Just In
Don't Miss!
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಭಾರತದಲ್ಲಿ ಸ್ಯಾಂಟ್ರೊ ಹ್ಯಾಚ್‌ಬ್ಯಾಕ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಹ್ಯುಂಡೈ
ಸ್ಯಾಂಟ್ರೋ ಹ್ಯಾಚ್‌ಬ್ಯಾಕ್ ಮೂಲಕ ಭಾರತೀಯ ಕಾರು ಉತ್ಪಾದನಾ ವಲಯದಲ್ಲಿ ಜನಪ್ರಿಯತೆಗೆ ಕಾರಣವಾಗಿರುವ ಹ್ಯುಂಡೈ ಕಂಪನಿಯು ನ್ಯೂ ಜನರೇಷನ್ ಮಾದರಿಯ ಮಾರಾಟವನ್ನು ಸಹ ಶೀಘ್ರದಲ್ಲಿಯೇ ಸ್ಥಗಿತಗೊಳಿಸುತ್ತಿದ್ದು, ಸ್ಯಾಂಟ್ರೊ ಕಾರು ಉತ್ಪಾದನೆಯನ್ನು ಕಂಪನಿಯು ಈಗಾಗಲೇ ಸ್ಥಗಿತಗೊಳಿಸಿದೆ.

ಹ್ಯುಂಡೈ ಕಂಪನಿಯು ಸ್ಯಾಂಟ್ರೋ ಸ್ಟಾಕ್ ಮಾರಾಟ ಮುಕ್ತಾಯದ ನಂತರ ಅಧಿಕೃತವಾಗಿ ಮಾರಾಟ ಸ್ಥಗಿತವನ್ನು ಘೋಷಣೆ ಮಾಡಲಿದ್ದು, ಸ್ಯಾಂಟ್ರೊ ಜೊತೆ ಆಕ್ಸೆಂಟ್ ಪ್ರೈಮ್ ವಾಣಿಜ್ಯ ಬಳಕೆ ಕಾರು ಮಾದರಿಯ ಉತ್ಪಾದನೆಗೂ ಬ್ರೇಕ್ ಹಾಕಿದೆ. ಭಾರತದಲ್ಲಿ ಕಳಪೆ ಮಾರಾಟ ಹೊಂದಿರುವ ಎರಡು ಕಾರು ಮಾದರಿಗಳನ್ನು ಕಂಪನಿಯು ಸ್ಥಗಿತಗೊಳಿಸಿದ್ದು, ಆಕ್ಸೆಂಟ್ ಸ್ಥಾನಕ್ಕೆ ಔರಾ ಮಾದರಿಯನ್ನು ಬಿಡುಗಡೆ ಮಾಡಿರುವ ಹ್ಯುಂಡೈ ಕಂಪನಿಯು ಸ್ಯಾಂಟ್ರೊ ಸ್ಥಾನಕ್ಕೆ ಮತ್ತೊಂದು ಹೊಸ ಕಾರು ಉತ್ಪನ್ನವನ್ನು ಪರಿಚಯಿಸುವ ಸಿದ್ದತೆಯಲ್ಲಿದೆ.

ಹ್ಯುಂಡೈ ಕಂಪನಿಯು ಮೊದಲ ಬಾರಿಗೆ ಭಾರತದಲ್ಲಿ ಕಾರು ಮಾರಾಟ ಆರಂಭಿಸಿದ್ದ ಸಂದರ್ಭದಲ್ಲಿ ಪರಿಚಯಿಸಿದ್ದ ಮೊದಲ ತಲೆಮಾರಿನ ಸ್ಯಾಂಟ್ರೊ ಮಾದರಿಯನ್ನು 1998ರಿಂದ 2014ರ ತನಕ ಮಾರಾಟ ಮಾಡಿ ಸ್ಥಗಿತಗೊಳಿಸಿತ್ತು. ತದನಂತರ 2018ರಲ್ಲಿ ಸ್ಯಾಂಟ್ರೊ ಮಾದರಿಯನ್ನು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮತ್ತೊಮ್ಮೆ ಮರುಪರಿಚಯಿಸಿದ್ದ ಹ್ಯುಂಡೈ ಕಂಪನಿಯು ಇದೀಗ ಮತ್ತೆ ಸ್ಥಗಿತಗೊಳಿಸಲು ಮುಂದಾಗಿದೆ.

