ಭಾರತದಲ್ಲಿ ದುಬಾರಿಯಾಗಲಿದೆ ಜನಪ್ರಿಯ ಜೀಪ್ ಕಂಪಾಸ್ ಎಸ್‍ಯುವಿ

ಅಮೆರಿಕ ಮೂಲದ ವಾಹನ ತಯಾರಕ ಕಂಪನಿಯಾದ ಜೀಪ್ ತನ್ನ 7-ಸೀಟರ್ ಮೆರಿಡಿಯನ್ ಪ್ರೀಮಿಯಂ ಎಸ್‍ಯುವಿಯನ್ನು ಮಾರ್ಚ್ 29 ರಂದು ಅನಾವರಣಗೊಳಿಸಲಿದೆ. ಇಂಡಿಯಾ-ಸ್ಪೆಕ್ ಮೆರಿಡಿಯನ್ ಅನಾವರಣಗೊಂಡ ಕೆಲವೇ ದಿನಗಳಲ್ಲಿ ಕಂಪಾಸ್ ಬೆಲೆಗಳನ್ನು ಹೆಚ್ಚಿಸಲು ಜೀಪ್ ಸಿದ್ಧವಾಗಿದೆ.

ಭಾರತದಲ್ಲಿ ದುಬಾರಿಯಾಗಲಿದೆ ಜನಪ್ರಿಯ ಜೀಪ್ ಕಂಪಾಸ್ ಎಸ್‍ಯುವಿ

ಜೀಪ್ ಕಂಪಾಸ್ ಎಸ್‍ಯುವಿಯ ಬೆಲೆಯನ್ನು ಮಾರ್ಚ್ 31 ರಂದು ಹೆಚ್ಚಿಸಲಿದೆ. ಕಳೆದ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಹೊಸ ಜೀಪ್ ಕಂಪಾಸ್ ಅನ್ನು ಭಾರತೀಯ ಗ್ರಾಹಕರು ಉತ್ತಮವಾಗಿ ಸ್ವೀಕರಿಸಿದ್ದಾರೆ. ಈ ಹೊಸ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಆಂತರಿಕ ಮತ್ತು ಬಾಹ್ಯ ನವೀಕರಣಗಳೊಂದಿಗೆ ಪರಿಚಯಿಸಿದ್ದರು. 2021ರ ಜೀಪ್ ಕಂಪಾಸ್ ಎಸ್‍ಯುವಿಯು ಸ್ಪೋರ್ಟ್ಸ್, ಲಾಂಗಿಟ್ಯೂಡ್, ಲಿಮಿಟೆಡ್, ಲಿಮಿಟೆಡ್ (ಒ),ಮತ್ತು ಹೊಸದಾಗಿ ಸೇರಿಸಲಾದ ಟಾಪ್-ಎಂಡ್ ಮಾಡೆಲ್ ಎಸ್ ಎಂಬ ವೆರಿಯೆಂಟ್ ಗಳಲ್ಲಿ ಕೂಡ ಲಭ್ಯವಿದೆ.

ಭಾರತದಲ್ಲಿ ದುಬಾರಿಯಾಗಲಿದೆ ಜನಪ್ರಿಯ ಜೀಪ್ ಕಂಪಾಸ್ ಎಸ್‍ಯುವಿ

ವರ್ಷಗಳ ಬಳಿಕ ಜೀಪ್ ಕಂಪಾಸ್ ಮಿಡ್-ಲೈಫ್ ನವೀಕರಣವನ್ನು ಪಡೆದುಕೊಂಡಿತ್ತು, ಕಳೆದ ವರ್ಷದ ಆರಂಭದಲ್ಲಿ ಬಿಡುಗಡೆಗೊಂಡ 2021ರ ಜೀಪ್ ಕಂಪಾಸ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುದಾದರೆ, ಕೆಲವು ಸೂಕ್ಷ್ಮ ನವೀಕರಣಗಳನ್ನು ಪಡೆದುಕೊಂಡಿದ್ದರೆ, ಫೀಚರ್ ಗಳ ವಿಭಾಗದಲ್ಲಿ ಗಣನೀಯ ನವೀಕರಣಗಳನ್ನು ಪಡೆದುಕೊಂಡಿದೆ.

