ಅತ್ಯುತ್ತಮ ಮೈಲೇಜ್‌‌ನೊಂದಿಗೆ Compass ಮೈಲ್ಡ್ ಹೈಬ್ರಿಡ್ ಎಸ್‍ಯುವಿಯನ್ನು ಪರಿಚಯಿಸಿದ Jeep

ಜೀಪ್ ಕಂಪಾಸ್ ಎಸ್‍ಯುವಿಯು ಇದೀಗ ಯುಕೆ ಮಾರುಕಟ್ಟೆಗಳಲ್ಲಿ 'ಇ-ಹೈಬ್ರಿಡ್' ಪವರ್‌ಟ್ರೇನ್‌ನೊಂದಿಗೆ ಲಭ್ಯವಿದೆ. ಹೊಸ ಪವರ್‌ಟ್ರೇನ್ ಮೂಲಭೂತವಾಗಿ ಮೈಲ್ಡ್-ಹೈಬ್ರಿಡ್ ಸಿಸ್ಟಮ್ ಆಗಿದ್ದು, ಇದು ಎಸ್‍ಯುವಿಯ ಪೆಟ್ರೋಲ್ ಎಂಜಿನ್‌ಗೆ ವಿವಿಧ ಕಾರ್ಯಗಳಲ್ಲಿ ಸಹಾಯ ಮಾಡುತ್ತದೆ.

ಅತ್ಯುತ್ತಮ ಮೈಲೇಜ್‌‌ನೊಂದಿಗೆ Compass ಮೈಲ್ಡ್ ಹೈಬ್ರಿಡ್ ಎಸ್‍ಯುವಿಯನ್ನು ಪರಿಚಯಿಸಿದ Jeep

ಮೈಲ್ಡ್ ಹೈಬ್ರಿಡ್ ಹೊಸ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಈ ಎಂಜಿನ್ 130 ಬಿಹೆಚ್‍ಪಿ ಪವರ್ ಮತ್ತು 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 130 ಬಿಹೆಚ್‍ಪಿ ಪವರ್ ಮತ್ತು 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ DCT (ಡ್ಯುಯಲ್ ಕ್ಲಚ್ ಸ್ವಯಂಚಾಲಿತ) ನೊಂದಿಗೆ ಜೋಡಿಸಲ್ಪಟ್ಟಿದೆ.ಪೆ ಟ್ರೋಲ್ ಎಂಜಿನ್‌ಗೆ ಸಹಾಯ ಮಾಡುವುದು 20 ಬಿಹೆಚ್‍ಪಿ ಪವರ್ ಮತ್ತು 55 ಎನ್ಎಂ ಟಾರ್ಕ್ ಅನ್ನು ಒಳಗೊಂಡಿರುವ 48ವಿ ಮೈಲ್ಡ್ ಹೈಬ್ರಿಡ್ ಆರ್ಕಿಟೆಕ್ಚರ್ ಆಗಿದೆ.

ಅತ್ಯುತ್ತಮ ಮೈಲೇಜ್‌‌ನೊಂದಿಗೆ Compass ಮೈಲ್ಡ್ ಹೈಬ್ರಿಡ್ ಎಸ್‍ಯುವಿಯನ್ನು ಪರಿಚಯಿಸಿದ Jeep

ಕಂಪಾಸ್ ಇ-ಹೈಬ್ರಿಡ್ ಸುಮಾರು 17 ಕಿ.ಮೀ ಮೈಲೇಜ್ ನೀಡುತ್ತದೆ ಸಣ್ಣ ಬ್ಯಾಟರಿ ಪ್ಯಾಕ್ ಅನ್ನು ರಿಜನರೇಟಿವ್ ಬ್ರೇಕಿಂಗ್ ಮೂಲಕ ಚಾರ್ಜ್ ಮಾಡಲಾಗುತ್ತದೆ ಮತ್ತು ಎಂಜಿನ್ ಆಫ್ ಮಾಡಿದಾಗಲೂ ಕಾರನ್ನು ಚಲಾಯಿಸಬಹುದು. ಕಾರನ್ನು ಪ್ರಾರಂಭಿಸುವಾಗ, ಕಡಿಮೆ ವೇಗದಲ್ಲಿ ಮತ್ತು ಟ್ರಾಫಿಕ್ ಅನ್ನು ನಿಲ್ಲಿಸುವಾಗ, ಪ್ರಯಾಣಿಸುವಾಗ ಮತ್ತು ಕಾರನ್ನು ಪಾರ್ಕಿಂಗ್ ಮಾಡುವಾಗ ಮೋಟಾರ್ ಅಗತ್ಯವಿರುವ ಶಕ್ತಿಯನ್ನು ನೀಡುತ್ತದೆ.

