Just In
- 13 min ago
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- 1 hr ago
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- 2 hrs ago
13 ಉದ್ಯೋಗಿಗಳಿಗೆ ಹೊಸ ಟೊಯೋಟಾ ಗ್ಲಾನ್ಜಾ ಕಾರುಗಳನ್ನು ಉಡುಗೊರೆಯಾಗಿ ನೀಡಿದ ಕಂಪನಿ
- 2 hrs ago
ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಿದ್ರೆ 50% ರಿಯಾಯಿತಿ: ರಾಜ್ಯ ಸರ್ಕಾರ ಆದೇಶ
Don't Miss!
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- News
Namma Metro: ನೆಲಮಂಗಲದ BIEC ವರೆಗೂ ಗ್ರೀನ್ ಲೈನ್ ವಿಸ್ತರಣೆ- ಆಸ್ತಿ ಖರೀದಿದಾರರಿಗೆ ಸ್ಪರ್ಗ ಸೃಷ್ಟಿ, ಯಾರ್ಯಾರಿಗೆ ಲಾಭ?
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Movies
Paaru: ತಾಯಿ ಆಗುತ್ತಿರುವ ವಿಚಾರವನ್ನು ಆದಿ ಬಳಿ ಹೇಳಿಯೇ ಬಿಡುತ್ತಾಳಾ ಪಾರು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತಕ್ಕಾಗಿ ಅತ್ಯಂತ ಸುರಕ್ಷತಾ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಹ್ಯುಂಡೈ
ಜನಪ್ರಿಯ ಮತ್ತು ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಐಯಾನಿಕ್ 5 ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಸಜ್ಜಾಗಿದೆ. ಈ ಬಹುನಿರೀಕ್ಷಿತ ಹೊಸ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಡಿಸೆಂಬರ್ 20 ರಿಂದ ಪ್ರಾರಂಭವಾಗಲಿದೆ.
ಜನವರಿಯಲ್ಲಿ ಮುಂಬರುವ ಆಟೋ ಎಕ್ಸ್ ಪೋದಲ್ಲಿ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕ್ರಾಸ್ಒವರ್ ಅನ್ನು ಪರಿಚಯಿಸಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಬಹುನಿರೀಕ್ಷಿತ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕ್ರಾಸ್ಒವರ್ ದಕ್ಷಿಣ ಕೊರಿಯಾದ ವಾಹನ ತಯಾರಕರ ಪ್ರಸಿದ್ಧ ಮತ್ತು ಸುಧಾರಿತ ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಇ-ಜಿಎಂಪಿ) ಅನ್ನು ಬಳಸುತ್ತದೆ. ಇದರರ್ಥ ಹ್ಯುಂಡೈ ಎಲೆಕ್ಟ್ರಿಕ್ ಕ್ರಾಸ್ಒವರ್ ಇತ್ತೀಚೆಗೆ ಬಿಡುಗಡೆಯಾದ ಕಿಯಾ ಇವಿ6 ಎಲೆಕ್ಟ್ರಿಕ್ ಕ್ರಾಸ್ಒವರ್ ವಾಹನಕ್ಕೆ ಬಹುತೇಕ ಹೋಲುತ್ತದೆ.
ಹ್ಯುಂಡೈ ಮೋಟಾರ್ ಇಂಡಿಯಾ ಕಂಪನಿಯು ತನ್ನ ಈ ಐಯಾನಿಕ್ 5 ಎಲೆಕ್ಟ್ರಿಕ್ ಕಾರಿನ ಒಳಭಾಗಗಳು ಮತ್ತು ವೈಶಿಷ್ಟ್ಯಗಳನ್ನು ಅದರ ಬಿಡುಗಡೆಗೆ ಮುಂಚಿತವಾಗಿ ಅನಾವರಣಗೊಳಿಸಿದೆ, ಕೊನಾ ಎಲೆಕ್ಟ್ರಿಕ್ ನಂತರ ಬ್ರ್ಯಾಂಡ್‌ನಿಂದ ಎರಡನೇ ಎಲೆಕ್ಟ್ರಿಕ್ ಕಾರ್ ಆಗಿದೆ, ವೈಶಿಷ್ಟ್ಯಗಳ ವಿಷಯದಲ್ಲಿ, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳ ರೂಪದಲ್ಲಿ ವೈಶಿಷ್ಟ್ಯಗಳನ್ನು ಪಡೆಯುತ್ತದೆ, ಚಾಲಿತ ಸ್ಲೈಡಿಂಗ್ ಮತ್ತು ರಿಕ್ಲೈನಿಂಗ್ ಕಾರ್ಯಗಳೊಂದಿಗೆ ಎರಡನೇ ಸಾಲಿನ ಸೀಟುಗಳು ಮತ್ತು ಸ್ಲೈಡಿಂಗ್ ಸೆಂಟರ್ ಕನ್ಸೋಲ್ ಅನ್ನು ಹೊಂದಿದೆ,
ಈ ಹೊಸ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕಾರಿನ ಒಳಾಂಗಣ ವಿನ್ಯಾಸಕ್ಕೆ ಬರುವುದಾದರೆ, ಡ್ಯುಯಲ್-ಟೋನ್ ಬಿಳಿ ಮತ್ತು ಕಪ್ಪು ಆಂತರಿಕ ಥೀಮ್, ಎರಡು-ಸ್ಪೋಕ್ ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್, ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೋಮ್ ಇನ್‌ಸರ್ಟ್‌ಗಳನ್ನು ಹೊಂದಿರುವ ದೊಡ್ಡ ಸಿಂಗಲ್-ಪೀಸ್ ಘಟಕವನ್ನು ಹೊಂದಿದೆ. ಇನ್ನು ಮೂಡ್ ಲೈಟಿಂಗ್, ಪನರೋಮಿಕ್ ಸನ್‌ರೂಫ್, ಮುಂದಿನ ಸಾಲಿಗೆ ಕಪ್ ಹೋಲ್ಡರ್‌ಗಳು ಮತ್ತು ಎರಡನೇ ಸಾಲಿಗೆ ಆರ್ಮ್-ರೆಸ್ಟ್.ಅನ್ನು ಹೊಂದಿದೆ.
