Just In
- 34 min ago
ಕೈಗೆಟುಕುವ ಬೆಲೆ, ಹಲವು ಫೀಚರ್ಸ್ಗಳೊಂದಿಗೆ ಲಭ್ಯವಿರುವ ಟಾಪ್ 5 ಅಡ್ವೆಂಚರ್ ಬೈಕ್ಗಳಿವು!
- 38 min ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್ಯುವಿ
- 53 min ago
ಎಂಜಿ ಮೊದಲ ಕಮ್ಯೂನಿಟಿ ಇವಿ ಚಾರ್ಜರ್ ಆರಂಭ- 1 ಸಾವಿರ ನಿಲ್ದಾಣಗಳನ್ನು ಆರಂಭಿಸುವ ಗುರಿ..
- 2 hrs ago
ಕಾರಿಗೆ ಆ್ಯಸಿಡ್ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್
Don't Miss!
- Education
NEET UG Exam 2022 : ನೀಟ್ ಮುಂದೂಡಿಕೆಗೆ ಒತ್ತಾಯ !...ಪರೀಕ್ಷೆಯ ಸಂಪೂರ್ಣ ವಿವರ
- Technology
ಡೇಟಾ ಲಿಮಿಟ್ ಬಯಸದ ಗ್ರಾಹಕರಿಗೆ ಬಿಎಸ್ಎನ್ಎಲ್ನ ಈ ಪ್ಲಾನ್ ಬೆಸ್ಟ್!
- Sports
Ind vs Eng: ರೋಹಿತ್ ಶರ್ಮಾಗೆ ಕೊರೊನಾ; ಇಂಗ್ಲೆಂಡ್ಗೆ ಹಾರಿದ ಕರ್ನಾಟಕ ಆಟಗಾರ
- News
ನಗರದ ವಿವಿಧೆಡೆ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಆಚರಣೆ
- Finance
ಜಿಎಸ್ಟಿ ಕೌನ್ಸಿಲ್ ಸಭೆ: ಟಾಪ್ ಅಜೆಂಡಾ ಏನಿದೆ?
- Movies
ಮೊದಲ ಮಗುವಿನ ನಿರೀಕ್ಷೆಯಲ್ಲಿ ಆಲಿಯಾ-ರಣ್ಬೀರ್: ಬೇಬಿ ಕಮಿಂಗ್ ಸೂನ್ ಎಂದ ನಟಿ!
- Lifestyle
ನಮಗೆ ಸೂಕ್ತವಾದ ಮೆನ್ಸ್ಟ್ರಲ್ ಕಪ್ ಸೈಜ್ ಯಾವುದೆಂದು ತಿಳಿಯುವುದು ಹೇಗೆ?
- Travel
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ಭಾರತದಲ್ಲಿ 3 ಲಕ್ಷ ಮಾರಾಟದ ಮೈಲಿಗಲ್ಲು ಸಾಧಿಸಿದ ಹ್ಯುಂಡೈ ವೆನ್ಯೂ
ಭಾರತದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿ ಮಾರಾಟವುವೇಗವಾಗಿ ಬೆಳವಣಿಗೆ ಕಂಡಿದೆ. ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಬಿಡುಗಡೆಯಾಗಿರುವ ಬಹುತೇಕ ಕಾರು ಮಾದರಿಗಳು ಭಾರೀ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ.

ಸಬ್ ಫೋರ್ ಮೀಟರ್ ವಿನ್ಯಾಸದ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹ್ಯುಂಡೈ ಕಂಪನಿಯ ವೆನ್ಯೂ ಮಾದರಿಯು ಕೂಡಾ ಅತ್ಯುತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ವೆನ್ಯೂ ಕಾರು ಮಾದರಿಯು ಬಿಡುಗಡೆಯಾದ ನಂತರ ಭಾರತದಲ್ಲಿ ಇದುವರೆಗೆ 3 ಲಕ್ಷ ಯುನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ದಾಟಿದೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಘೋಷಿಸಿದೆ. ಈ ಮಾದರಿಯು 2021 ರಲ್ಲಿ 1.08 ಲಕ್ಷ ಯುನಿಟ್‌ಗಳ ಮಾರಾಟವನ್ನು ಹೊಂದಿದೆ. ಪ್ರಾರಂಭವಾದಾಗಿನಿಂದ, ಮಾರಾಟವಾದ ಒಟ್ಟು ವೆನ್ಯೂ ಯೂನಿಟ್‌ಗಳಲ್ಲಿ ಸುಮಾರು 18 ಪ್ರತಿಶತದಷ್ಟು ಬ್ಲೂಲಿಂಕ್ ಸಂಪರ್ಕಿತ ಕಾರು ತಂತ್ರಜ್ಞಾನವನ್ನು ಹೊಂದಿದೆ.