ಕಾರು ಮಾರಾಟ ಆರಂಭಿಸಿದ ಆರಂಭದಲ್ಲಿ ಸಣ್ಣ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳೊಂದಿಗೆ ಉತ್ತಮ ಪೈಪೋಟಿಯೊಂದಿಗೆ ಹೆಚ್ಚಿನ ಹೊಂದಿದ್ದ ಸ್ಯಾಂಟ್ರೊ ಮಾದರಿಯು 2010ರ ನಂತರ ಬಂದ ವಿವಿಧ ಕಾರು ಮಾದರಿಗಳ ಸ್ಪರ್ಧೆಯಿಂದ ಭಾರೀ ಹಿನ್ನಡೆ ಅನುಭವಿಸಿತ್ತು.

ಕಳಪೆ ಮಾರಾಟದಿಂದಾಗಿ 2014ರಲ್ಲಿ ಸ್ಯಾಂಟ್ರೊ ಮಾರಾಟವನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದ್ದ ಕಂಪನಿಯು ಸ್ಯಾಂಟ್ರೊ ಇಯಾನ್ ಮಾದರಿಯನ್ನು ಪರಿಚಯಿಸಿತ್ತು. ಆದರೆ ಆರಂಭದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡರು ಅದು ಕೂಡಾ ಕೆಲವೇ ವರ್ಷಗಳಲ್ಲಿ ಮಾರಾಟದಿಂದ ಸ್ಥಗಿತಗೊಂಡಿತು.

ಈ ವೇಳೆ ಸಣ್ಣ ಕಾರು ವಿಭಾಗದಲ್ಲಿನ ವಿವಿಧ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುವ ಉದ್ದೇಶ ಕಂಪನಿಯು ತನ್ನ ಐಕಾನಿಕ್ ಮಾದರಿಯ ಸ್ಯಾಂಟ್ರೊ ಮಾದರಿಯನ್ನೇ ಮಹತ್ವದ ಬದಲಾವಣೆಗಳೊಂದಿಗೆ ಪರಿಚಯಿಸಿತು.

2018ರ ಮಧ್ಯಂತರದಲ್ಲಿ ಬಿಡುಗಡೆಯಾದ ಸ್ಯಾಂಟ್ರೊ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭಾರೀ ಬೇಡಿಕೆಯೊಂದಿಗೆ ಟಾಪ್ 10 ಕಾರು ಮಾರಾಟ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಸ್ಯಾಂಟ್ರೊ ಮಾರಾಟ ಪ್ರಮಾಣವು ಸಾಕಷ್ಟು ಇಳಿಕೆಯಾಗಿದ್ದು, ಮೈಕ್ರೊ ಎಸ್‌ಯುವಿ ವಿಭಾಗದಲ್ಲಿ ಟಾಟಾ ಪಂಚ್ ತೀವ್ರ ಪೈಪೋಟಿ ನೀಡುತ್ತಿದೆ.

ಹೀಗಾಗಿ ಮಹತ್ವದ ನಿರ್ಧಾರ ಕೈಕೊಂಡಿರುವ ಹ್ಯುಂಡೈ ಕಂಪನಿಯು ಸ್ಯಾಂಟ್ರೊ ಮಾದರಿಯ ಉತ್ಪಾದನೆಯನ್ನು ಇದೀಗ ಸ್ಥಗಿತಗೊಳಿಸಿದ್ದು, ಸ್ಟಾಕ್ ಮುಕ್ತಾಯದ ತನಕ ಮಾತ್ರ ಮಾರಾಟ ಮುಂದುವರಿಸಲಿದೆ. ಮಾರಾಟ ಮುಕ್ತಾಯದ ನಂತರ ಅಧಿಕೃತ ಸ್ಥಗಿತ ಘೋಷಿಸಲಿರುವ ಹ್ಯುಂಡೈ ಪಂಚ್ ಕಾರು ಮಾದರಿಗೆ ತೀವ್ರ ಪೈಪೋಟಿ ನೀಡಬಲ್ಲ ಹೊಸ ಮೈಕ್ರೊ ಎಸ್‌ಯುವಿ ಒಂದನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಸದ್ಯ ಸ್ಯಾಂಟ್ರೊ ಕಾರು ಮಾದರಿಯು 1.1 ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಮಾದರಿಗಳಲ್ಲಿ ಮಾರಾಟಗೊಳ್ಳುತ್ತಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.4.90 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.6.42 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುತ್ತಿದೆ.

