ದಾಖಲೆ ಮಟ್ಟದಲ್ಲಿ ಮಾರಾಟ ಕಂಡ ಫಾರ್ಚೂನರ್ ಎಸ್‍ಯುವಿಯ ಪ್ರತಿಸ್ಪರ್ಧಿ ಜೀಪ್ ಮೆರಿಡಿಯನ್

ಅಮೆರಿಕ ಮೂಲದ ವಾಹನ ತಯಾರಕ ಕಂಪನಿಯಾದ ಜೀಪ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಫಾರ್ಚೂನರ್ ಎಸ್‍ಯುವಿಗೆ ಪೈಪೋಟಿ ನೀಡಲು ಮೆರಿಡಿಯನ್ 7-ಸೀಟರ್ ಪ್ರೀಮಿಯಂ ಎಸ್‍ಯುವಿಯನ್ನು ಕೆಲವು ತಿಂಗಳ ಹಿಂದೆ ಬಿಡುಗಡೆಗೊಳಿತ. ಈ ಹೊಸ ಜೀಫ್ ಮೆರಿಡಿಯನ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.29.90 ಲಕ್ಷವಾಗಿದೆ.

ದಾಖಲೆ ಮಟ್ಟದಲ್ಲಿ ಮಾರಾಟ ಕಂಡ ಫಾರ್ಚೂನರ್ ಎಸ್‍ಯುವಿಯ ಪ್ರತಿಸ್ಪರ್ಧಿ ಜೀಪ್ ಮೆರಿಡಿಯನ್

ಹೊಸ ಜೀಪ್ ಮೆರಿಡಿಯನ್ ಎಸ್‍ಯುವಿಯನ್ನು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ ಮತ್ತು ಕಂಪಾಸ್ ಆಧಾರಿತವಾದ ಫ್ಲಾಟ್ ಫಾರ್ಮ್ ಅನ್ನು ಹಂಚಿಕೊಳ್ಳುತ್ತದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ, ಮೆರಿಡಿಯನ್ ತನ್ನ ಪ್ರತಿಸ್ಪರ್ಧಿಗಳಿಗೆ ತೀವ್ರ ಸ್ಪರ್ಧೆಯನ್ನು ನೀಡುತ್ತಿದೆ ಮತ್ತು ಬ್ರ್ಯಾಂಡ್ ಕಳೆದ ತಿಂಗಳು ಮೆರಿಡಿಯನ್‌ನ 500ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದೆ. ಜೀಪ್ ಇಂಡಿಯಾ 2022ರ ಸೆಪ್ಟೆಂಬರ್ ಭಾರತದಲ್ಲಿ ಒಟ್ಟು 1116 ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ. ಪ್ರಸ್ತುತ ದೇಶದಲ್ಲಿ ಜೀ[ ಕಂಪನಿಯು ಕಂಪಾಸ್ ಮತ್ತು ಮೆರಿಡಿಯನ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ದಾಖಲೆ ಮಟ್ಟದಲ್ಲಿ ಮಾರಾಟ ಕಂಡ ಫಾರ್ಚೂನರ್ ಎಸ್‍ಯುವಿಯ ಪ್ರತಿಸ್ಪರ್ಧಿ ಜೀಪ್ ಮೆರಿಡಿಯನ್

ಈ ಹೊಸ ಜೀಪ್ ಮೆರಿಡಿಯನ್ ಜನಪ್ರಿಯ ಕಂಪಾಸ್ ಎಸ್‍ಯುವಿಯನ್ನು ಆಧರಿಸಿದೆ. ಜೀಪ್ ಮೆರಿಡಿಯನ್ ಮಾದರಿ ದಕ್ಷಿಣ ಅಮೆರಿಕಾದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಜೀಪ್ ಕಮಾಂಡರ್‌ನೊಂದಿಗೆ ಹಲವಾರು ಸಾಮ್ಯತೆಯನ್ನು ಹೊಂದಿದೆ.