ಭಾರತದಲ್ಲಿ ದುಬಾರಿಯಾಗಲಿದೆ ಜನಪ್ರಿಯ ಜೀಪ್ ಕಂಪಾಸ್ ಎಸ್‍ಯುವಿ

ಹೊರಗಿನ ನವೀಕರಣಗಳನ್ನು ಹತ್ತಿರದಿಂದ ಗಮನಿಸಿದರೆ ಮಾತ್ರ ತಿಳಿಯುತ್ತದೆ. ಇನ್ನು ಈ ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಒಳಭಾಗದಲ್ಲಿ ಸೂಕ್ಷ್ಮ ನವೀಕರಣಗಳು ಮತ್ತು ಬದಲಾವಣೆಗಳನ್ನು ಪಡೆದುಕೊಂಡಿತ್ತು. ಜೀಪ್ ಕಂಪಾಸ್‌ನ ಕ್ಯಾಬಿನ್ ಮೊದಲಿಗಿಂತ ಹೆಚ್ಚು ಪ್ರೀಮಿಯಂ ಆಗಿದೆ.

ಭಾರತದಲ್ಲಿ ದುಬಾರಿಯಾಗಲಿದೆ ಜನಪ್ರಿಯ ಜೀಪ್ ಕಂಪಾಸ್ ಎಸ್‍ಯುವಿ

ಈ ಎಸ್‍ಯುವಿಯ ಒಳಭಾಗದಲ್ಲಿ ಹಲವಾರು ಪ್ರೀಮಿಯಂ ಫೀಚರ್ ಗಳನ್ನು ಒಳಗೊಂಡಿವೆ.ಈ ಎಸ್‍ಯುವಿಯಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆಯೊಂದಿಗೆ 10.1-ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಹೊಂದಿದೆ.

ಭಾರತದಲ್ಲಿ ದುಬಾರಿಯಾಗಲಿದೆ ಜನಪ್ರಿಯ ಜೀಪ್ ಕಂಪಾಸ್ ಎಸ್‍ಯುವಿ

ಈ ಆಂಡ್ರಾಯ್ಡ್ ಆಧಾರಿತ ಆಪರೇಟಿಂಗ್ ಸಿಸ್ಟಂ ಹೊಂದಿರುವ ಎಫ್‌ಸಿಎಯ ಹೊಸ ಯುಕನೆಕ್ಟ್ 5 ತಂತ್ರಜ್ಞಾನವನ್ನು ಒಳಗೊಂಡಿದೆ.ಇದ್ದರಿಂದ ಇದು ಈಗ ವಾಯ್ಸ್ ಕಮಾಂಡ್ ಅಸಿಸ್ಟ್ ಮತ್ತು ಓವರ್-ದಿ-ಏರ್ (ಒಟಿಎ) ಅಪ್‌ಡೇಟ್‌ ಫೀಚರ್ ಗಳನ್ನು ಒಳಗೊಂಡಿವೆ. ಹಿಲ್ ಅಸಿಸ್ಟ್ (ಎಚ್‌ಎ) ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ (ಎಚ್‌ಡಿಸಿ) ಎಂಬ ಮೋಡ್ ಗಳನ್ನು ಈ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಕೂಡ ಒಳಗೊಂಡಿದೆ.

