ಟಾಟಾಗೆ ಜಾಕ್ ಪಾಟ್... ಭರ್ಜರಿ 2,000 ಎಲೆಕ್ಟ್ರಿಕ್ ಕಾರುಗಳ ಆರ್ಡರ್ ನೀಡಿದ ಖ್ಯಾತ ಕಂಪನಿ!
ಟಾಟಾ ಮೋಟಾರ್ಸ್ ಮತ್ತೊಮ್ಮೆ ಭಾರಿ ಆರ್ಡರ್ ಪಡೆದುಕೊಂಡಿದೆ. ಫ್ಲೀಟ್ ಮತ್ತು ಟ್ಯಾಕ್ಸಿ ವಿಭಾಗದಲ್ಲಿ ದೇಶಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿರುವ ಟಾಟಾ XPRES T EV ಕಾರು ಮಾದರಿಗಾಗಿ ರೈಡ್ ಪ್ಲಾಟ್‌ಫಾರ್ಮ್ ಎವೆರಾದಿಂದ ಬರೋಬ್ಬರಿ 2,000 ಎಕ್ಸ್‌ಪ್ರೆಸ್ ಟಿ ಎಲೆಕ್ಟ್ರಿಕ್ ಸೆಡಾನ್‌ಗಳ ದೊಡ್ಡ ಆರ್ಡರ್ ಅನ್ನು ಪಡೆದುಕೊಂಡಿದೆ.

ಟಾಟಾ ಮೋಟಾರ್ಸ್ ಈ ವಾಹನಗಳನ್ನು ಹಂತ ಹಂತವಾಗಿ ವಿತರಿಸಲಿದೆ. ಜುಲೈ 2021 ರಲ್ಲಿ, ಟಾಟಾ ಮೋಟಾರ್ಸ್ ಪ್ಯಾಸೆಂಜರ್ ಫ್ಲೀಟ್ ವಿಭಾಗಕ್ಕಾಗಿ ಪ್ರತ್ಯೇಕವಾಗಿ 'XPRES' ಬ್ರಾಂಡ್ ಅನ್ನು ಪರಿಚಯಿಸಿತು. ಈ ಬ್ರಾಂಡ್ ಅಡಿಯಲ್ಲಿ ಎಕ್ಸ್‌ಪ್ರೆಸ್ ಟಿ ಇವಿ ಮೊದಲ ಎಲೆಕ್ಟ್ರಿಕ್ ಕಾರಾಗಿದೆ.

ಈ ಹೊಸ XPRES-T ಎಲೆಕ್ಟ್ರಿಕ್ ಸೆಡಾನ್ 213 km ಮತ್ತು 165 km (ARAI ಪ್ರಮಾಣೀಕೃತ) ಶ್ರೇಣಿಯ ಎರಡು ರೂಪಾಂತರಗಳೊಂದಿಗೆ ಬರುತ್ತದೆ. ಇವೆರಡು ಕ್ರಮವಾಗಿ 21.5 kWh ಮತ್ತು 16.5 kWh ನ ಹೆಚ್ಚಿನ ಸಾಂದ್ರತೆಯ ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿವೆ.

ಹಾಗೆಯೇ ಕ್ರಮವಾಗಿ 90 ನಿಮಿಷಗಳು ಮತ್ತು 110 ನಿಮಿಷಗಳಲ್ಲಿ ಶೇ 80 ರಷ್ಟು ಚಾರ್ಜ್ ಮಾಡಬಹುದು. ಇವುಗಳನ್ನು ವೇಗದ ಚಾರ್ಜಿಂಗ್ ಸಾಕೆಟ್‌ನಿಂದ ಅಥವಾ ಯಾವುದೇ 15A ಪ್ಲಗ್ ಪಾಯಿಂಟ್‌ನಿಂದ ಸರಳವಾಗಿ ಚಾರ್ಜ್ ಮಾಡಬಹುದು.