ಅತ್ಯುತ್ತಮ ಮೈಲೇಜ್‌‌ನೊಂದಿಗೆ Compass ಮೈಲ್ಡ್ ಹೈಬ್ರಿಡ್ ಎಸ್‍ಯುವಿಯನ್ನು ಪರಿಚಯಿಸಿದ Jeep

ಯುಕೆ-ಸ್ಪೆಕ್ ಕಂಪಾಸ್ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಕನೆಕ್ಟಿವಿಟಿ ಕಾರ್ ತಂತ್ರಜ್ಞಾನ, ಡಿಜಿಟಲ್ ಡ್ರೈವರ್ ಡಿಸ್ ಪ್ಲೇ, ಡ್ಯುಯಲ್-ಪೇನ್ ಸನ್‌ರೂಫ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪ್ ಅಸಿಸ್ಟ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಪೈಲಟ್ ಅಸಿಸ್ಟ್ ಅನ್ನು ಒಳಗೊಂಡಿರುವ ADAS (ಸುಧಾರಿತ ಡ್ರೈವಿಂಗ್ ಅಸಿಸ್ಟೆಂಟ್ ಸಿಸ್ಟಮ್) ಅನ್ನು ಸಹ ಒಳಗೊಂಡಿದೆ.

ಅತ್ಯುತ್ತಮ ಮೈಲೇಜ್‌‌ನೊಂದಿಗೆ Compass ಮೈಲ್ಡ್ ಹೈಬ್ರಿಡ್ ಎಸ್‍ಯುವಿಯನ್ನು ಪರಿಚಯಿಸಿದ Jeep

ಜೀಪ್ ಕಂಪನಿಯು ಕಳೆದ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತು. ಆದರೆ ಹೊಸ ಮೈಲ್ಡ್ ಹೈಬ್ರಿಡ್ ಕಂಪಾಸ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಕಂಪನಿಯು ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಈ ಹೊಸ ಜೀಪ್ ಕಂಪಾಸ್ ಎಸ್‍ಯುವಿಯನ್ನು ಆಂತರಿಕ ಮತ್ತು ಬಾಹ್ಯ ನವೀಕರಣಗಳೊಂದಿಗೆ ಪರಿಚಯಿಸಿದ್ದರು.

ಅತ್ಯುತ್ತಮ ಮೈಲೇಜ್‌‌ನೊಂದಿಗೆ Compass ಮೈಲ್ಡ್ ಹೈಬ್ರಿಡ್ ಎಸ್‍ಯುವಿಯನ್ನು ಪರಿಚಯಿಸಿದ Jeep

ಈ ಜೀಪ್ ಕಂಪಾಸ್ ಎಸ್‍ಯುವಿಯು ಸ್ಪೋರ್ಟ್ಸ್, ಲಾಂಗಿಟ್ಯೂಡ್, ಲಿಮಿಟೆಡ್, ಲಿಮಿಟೆಡ್ (ಒ),ಮತ್ತು ಹೊಸದಾಗಿ ಸೇರಿಸಲಾದ ಟಾಪ್-ಎಂಡ್ ಮಾಡೆಲ್ ಎಸ್ ಎಂಬ ವೆರಿಯೆಂಟ್ ಗಳಲ್ಲಿ ಲಭ್ಯವಿದೆ. ಮೂರು ವರ್ಷಗಳ ಬಳಿಕ ಜೀಪ್ ಕಂಪಾಸ್ ಮಿಡ್-ಲೈಫ್ ನವೀಕರಣವನ್ನು ಪಡೆದುಕೊಂಡಿತ್ತು,

