನಲ್ಲಿ ಅಡ್ಡಲಾದ ಗೆರೆಗಳ ವಿನ್ಯಾಸವು ಆಕರ್ಷಕವಾಗಿದ್ದು, ಮುಂಭಾಗದ ಬಂಪರ್‌ಗೆ ಹೊಂದಿಕೊಂಡು ಎಲ್‌ಇಡಿ ಹೆಡ್‌ ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ. ಇದು ಈ ಕಾರಿಗೆ ಇನ್ನೂ ಹೆಚ್ಚಿನ ರಗಡ್‌ ಲುಕ್ ಕೊಡುತ್ತದೆ.

ಭಾರತಕ್ಕೆ ಕಾಲಿಡಲಿದೆ ಹ್ಯುಂಡೈ ನಿರ್ಮಾಣದ ಮತ್ತೊಂದು ಹೊಸ ಪ್ರೀಮಿಯಂ ಎಸ್‌ಯುವಿ

ಇನ್ನು ಹ್ಯುಂಡೈ ಟ್ಯಸಾನ್‌ ಎಸ್‌ಯುವಿಯ ಹೊಂಭಾಗದಲ್ಲಿ ತುಂಬಾನೇ ಸ್ಟೈಲಿಷ್‌ ಆಗಿರುವ ತ್ರಿಭುಜಾಕಾರದ ಟೈಲ್ ಲ್ಯಾಂಪ್‌ಗಳಿದ್ದು, ಹಿಂಭಾಗದಿಂದ ಕಾರ್‌ಗೆ ಪ್ರೀಮಿಯಂ ಲುಕ್‌ ನೀಡುತ್ತಿದೆ. ಇನ್ನು ಇತ್ತೀಚೆಗಷ್ಟೇ ಲೀಕ್‌ ಆಗಿದ್ದ ಹ್ಯುಂಡೈ ಟ್ಯುಸಾನ್‌ನ ಕೆಲವೊಂದು ಚಿತ್ರಗಳಲ್ಲಿ ಈ ಕಾರ್‌ನ ಒಳಾಂಗಣ ವಿನ್ಯಾಸವೂ ಸಹ ಉತ್ಕ್ರಷ್ಟ ಮಟ್ಟದ್ದೆಂದು ತಿಳಿದು ಬಂದಿದೆ.

ಭಾರತಕ್ಕೆ ಕಾಲಿಡಲಿದೆ ಹ್ಯುಂಡೈ ನಿರ್ಮಾಣದ ಮತ್ತೊಂದು ಹೊಸ ಪ್ರೀಮಿಯಂ ಎಸ್‌ಯುವಿ

ಡ್ರೈವರ್‌ ಸೈಡ್ ಕಾಕ್‌ಪೀಟ್‌ನಲ್ಲಿ ತುಂಬಾ ಅಚ್ಚುಕಟ್ಟಾದ ಇಂಟೀರಿಯರ್‌ ಡಿಸೈನ್‌ ಇದ್ದು, ಕಾರು ಚಾಲನೆ ಮಾಡುವಾಗ ಉತ್ತಮ ಅನುಭವವನ್ನು ನೀಡುವುದಂತೂ ಖಂಡಿತ. ಸದ್ಯಕ್ಕೆ ಈ ಕಾರು ಬಿಡುಗಡೆಗೊಂಡ ಬಳಿಕವಂತೂ ಈ ಸೆಗ್ಮೆಂಟ್‌ಗಳ ಇತರ ಕಾರ್‌ ಕಂಪನಿಗಳಿಗಂತೂ ಒಂದು ಬಲಿಷ್ಟ ಪ್ರತಿಸ್ಪರ್ಧಿಯಾಗುವುದಂತೂ ಖಂಡಿತ.

