ಸೆಪ್ಟೆಂಬರ್ ತಿಂಗಳಿನಲ್ಲಿ 25 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಕಿಯಾ ಇಂಡಿಯಾ(Kia India) 2022ರ ಸೆಪ್ಟೆಂಬರ್ ತಿಂಗಳ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ವರದಿಗಳ ಪ್ರಕಾರ, ಕಿಯಾ ಇಂಡಿಯಾ ಕಂಪನಿಯು 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 25,857 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ತಿಂಗಳು ಕಿಯಾ ಕಾರುಗಳು ಭರ್ಜರಿ ಮಾರಾಟವನ್ನು ಕಂಡಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 25 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

2021ರ ಸೆಪ್ಟೆಂಬರ್ ತಿಂಗಳಿನಲ್ಲಿ ಕಿಯಾ ಇಂಡಿಯಾ ಕಂಪನಿಯು 14,441 ಯೂನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 79 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಕಿಯಾ ಇಂಡಿಯಾ 2022 ರಲ್ಲಿ ಮೂರನೇ ಬಾರಿಗೆ ಮಾರಾಟಕ್ಕಾಗಿ ಹೊಸ ಮಾಸಿಕ ಗರಿಷ್ಠವನ್ನು ತಲುಪಿದೆ. ಹಿಂದಿನ ಗರಿಷ್ಠವು 2022 ಜೂನ್ ತಿಂಗಳಿನಲ್ಲಿ 24,024 ಯುನಿಟ್‌ಗಳಾಗಿತ್ತು. ಇನ್ನು 2022ರ ಆಗಸ್ಟ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ತಿಂಗಳಿನಿಂದ ತಿಂಗಳ ಮಾರಾಟದಲ್ಲಿ ಶೇಕಡಾ 15.8 ರಷ್ಟು ಹೆಚ್ಚಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 25 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

FY2023ರ ಎರಡನೇ ತ್ರೈಮಾಸಿಕದಲ್ಲಿ ಮಾರಾಟವು ಸಹ ಗಮನಾರ್ಹ ಬೆಳವಣಿಗೆಯನ್ನು ಕಂಡಿತು ಮತ್ತು Q2 FY2022 ಕ್ಕಿಂತ ಶೇಕಡಾ 52 ರಷ್ಟು ಮಾರಾಟವಾಗಿದೆ.ವೈಯಕ್ತಿಕ ಪ್ರದರ್ಶನಗಳ ವಿಷಯದಲ್ಲಿ, 2022ರ ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಸೆಲ್ಟೋಸ್ 10,000 ಯೂನಿಟ್‌ಗಳ ಮಾರಾಟದೊಂದಿಗೆ ಕಿಯಾದ ಬೆಸ್ಟ್ ಸೆಲ್ಲರ್ ಆಗಿ ಉಳಿದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 25 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಈ ವರ್ಷದ ಆಗಸ್ಟ್‌ನಲ್ಲಿ ಸೆಲ್ಟೋಸ್ ಎಸ್‌ಯುವಿ ಭಾರತದಲ್ಲಿ 3 ಲಕ್ಷ ಯುನಿಟ್ ಮಾರಾಟದ ಮೈಲಿಗಲ್ಲನ್ನು ದಾಟಿತ್ತು. ಇನ್ನು ಕಳೆದ ತಿಂಗಳಿನಲ್ಲಿ ಸೊನೆಟ್ ಎಸ್‍ಯುವಿಯ 9,291 ಯುನಿಟ್‌ಗಳು ಮಾರಾಟವಾಗಿದೆ. ಕಾರೆನ್ಸ್ ಮಾರಾಟದಲ್ಲಿ ಸ್ವಲ್ಪ ಕುಸಿತವನ್ನು ವರದಿ ಮಾಡಿದೆ ಮತ್ತು 5,233 ಯುನಿಟ್‌ಗಳು ಹಿಂದಿನ ತಿಂಗಳಲ್ಲಿ 5,558 ಯುನಿಟ್‌ಗಳಿಗೆ ಮಾರಾಟವಾಗಿದೆ. ಕಿಯಾ ಕಾರ್ನಿವಲ್‌ನ ಮಾರಾಟವು 333 ಯುನಿಟ್‌ಗಳಷ್ಟಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 25 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