ಭಾರತದಲ್ಲಿ ದುಬಾರಿಯಾಗಲಿದೆ ಜನಪ್ರಿಯ ಜೀಪ್ ಕಂಪಾಸ್ ಎಸ್‍ಯುವಿ

ಈ ಜೀಪ್ ಕಂಪಾಸ್ ಎಸ್‍ಯುವಿಯಲ್ಲಿ ಹೊಸ 1.4 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ. ಇದರಲ್ಲಿ 1.4 ಲೀಟರ್ ಟರ್ಬೊ-ಪೆಟ್ರೋಲ್ 163 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, 2.0 ಲೀಟರ್ ಡೀಸೆಲ್ ಎಂಜಿನ್ 173 ಬಿಹೆಚ್‌ಪಿ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ,

ಭಾರತದಲ್ಲಿ ದುಬಾರಿಯಾಗಲಿದೆ ಜನಪ್ರಿಯ ಜೀಪ್ ಕಂಪಾಸ್ ಎಸ್‍ಯುವಿ

ಈ ಎರಡು ಎಂಜಿನ್‌ಗಳು ಸ್ಟ್ಯಾಂಡರ್ಡ್‌ ಆಗಿ ಆರು-ಸ್ಪೀಡ್ ಮ್ಯಾನ್ಯುವಲ್‌ ಗೇರ್ ಬಾಕ್ಸ್ ನೊಂದಿಗೆ ಬರುತ್ತವೆ. ಕಂಪಾಸ್ ಪೆಟ್ರೋಲ್ ಏಳು-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆಯುತ್ತದೆ ಮತ್ತು ಡೀಸೆಲ್ ಒಂಬತ್ತು-ಸ್ಪೀಡ್ ಟಾರ್ಕ್ ಕರ್ನವಾಟರ್ ಆಯ್ಕೆಯನ್ನು ಕೂಡ ಹೊಂದಿದೆ.

ಭಾರತದಲ್ಲಿ ದುಬಾರಿಯಾಗಲಿದೆ ಜನಪ್ರಿಯ ಜೀಪ್ ಕಂಪಾಸ್ ಎಸ್‍ಯುವಿ

ಇನ್ನು ಬೆಲೆ ಏರಿಕೆಯು ಇತ್ತೀಚೆಗೆ ಬಿಡುಗಡೆಯಾದ ಕಂಪಾಸ್ ಟ್ರೈಲ್ಹಾಕ್ ಮೇಲೆಯೂ ಪರಿಣಾಮ ಬೀರಬಹುದು. ಜೀಪ್ ತನ್ನ ಕಂಪಾಸ್ ಟ್ರೈಲ್‌ಹಾಕ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆ ಗೊಳಿಸಿತ್ತು. ಸದ್ಯ 2022ರ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಫೇಸ್‌ಲಿಫ್ಟ್ ಎಸ್‍ಯುವಿಯ ಆರಂಭಿಕ ಬೆಲೆಯು ರೂ.30.72 ಲಕ್ಷವಾಗಿದೆ.

ಭಾರತದಲ್ಲಿ ದುಬಾರಿಯಾಗಲಿದೆ ಜನಪ್ರಿಯ ಜೀಪ್ ಕಂಪಾಸ್ ಎಸ್‍ಯುವಿ

ಈ 2022ರ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಫೇಸ್‌ಲಿಫ್ಟ್ ಎಸ್‍ಯುವಿ ಮಾದರಿಗೆ ಟಾಪ್-ಸ್ಪೆಕ್ ಕಂಪಾಸ್ ಎಸ್ ರೂಪಾಂತರಕ್ಕಿಂತ ಸುಮಾರು ರೂ.1.38 ಲಕ್ಷ ರೂಪಾಯಿ ದುಬಾರಿಯಾಗಿದೆ. ನವೀಕರಿಸಿದ ಮಾದರಿಯು ಕಾಸ್ಮೆಟಿಕ್ ವಿನ್ಯಾಸ ಬದಲಾವಣೆಗಳೊಂದಿಗೆ ಮತ್ತು ಆಫ್-ರೋಡ್ ಕೇಂದ್ರೀಕೃತ ವೈಶಿಷ್ಟ್ಯಗಳೊಂದಿಗೆ ವೈಶಿಷ್ಟ್ಯದ ನವೀಕರಣಗಳೊಂದಿಗೆ ಬಂದಿದೆ.