ಅತ್ಯುತ್ತಮ ಮೈಲೇಜ್‌‌ನೊಂದಿಗೆ Compass ಮೈಲ್ಡ್ ಹೈಬ್ರಿಡ್ ಎಸ್‍ಯುವಿಯನ್ನು ಪರಿಚಯಿಸಿದ Jeep

ಈ ಜೀಪ್ ಕಂಪಾಸ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುದಾದರೆ, ಕೆಲವು ಸೂಕ್ಷ್ಮ ನವೀಕರಣಗಳನ್ನು ಪಡೆದುಕೊಂಡಿದ್ದರೆ, ಫೀಚರ್ ಗಳ ವಿಭಾಗದಲ್ಲಿ ಗಣನೀಯ ನವೀಕರಣಗಳನ್ನು ಪಡೆದುಕೊಂಡಿದೆ. ಈ ಹೊಸ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಒಳಭಾಗದಲ್ಲಿ ಸೂಕ್ಷ್ಮ ನವೀಕರಣಗಳು ಮತ್ತು ಬದಲಾವಣೆಗಳನ್ನು ಕೂಡ ಒಳಗೊಂಡಿದೆ. ಜೀಪ್ ಕಂಪಾಸ್‌ನ ಕ್ಯಾಬಿನ್ ಮೊದಲಿಗಿಂತ ಹೆಚ್ಚು ಪ್ರೀಮಿಯಂ ಆಗಿದೆ.

ಅತ್ಯುತ್ತಮ ಮೈಲೇಜ್‌‌ನೊಂದಿಗೆ Compass ಮೈಲ್ಡ್ ಹೈಬ್ರಿಡ್ ಎಸ್‍ಯುವಿಯನ್ನು ಪರಿಚಯಿಸಿದ Jeep

ಈ ಎಸ್‍ಯುವಿಯ ಒಳಭಾಗದಲ್ಲಿ ಹಲವಾರು ಪ್ರೀಮಿಯಂ ಫೀಚರ್ ಗಳನ್ನು ಕೂಡ ಒಳಗೊಂಡಿವೆ. ಈ ಎಸ್‍ಯುವಿಯಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆಯೊಂದಿಗೆ 10.1-ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಹೊಂದಿದೆ. ಇದು ಆಂಡ್ರಾಯ್ಡ್ ಆಧಾರಿತ ಆಪರೇಟಿಂಗ್ ಸಿಸ್ಟಂ ಹೊಂದಿರುವ ಎಫ್‌ಸಿಎಯ ಹೊಸ ಯುಕನೆಕ್ಟ್ 5 ತಂತ್ರಜ್ಞಾನವನ್ನು ಕೂಡ ಹೊಂದಿದೆ.

ಅತ್ಯುತ್ತಮ ಮೈಲೇಜ್‌‌ನೊಂದಿಗೆ Compass ಮೈಲ್ಡ್ ಹೈಬ್ರಿಡ್ ಎಸ್‍ಯುವಿಯನ್ನು ಪರಿಚಯಿಸಿದ Jeep

ಇದರಿಂದ ವಾಯ್ಸ್ ಕಮಾಂಡ್ ಅಸಿಸ್ಟ್ ಮತ್ತು ಓವರ್-ದಿ-ಏರ್ (ಒಟಿಎ) ಅಪ್‌ಡೇಟ್‌ ಫೀಚರ್ ಗಳನ್ನು ಕೂಡ ಹೊಂದಿದೆ. ಈ ಎಸ್‍ಯುವಿಯಲ್ಲಿ ಹಿಲ್ ಅಸಿಸ್ಟ್ (ಎಚ್‌ಎ) ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ (ಎಚ್‌ಡಿಸಿ) ಎಂಬ ಮೋಡ್ ಗಳನ್ನು ಈ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಮಾದರಿಯು ಕೂಡ ಹೊಂದಿದೆ. ಇನ್ನು ಜೀಪ್ ಕಂಪನಿಯು ಕಂಪಾಸ್ ಮಾಡೆಲ್ ಎಸ್ ವೆರಿಯಂಟ್ ಅನ್ನು ಇತ್ತೀಚೆಗೆ ನವೀಕರಿಸಿದೆ. ಈ ವೆರಿಯೆಂಟ್ ನಲ್ಲಿ ಹೊಸ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಆಟೋಮ್ಯಾಟಿಕ್ ವೆಂಟಿಲೇಟೆಡ್ ಡ್ರೈವರ್ ಸೀಟ್‌ನೊಂದಿಗೆ ನವೀಕರಿಸಿದ್ದಾರೆ.