ಭಾರತಕ್ಕೆ ಕಾಲಿಡಲಿದೆ ಹ್ಯುಂಡೈ ನಿರ್ಮಾಣದ ಮತ್ತೊಂದು ಹೊಸ ಪ್ರೀಮಿಯಂ ಎಸ್‌ಯುವಿ

ಸದ್ಯಕ್ಕೆ ಭಾರತದಲ್ಲಿ ಹ್ಯುಂಡೈ ಟ್ಯುಸಾನ್‌ ಎಸ್‌ಯುವಿಯು, ಸಿಟ್ರನ್ ಸಿ5 ಏರ್‌ಕ್ರಾಸ್‌, ಜೀಪ್‌ ಕಂಪಾಸ್‌, ಫೋಕ್ಸ್‌ವ್ಯಾಗನ್ ಟೈಗನ್ ಕಾರುಗಳಿಗೆ ಟಕ್ಕರ್‌ ಕೊಡುವುದಂತೂ ಪಕ್ಕಾ. ಇದಕ್ಕೆ ಇನ್ನಷ್ಟು ಶಕ್ತಿ ನೀಡುವಂತೆ ಇತ್ತೀಚೆಗಷ್ಟೇ ನಡೆದ ಯೂರೋ ಎನ್‌ಸಿಎಪಿ ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಈ ಹ್ಯುಂಡೈ ಟ್ಯುಸಾನ್ 5 ಸ್ಟಾರ್‌ ರೇಟಿಂಗನ್ನು ಸಹ ಪಡೆದಿತ್ತು.

ಭಾರತಕ್ಕೆ ಕಾಲಿಡಲಿದೆ ಹ್ಯುಂಡೈ ನಿರ್ಮಾಣದ ಮತ್ತೊಂದು ಹೊಸ ಪ್ರೀಮಿಯಂ ಎಸ್‌ಯುವಿ

ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಕೇವಲ ಕಾರ್ ಸೌಂದರ್ಯಕ್ಕೆ ಮಾತ್ರವಲ್ಲದೇ ಅದರ ಸುರಕ್ಷತೆಯ ಕ್ಷಮತೆಗೂ ಸಹ ಬೆಲೆ ನೀಡುತ್ತಿದ್ದಾರೆ. ಯಾವ ಕಾರ್‌ನ ಕ್ರ್ಯಾಶ್‌ ಟೆಸ್ಟ್‌ ಹೇಗಿದೆ? ಯಾವ ಕಾರ್‌ನಲ್ಲಿ ಎಷ್ಟು ಏರ್‌ ಬ್ಯಾಗುಗಳು ಇದೆ ಎಂಬಿತ್ಯಾದಿ ವಿಷಯಗಳಿಗೂ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಹೀಗಿರುವಾಗ ಸೌಂದರ್ಯ ಮತ್ತು ಸುರಕ್ಷತೆ ಇವೆರಡೂ ಸಹ ಗರಿಷ್ಟ ಮಟ್ಟದಲ್ಲಿರುವ ಈ ಹ್ಯುಂಡೈ ಟ್ಯುಸಾನ್ ಭಾರತೀಯರ ಮನಗೆಲ್ಲಬಹುದು ಎಂಬುದೇ ಆಟೋಮೊಬೈಲ್‌ ಪಂಡಿತರ ಪ್ರಮುಖ ಲೆಕ್ಕಾಚಾರ.

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ

ಮುಂಬರುವ ಈ ಹ್ಯುಂಡೈ ಟ್ಯುಸಾನ್ ಎಸ್‌ಯುವಿ ಯು ಹ್ಯುಂಡೈ ಪಾಲಿಗೆ ಬಹುದೊಡ್ಡ ಪರೀಕ್ಷೆಯಾಗಿದೆ. ಭಾರತದ ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ಹೆಚ್ಚು ಮಾಡಲು ಈ ಕಾರ್‌ ಗೆಲ್ಲಬೇಕಾಗಿರುವುದು ಕಂಪನಿ ಪಾಲಿಗೆ ತುಂಬಾನೇ ಅವಶ್ಯವಾಗಿದೆ. ಹಾಗಾಗಿ ಸದ್ಯಕ್ಕೆ ಎಲ್ಲರ ಕಣ್ಣೂ ಹ್ಯುಂಡೈ ಟ್ಯುಸಾನ್ ಎಸ್‌ಯುವಿ ಯ ಮೇಲಿರುವುದಂತೂ ನಿಜ.

Most Read Articles

Kannada
English summary
Hyundai releases new teaser of the upcoming suv tucson
Story first published: Friday, July 8, 2022, 12:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X