2022ರ ಕ್ಯಾಲೆಂಡರ್ ವರ್ಷಕ್ಕೆ ಅದರ ಮಾರಾಟವು 2021 ರಲ್ಲಿ ವರದಿ ಮಾಡಿದ ಒಟ್ಟಾರೆ ಮಾರಾಟವನ್ನು ಈಗಾಗಲೇ ದಾಟಿದೆ ಎಂದು ಕಿಯಾ ವರದಿ ಮಾಡಿದೆ. ಕಿಯಾ ಕಂಪನಿಯು ಕಳೆದ ವರ್ಷದ ಒಟ್ಟು ಮಾರಾಟ ಸಂಖ್ಯೆಯನ್ನು 2022 ರಲ್ಲಿ ಒಂಬತ್ತು ತಿಂಗಳಲ್ಲಿ ದಾಟಿದ್ದಾರೆ.

ಸೆಪ್ಟೆಂಬರ್ ತಿಂಗಳಿನಲ್ಲಿ 25 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಭಾರತದ ಕಂಪನಿಯ ಮೊದಲ ಮಾದರಿಯಾದ ಸೆಲ್ಟೋಸ್, ಇತ್ತೀಚೆಗೆ ದೇಶೀಯ ಮಾರುಕಟ್ಟೆಯಲ್ಲಿ 3 ಲಕ್ಷ ಯುನಿಟ್ ಮಾರಾಟದ ಗಡಿಯನ್ನು ದಾಟಿದೆ. ಭಾರತದಲ್ಲಿ ಸೆಲ್ಟೋಸ್ ಅನ್ನು ಬಿಡುಗಡೆ ಮಾಡಿ ಮೂರು ವರ್ಷಗಳನ್ನು ಪೂರೈಸಿದೆ. ಕಿಯಾ ಸೆಲ್ಟೋಸ್ ಭಾರತದಲ್ಲಿ ಅತ್ಯಂತ ಜನಪ್ರಿಯ ಕಿಯಾ ಉತ್ಪನ್ನವಾಗಿದ್ದು, ದೇಶದಲ್ಲಿ ಕಂಪನಿಯ ಒಟ್ಟು ಮಾರಾಟದ ಶೇ 60 ರಷ್ಟು ಭಾಗವನ್ನು ಹೊಂದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 25 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ದೇಶೀಯ ಮಾರುಕಟ್ಟೆಯಲ್ಲಿ ತನ್ನ ಪ್ರಯಾಣದ ಜೊತೆಗೆ, ಸೆಲ್ಟೋಸ್ ವಿದೇಶಿ ಮಾರುಕಟ್ಟೆಯಲ್ಲಿಯೂ ಸಹ ಬಲವಾದ ಬೇಡಿಕೆಯನ್ನು ಹೊಂದಿದೆ. ಕಿಯಾ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಫೇಸ್‌ಲಿಫ್ಟೆಡ್ ಸೆಲ್ಟೋಸ್ ಅನ್ನು ಪರಿಚಯಿಸಿದ್ದು, ಈ ವರ್ಷದ ಕೊನೆಯಲ್ಲಿ ಅಥವಾ 2023ರ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 25 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಇನ್ನು ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಮಾದರಿ ಸೆಲ್ಟೋಸ್ ಎಸ್‍ಯುವಿಯಾಗಿದೆ. ಈ ಸೆಲ್ಟೋಸ್ ಎಸ್‍ಯುವಿಯು ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಭಾರತೀಯ ಮಾರುಕಟ್ಟೆಯ ಗ್ರಾಹಕರ ಗಮನ ಸೆಳೆಯುವಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯು ಯಶ್ವಸಿಯಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 25 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಭಾರತದ ಗ್ರಾಹಕರು ಈ ಎಸ್‍‍ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫುಲ್ ಫಿದಾ ಆಗಿದ್ದಾರೆ. ಬಿಡುಗಡೆಯಾದಾಗಿನಿಂದ ಸೆಲ್ಟೋಸ್ ಎಸ್‍‍ಯುವಿ ಜನಪ್ರಿಯವಾಗುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ. ಮಾರಾಟದಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು.

