ವಿದೇಶಿ ಕಾರಿಗೆ ಸ್ವದೇಶಿ ಕಾರು ಟಕ್ಕರ್: ನದಿಯಲ್ಲಿ ಸಿಲುಕಿದ್ದ ಹಮ್ಮರ್ ಕಾರನ್ನು ಎಳೆತಂದ ಮೇಜರ್
ನಮ್ಮಲ್ಲಿ ಹಲವರಿಗೆ ಅಮೇರಿಕನ್ ನಿರ್ಮಿತ ಹಮ್ಮರ್ ಹೆಚ್ 2 ಕಾರಿನ ಬಗ್ಗೆ ಗೊತ್ತೇ ಇದೆ. ಇದು ಅತ್ಯುತ್ತಮ ಆಫ್ ರೋಡ್ ವಾಹನ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ನದಿಯೊಂದರಲ್ಲಿ ಮುನ್ನುಗ್ಗಲಾಗದೆ ನಿಂತಿದ್ದ ಹಮ್ಮರ್ ಹೆಚ್ 2 ಕಾರನ್ನು ಮಹೀಂದ್ರಾ ಮೇಜರ್ ಹೊರಗೆ ಎಳೆತಂದಿರುವುದು ಹಲವರನ್ನು ದಂಗಾಗಿಸಿದೆ.

ಈ ಕುರಿತ ವಿಡಿಯೋವನ್ನು Shnil MpNZ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಹಮ್ಮರ್ H2 ಕಾರು ನದಿಯ ಹೊಳೆಯಲ್ಲಿ ಹೇಗೆ ಸಿಲುಕಿಕೊಂಡಿದೆ ಎಂಬುದು ಖಚಿತವಾಗಿ ತಿಳಿದಿಲ್ಲವಾದರೂ, ಗುಂಪೊಂದು ಆಫ್ ರೋಡ್ ಅಡ್ವೆಂಚರ್‌ಗೆಂದು ಬಂದಿರುವಂತೆ ಕಾಣುತ್ತಿದೆ. ಹಮ್ಮರ್ H2 ನ ಚಾಲಕ ನದಿಯ ಆಳಕ್ಕೆ ಹೋಗಲು ನಿರ್ಧರಿಸಿ ಕೊನೆಗೆ ಅಲ್ಲಿಂದ ಹೊರಗೆ ಬರಲಾಗದೆ ಸಿಲುಕಿಕೊಂಡಿದ್ದಾನೆ.

ಇನ್ನು ಹೊಳೆಯಿಂದ ಹೊರಬರಲಾಗದೇ ಪರದಾಡುತ್ತಿದ್ದ ಹಮ್ಮರ್ ರಕ್ಷಣೆಗೆಂದು ಮಹೀಂದ್ರಾ ಮೇಜರ್ ಎಂಟ್ರಿಕೊಟ್ಟಿದೆ. ಮಹೀಂದ್ರಾ ಮೇಜರ್ ಮತ್ತು ಹಮ್ಮರ್ H2 ನ ಮುಂಭಾಗದ ಬಂಪರ್ ನಡುವೆ ಹಗ್ಗವನ್ನು ಕಟ್ಟಿ ಮಹೀಂದ್ರಾ ಮೇಜರ್ ಅದನ್ನು ಎಳೆಯುತ್ತದೆ. ಅಂತಿಮವಾಗಿ ಬಹಳಷ್ಟು ಪ್ರಯತ್ನದ ನಂತರ ಹಮ್ಮರ್ H2 ಕಾರು ನದಿಯ ತಳದಿಂದ ಹೊರಬರುತ್ತದೆ.

ಹಮ್ಮರ್ H2 4X4 ಮೋಡ್‌ನಲ್ಲಿದ್ದರೂ, ನದಿಯ ತಳದಿಂದ ಹೊರಬರಲು ಸಾಕಷ್ಟು ಪರದಾಡಿದೆ. ಇದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು. ಎರಡೂ ವಾಹನಗಳ ಎಂಜಿನ್‌ಗಳು ಆನ್‌ನಲ್ಲಿವೆ ಮೇಜರ್ ಹಿಂದಕ್ಕೆ ಎಳೆದರೆ ಹಮ್ಮರ್ ಮುನ್ನಗ್ಗಲು ಪ್ರಯತ್ನಿಸುತ್ತಿದೆ. ಈ ವೇಳೆ ಎರಡೂ ಕಾರುಗಳ ಫೋರ್ಸ್‌ಗೆ ಹಗ್ಗವು ಒಮ್ಮೆ ತುಂಡಾಯಿತು, ಬಳಿಕ ಹಗ್ಗವನ್ನು ಹಿಂದಕ್ಕೆ ಹಾಕಿದ ನಂತರ, ಮೇಜರ್ ಅದನ್ನು ಅಂತಿಮವಾಗಿ ನದಿಯಿಂದ ಹೊರಗೆ ಎಳದುತಂದಿದೆ.

