ಆಟೋ ಎಕ್ಸ್‌ಪೋದಲ್ಲಿ ಹ್ಯುಂಡೈನ 6 ಕಾರುಗಳು ಅನಾವರಣ

ಭಾರತದ ಮಾರುಕಟ್ಟೆಯಲ್ಲಿ ಕೊರಿಯನ್ ವಾಹನ ತಯಾರಿಕ ಕಂಪನಿ ಹ್ಯುಂಡೈ ರೆಡಿ ಮಾಡುವ ಕಾರುಗಳು ಬಹಳಷ್ಟು ಖ್ಯಾತಿಗಳಿವೆ. ಸದ್ಯ ಈ ಕಂಪನಿಯ ವಾಹನಗಳನ್ನು ಖರೀದಿಸಲು ಬಹುತೇಕರು ಇಷ್ಟಪಡುತ್ತಾರೆ. ಹ್ಯುಂಡೈ ಕೂಡ ತನ್ನ ಗ್ರಾಹಕರ ನಿರೀಕ್ಷೆಯನ್ನು ಎಂದೂ ಹುಸಿ ಮಾಡುವುದಿಲ್ಲ. ಅದರಂತೆಯೇ ತನ್ನ ಕಾರುಗಳನ್ನು ಬಿಡುಗಡೆ ಮಾಡುತ್ತಿರುತ್ತದೆ.

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL), 'Ioniq 5' ಕಾರಿಗೆ 1 ಲಕ್ಷ ರೂಪಾಯಿ ಆರಂಭಿಕ ಟೋಕನ್‌ ಮೊತ್ತ ಪಾವತಿಸಿ, ಆನ್‌ಲೈನ್‌ನಲ್ಲಿ ಬುಕಿಂಗ್‌ ಮಾಡಬಹುದು. ಅದು ನಿನ್ನೆಯಿಂದ ಪ್ರಾರಂಭವಾಗಿದೆ. ಈ ಎಲೆಕ್ಟ್ರಿಕ್ ಕಾರು E-GMP ಸ್ಕೇಟ್‌ಬೋರ್ಡ್ ಆರ್ಕಿಟೆಕ್ಚರ್ ಅನ್ನು ಆಧರಿಸಿದ್ದು, ಇದು ಒಂದೇ ಚಾರ್ಜ್‌ನಲ್ಲಿ 600 ಕಿ.ಮೀಗಿಂತ ಹೆಚ್ಚು ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ. ಒಳಭಾಗ ಹಾಗೂ ಹೊರ ಭಾಗ ಅತ್ಯುನ್ನತ ವೈಶಿಷ್ಟ್ಯಗಳನ್ನು ಹೊಂದಿರುವ ಈ ಹ್ಯುಂಡೈ Ioniq 5 ಕಾರಿನ ಬೆಲೆ ಸುಮಾರು ರೂ.50 ಲಕ್ಷದವರೆಗೂ ಇದೆ ಎಂದು ಹೇಳಬಹುದು.

ಆಟೋ ಎಕ್ಸ್‌ಪೋದಲ್ಲಿ ಹ್ಯುಂಡೈನ 6 ಕಾರುಗಳು ಅನಾವರಣ

ಮುಂದಿನ ತಿಂಗಳು ಗ್ರೇಟರ್ ನೋಯ್ಡಾದಲ್ಲಿ ನಡೆಯಲಿರುವ 2023 ಆಟೋ ಎಕ್ಸ್‌ಪೋದಲ್ಲಿ ಹ್ಯುಂಡೈ 2 ಎಸ್‌ಯುವಿ, 2 ಸೆಡಾನ್‌, 1 ಇವಿ ಮತ್ತು 1 ಹ್ಯಾಚ್‌ಬ್ಯಾಕ್ ಅನ್ನು ಅನಾವರಣ ಮಾಡಲಿದೆ. ಅಲ್ಲೇ ಐಯೋನಿಕ್ 5 ಬೆಲೆಯನ್ನು ಬಹಿರಂಗಪಡಿಸಲಾಗುವುದು ಎಂದು ವರದಿಯಾಗಿದ್ದು, ಹೊಸ ತಲೆಮಾರಿನ ವೆರ್ನಾ ಜಾಗತಿಕವಾಗಿ ಚೊಚ್ಚಲ ಬಾರಿಗೆ ಪ್ರವೇಶಿಸುವ ನಿರೀಕ್ಷೆಯಿದೆ. ಈ ಮಧ್ಯಮ ಗಾತ್ರದ ಸೆಡಾನ್ ಇತ್ತೀಚಿನ ಸೆನ್ಸುಯಸ್ ಸ್ಪೋರ್ಟಿನೆಸ್ ವಿನ್ಯಾಸವನ್ನು ಹೊಂದಿದ್ದು, ಇದು ಜಾಗತಿಕ ಎಲಾಂಟ್ರಾ, ಸೋನಾಟಾದಿಂದ ಹೆಚ್ಚು ಪ್ರಭಾವಿತವಾಗಿದೆ.

2023ರ ಅನಾವರಣಗೊಳ್ಳಿರುವ ಹ್ಯುಂಡೈ ವೆರ್ನಾ 1.5-ಲೀಟರ್ ಪೆಟ್ರೋಲ್ ಮತ್ತು 1.4-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿರುವ ಸಾಧ್ಯತೆ ಇದೆ. ಏಕೆಂದರೆ, 1.5-ಲೀಟರ್ ಡೀಸೆಲ್ ಎಂಜಿನ್ ಇಲ್ಲಿ ಬಳಕೆ ಮಾಡಿಲ್ಲ ಎಂದು ಹೇಳಲಾಗಿದೆ. ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಆಧಾರಿತ ವೈಶಿಷ್ಟ್ಯಗಳು ಸೇರಿದಂತೆ ಹೊಸ ತಂತ್ರಜ್ಞಾನಗಳು ಮತ್ತು ಕೆಲವು ನವೀನ ವಿನ್ಯಾಸಗಳೊಂದಿಗೆ ಮಾರುಕಟ್ಟೆಗೆ ಬರಲಿರುವ ಹೊಸ ಹ್ಯುಂಡೈ ವೆರ್ನಾ, ಹಳೇಯ ಮಾದರಿಗಿಂತ ಅದರ ಒಳಾಂಗಣವು ಹೆಚ್ಚು ಸುಧಾರಿತವಾಗಿದೆ.

