YouTube

ಎಚ್ಚೆತ್ತುಕೊಂಡ ಹ್ಯುಂಡೈ... ನಂಬಲಾಗದಷ್ಟು ಕಡಿಮೆ ಬೆಲೆಗೆ ಹೊಸ ಕಾರು... ಟಾಟಾವನ್ನು ಹಿಂದಿಕ್ಕಲು ಹೊಸ ಪ್ಲಾನ್

ಹ್ಯುಂಡೈ ಕಂಪನಿಯು ಟಾಟಾಗೆ ಕಠಿಣ ಸ್ಪರ್ಧೆ ನೀಡಲು ಸಜ್ಜಾಗುತ್ತಿದೆ. ಇದಕ್ಕೆ ಕಾರಣ ಟಾಟಾ ಮೋಟಾರ್ಸ್ ಪ್ರತಿ ತಿಂಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸುತ್ತಿದ್ದು, ಕಳೆದ ನಾಲ್ಕೈದು ತಿಂಗಳುಗಳಿಂದ ಮಾರಾಟದ ಅಂಕಿಅಂಶಗಳಲ್ಲಿ ಬಹುತೇಕ ಹ್ಯುಂಡೈ ಅನ್ನು ಸಮೀಪಿಸುತ್ತಿದೆ.

ಎಚ್ಚೆತ್ತುಕೊಂಡ ಹ್ಯುಂಡೈ... ನಂಬಲಾಗದಷ್ಟು ಕಡಿಮೆ ಬೆಲೆಗೆ ಹೊಸ ಕಾರು... ಟಾಟಾವನ್ನು ಹಿಂದಿಕ್ಕಲು ಹೊಸ ಪ್ಲಾನ್

ಪ್ರತಿ ಭಾರಿಯೂ ಮೊದಲ ಸ್ಥಾನದಲ್ಲಿ ಮಾರುತಿ ಇದ್ದರೇ ಎರಡನೇ ಸ್ಥಾನವು ಹ್ಯುಂಡೈದಾಗಿತ್ತು. ಆದರೆ ಇದೀಗ ಟಾಟಾ ಮೋಟಾರ್ಸ್ ಆ ಸ್ಥಾನವನ್ನು ಆಕ್ರಮಿಸುವ ಎಲ್ಲಾ ಮುನ್ಸೂಚನೆಗಳು ಕಾಣುತ್ತಿವೆ. ಇದಕ್ಕೆ ಪ್ರಮುಖ ಕಾರಣ ಟಾಟಾ ಪಂಚ್ ಕಾರಿನ ಆಗಮನ.

ಎಚ್ಚೆತ್ತುಕೊಂಡ ಹ್ಯುಂಡೈ... ನಂಬಲಾಗದಷ್ಟು ಕಡಿಮೆ ಬೆಲೆಗೆ ಹೊಸ ಕಾರು... ಟಾಟಾವನ್ನು ಹಿಂದಿಕ್ಕಲು ಹೊಸ ಪ್ಲಾನ್

ಪಂಚ್ ಕಾರಿನ ಮಾರಾಟ ಉತ್ತಮವಾಗಿರುವುದರಿಂದ ಹ್ಯುಂಡೈ ಮೇಲೆ ಟಾಟಾ ಭಾರಿ ಒತ್ತಡ ಹೇರುತ್ತಿದೆ. ಇದಕ್ಕೆ ಉತ್ತರವೆಂಬಂತೆ ಹ್ಯುಂಡೈ ಕಂಪನಿಯು ಕಡಿಮೆ ಬೆಲೆಯ ಸಣ್ಣ SUV ಯನ್ನು ಪರಿಚಯಿಸಲಿದೆ. ಆದ್ದರಿಂದ ನಾವು ಮುಂದಿನ ದಿನಗಳಲ್ಲಿ ಟಾಟಾ ಮತ್ತು ಹ್ಯುಂಡೈ ನಡುವೆ ತೀವ್ರ ಸ್ಪರ್ಧೆಯನ್ನು ನಿರೀಕ್ಷಿಸಬಹುದು.