ಹ್ಯುಂಡೈ ಕಂಪನಿಯು ಹೊಸದಾಗಿ ಬಿಡುಗಡೆ ಮಾಡಲು ಉದ್ದೇಶಿಸಿರುವ ಹೊಸ ಮೈಕ್ರೊ ಎಸ್‌ಯುವಿಯು ಹೊಸ ಪ್ಲ್ಯಾಟ್‌ಫಾರ್ಮ್ ಅಡಿ ಉತ್ಪಾದನೆಗೊಳ್ಳಲಿದ್ದು, ಹೊಸ ಕಾರು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಟಾಟಾ ಪಂಚ್ ಮಾದರಿಗೆ ಉತ್ತಮ ಪ್ರತಿಸ್ಪರ್ಧಿಯಾಗುವ ತವಕದಲ್ಲಿದೆ.

ಟಾಟಾ ಪಂಚ್ ಬಿಡುಗಡೆಯ ನಂತರ ಹ್ಯುಂಡೈ ಸ್ಯಾಂಟ್ರೊ ಸೇರಿದಂತೆ ಹಲವಾರು ಹೊಸ ಕಾರು ಮಾದರಿಗಳ ಮಾರಾಟವು ಸಾಕಷ್ಟು ಕುಸಿತ ಕಂಡಿದ್ದು, ಪಂಚ್ ಕಾರಿಗೆ ಪೈಪೋಟಿಯಾಗಿ ಹ್ಯುಂಡೈ ಕಂಪನಿಯು ಹೊಸ ಮಾದರಿಯನ್ನು ಸಿದ್ದಗೊಳಿಸುತ್ತಿದೆ.

ಹ್ಯುಂಡೈ ಕಂಪನಿಯು ತನ್ನ ತವರಿನಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಕ್ಯಾಸ್ಪರ್ ಮೈಕ್ರೊ ಎಸ್‌ಯುವಿ ಮಾದರಿಯನ್ನೇ ಭಾರತದಲ್ಲಿ ಬಿಡುಗಡೆ ಮಾಡಬಹುದುದಾಗಿದ್ದು, ಹ್ಯುಂಡೈ ಹೊಸ ಮೈಕ್ರೋ ಎಸ್‍ಯುವಿಗಾಗಿ ಭಾರತದಲ್ಲಿ ಕ್ಯಾಸ್ಪರ್ ಬದಲಾಗಿ ಹೊಸ ಹೆಸರನ್ನು ಬಳಸಬಹುದಾಗಿದೆ.

ಹ್ಯುಂಡೈ ಹೊಸ ಮೈಕ್ರೋ ಎಸ್‍ಯುವಿಯು 1.0-ಲೀಟರ್ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು ಹೊಸ 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರಲಿದ್ದು, ಇದರಲ್ಲಿ 1.0-ಲೀಟರ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 76 ಬಿಎಚ್‌ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿರುತ್ತದೆ.

1.0-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮಾದರಿಯು 100 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದ್ದು, ಈ ಎಂಜಿನ್ ನೊಂದಿಗೆ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಬಹುದಾಗಿದೆ.

ಹ್ಯುಂಡೈ ಹೊಸ ಮೈಕ್ರೋ ಎಸ್‍ಯುವಿಯು 3,595 ಎಂಎಂ ಉದ್ದ, 1,595 ಎಂಎಂ ಅಗಲ ಮತ್ತು 1,575 ಎಂಎಂ ಎತ್ತರವನ್ನು ಹೊಂದಿದ್ದು, ಇದು ಸ್ಯಾಂಟ್ರೊ ಹ್ಯಾಚ್‌ಬ್ಯಾಕ್‌ಗಿಂತಲೂ ಚಿಕ್ಕದಾಗಿದೆ. ಆದರೆ ಇದು ಸ್ಯಾಂಟ್ರೊ ಮಾದರಿಗಿಂತಲೂ ವಿಭಿನ್ನವಾದ ಕ್ಯಾಬಿನ್ ವಿನ್ಯಾಸದೊಂದಿಗೆ ಯೋಗ್ಯವಾದ ಒಳಾಂಗಣ ಹೊಂದಿದ್ದು, ಭಾರತದಲ್ಲಿ ಮಾರಾಟಗೊಳ್ಳುವ ಮಾದರಿಯಲ್ಲಿ ಕಂಪನಿಯು ಕೆಲವು ಬದಲಾವಣೆಗಳೊಂದಿಗೆ ಮಾರಾಟ ಮಾಡಬಹುದಾಗಿದೆ.