ಟಾಟಾ ಎಕ್ಸ್‌ಪ್ರೆಸ್ T EV ಸಿಂಗಲ್-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್, ಡ್ಯುಯಲ್ ಏರ್‌ಬ್ಯಾಗ್‌ಗಳು ಮತ್ತು EBD ಜೊತೆಗೆ ಎಲ್ಲಾ ರೂಪಾಂತರಗಳಲ್ಲಿ ಪ್ರಮಾಣಿತವಾಗಿ ABS ಅನ್ನು ನೀಡಲಾಗುತ್ತದೆ. ಈ ವಿಭಾಗದಲ್ಲಿ ಸದ್ಯಕ್ಕೆ ಕೈಗೆಟುಕುವ ಹಾಗೂ ಪ್ರಮಾಣಿತ ಎಲೆಕ್ಟ್ರಿಕ್ ಕಾರಾಗಿದೆ.

XPRES T EV ಯ ಇತರ ಪ್ರಮುಖ ವೈಶಿಷ್ಟ್ಯಗಳನ್ನು ನೋಡುವುದಾದರೆ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಬ್ಲಾಕ್ ಥೀಮ್ ಇಂಟೀರಿಯರ್ ಮತ್ತು ಹೊರಭಾಗದಲ್ಲಿ ಎಲೆಕ್ಟ್ರಿಕ್ ಬ್ಲೂ ಅಕ್ಸೆಂಟ್‌ಗಳನ್ನು ಒಳಗೊಂಡಿವೆ. ಈ ಮೂಲಕ ಕಾರು ರಸ್ತೆಯಲ್ಲಿ ಸಂಚರಿಸುವಾಗ ಆಕರ್ಷಣೀಯವಾಗಿ ಕಾಣುತ್ತದೆ.

ಟಾಟಾಗೆ ತಗ್ಗದ ಬೇಡಿಕೆ
ವರ್ಷದಿಂದ ವರ್ಷಕ್ಕೆ ಟಾಟಾ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಲೆ ಇದೆ. ಭಾರತದಲ್ಲಿ ದೇಶೀಯ ಉತ್ಪನ್ನಗಳಿಗೆ ಜನರು ಹಚ್ಚು ಆದ್ಯತೆ ನೀಡುತ್ತಿದ್ದು, ಅದರಲ್ಲೂ ಟಾಟಾ ಉತ್ಪನ್ನಗಳೆಂದರೆ ಕಣ್ಣುಮುಚ್ಚಿ ಖರೀದಿಸುತ್ತಿದ್ದಾರೆ. ಮುಖ್ಯವಾಗಿ ದೊಡ್ಡ ದೊಡ್ಡ ಸಂಸ್ಥೆಗಳೇ ಇದಕ್ಕೆ ಪ್ರಮುಖ ಉದಾಹರಣೆಯಾಗಿವೆ.

ದೇಶದ ಇನ್ಯಾವುದೇ ಕಾರ್ ಬ್ರಾಂಡ್‌ಗಳು ಈ ಮಟ್ಟದ ಆರ್ಡರ್‌ಗಳನ್ನು ಒಂದರ ಮೇಲೊಂದರಂತೆ ಪಡೆದಿಲ್ಲ. ಕಳೆದ ಏಪ್ರಿಲ್‌ನಲ್ಲಿಯೂ, ಟಾಟಾ ಮೋಟಾರ್ಸ್ ಲಿಥಿಯಂ ಅರ್ಬನ್ ಟೆಕ್ನಾಲಜೀಸ್‌ನಿಂದ ಬರೋಬ್ಬರಿ 5,000 ಎಕ್ಸ್‌ಪ್ರೆಸ್ ಟಿ ಇವಿಗಳಿಗೆ ಆರ್ಡರ್ ಸ್ವೀಕರಿಸಿತ್ತು.

ಟಾಟಾದಿಂದ ಹಬ್ಬಕ್ಕೆ ಭರ್ಜರಿ ಆಫರ್‌ಗಳು
ಈ ದೀಪಾವಳಿಯಲ್ಲಿ ಟಾಟಾ ಮೋಟಾರ್ಸ್ ತನ್ನ ಕಾರುಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ. ಟಾಟಾ ಮೋಟಾರ್ಸ್ ತನ್ನ ಟಿಯಾಗೊ, ಟಿಗೊರ್, ಹ್ಯಾರಿಯರ್ ಮತ್ತು ಸಫಾರಿಯಂತಹ ಕಾರುಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ಈ ಟಾಟಾ ಮೋಟಾರ್ಸ್ ಕಾರುಗಳನ್ನು ಖರೀದಿಸಿದರೆ ನೀವು 45,000 ರೂ.ವರೆಗೆ ಉಳಿಸಬಹುದು.