ಅತ್ಯುತ್ತಮ ಮೈಲೇಜ್‌‌ನೊಂದಿಗೆ Compass ಮೈಲ್ಡ್ ಹೈಬ್ರಿಡ್ ಎಸ್‍ಯುವಿಯನ್ನು ಪರಿಚಯಿಸಿದ Jeep

ಈ ಮಾಡೆಲ್ ಎಸ್ (ಒ 2) ವೆರಿಯೆಂಟ್ ಐದನೇ ತಲೆಮಾರಿನ ಆರ್ 1 ಹೈ 10.1 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯುತ್ತದೆ. ಇದು ಈಗ ನ್ಯಾವಿಗೇಷನ್ ಸಿಸ್ಟಂ ಜೊತೆಗೆ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ ಹೊಂದಿಕೊಳ್ಳುತ್ತದೆ. ಜೊತೆಗೆ ಫೋನ್, ಮೀಡಿಯಾ, ರೇಡಿಯೋ, ಕ್ಲೈಮೇಂಟ್ ಕಂಟ್ರೋಲ್ ಮತ್ತು ಸಂಚರಣೆಗಳ ಹ್ಯಾಂಡ್ಸ್-ಫ್ರೀ ಕಾರ್ಯಾಚರಣೆಗಾಗಿ ಯುನಿಟ್ ವಾಯ್ಸ್ ಕಾಮೆಂಡ್ ಗಳನ್ನು ಬೆಂಬಲಿಸುತ್ತದೆ . ಇನ್ನು ಜೀಪ್ ಕಂಪನಿಯು ತನ್ನ ಹೊಸ ಕಮಾಂಡರ್ ಎಸ್‌ಯುವಿಯನ್ನು ಬ್ರೆಜಿಲ್‌ನಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತ್ತು.

ಅತ್ಯುತ್ತಮ ಮೈಲೇಜ್‌‌ನೊಂದಿಗೆ Compass ಮೈಲ್ಡ್ ಹೈಬ್ರಿಡ್ ಎಸ್‍ಯುವಿಯನ್ನು ಪರಿಚಯಿಸಿದ Jeep

ಇದನ್ನು ಕಂಪಾಸ್ ಐದು ಸೀಟಿನ ಮಾದರಿಗೆ ಹೋಲಿಸಿದರೆ ಗಮನಾರ್ಹ ವ್ಯತ್ಯಾಸಗಳನ್ನು ಹೊಂದಿದೆ. ಅಲ್ಲದೇ ಹೊಸ ಜೀಪ್ ಕಮಾಂಡರ್ ಎಸ್‍ಯುವಿಯು ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಹೊಸ ಮಾದರಿಯನ್ನು ಆಂತರಿಕವಾಗಿ ಜೀಪ್ ಲೋ-ಡಿ ಎಂದು ಕರೆಯಲಾಗುತ್ತಿತ್ತು. ಇದು ಕಂಪಾಸ್ ಎಸ್‌ಯುವಿಗಿಂತ ಉದ್ದವಾದ ಹೆಚ್ಚು ವಿಶಾಲವಾದ ಮತ್ತು ಪ್ರೀಮಿಯಂ ಆವೃತ್ತಿಯಾಗಿದೆ. ಇನ್ನು ಈ ಹೊಸ 7-ಸೀಟರ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಜೀಪ್ ಮೆರಿಡಿಯನ್ ಎಂಬ ಹೆಸರಿನಲ್ಲಿ ಬಿಡುಗಡೆಯಾಗಲಿದೆ.

ಅತ್ಯುತ್ತಮ ಮೈಲೇಜ್‌‌ನೊಂದಿಗೆ Compass ಮೈಲ್ಡ್ ಹೈಬ್ರಿಡ್ ಎಸ್‍ಯುವಿಯನ್ನು ಪರಿಚಯಿಸಿದ Jeep

ಈ ಜೀಪ್ 7-ಸೀಟರ್ ಎಸ್‌ಯುವಿಯು ಮೊದಲು ಬ್ರೆಜಿಲ್‌ನಲ್ಲಿ ಬಿಡುಗಡೆಯಾಗಲಿದೆ, ಭಾರತದಲ್ಲಿ ಈ ಎಸ್‍ಯುವಿಯು ಈ ವರ್ಷದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಜೀಪ್ ಕಂಪಾಸ್ ಎಸ್‍ಯುವಿಯು ಭಾರತದಲ್ಲಿ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ.

Article Published On: Saturday, January 22, 2022, 15:08 [IST]
English summary
Jeep introduced new compass mild hybrid suv with turbo petrol engine details
Read more on ಜೀಪ್ jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+