ಎಚ್ಚೆತ್ತುಕೊಂಡ ಹ್ಯುಂಡೈ... ನಂಬಲಾಗದಷ್ಟು ಕಡಿಮೆ ಬೆಲೆಗೆ ಹೊಸ ಕಾರು... ಟಾಟಾವನ್ನು ಹಿಂದಿಕ್ಕಲು ಹೊಸ ಪ್ಲಾನ್

ಹಾಗೆಯೇ ಹ್ಯುಂಡೈಗೆ ಭಾರತದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದು ಪ್ರತಿಷ್ಟೆಯಾಗಿದ್ದು, ಟಾಟಾವನ್ನು ಹೇಗಾದರು ಸೆಡ್ಡುಹೊಡೆದು ಎರಡನೇ ಸ್ಥಾನವನ್ನು ಉಳಿಸಿಕೊಳ್ಳುವ ತವಕದಲ್ಲಿದೆ. ಟಾಟಾವನ್ನು ಹಿಂದಿಕ್ಕಲು ಹ್ಯುಂಡೈ ಯಾವೆಲ್ಲಾ ಯೋಜನೆಗಳನ್ನು ರೂಪಿಸಿಕೊಂಡಿದೆ ಎಂಬುದನ್ನು ಇಲ್ಲಿ ನೋಡೋಣ...

ಎಚ್ಚೆತ್ತುಕೊಂಡ ಹ್ಯುಂಡೈ... ನಂಬಲಾಗದಷ್ಟು ಕಡಿಮೆ ಬೆಲೆಗೆ ಹೊಸ ಕಾರು... ಟಾಟಾವನ್ನು ಹಿಂದಿಕ್ಕಲು ಹೊಸ ಪ್ಲಾನ್

ಭಾರತದಲ್ಲಿ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚು

ಭಾರತೀಯ ಗ್ರಾಹಕರಲ್ಲಿ ಎಸ್‌ಯುವಿಗಳಿಗೆ ಉತ್ತಮ ಸ್ವಾಗತ ಸಿಗುತ್ತಿದೆ. ಅದರಲ್ಲೂ ಸಣ್ಣ ರೂಪದಲ್ಲಿ ಪರಿಚಯಿಸಿರುವ ಎಸ್‌ಯುವಿ ಕಾರುಗಳು ಮಾರಾಟದಲ್ಲಿ ಧೂಳೆಬ್ಬಿಸುತ್ತಿವೆ. ಇದಕ್ಕೊಂದು ಉದಾಹರಣೆ ಟಾಟಾ ಪಂಚ್ ಕಾರು. ಟಾಟಾ ಪಂಚ್ ಕಾರನ್ನು ಅಕ್ಟೋಬರ್ 2021 ರಲ್ಲಿ ಬಿಡುಗಡೆ ಮಾಡಲಾಯಿತು.

ಎಚ್ಚೆತ್ತುಕೊಂಡ ಹ್ಯುಂಡೈ... ನಂಬಲಾಗದಷ್ಟು ಕಡಿಮೆ ಬೆಲೆಗೆ ಹೊಸ ಕಾರು... ಟಾಟಾವನ್ನು ಹಿಂದಿಕ್ಕಲು ಹೊಸ ಪ್ಲಾನ್

ಪ್ರಸ್ತುತ, ಟಾಟಾ ಪಂಚ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಆದ್ದರಿಂದ ಟಾಟಾ ಪಂಚ್‌ನಂತಹ ಸಣ್ಣ ಎಸ್‌ಯುವಿಗಳನ್ನು ಪರಿಚಯಿಸಲು ವಿವಿಧ ಕಂಪನಿಗಳು ಸಜ್ಜಾಗುತ್ತಿವೆ. ಈ ರೇಸ್‌ನಲ್ಲಿ ಹ್ಯುಂಡೈ ಟಾಟಾವನ್ನು ಹಿಂದಿಕ್ಕುವ ನಿರೀಕ್ಷೆಯಿದೆ.

ಎಚ್ಚೆತ್ತುಕೊಂಡ ಹ್ಯುಂಡೈ... ನಂಬಲಾಗದಷ್ಟು ಕಡಿಮೆ ಬೆಲೆಗೆ ಹೊಸ ಕಾರು... ಟಾಟಾವನ್ನು ಹಿಂದಿಕ್ಕಲು ಹೊಸ ಪ್ಲಾನ್

ಹ್ಯುಂಡೈ ಭಾರತೀಯ ಮಾರುಕಟ್ಟೆಯಲ್ಲಿ ಸಣ್ಣ SUV ಅನ್ನು ಬಿಡುಗಡೆ ಮಾಡಲು ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಪಂಚ್, ಸಿಟ್ರನ್ C3, ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್‌ಗಳೊಂದಿಗೆ ಸ್ಪರ್ಧಿಸಲಿದೆ.