ನೂತನ ವೆರ್ನಾ ಜೊತೆಗೆ, ದೇಶದ ಎರಡನೇ ಅತಿ ದೊಡ್ಡ ಕಾರು ಉತ್ಪಾದಕ ಸಂಸ್ಥೆಯಾಗಿರುವ ಹ್ಯುಂಡೈ, ಔರಾ ಕಾಂಪ್ಯಾಕ್ಟ್ ಸೆಡಾನ್‌ನ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಅನಾವರಣ ಮಾಡಲಿದ್ದು, ಗ್ರ್ಯಾಂಡ್ i10 Nios, ಮುಂಬರುವ ತಿಂಗಳುಗಳಲ್ಲಿ ಸಣ್ಣ ಕಾಸ್ಮೆಟಿಕ್ ನವೀಕರಣವನ್ನು ಪಡೆಯುತ್ತದೆ. ಇದನ್ನು ಕೆಲವು ವಾರಗಳ ಹಿಂದೆ ಪರೀಕ್ಷಿಸಲಾಗಿದ್ದು, ಹ್ಯುಂಡೈ ಫೇಸ್‌ಲಿಫ್ಟೆಡ್ ಕ್ರೆಟಾವನ್ನು ಸಹ ಈ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಬಹುದು ಎಂದು ಹೇಳಲಾಗಿದೆ. ಆದರೆ, ಯಾವುದೇ ಅಧಿಕೃತ ವಿವರಗಳು ಇನ್ನೂ ಬಹಿರಂಗಪಡಿಸಿಲ್ಲ.

2023ರ ಕೊನೆಯಲ್ಲಿ ಹ್ಯುಂಡೈ ಕಂಪನಿಯು ತನ್ನ ಎಂಟ್ರಿ ಲೆವೆಲ್ ಎಸ್‌ಯುವಿಯನ್ನು ಪರಿಚಯಿಸಲಿದೆ. ಇದು ನೋಡಲು ಮೈಕ್ರೋ ಎಸ್‌ಯುವಿ ಟಾಟಾ ಪಂಚ್ ರೀತಿಯಲ್ಲೇ ಕಾಣುತ್ತದೆ ಎಂದು ಸದ್ಯ ವರದಿಯಾಗಿದೆ. ಇದು ಬಹುತೇಕ ಗ್ರಾಹಕರನ್ನು ತನ್ನತ್ತ ಸೆಳೆಯಲಿದೆ ಎಂದು ಹೇಳಲಾಗಿದೆ. ಇದು ಗ್ರ್ಯಾಂಡ್ i10 ನಿಯೋಸ್‌ನಂತೆಯೇ ಅದೇ ಪ್ಲಾಟ್‌ಫಾರ್ಮ್‌ ಅನ್ನು ಆಧರಿಸಿದೆ ಎಂದು ಹೇಳಬಹುದು. ಇದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಕ್ಯಾಸ್ಪರ್‌ನಿಂದ ವಿನ್ಯಾಸವನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. ಸ್ಪೈ ಚಿತ್ರಗಳ ಮೂಲಕ ಇದನ್ನು ನಿರ್ಣಯಿಸಲಾಗಿದೆ.

2023ರಲ್ಲಿ ಹ್ಯುಂಡೈ ಕ್ರೆಟಾವು ಹೆಚ್ಚು ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಹೆಚ್ಚು ಮಾರಾಟವಾಗುತ್ತದೆ ಎಂದು ತಯಾರಕರು ನಿರೀಕ್ಷೆ ಮಾಡಿದ್ದು, ಅದರಂತೆ ಈ ಎಸ್‌ಯುವಿ ಗ್ರಾಹಕರನ್ನು ಆಕರ್ಷಿಸುತ್ತದೆ ಎಂದು ಅಂದಾಜಿಸಲಾಗಿದೆ. ಅದು ಇತ್ತೀಚಿಗೆ ಬಿಡುಗಡೆಯಾದ ಎಲ್ಲಾ-ಹೊಸ ಟಕ್ಸನ್‌ನಿಂದ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಮುಂಭಾಗದ ಫಾಸಿಯಾ ವಿನ್ಯಾಸವನ್ನು ಪಡೆದುಕೊಂಡಿದೆ. ಒಟ್ಟಾಯಾಗಿ ಹ್ಯುಂಡೈ ಕಂಪನಿ ಎಸ್‌ಯುವಿ, ಸೆಡಾನ್‌, ಇವಿಗಳು ಗ್ರಾಹಕರನ್ನು ಆಕರ್ಷಿಸುತ್ತವೆ ಎಂದು ಹೇಳಬಹುದು. ಮಾರುಕಟ್ಟೆಯಲ್ಲಿ ಮುಂಬರಲಿರುವ ಇವು ಎಷ್ಟರ ಮಟ್ಟಿಗೆ ಕಮಲ್ ಮಾಡುತ್ತವೆ ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Wednesday, December 21, 2022, 16:50 [IST]
English summary
Hyundai unveils 6 cars at auto expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+