ಸಂಪೂರ್ಣವಾಗಿ ಆಮದು ಮಾಡಿಕೊಂಡ ಕಿಯಾ ಇವಿ6 ಎಲೆಕ್ಟ್ರಿಕ್ ಕಾರನ್ನು ಭಿನ್ನವಾಗಿ ಭಾರತದಲ್ಲಿ ಮಾರಾಟ ಮಾಡಲಾಗುತ್ತಿದೆ, ಈ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕ್ರಾಸ್ಒವರ್ ಒಂದು CKD (ಸಂಪೂರ್ಣವಾಗಿ ನಾಕ್ಡ್ ಡೌನ್) ಯುನಿಟ್ ಆಗಿರಲಿದೆ. ಐಯಾನಿಕ್ 5 ಸಂಪೂರ್ಣವಾಗಿ ಆಮದು ಮಾಡಿಕೊಳ್ಳುವ ವಾಹನಗಳ ಮೇಲಿನ ಹೆಚ್ಚಿನ ತೆರಿಗೆಗಳನ್ನು ಜಯಿಸಲು ಹುಂಡೈ ಇಂಡಿಯಾಗೆ ಅವಕಾಶ ನೀಡುತ್ತದೆ. ಇದರಿಂದ ಭಾರತದಲ್ಲಿ ಕಿಯಾ ಇವಿ6 ಗಿಂತ ಹ್ಯುಂಡೈ ಐಯಾನಿಕ್ 5 ಗಮನಾರ್ಹ ಬೆಲೆಯ ಪ್ರಯೋಜನವನ್ನು ಹೊಂದಿರುತ್ತದೆ.
ಪವರ್‌ಟ್ರೇನ್ ಆಯ್ಕೆಗಳ ವಿಷಯದಲ್ಲಿ, ಹ್ಯುಂಡೈ ಪ್ರಸ್ತುತ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಎರಡು ವಿಭಿನ್ನ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಐಯಾನಿಕ್ 5 ಎಲೆಕ್ಟ್ರಿಕ್ ಕ್ರಾಸ್ಒವರ್ ಅನ್ನು ಮಾರಾಟ ಮಾಡಲಾಗುತ್ತಿದೆ. ಇದು 58kWh ಬ್ಯಾಟರಿ ಪ್ಯಾಕ್ ಮತ್ತು ಸ್ವಲ್ಪ ದೊಡ್ಡದಾದ 72.6kWh ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದೆ. ಬ್ಯಾಟರಿ ಪ್ಯಾಕ್‌ನಲ್ಲಿನ ಈ ವ್ಯತ್ಯಾಸಗಳ ಜೊತೆಗೆ, ಈ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕ್ರಾಸ್‌ಒವರ್‌ನ 2WD ಮತ್ತು AWD ನಂತಹ ಸಿಸ್ಟಂಗಳನ್ನು ಸಹ ಹೊಂದಿರುತ್ತದೆ.
ಈ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕ್ರಾಸ್ಒವರ್ 2WD ರೂಪಾಂತರವು 215 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ನಿಂದ ಚಾಲಿತವಾಗಿದೆ. ಮತ್ತೊಂದೆಡೆ, ಎಲೆಕ್ಟ್ರಿಕ್ ಕ್ರಾಸ್‌ಒವರ್‌ನ ಅಲ್ ವ್ಹೀಲ್ ಡ್ರೈವ್ ರೂಪಾಂತರವು ಎರಡು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಪ್ರತಿ ಆಕ್ಸಲ್‌ಗೆ ಪವರ್ ಕಳುಹಿಸುತ್ತದೆ ಮತ್ತು 302 ಬಿಹೆಚ್‍ಪಿ ಪವರ್ ಮತ್ತು 605 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಹೊಸ ಐಯಾನಿಕ್ 5 ಎಲೆಕ್ಟ್ರಿಕ್ ಕ್ರಾಸ್ಒವರ್ 72.6kWh ಬ್ಯಾಟರಿ ಪ್ಯಾಕ್ ಮತ್ತು 2WD ಸೆಟ್-ಅಪ್ ಅನ್ನು ಹೊಂದಿದೆ. ಲಾಂಗ್ ರೇಂಜ್ ರೂಪಾಂತರವು ಪೂರ್ಣ ಚಾರ್ಜ್ ಮಾಡಿದರೆ 481 ಕಿ.ಮೀ ಗಿಂತ ಹೆಚ್ಚು ಚಲಿಸುತ್ತದೆ. ದಕ್ಷಿಣ ಕೊರಿಯಾದ ಕಾರು ತಯಾರಕರ ಪ್ರಕಾರ, ಈ ಹೊಸ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕಾರು ಹುಂಡೈ ಸ್ಮಾರ್ಟ್‌ಸೆನ್ಸ್ ವೈಶಿಷ್ಟ್ಯವನ್ನು ಲೆವೆಲ್ 2 ADAS (ಸುಧಾರಿತ ಡ್ರೈವರ್ ಸಹಾಯ ವ್ಯವಸ್ಥೆ) ಎಂದು ರೇಟ್ ಮಾಡಲಾಗಿದೆ. ಇವಿಯ ಸುರಕ್ಷತೆಯ ಅಂಶವನ್ನು ಹೆಚ್ಚಿಸಲು 21 ಅಕ್ಟಿವ್ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.