ದಾಖಲೆ ಮಟ್ಟದಲ್ಲಿ ಮಾರಾಟ ಕಂಡ ಫಾರ್ಚೂನರ್ ಎಸ್‍ಯುವಿಯ ಪ್ರತಿಸ್ಪರ್ಧಿ ಜೀಪ್ ಮೆರಿಡಿಯನ್

ಈ ಹೊಸ ಜೀಪ್ ಮೆರಿಡಿಯನ್‌ ಪ್ರೀಮಿಯಂ ಎಸ್‍ಯುವಿಯ ಮುಂಭಾಗವನ್ನು ಕಂಪಾಸ್‌ಗೆ ಹೋಲಿಸಿದರೆ ವಿಭಿನ್ನ ಸ್ಟೈಲಿಂಗ್ ಅಂಶಗಳೊಂದಿಗೆ ಇದು ಹೆಚ್ಚು ಮಸ್ಕ್ಲರ್ ಲುಕ್ ಅನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗದ ಫಾಸಿಕ ವಿಶಿಷ್ಟವಾದ ಕ್ರೋಮ್ ಸ್ಲೇಟೆಡ್ ಫ್ರಂಟ್ ಗ್ರಿಲ್ ಅನ್ನು ಹೊಂದಿದೆ.

ದಾಖಲೆ ಮಟ್ಟದಲ್ಲಿ ಮಾರಾಟ ಕಂಡ ಫಾರ್ಚೂನರ್ ಎಸ್‍ಯುವಿಯ ಪ್ರತಿಸ್ಪರ್ಧಿ ಜೀಪ್ ಮೆರಿಡಿಯನ್

ಇದರೊಂದಿಗೆ ಮಸ್ಕಲರ್ ಬಾನೆಟ್ ರಚನೆ, ಅಗಲವನ್ನು ಒಳಗೊಂಡ ದಪ್ಪ ಅಡ್ಡ ರೇಖೆಯೊಂದಿಗೆ ಸ್ಪೋರ್ಟಿ ಬಂಪರ್, ಅಗಲವಾದ ಸೆಂಟ್ರಲ್ ಏರ್ ಟೆಕ್ ಮತ್ತು ಬಾನೆಟ್‌ನ ಅಂಚಿನಲ್ಲಿ ಜೀಪ್ ಬ್ಯಾಡ್ಜ್ ಅನ್ನು ಹೊಂದಿದೆ. ಈ ಜೀಪ್ ಮೆರಿಡಿಯನ್‌ ಎಸ್‍ಯುವಿಯ ಇತರ ಸ್ಟೈಲಿಂಗ್ ಮುಖ್ಯಾಂಶಗಳು ಸ್ಕ್ವೇರ್-ಆಫ್ ವ್ಹೀಲ್ ಆರ್ಚ್‌ಗಳು, ಬ್ಲ್ಯಾಕ್ ಬಾಡಿ ಕ್ಲಾಡಿಂಗ್ ಮತ್ತು ಮುಂಭಾಗದ ಡೋರುಗಳು, ದೊಡ್ಡ ವಿಂಡೋಗಲು ಮತ್ತು ಪ್ರಮುಖ ರೂಫ್ ರೈಲ್ ಗಳ ಮೇಲೆ ಮೆರಿಡಿಯನ್ ಎಂದು ಬರೆಯಲಾಗಿದೆ.

ದಾಖಲೆ ಮಟ್ಟದಲ್ಲಿ ಮಾರಾಟ ಕಂಡ ಫಾರ್ಚೂನರ್ ಎಸ್‍ಯುವಿಯ ಪ್ರತಿಸ್ಪರ್ಧಿ ಜೀಪ್ ಮೆರಿಡಿಯನ್

ಇನ್ನು ಈ ಹೊಸ ಜೀಪ್ ಮೆರಿಡಿಯನ್ ಎಸ್‍ಯುವಿಯಲ್ಲಿ ಸುತ್ತುವ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಮತ್ತು ನೇರವಾದ ಟೈಲ್‌ಗೇಟ್ ಅನ್ನು ಹೊಂದಿದೆ. ಈ ಮೆರಿಡಿಯನ್ ಎಸ್‍ಯುವಿ ಸಿಂಗಲ್ ಮತ್ತು ಡ್ಯುಯಲ್ ಟೋನ್ ಬಣ್ಣಗಳಲ್ಲಿ ಲಭ್ಯವಿರಲಿದೆ.

ದಾಖಲೆ ಮಟ್ಟದಲ್ಲಿ ಮಾರಾಟ ಕಂಡ ಫಾರ್ಚೂನರ್ ಎಸ್‍ಯುವಿಯ ಪ್ರತಿಸ್ಪರ್ಧಿ ಜೀಪ್ ಮೆರಿಡಿಯನ್

ಇನ್ನು ಜೀಪ್ ಕಂಪಾಸ್ ಎಸ್‍ಯುವಿಗೆ ಹೋಲಿಸಿದರೆ, ಹೊಸ ಮೂರು-ಸಾಲಿನ ಮೆರಿಡಿಯನ್‌ ಎಸ್‍ಯುವಿಯು ಸುಮಾರು 364 ಎಂಎಂ ಉದ್ದ, 41 ಎಂಎಂ ಅಗಲ ಮತ್ತು 42 ಎಂಎಂ ಎತ್ತರವನ್ನು ಹೊಂದಿದೆ, ಈ ಹೊಸ ಮೆರಿಡಿಯನ್‌ ಎಸ್‌ಯುವಿಯು 2794 ಎಂಎಂ ವೀಲ್‌ಬೇಸ್‌ ಅನ್ನು ಹೊಂದಿದೆ.