ಸೆಪ್ಟೆಂಬರ್ ತಿಂಗಳಿನಲ್ಲಿ 25 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಸೆಲ್ಟೋಸ್ ಯಶಸ್ಸು ದೇಶದಲ್ಲಿ ದಕ್ಷಿಣ ಕೊರಿಯಾದ ವಾಹನ ತಯಾರಕರಾದ ಕಿಯಾಗೆ ಅಡಿಪಾಯ ಹಾಕಿತು. ಪ್ರಸ್ತುತ ಕಿಯಾ ಸೆಲ್ಟೋಸ್ ಎಸ್‍ಯುವಿಯನ್ನು ಹಲವು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನು ಕಿಯಾ ಇಂಡಿಯಾ ಕಂಪನಿಯು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಸೊನೆಟ್(Sonet) ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಸೆಲ್ಟೋಸ್, ಕಾರ್ನಿವಲ್ ಬಳಿಕ ಕಿಯಾ ಮೋಟಾರ್ಸ್ ಮೂರನೇ ಮಾದರಿಯಾಗಿ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಇದೀಗ ಕಿಯಾ ಸೊನೆಟ್ ಬಿಡುಗಡೆಯಾದ ಎರಡು ವರ್ಷದೊಳಗೆ ದೇಶೀಯ ಮಾರುಕಟ್ಟೆಯಲ್ಲಿ 1.5 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 25 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಇನ್ನು ಕಿಯಾ ಇಂಡಿಯಾ ಕಂಪನಿಯು ಭಾರತದಲ್ಲಿ ಕಾರು ಉತ್ಪಾದನೆ ಆರಂಭಿಸಿದ ಕೆಲವೇ ವರ್ಷಗಳಲ್ಲಿ ಹಲವಾರು ದಾಖಲೆಗಳಿಗೆ ಕಾರಣವಾಗಿದ್ದು, ಕಂಪನಿಯು ಇದೀಗ ಕಾರುಗಳ ರಫ್ತು ಪ್ರಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಕಾರು ಉತ್ಪಾದನಾ ಘಟಕಗಳನ್ನು ಹೊಂದಿರುವ ಕಿಯಾ ಕಂಪನಿಯು ಭಾರತದಿಂದ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ರಫ್ತು ಸೌಲಭ್ಯವನ್ನು ಹೊಂದಿದ್ದು, ಉತ್ಪಾದನೆ ಆರಂಭಿಸಿದ ಕೇವಲ 3 ವರ್ಷಗಳಲ್ಲಿ ಕಂಪನಿಯು ಇದುವರೆಗೆ ಸುಮಾರು 1.50 ಲಕ್ಷ ಯುನಿಟ್ ಕಾರುಗಳನ್ನು ರಫ್ತುಗೊಳಿಸಿದೆ. 2019ರ ಮಧ್ಯಂತರದಲ್ಲಿ ಆಂಧ್ರಪ್ರದೇಶದ ಪೆನುಕೊಂಡದಲ್ಲಿರುವ ಹೊಸ ಕಾರು ಉತ್ಪಾದನಾ ಘಟಕದಲ್ಲಿ ಉತ್ಪಾದನೆ ಆರಂಭಿಸಿದ ಕಿಯಾ ಕಂಪನಿಯು ಇದುವರೆಗೆ ಭಾರತದಿಂದ 1,50,395 ಯುನಿಟ್ ಕಾರುಗಳನ್ನು ರಫ್ತುಗೊಳಿಸಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 25 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕಿಯಾ ಕಂಪನಿಯು 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಆಗಸ್ಟ್ ತಿಂಗಳಿನಲ್ಲಿ 25,857 ಯುನಿಟ್‌ಗಳನ್ನು ಮಾರಾಟ ಮಾಡಿದೆ. , ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಕಾರುಗಳ ಮಾರಾಟವು ಹೆಚ್ಚಾಗುತ್ತಿದೆ. ಕಿಯಾ ಕಂಪನಿಯ ಜನಪ್ರಿಯ ಮಾದರಿಗಳ ಬೇಡಿಕೆ ಹೆಚ್ಚಾಗುತ್ತಿದೆ.

More from DriveSpark

Article Published On: Monday, October 3, 2022, 11:13 [IST]
English summary
Kia india 25857 units sold in september 2022 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+