Just In
Don't Miss!
- News
ಜಾತಿ ನಿಂದನೆ ಪ್ರಕರಣ: ಬಸವರಾಜ ಹೊರಟ್ಟಿ ವಿರುದ್ಧ ತನಿಖಾ ವರದಿ ಸಲ್ಲಿಕೆ
- Sports
ಐರ್ಲೆಂಡ್ನ ಹ್ಯಾರಿ ಟೆಕ್ಟರ್ಗೆ ಬ್ಯಾಟ್ ಗಿಫ್ಟ್ ನೀಡಿದ ಹಾರ್ದಿಕ್ ಪಾಂಡ್ಯ
- Movies
ಸಿಧು ಮೂಸೆವಾಲಾ ಹಾಡಿದ್ದ ಕೊನೆಯ ಹಾಡು ಬಿಡುಗಡೆ ಆದ ಮೂರೇ ದಿನಕ್ಕೆ ಡಿಲೀಟ್!
- Lifestyle
ನಿಮ್ಮಿಬ್ಬರ ಸಂಬಂಧ ಹೀಗಿದ್ದರೆ ಒಟ್ಟಿಗಿದ್ದು ಪಡುವ ನರಕಕ್ಕಿಂತ ಗುಡ್ಬೈ ಹೇಳುವುದೇ ಬೆಸ್ಟ್!
- Finance
ಜೂ.27ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Education
UAS Dharwad Recruitment 2022 : ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ಜು.2ಕ್ಕೆ ನೇರ ಸಂದರ್ಶನ
- Technology
‘ಫಾಸ್ಟ್ಯಾಗ್' ನಲ್ಲಿರುವ ಹಣವನ್ನು ಕದಿಯಬಹುದಾ? ವೈರಲ್ ವೀಡಿಯೊದ ಅಸಲಿಯತೆ ಏನು?
- Travel
ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022
ಜೂನ್ ತಿಂಗಳಿನಲ್ಲಿ ಹ್ಯುಂಡೈ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಈ ತಿಂಗಳಿನಲ್ಲಿ ತನ್ನ ಆಯ್ದ ಮಾದರಿಗಳ ಮೇಲೆ ಭರ್ಜರಿ ಆಫರ್ ಗಳನ್ನು ಘೋಷಿಸಿದೆ. ಹ್ಯುಂಡೈ ಕಂಪನಿಯ ಕೆಲವು ಆಯ್ದ ಮಾದರಿಗಳನ್ನು ಖರೀದಿಸುವಾಗ ಗ್ರಾಹಕರು ರೂ.48,000 ವರೆಗೆ ಪ್ರಯೋಜನಗಳನ್ನು ಪಡೆಯಬಹುದು.

ಹ್ಯುಂಡೈ ಸ್ಯಾಂಟ್ರೋ, ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಮತ್ತು ಹ್ಯುಂಡೈ ಔರಾ ಮಾದರಿಗಳ ಮೇಲೆ ಆಫರ್‌ಗಳು ಲಭ್ಯವಿವೆ. ಈ ಮೂರು ಮಾದರಿಗಳಲ್ಲಿ, ಹ್ಯುಂಡೈ ಸ್ಯಾಂಟ್ರೊ ದಕ್ಷಿಣ ಕೊರಿಯಾದ ವಾಹನ ತಯಾರಕರ ಎಂಟ್ರಿ ಲೆವೆಲೆ ಮಾದರಿಯಾಗಿದೆ. ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಕಾರುಗಳ ಮಾರಾಟವನ್ನು ಹೆಚ್ಚಿಸಲು ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್ ಘೋಷಣೆ ಮಾಡಿದೆ. ಈ ಹೊಸ ಆಫರ್‌ಗಳೊಂದಿಗೆ ಹ್ಯುಂಡೈ ಕಾರುಗಳಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹ್ಯುಂಡೈ ಸ್ಯಾಂಟ್ರೊ
ಹ್ಯುಂಡೈ ಸ್ಯಾಂಟ್ರೊ ದಕ್ಷಿಣ ಕೊರಿಯಾದ ವಾಹನ ತಯಾರಕರಿಂದ ಹ್ಯುಂಡೈ ಸ್ಯಾಂಟ್ರೋ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಮಾದರಿಯಾಗಿದೆ. ಈ ಹ್ಯಾಚ್‌ಬ್ಯಾಕ್ ಅದರ ವಿನ್ಯಾಸದ ಅಂಶಗಳೊಂದಿಗೆ ಕೇವಲ ಎಂಟ್ರಿ ಲೆವೆಲ್ ರೀತಿಯಲ್ಲೇ ಕಾಣುತ್ತದೆ.