ದಾಖಲೆ ಮಟ್ಟದಲ್ಲಿ ಮಾರಾಟ ಕಂಡ ಫಾರ್ಚೂನರ್ ಎಸ್‍ಯುವಿಯ ಪ್ರತಿಸ್ಪರ್ಧಿ ಜೀಪ್ ಮೆರಿಡಿಯನ್

ಈ ಜೀಪ್ ಮೆರಿಡಿಯನ್‌ ಎಸ್‍ಯುವಿಯಲ್ಲಿ 2.0 ಲೀಟರ್ ನಾಲ್ಕು-ಸಿಲಿಂಡರ್ ಮಲ್ಟಿಜೆಟ್ II ಡೀಸೆಲ್ ಎಂಜಿನ್‌ ಅನ್ನು ಹೊಂದಿರಲಿದೆ. ಈ ಎಂಜಿನ್ 168 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ದಾಖಲೆ ಮಟ್ಟದಲ್ಲಿ ಮಾರಾಟ ಕಂಡ ಫಾರ್ಚೂನರ್ ಎಸ್‍ಯುವಿಯ ಪ್ರತಿಸ್ಪರ್ಧಿ ಜೀಪ್ ಮೆರಿಡಿಯನ್

ಈ ಎಂಜಿನ್ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಜೋಡಿಸಲಾಗಿದೆ. ಟ್ಯೂನ್ ಮಾಡಲಾದ ಎಂಜಿನ್‌ನಲ್ಲಿ ಕಂಪನಿಯು ಮೈಲ್ಡ್-ಹೈಬ್ರಿಡ್ ಸಿಸ್ಟಂ ಅನ್ನು ಜೋಡಣೆ ಮಾಡಿದ್ದು, ಫ್ರಂಟ್ ವ್ವೀಲ್ ಡ್ರೈವ್ ಮಾದರಿಯಲ್ಲಿ ಮ್ಯಾನುವಲ್ ಮತ್ತು ಆಟೋ ಮ್ಯಾಟಿಕ್ ಮಾದರಿಗಳಿದ್ದರೆ ಆಲ್ ವ್ಹೀಲ್ ಡ್ರೈವ್ ಮಾದರಿಯಲ್ಲಿ ಕೇವಲ ಆಟೋಮ್ಯಾಟಿಕ್ ಮಾದರಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ.

ದಾಖಲೆ ಮಟ್ಟದಲ್ಲಿ ಮಾರಾಟ ಕಂಡ ಫಾರ್ಚೂನರ್ ಎಸ್‍ಯುವಿಯ ಪ್ರತಿಸ್ಪರ್ಧಿ ಜೀಪ್ ಮೆರಿಡಿಯನ್

ಜೀಪ್ ಮೆರಿಡಿಯನ್ ಮೂಲತಃ ಕಂಪಾಸ್‌ನ 7-ಸೀಟರುಗಳ ಆವೃತ್ತಿಯಾಗಿದೆ, ಇದು ಈಗಾಗಲೇ ಕಮಾಂಡರ್ ಆಗಿ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಆದರೆ ಭಾರತದಲ್ಲಿ ಇಂಡಿಯಾ-ಸ್ಪೆಕ್ ಮಾದರಿಯನ್ನು 'ಮೆರಿಡಿಯನ್' ಹೆಸರನ್ನು ನೀಡಲಾಗಿದೆ, ಏಕೆಂದರೆ ಮಹೀಂದ್ರಾ ಕಂಪನಿಯು ಭಾರತದಲ್ಲಿ 'ಕಮಾಂಡರ್' ಟ್ರೇಡ್‌ಮಾರ್ಕ್ ಹೊಂದಿದೆ. ಇದರಿಂದ ಮೆರಿಡಿಯನ್‌ ಹೆಸರಿನಲ್ಲಿ ಭಾರತದಲ್ಲಿ ಬಿಡುಗಡೆಯಾಗಿದೆ.