ಭಾರತದಲ್ಲಿ ದುಬಾರಿಯಾಗಲಿದೆ ಜನಪ್ರಿಯ ಜೀಪ್ ಕಂಪಾಸ್ ಎಸ್‍ಯುವಿ

ಸ್ಟೈಲಿಂಗ್ ಬದಲಾವಣೆಗಳಿಗೆ ಸಂಬಂಧಿಸಿದಂತೆ, 2022ರ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಮಾದರಿಯು ಹೊಸ ಹೆಡ್‌ಲ್ಯಾಂಪ್‌ಗಳು ಮತ್ತು ಗ್ರಿಲ್ ಜೊತೆಗೆ ಹೊಸ ಬಂಪರ್‌ಗಳೊಂದಿಗೆ ಬರುತ್ತದೆ. ಈ ಹೊಸ ಎಸ್‍ಯುವಿಯಲ್ಲಿ ಬಾನೆಟ್ ಡೆಕಾಲ್, 225/65 R17 ವಿಭಾಗದ ಟೈರ್‌ಗಳೊಂದಿಗೆ ಸಣ್ಣ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಹಿಂಭಾಗದಲ್ಲಿ ಕೆಂಪು ಹುಕ್, ಸ್ಕಫ್ ಪ್ಲೇಟ್‌ಗಳು ಮತ್ತು ಫೆಂಡರ್‌ಗಳಲ್ಲಿ ಹೊಸ 'ಟ್ರಯಲ್ ರೇಟ್' ಬ್ಯಾಡ್ಜ್‌ನೊಂದಿಗೆ ಬರುತ್ತದೆ.

ಭಾರತದಲ್ಲಿ ದುಬಾರಿಯಾಗಲಿದೆ ಜನಪ್ರಿಯ ಜೀಪ್ ಕಂಪಾಸ್ ಎಸ್‍ಯುವಿ

ಈ 2022ರ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 2.0-ಲೀಟರ್ 4-ಸಿಲಿಂಡರ್ ಟರ್ಬೊ-ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 170 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 9-ಸ್ಪೀಡ್ ಟಾರ್ಕ್ ಕರ್ನ್ವಾಟರ್ ಗೇರ್‌ಬಾಕ್ಸ್ ಅನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಮೂಲಕ ಎಲ್ಲಾ-4 ಚಕ್ರಗಳಿಗೆ ಪವರ್ ಅನ್ನು ಕಳುಹಿಸುತ್ತದೆ. 2022ರ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಹಲವಾರು ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿವೆ.

ಭಾರತದಲ್ಲಿ ದುಬಾರಿಯಾಗಲಿದೆ ಜನಪ್ರಿಯ ಜೀಪ್ ಕಂಪಾಸ್ ಎಸ್‍ಯುವಿ

ಇನ್ನು ಜೀಪ್ ಕಂಪನಿಯು ಈ ವರ್ಷ ಭಾರತದ ಮಾರುಕಟ್ಟೆಗೆ ಮೆರಿಡಿಯನ್‌ ಮಾದರಿಯನ್ನು ಬಿಡುಗಡೆಗೊಳಿಸಲಿದೆ. ಜೀಪ್ ಮೆರಿಡಿಯನ್ ಮೂಲತಃ ಕಂಪಾಸ್‌ನ 7-ಆಸನಗಳ ಆವೃತ್ತಿಯಾಗಿದೆ, ಇದು ಈಗಾಗಲೇ ಕಮಾಂಡರ್ ಆಗಿ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ.

More from DriveSpark

Article Published On: Friday, March 25, 2022, 9:00 [IST]
English summary
Jeep india to be increase prices of compass suv details
Read more on ಜೀಪ್ jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+