ಹಮ್ಮರ್ H2 ಸಿಲುಕಿದ್ದೇಗೆ?
ವಿಷಯಕ್ಕೆ ಬರುವುದಾದರೆ ಇಲ್ಲಿ ಮೂಖ್ಯವಾಗಿ ಗಮನಿಸಬೇಕಾದದ್ದು ಟೈರ್‌ಗಳನ್ನು, ಏಕೆಂದರೆ ಹಮ್ಮರ್ H2 ರಸ್ತೆಗಾಗಿ ನಿರ್ಮಿಸಲಾದ ಟೈರ್‌ಗಳನ್ನು ಪಡೆದಿದೆ. ಹಾಗಾಗಿಯೇ ಅದು ನದಿಪಾತ್ರದ ಆರ್ದ್ರ ಮೇಲ್ಮೈನಲ್ಲಿ ಹಿಡಿತವನ್ನು ಸಾಧಿಸಲು ಸಾಧ್ಯವಾಗಲಿಲ್ಲ.

ಮತ್ತೊಂದೆಡೆ, ಮಹೀಂದ್ರಾ ಮೇಜರ್ ಆಫ್-ರೋಡಿಂಗ್ ಉದ್ದೇಶಕ್ಕಾಗಿಯೇ ನಿರ್ಮಿಸಲ್ಪಟ್ಟಿದೆ. ಹಾಗಾಗಿ ಇದು ಆಫ್-ರೋಡ್‌ಗೆ ಉತ್ತಮ ಟೈರ್‌ಗಳನ್ನು ಪಡೆಯುತ್ತದೆ. ಇದೇ ಕಾರಣಕ್ಕೆ ಹಮ್ಮರ್ ಅನ್ನು ಯಶಸ್ವಿಯಾಗಿ ಹೊರಗೆ ಎಳೆದುತಂದಿದೆ. ವಿಡಿಯೋದಲ್ಲಿ ಇದನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ.

ಇಂತಹ ಪರಿಸ್ಥಿತಿಗಳ್ಳಲಿ ಕೆಲವೊಮ್ಮೆ AWD ಮತ್ತು 4X4 ಕೂಡ ಸಾಕಾಗುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಮಾಮೂಲಿ ರಸ್ತೆಗಳಿಗಾಗಿ ನೀಡಲಾದ ಟೈರ್‌ಗಳೊಂದಿಗೆ 4X4 ಅಥವಾ AWD ವಾಹನಗಳಿಗೆ ಹೋಲಿಸಿದರೆ 4X2 ವಾಹನಗಳಲ್ಲಿನ ಉತ್ತಮ ಟೈರ್‌ಗಳು ಜಾರು ಪರಿಸ್ಥಿತಿಗಳಲ್ಲಿಯೂ ಉತ್ತಮ ಹಿಡಿತವನ್ನು ಖಚಿತಪಡಿಸುತ್ತವೆ.

ಟೈರ್‌ಗಳು ಮೇಲ್ಮೈ ಮತ್ತು ವಾಹನದ ನಡುವಿನ ಸಂಪರ್ಕ ಬಿಂದುವಾಗಿರುವುದರಿಂದ, ನಿಮ್ಮ ಆಫ್-ರೋಡ್ ವಾಹನವು ಟಾರ್ಮ್ಯಾಕ್‌ನಿಂದ ಹೊರಡುವ ಮೊದಲು ಸರಿಯಾದ ಟೈರ್‌ಗಳನ್ನು ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ.