ಎಚ್ಚೆತ್ತುಕೊಂಡ ಹ್ಯುಂಡೈ... ನಂಬಲಾಗದಷ್ಟು ಕಡಿಮೆ ಬೆಲೆಗೆ ಹೊಸ ಕಾರು... ಟಾಟಾವನ್ನು ಹಿಂದಿಕ್ಕಲು ಹೊಸ ಪ್ಲಾನ್

ವರದಿಗಳ ಪ್ರಕಾರ, ಈ ಹೊಸ ಎಸ್‌ಯುವಿಯು ಹ್ಯುಂಡೈನ ಕಾರ್ ಲೈನ್-ಅಪ್‌ನಲ್ಲಿರುವ ವೆನ್ಯೂ ಕಾರ್‌ಗಿಂತ ಕೆಳಗಿರಬಹುದು. ಹ್ಯುಂಡೈ ಈ SUV ಅನ್ನು ಜನವರಿಯಲ್ಲಿ 2023 ಆಟೋ ಎಕ್ಸ್‌ಪೋದಲ್ಲಿ ಪರಿಕಲ್ಪನೆಯ ರೂಪದಲ್ಲಿ ಪ್ರದರ್ಶಿಸುವ ನಿರೀಕ್ಷೆಯಿದೆ.

ಎಚ್ಚೆತ್ತುಕೊಂಡ ಹ್ಯುಂಡೈ... ನಂಬಲಾಗದಷ್ಟು ಕಡಿಮೆ ಬೆಲೆಗೆ ಹೊಸ ಕಾರು... ಟಾಟಾವನ್ನು ಹಿಂದಿಕ್ಕಲು ಹೊಸ ಪ್ಲಾನ್

ಪರಿಕಲ್ಪನೆಯ ಮಾದರಿಯಾಗಿದ್ದರೂ, ಇದು ಬಹುತೇಕ ಉತ್ಪಾದನೆಗೆ ಸಿದ್ಧವಾಗಿದೆ ಎಂದು ವದಂತಿಗಳಿವೆ. ಹಾಗಾಗಿ ಹ್ಯುಂಡೈ ಈ ಸಣ್ಣ SUV ಅನ್ನು 2023 ರ ಹಬ್ಬದ ಸೀಸನ್‌ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಹುಂಡೈ ಪ್ರಸ್ತುತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹುಂಡೈ ಕ್ಯಾಸ್ಪರ್ ಎಂಬ ಕಾರನ್ನು ಮಾರಾಟ ಮಾಡುತ್ತಿದೆ.

ಎಚ್ಚೆತ್ತುಕೊಂಡ ಹ್ಯುಂಡೈ... ನಂಬಲಾಗದಷ್ಟು ಕಡಿಮೆ ಬೆಲೆಗೆ ಹೊಸ ಕಾರು... ಟಾಟಾವನ್ನು ಹಿಂದಿಕ್ಕಲು ಹೊಸ ಪ್ಲಾನ್

ಇದೊಂದು ಚಿಕ್ಕ ಎಸ್‌ಯುವಿ ಕಾರಾಗಿದ್ದು, 2021 ರಲ್ಲಿ ಹುಂಡೈ ಕ್ಯಾಸ್ಪರ್ ಕಾರನ್ನು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿತ್ತು. ಇದರ ಉದ್ದ ಕೇವಲ 3.5 ಮೀಟರ್, ಆದರೆ ಸದ್ಯದ ಮಾಹಿತಿ ಪ್ರಕಾರ ಭಾರತದಲ್ಲಿ ಪರಿಚಯಿಸಲಿರುವ ಹೊಸ ಮಾಡೆಲ್ ಇದಕ್ಕಿಂತ ಸ್ವಲ್ಪ ಉದ್ದವಾಗಿರಬಹುದು.

ಎಚ್ಚೆತ್ತುಕೊಂಡ ಹ್ಯುಂಡೈ... ನಂಬಲಾಗದಷ್ಟು ಕಡಿಮೆ ಬೆಲೆಗೆ ಹೊಸ ಕಾರು... ಟಾಟಾವನ್ನು ಹಿಂದಿಕ್ಕಲು ಹೊಸ ಪ್ಲಾನ್

ಅದೇ ಸಮಯದಲ್ಲಿ, ಈ ಕಾಂಪ್ಯಾಕ್ಟ್ SUV ನಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡಬಹುದು ಎಂದು ಹೇಳಲಾಗುತ್ತಿದೆ. ಆರಂಭದಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಮಾತ್ರ ಲಭ್ಯವಿದ್ದರೂ, ಹ್ಯುಂಡೈ ಮುಂಬರುವ ದಿನಗಳಲ್ಲಿ ಸಿಎನ್‌ಜಿ ರೂಪಾಂತರವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಎಚ್ಚೆತ್ತುಕೊಂಡ ಹ್ಯುಂಡೈ... ನಂಬಲಾಗದಷ್ಟು ಕಡಿಮೆ ಬೆಲೆಗೆ ಹೊಸ ಕಾರು... ಟಾಟಾವನ್ನು ಹಿಂದಿಕ್ಕಲು ಹೊಸ ಪ್ಲಾನ್