ದಾಖಲೆ ಮಟ್ಟದಲ್ಲಿ ಮಾರಾಟ ಕಂಡ ಫಾರ್ಚೂನರ್ ಎಸ್‍ಯುವಿಯ ಪ್ರತಿಸ್ಪರ್ಧಿ ಜೀಪ್ ಮೆರಿಡಿಯನ್

ಜೀಪ್ ಮೆರಿಡಿಯನ್ ಎಸ್‍ಯುವಿಯ ಒಳಭಾಗವು ಬ್ರೌನ್ ಥೀಮ್ ಅನ್ನು ಹೊಂದಿದ್ದು, 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದು ಕನೆಕ್ಟ್ ಟೆಕ್ನಾಲಜಿಯೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ಆಲ್-ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕನ್ಸೋಲ್, ಸನ್‌ರೂಫ್, ಲೆದರ್ ಅಪ್ಹೋಲ್ಸ್ಟರಿ, ಅಡ್ಜೆಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು, ಮೆಟಾಲಿಕ್ ಆಕ್ಸೆಂಟ್‌ಗಳೊಂದಿಗೆ ಲೇಯರ್ಡ್ ಡ್ಯಾಶ್‌ಬೋರ್ಡ್ ಹೊಂದಿದೆ.

ದಾಖಲೆ ಮಟ್ಟದಲ್ಲಿ ಮಾರಾಟ ಕಂಡ ಫಾರ್ಚೂನರ್ ಎಸ್‍ಯುವಿಯ ಪ್ರತಿಸ್ಪರ್ಧಿ ಜೀಪ್ ಮೆರಿಡಿಯನ್

ಇನ್ನು ಈ ಜೀಪ್ ಮೆರಿಡಿಯನ್ ಎಸ್‍ಯುವಿಯ ಆಫ್-ರೋಡ್ ಸಾಮರ್ಥ್ಯದ ವಿಡಿಯೋವನ್ನು ಕಳೆದ ಬಾರಿ ಬಿಡುಗಡೆಗೊಳಿಸಿತ್ತು. ಈ ವಿಡಿಯೋದಲ್ಲಿ ಬೆಟ್ಟ ಹತ್ತುವಿಕೆ, ವಿಭಿನ್ನ ಭೂಪ್ರದೇಶಗಳನ್ನು ಸಾಗುವುದನ್ನು ಪ್ರದರ್ಶಿಸಿದ್ದಾರೆ. ವಿವಿಧ ಆಫ್-ರೋಡ್ ಸವಾಲುಗಳನ್ನು ನಿರ್ವಹಿಸುವುದನ್ನು ವಿಡಿಯೋದಲ್ಲಿ ಪ್ರದರ್ಶಿಸಲಾಗಿದೆ. ಈ ಹೊಸ ಜೀಪ್ ಮೆರಿಡಿಯನ್ ಎಸ್‍ಯುವಿಯು ವಿಡಿಯೋದಲ್ಲಿ ಮೊದಲು ಕಡಿದಾದ ಇಳಿಜಾರಿನಲ್ಲಿ ಸುಲಭವಾಗಿ ಇಳಿಯುತ್ತದೆ. ಈ ಎಸ್‍ಯುವಿಯು ಉತ್ತಮ ಆಫ್-ರೋಡ್ ಸಾಮರ್ಥ್ಯ ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತದೆ.

ದಾಖಲೆ ಮಟ್ಟದಲ್ಲಿ ಮಾರಾಟ ಕಂಡ ಫಾರ್ಚೂನರ್ ಎಸ್‍ಯುವಿಯ ಪ್ರತಿಸ್ಪರ್ಧಿ ಜೀಪ್ ಮೆರಿಡಿಯನ್

ಹಾಗೆಯೇ ಈ ಎಸ್‍ಯುವಿಯಲ್ಲಿ 8 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, 360 ಡಿಗ್ರಿ ಕ್ಯಾಮೆರಾ, ಟ್ರಾಕ್ಷನ್ ಕಂಟ್ರೊಲ್, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಸೇರಿದಂತೆ 60ಕ್ಕೂ ಹೆಚ್ಚು ಸುರಕ್ಷಾ ಫೀಚರ್ಸ್ ನೀಡಲಾಗಿದೆ. ಈ ಜೀಪ್ ಮೆರಿಡಿಯನ್ ಭಾರತದಲ್ಲಿ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್ ಮತ್ತು ಮಹೀಂದ್ರಾ ಅಲ್ತುರಾಸ್ ಜಿ4 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Thursday, October 13, 2022, 11:25 [IST]
English summary
Jeep recorded over 500 units sales of meridian in september 2022 details
Read more on ಜೀಪ್ jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+