ಈ ಜೂನ್‌ನಲ್ಲಿ, ಹ್ಯುಂಡೈ ಹ್ಯಾಚ್‌ಬ್ಯಾಕ್‌ನಲ್ಲಿನ ಕೊಡುಗೆಗಳನ್ನು ನವೀಕರಿಸಿದೆ ಮತ್ತು ಹೊಸ ಗ್ರಾಹಕರು ಹೊಸ ಹ್ಯುಂಡೈ ಸ್ಯಾಂಟ್ರೋದಲ್ಲಿ ರೂ.28,000 ವರೆಗೆ ಪ್ರಯೋಜನಗಳನ್ನು ಪಡೆಯಬಹುದು. ಯಾವುದೇ ಹುಂಡೈ ಮಾದರಿಯಂತೆ, ಹ್ಯುಂಡೈ ಸ್ಯಾಂಟ್ರೊದ ಒಳಭಾಗವು ವೈಶಿಷ್ಟ್ಯಗಳೊಂದಿಗೆ ತುಂಬಿರುತ್ತದೆ ಮತ್ತು ಒಳಭಾಗದಲ್ಲಿ ಯೋಗ್ಯವಾದ ಸ್ಥಳಾವಕಾಶದೊಂದಿಗೆ ಬರುತ್ತದೆ.

ಹ್ಯುಂಡೈ ಸ್ಯಾಂಟ್ರೊ 1.1-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 68 ಬಿಹೆಚ್‌ಪಿ ಪವರ್ ಮತ್ತು 99 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು 5-ಸ್ಪೀಡ್ ಎಎಂಟಿ ಯುನಿಟ್ ಅನ್ನು ಒಳಗೊಂಡಿವೆ.

ಇದರ ಜೊತೆಗೆ, ಕಡಿಮೆ ಚಾಲನೆಯ ವೆಚ್ಚಕ್ಕಾಗಿ ಹ್ಯುಂಡೈ ಸ್ಯಾಂಟ್ರೊವನ್ನು ಫ್ಯಾಕ್ಟರಿ ಫಿಟೆಡ್ CNG ಕಿಟ್‌ನೊಂದಿಗೆ ಆಯ್ಕೆ ಮಾಡಬಹುದು. ಹ್ಯುಂಡೈ ಸ್ಯಾಂಟ್ರೋ ಬೆಲೆಯು ಭಾರತರ ಎಕ್ಸ್ ಶೋರೂಂ ಪ್ರಕಾರ ರೂ 4.89 ಲಕ್ಷದಿಂದ ಪ್ರಾರಂಭವಾಗುತ್ತವೆ.

ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್
ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರು ಒಂದು ಯೋಗ್ಯ ನಗರ ಹ್ಯಾಚ್‌ಬ್ಯಾಕ್ ಆಗಿದ್ದು, ವೈಶಿಷ್ಟ್ಯಗಳ ದೀರ್ಘ ಪಟ್ಟಿ ಮತ್ತು ಒಳಭಾಗದಲ್ಲಿ ಯೋಗ್ಯ ಸ್ಥಳವನ್ನು ಹೊಂದಿದೆ. ಅಲ್ಲದೆ, ಹ್ಯಾಚ್‌ಬ್ಯಾಕ್ ವ್ಯಾಪಕವಾದ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ.

ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರನ್ನು ಖರೀದಿಸುವಾಗ ರೂ 48,000 ವರೆಗೆ ಪ್ರಯೋಜನಗಳನ್ನು ಪಡೆಯಬಹುದು. ಇದು ಗ್ರ್ಯಾಂಡ್ ಐ10 ನಿಯೋಸ್ ಹ್ಯಾಚ್‌ಬ್ಯಾಕ್ ಅನ್ನು ಮೊದಲಿಗಿಂತ ಹೆಚ್ಚು ಆಸಕ್ತಿದಾಯಕವಾಗಿಸಿದೆ,

ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ನಾಲ್ಕು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಬೇಸ್ ಎಂಜಿನ್ ಆಯ್ಕೆಯು 1.2-ಲೀಟರ್ ನ್ಯಾಚುರಲ್ ಆಸ್ಪೈರಡ್ ಪೆಟ್ರೋಲ್ ಎಂಜಿನ್ ಆಗಿದ್ದು. ಇದು 82 ಬಿಹೆಚ್‍ಪಿ ಪವರ್ ಮತ್ತು 121 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದರೊಂದಿಗೆ 99 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮತ್ತೊಂದೆಡೆ, 1.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 74 ಬಿಹೆಚ್‌ಪಿ ಪವರ್ ಮತ್ತು 190 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕೊನೆಯ ಎಂಜಿನ್ ಆಯ್ಕೆಯು 1.2-ಲೀಟರ್ ನ್ಯಾಚುರಲ್ ಆಸ್ಪೈರಡ್ ಪೆಟ್ರೋಲ್ ಎಂಜಿನ್‌ನ CNG ಆವೃತ್ತಿಯಾಗಿದೆ .ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಬೆಲೆಯು ಭಾರತರ ಎಕ್ಸ್ ಶೋರೂಂ ಪ್ರಕಾರ ರೂ 5.39 ಲಕ್ಷದಿಂದ ಪ್ರಾರಂಭವಾಗುತ್ತವೆ.

ಹ್ಯುಂಡೈ ಔರಾ
ಔರಾ ಕಾರು ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಹ್ಯಾಚ್‌ಬ್ಯಾಕ್‌ನ ಸೆಡಾನ್ ರೂಪಾಂತರವಾಗಿದೆ. ಹ್ಯುಂಡೈ ಔರಾ ಗ್ರ್ಯಾಂಡ್ ಐ10 ನಿಯೋಸ್‌ಗಿಂತ ಹೆಚ್ಚಿನ ಬೂಟ್ ಜಾಗವನ್ನು ನೀಡುತ್ತದೆ ಮತ್ತು ಇದು ಉತ್ತಮ ಫ್ಯಾಮಿಲಿ ಕಾರ್ ಆಗಿದೆ. ಈ ಕಾರು 25.50 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಹೊಸ ಹ್ಯುಂಡೈ ಔರಾ ಸೆಡಾನ್ ಕಾರನ್ನು ಖರೀದಿಸುವಾಗ ಗ್ರಾಹಕರು ರೂ.48,000 ವರೆಗೆ ಪ್ರಯೋಜನಗಳನ್ನು ಪಡೆಯಬಹುದು. ಹ್ಯುಂಡೈ ಔರಾ ಕಾರನ್ನು ಖರೀದಿಸಲು ಬಯಸುವರಿಗೆ ಉತ್ತಮ ಸಮಯವಾಗಿದೆ, ಈ ಕಾರು ಇಂಧನ ದಕ್ಷತೆಯ ಅಂಕಿ ಅಂಶದೊಂದಿಗೆ ಅತ್ಯಂತ ಇಂಧನ-ಸಮರ್ಥ ಸೆಡಾನ್‌ಗಳಲ್ಲಿ ಒಂದಾಗಿದೆ.

ಔರಾ ಸೆಡಾನ್‌ನ ಡೀಸೆಲ್ ಆವೃತ್ತಿಯು ಹುಂಡೈ ಗ್ರಾಂಡ್ ಐ10 ನಿಯೋಸ್ ಹ್ಯಾಚ್‌ಬ್ಯಾಕ್‌ನ ಅದೇ 1.2-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‌ಬಾಕ್ಸ್‌ಗಳ ಆಯ್ಕೆಯೊಂದಿಗೆ ಬರುತ್ತದೆ. ಈ ಎಂಜಿನ್ 73.75 ಬಿಹೆಚ್‌ಪಿ ಪವರ್ ಮತ್ತು 190 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಸೆಡಾನ್ ಕಾರಿನಲ್ಲಿ ಬೂಮ್‌ಬರ್ಗ್ ಎಲ್ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ಸ್, 15-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, ಎಲ್ಇಡಿ ಟೈಲ್ ಲೈಟ್ಸ್, ಕೀ ಲೆಸ್ ಎಂಟ್ರಿ, 8-0-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ವಾಯ್ಸ್ ರೆಕಗ್ನಿಷನ್, ವೈರ್‌ಲೆಸ್ ಫೋನ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಲೆದರ್ ವ್ಯಾರ್ಪ್ ಸ್ಟಿರಿಂಗ್ ವ್ಹೀಲ್ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಹುಂಡೈ ಕಾರುಗಳ ಮೇಲಿನ ಹೊಸ ಕೊಡುಗೆಗಳು ಖಂಡಿತವಾಗಿಯೂ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತದೆ ಮತ್ತು ಭಾರತದಲ್ಲಿ ದಕ್ಷಿಣ ಕೊರಿಯಾದ ವಾಹನ ತಯಾರಕರ ಒಟ್ಟಾರೆ ಮಾರಾಟದ ಅಂಕಿಅಂಶಗಳನ್ನು ಸುಧಾರಿಸಲು ಈ ಆಫರ್ ಗಳು ನೆರವಾಗಬಹುದು.