ಹ್ಯುಂಡೈ 2021 ರಲ್ಲಿ 2.50 ಲಕ್ಷ ಎಸ್‌ಯುವಿಗಳನ್ನು ಮಾರಾಟ ಮಾಡಿತು, ಅದರಲ್ಲಿ ವೆನ್ಯೂ ಶೇಕಡಾ 42 ಕ್ಕಿಂತ ಹೆಚ್ಚು ಕೊಡುಗೆ ನೀಡಿದೆ. ಇದಲ್ಲದೆ, ಸಬ್-ಫ್ಹೋರ್ ಮೀಟರ್ ಎಸ್‍ಯುವಿ ಅದೇ ಅವಧಿಯಲ್ಲಿ ಅದರ ವಿಭಾಗದಲ್ಲಿ 16.9 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿತ್ತು.

ಭಾರತದಲ್ಲಿ 2019ರ ಮೇ ತಿಂಗಳಿನಲ್ಲಿ ಬಿಡುಗಡೆಯಾಗಿದ್ದ ಹೊಸ ವೆನ್ಯೂ ಕಾರು ಮಾದರಿಯು ಬಿಡುಗಡೆ ನಂತರ ಹಲವಾರು ಹೊಸ ಬದಲಾವಣೆಗಳನ್ನು ಪಡೆದುಕೊಂಡಿತ್ತು. ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಿಗೆ ಅತಿ ಹೆಚ್ಚು ಬೇಡಿಕೆಯಿದೆ

ಹ್ಯುಂಡೈ ವೆನ್ಯೂ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದ ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಕಾರು ಮಾದರಿಗಳಿಗೆ ನಡುವೆ ಭಾರೀ ಪೈಪೋಟಿ ನೀಡುತ್ತಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿನ ಅಗ್ರಸ್ಥಾನಕ್ಕಾಗಿ ಎಕ್ಸ್‌ಯುವಿ300 ಮತ್ತು ನೆಕ್ಸಾನ್ ಮಾದರಿಗಳಿಂತಲೂ ಹ್ಯುಂಡೈ ವೆನ್ಯೂ ಮತ್ತು ಮಾರುತಿ ಸುಜುಕಿ ಬ್ರೆಝಾ ನಡುವೆ ಭಾರೀ ಪೈಪೋಟಿಯಿದೆ. ಹೊಸ ಕಾರು ಪ್ರಮುಖ ಬದಲಾವಣೆಗಳೊಂದಿಗೆ ಪ್ರತಿ ತಿಂಗಳು ಸರಾಸರಿಯಾಗಿ 7 ಸಾವಿರ 8 ಸಾವಿರ ಯುನಿಟ್ ಮಾರಾಟವಾಗುತ್ತಿದೆ.

ಹ್ಯುಂಡೈ ವೆನ್ಯೂ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಹೊಂದಿದ್ದು, ಟಾಪ್ ಎಂಡ್ ಮಾದರಿಯಾದ 1.0-ಲೀಟರ್ ಟರ್ಬೋ ಎಂಜಿನ್ ಮಾದರಿಗೆ ಅತಿ ಹೆಚ್ಚು ಬೇಡಿಕೆಯಿದೆ.

ಹ್ಯುಂಡೈ ಕಂಪನಿಯು ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ವೆನ್ಯೂ ಮಾದರಿಯಲ್ಲಿ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ. ಇದು ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಿಂತಲೂ ಹೆಚ್ಚಿನ ಪರ್ಫಾಮೆನ್ಸ್ ಮತ್ತು ತಾಂತ್ರಿಕವಾಗಿ ಬಲಿಷ್ಠ ಕಾರು ಮಾದರಿಯಾಗಿದೆ.

ವೆನ್ಯೂ ಕಾರು ಸದ್ಯ ಹ್ಯುಂಡೈ ನಿರ್ಮಾಣದ ಇತರೆ ಕಾರುಗಳಿಂತಲೂ ಅತಿ ವಿನೂತನ ತಂತ್ರಜ್ಞಾನ ಸೌಲಭ್ಯಗಳನ್ನು ಹೊತ್ತು ಬಂದಿತ್ತು. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವು ವೆರಿಯೆಂಟ್‌ಗಳಲ್ಲಿ ಲಭ್ಯವಿದೆ. ಮೊದಲ ಬಾರಿಗೆ ಬಿಡುಗಡೆಯಾದ ಸಂದರ್ಭದಲ್ಲಿ ಬಿಎಸ್-4 ಎಂಜಿನ್ ಹೊಂದಿದ್ದ ವೆನ್ಯೂ ಕಾರು ಇದೀಗ ಹೊಸ ಎಮಿಷನ್ ನಿಯಮದಂತೆ ಬಿಎಸ್-6 ಎಂಜಿನ್ ಆಯ್ಕೆ ಹೊಂದೆ.