ಹಮ್ಮರ್ H2 LHD ಮತ್ತು ಆಮದು ಉತ್ಪನ್ನ
ಈಗ ನಿಮ್ಮಲ್ಲಿ ಅನೇಕರು ದುಬೈ ನೋಂದಣಿಯನ್ನು ನೋಡಿ ಅದರ ಬಗ್ಗೆ ಆಶ್ಚರ್ಯ ಪಡುತ್ತಿರಬೇಕು. ಹೌದು ಈ ಕಾರು ಖಂಡಿತವಾಗಿಯೂ ಭಾರತದಲ್ಲಿ ನೋಂದಣಿಯಾಗಿಲ್ಲ. ವಿದೇಶಿ, ಎನ್‌ಆರ್‌ಐಗಳು ಅಥವಾ ವಿದೇಶದಲ್ಲಿ ಕೆಲಸ ಮಾಡುವ ಅನೇಕ ಕಾರು ಉತ್ಸಾಹಿಗಳು ತಮ್ಮ ವಾಹನಗಳನ್ನು ಕಾರ್‌ನೆಟ್‌ನಲ್ಲಿ ಭಾರತಕ್ಕೆ ತರಸಿಕೊಳ್ಳುತ್ತಾರೆ.

ಕಾರ್‌ನೆಟ್ ಮೂಲಕ ಹೆಚ್ಚಿನ ವಾಹನಗಳು ಯುಎಇಯಿಂದ ಬರುತ್ತವೆ. ಗೌತಮ್ ಸಿಂಘಾನಿಯಾ ಅವರಂತಹ ಮಿಲಿಯನೇರ್‌ಗಳು ಸಹ ಕಾರ್‌ನೆಟ್ ಮೂಲಕ ಭಾರತಕ್ಕೆ ಮೆಕ್‌ಲಾರೆನ್ 720S ಮತ್ತು ಇತರ ಅನೇಕ ಉನ್ನತ-ಮಟ್ಟದ ಎಕ್ಸೋಟಿಕ್ ಕಾರುಗಳನ್ನು ತರಸಿಕೊಂಡಿದ್ದಾರೆ.

ಮಾಲೀಕರು ಕಾರ್‌ನೆಟ್‌ನಲ್ಲಿ ಭಾರತಕ್ಕೆ ಕೆಲವು ದಿನಗಳು ಅಥವಾ ವಾರಗಳವರೆಗೆ ಮಾತ್ರ ವಾಹನವನ್ನು ತರಬಹುದು. ಇದಕ್ಕೂ ಮೇಲೆ ಇರಿಸಿಕೊಳ್ಳಲು ಬಯಸಿದರೆ ಅಧಿಕಾರಿಗಳನ್ನು ಸಂಪರ್ಕಿಸುವ ಮೂಲಕ ಮಾನ್ಯತೆಯನ್ನು ಹೆಚ್ಚಿಸಬಹುದು. ಕಾರ್‌ನೆಟ್ ಎಂಬುದು ಮೂಲತಃ ಕಾರುಗಳು ಮತ್ತು ಇತರ ದುಬಾರಿ ಸರಕುಗಳಿಗೆ ಪಾಸ್‌ಪೋರ್ಟ್ ಆಗಿದ್ದು, ವಾಹನಗಳನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವರ್ಗಾಯಿಸಲು ಸಹಕರಿಸುತ್ತದೆ.

ಕಾರ್‌ನೆಟ್‌ನಲ್ಲಿ ವಾಹನವನ್ನು ಭಾರತಕ್ಕೆ ತರಲು ಸಾಕಷ್ಟು ಕಾಗದಪತ್ರಗಳು ಮತ್ತು ತೆರಿಗೆಗಳು, ಸುಂಕಗಳು ಮತ್ತು ದೇಶಕ್ಕೆ ಅಗತ್ಯವಿರುವ ಇತರ ಶುಲ್ಕಗಳ ಪಾವತಿ ಅಗತ್ಯವಿರುತ್ತದೆ. ಕಾರ್‌ನೆಟ್ ಪೇಪರ್ ಅನ್ನು ಕಾರನ್ನು ನೋಂದಾಯಿಸಿದ ದೇಶದಿಂದ ನೀಡಲಾಗುತ್ತದೆ. ನಂತರ ಕಾರು ಪ್ರವೇಶಿಸುವ ದೇಶದ ಅಧಿಕಾರಿಗಳು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ ಅನುಮತಿ ನೀಡುತ್ತಾರೆ.


Click it and Unblock the Notifications