ಸಣ್ಣ SUV ಆಗಿರುವುದರಿಂದ, ಹ್ಯುಂಡೈ ಅತ್ಯಂತ ಕಡಿಮೆ ಬೆಲೆಯನ್ನು ನಿಗದಿಪಡಿಸುವ ಸಾಧ್ಯತೆಗಳಿವೆ. ಬೆಲೆ ಕಡಿಮೆಯಾದರೂ, ಹ್ಯುಂಡೈ ಕಾರುಗಳಿಗೆ ಸರಿಹೊಂದುವ ಹಾಗೂ ಗ್ರಾಹಕರ ಅಗತ್ಯಗಳಿಗೆ ಸರಿಹೊಂದುವ ವಿವಿಧ ಸೌಕರ್ಯಗಳನ್ನು ಈ ಸಣ್ಣ ಎಸ್‌ಯುವಿ ಹೊಂದಿರಲಿದೆ.

ಎಚ್ಚೆತ್ತುಕೊಂಡ ಹ್ಯುಂಡೈ... ನಂಬಲಾಗದಷ್ಟು ಕಡಿಮೆ ಬೆಲೆಗೆ ಹೊಸ ಕಾರು... ಟಾಟಾವನ್ನು ಹಿಂದಿಕ್ಕಲು ಹೊಸ ಪ್ಲಾನ್

ಹಾಗಾಗಿ ಈ ಹ್ಯುಂಡೈ ಎಸ್‌ಯುವಿಯು ಟಾಟಾ ಪಂಚ್‌ನ ಮಾರಾಟದಲ್ಲಿ ತೀವ್ರ ಬಿಕ್ಕಟ್ಟನ್ನು ಉಂಟುಮಾಡುತ್ತದೆ. ಅನೇಕ ಭಾರತೀಯ ಗ್ರಾಹಕರು ಹ್ಯುಂಡೈ ಕಂಪನಿಯ ಕಾರನ್ನು ಹೊಂದುವ ಬಯಕೆಯನ್ನು ಹೊಂದಿದ್ದಾರೆ. ಆದರೆ ಅದೇ ಸಮಯದಲ್ಲಿ ಕಡಿಮೆ ಬೆಲೆಗೆ ನಿರೀಕ್ಷಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ಹೊಸ ಮಾದರಿಯು ಹಲವರ ಹುಂಡೈ ಕಾರಿನ ಆಸೆಯನ್ನು ಪೂರೈಸುವ ಸಾಧ್ಯತೆಯಿದೆ.

ಎಚ್ಚೆತ್ತುಕೊಂಡ ಹ್ಯುಂಡೈ... ನಂಬಲಾಗದಷ್ಟು ಕಡಿಮೆ ಬೆಲೆಗೆ ಹೊಸ ಕಾರು... ಟಾಟಾವನ್ನು ಹಿಂದಿಕ್ಕಲು ಹೊಸ ಪ್ಲಾನ್

ಭಾರತದಲ್ಲಿ ಟಾಟಾ ಪಂಚ್ ಕಾರಿನ ಆರಂಭಿಕ ಬೆಲೆ ಪ್ರಸ್ತುತ 5.93 ಲಕ್ಷ ರೂ. ಇದು ಎಕ್ಸ್ ಶೋ ರೂಂ ಬೆಲೆ. ಆದರೆ ಹುಂಡೈನ ಹೊಸದಾಗಿ ಬಿಡುಗಡೆಯಾಗಲಿರುವ ಸಣ್ಣ SUV ಯ ಆರಂಭಿಕ ಬೆಲೆಯು ರೂ. 5 ಅಥವಾ 5.50 ಲಕ್ಷ (ಎಕ್ಸ್ ಶೋ ರೂಂ) ವ್ಯಾಪ್ತಿಯಲ್ಲಿರಬಹುದು ಎಂದು ನಿರೀಕ್ಷಿಸಲಾಗಿದೆ.

Most Read Articles

Kannada
English summary
Hyundai wakes up new car at incredibly low price new plan to overtake tata
Story first published: Thursday, November 3, 2022, 10:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X