ಇತ್ತೀಚಿಗೆ ಬಿಡುಗಡೆಯಾದ ಟಾಟಾ ಟಿಯಾಗೊ ಭಾರೀ ಪ್ರತಿಕ್ರತಿಯೆ ಪಡೆಯುತ್ತಿದ್ದು ದಾಖಲೆಯ ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಅಕ್ಟೋಬರ್ 10 ರಂದು Tiago EV ಬುಕ್ಕಿಂಗ್‌ನ ಮೊದಲ ದಿನವೇ 10,000 ಯುನಿಟ್‌ಗಳ ಬುಕಿಂಗ್‌ಗಳನ್ನು ದಾಖಲಿಸಿದೆ.

ಆಸಕ್ತ ಗ್ರಾಹಕರು ಈ ಕಾರನ್ನು ಆನ್‌ಲೈನ್‌ನಲ್ಲಿ ಅಥವಾ ಕಂಪನಿಯ ಡೀಲರ್‌ಶಿಪ್‌ನಲ್ಲಿ ರೂ. 21,000 ಟೋಕನ್ ಮೊತ್ತಕ್ಕೆ ಬುಕ್ ಮಾಡಬಹುದು. Tiago EV ಅನ್ನು ರೂ. 8.49 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಬೆಲೆಯಲ್ಲಿ ಬಿಡುಗಡೆಯಾಗಿರುವ ದೇಶದಲ್ಲೇ ಅತ್ಯಂತ ಮಿತವ್ಯಯದ ಎಲೆಕ್ಟ್ರಿಕ್ ಕಾರು ಇದಾಗಿದೆ. Tiago EV ಅನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಒಟ್ಟು 7 ರೂಪಾಂತರಗಳಲ್ಲಿ ನೀಡಲಾಗುತ್ತಿದೆ, ಬೆಲೆಗಳು ರೂ. 8.49 ಲಕ್ಷದಿಂದ ಪ್ರಾರಂಭವಾಗುತ್ತವೆ.

ಇದೇ ಕಾರಿನ ಟಾಪ್ ಎಂಡ್ ರೂಪಾಂತರದ ಬೆಲಯು ರೂ. 11.79 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇರುತ್ತದೆ. ಟಾಟಾ ಟಿಯಾಗೊ EV ಅನ್ನು 19.2 kWh ಮತ್ತು 24 kWh ಪವರ್‌ನ ಎರಡು ಬ್ಯಾಟರಿ ಪ್ಯಾಕ್‌ಗಳಲ್ಲಿ ತರಲಾಗಿದೆ.

ಕಂಪನಿಯು Tiago EV ಯ ಮೂಲ ರೂಪಾಂತರದಲ್ಲಿ 19.2 kWh ಬ್ಯಾಟರಿ ಪ್ಯಾಕ್ ಅನ್ನು ಬಳಸಿದರೆ, ಉನ್ನತ ರೂಪಾಂತರದಲ್ಲಿ 24 kWh ಬ್ಯಾಟರಿ ಪ್ಯಾಕ್ ಅನ್ನು ಬಳಸಲಾಗಿದೆ. ರೇಂಜ್ ಕುರಿತು ಮಾತನಾಡುವುದಾದರೆ 24 kWh ಬ್ಯಾಟರಿ ಪ್ಯಾಕ್ ಮಾದರಿಯು 315 ಕಿ.ಮೀ ಮೈಲೇಜ್ ನೀಡುತ್ತದೆ.

ಹಾಗೆಯೇ 19.2 kWh ಬ್ಯಾಟರಿ ಪ್ಯಾಕ್ ಮಾದರಿಯು ಗರಿಷ್ಠ 250 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯು ತನ್ನ ಇತ್ತೀಚಿನ ಜಿಪ್ಟ್ರಾನ್ ತಂತ್ರಜ್ಞಾನವನ್ನು ಟಾಟಾ ಟಿಯಾಗೊ EV ಯಲ್ಲಿ ಬಳಸಿದೆ.


Click it and Unblock the Notifications