ಈ ಎಸ್‍ಯುವಿಯಲ್ಲಿ 1.2 ಲೀಟರ್ ಕಪ್ಪಾ ಪೆಟ್ರೋಲ್, 1.5 ಲೀಟರ್ ಡೀಸೆಲ್ ಎಂಜಿನ್ ಮತ್ತು 1.0 ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯನ್ನು ಜೋಡಣೆ ಮಾಡಲಾಗಿದೆ. ಬಿಎಸ್-4 ಎಂಜಿನ್ ಆಯ್ಕೆಯಲ್ಲಿ 1.2-ಲೀಟರ್ ಪೆಟ್ರೋಲ್, 1.4-ಲೀಟರ್ ಡೀಸೆಲ್ ಮತ್ತು 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದ ವೆನ್ಯೂ ಕಾರಿನಲ್ಲಿ ಬಿಎಸ್-6 ಎಮಿಷನ್ ಕಡ್ಡಾಯ ನಂತರ 1.4-ಲೀಟರ್ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಹೊಸದಾಗಿ ಅಭಿವೃದ್ದಿಪಡಿಸಲಾಗಿದ್ದ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಪವರ್‌ಪುಲ್ ಎಂಜಿನ್ ಆಯ್ಕೆ ಹೊಂದಿರುವ ವೆನ್ಯೂ ಕಾರಿನಲ್ಲಿ 1.0-ಲೀಟರ್ ಟರ್ಬೋ ಮಾದರಿಯು ಅತಿ ಹೆಚ್ಚು ಬೇಡಿಕೆಯ ವೆರಿಯೆಂಟ್ ಆಗಿ ಹೊರಹೊಮ್ಮಿದ್ದು, 6-ಸ್ಪೀಡ್ ಐಎಂಟಿ(ಇಂಟೆಲಿಜೆಂಟ್ ಮ್ಯಾನುವಲ್ ಟ್ರಾನ್ಸ್‌ಮಿಷನ್) ಮತ್ತು ಟರ್ಬೋ ಪೆಟ್ರೋಲ್‌ನಲ್ಲಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 120-ಬಿಎಚ್‌ಪಿ ಮತ್ತು 170-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಇನ್ನುಳಿದ 1.2-ಲೀಟರ್ ಕಪ್ಪಾ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 82-ಬಿಎಚ್‌ಪಿ, 115-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ, 1.5-ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮಾದರಿಯು 99-ಬಿಎಚ್‌ಪಿ, 240-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಸ್‍ಯುವಿಒಯಲ್ಲಿ ಪ್ರೀಮಿಯಂ ಸೌಲಭ್ಯಗಳ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ. ಇದಕ್ಕಾಗಿ ಕ್ರೂಸ್ ಕಂಟ್ರೋಲ್, ಫ್ರಂಟ್ ವೀಲ್ಹ್ ಡಿಸ್ಕ್ ಬ್ರೇಕ್, ಆರು ಏರ್‌ಬ್ಯಾಗ್, ಹಿಲ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಅಸಿಸ್ಟ್ ಕಂಟ್ರೋಲ್, ಎಬಿಎಸ್, ಇಬಿಡಿ, ಇಎಸ್‌ಸಿ, ವಿಎಸ್ಎಂ, ಸ್ಪೀಡ್ ಸೆನ್ಸಾರಿಂಗ್ ಆಟೋ ಡೋರ್ ಲಾಕ್, ISOFIX ಸೀಟ್ ಹೊಂದಿದೆ.

ಇನ್ನು ಹ್ಯುಂಡೈನ ಫೇಸ್‌ಲಿಫ್ಟ್ ಮಾದರಿಯಾದ ಹ್ಯುಂಡೈ ವೆನ್ಯೂ ಮುಂದಿನ ತಿಂಗಳ ಮಧ್ಯದಲ್ಲಿ ಭಾರತದಲ್ಲಿ ಪಾದಾರ್ಪಣೆ ಮಾಡಲಿದೆ, ಕಂಪನಿಯು ಜೂನ್ 16 ರಂದು ಹೊಸ ವಿನ್ಯಾಸದಲ್ಲಿ ಈ ಕಾಂಪ್ಯಾಕ್ಟ್ ಎಸ್‍ಯುವಿ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ನವೀಕರಿಸಿದ ಎಕ್ಟಟೀರಿಯರ್ ಮತ್ತು ಇಂಟೀರಿಯರ್, ಹೊಸ ವೈಶಿಷ್ಟ್ಯಗಳು, ಎಂಜಿನ್ ಆಯ್ಕೆಗಳಲ್ಲಿ ಸಣ್ಣ ಬದಲಾವಣೆಗಳನ್ನು ಹೊಸ ಎಸ್‌ಯುವಿ ಪಡೆಯಲಿದೆ.