ಮುಂಬರುವ ಹೊಸ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್ ಜೋಡಣೆ ಮಾಡಲಿದೆ ಕಿಯಾ

ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕಿಯಾ ಇಂಡಿಯಾ ಕಂಪನಿಯು ಮುಂಬರುವ ಹೊಸ ಕಾರುಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದು, ಪ್ರತಿ ಕಾರು ಮಾದರಿಯಲ್ಲೂ ಬೆಸ್ ವೆರಿಯೆಂಟ್‌ಗಳಿಗೂ ಅನ್ವಯಿಸುವ ಹಲವು ಸ್ಟ್ಯಾಂಡರ್ಡ್ ಫೀಚರ್ಸ್ ಜೋಡಣೆ ಮಾಡಲು ನಿರ್ಧರಿಸಿದೆ.

ಮುಂಬರುವ ಹೊಸ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್ ಜೋಡಣೆ ಮಾಡಲಿದೆ ಕಿಯಾ

ಕಿಯಾ ಇಂಡಿಯಾ ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದ ಕಾರೆನ್ಸ್ ಮಾದರಿಯಲ್ಲಿ ಈ ವಿಭಾಗದ ಕಾರುಗಳಲ್ಲಿಯೇ ಅತಿ ಹೆಚ್ಚು ಸುರಕ್ಷಾ ಫೀಚರ್ಸ್‌ಗಳನ್ನು ಜೋಡಣೆ ಮಾಡಿ ಬಿಡುಗಡೆ ಮಾಡಿದ್ದು, ಕಂಪನಿಯು ಶೀಘ್ರದಲ್ಲಿಯೇ 2022 ಸೆಲ್ಟೊಸ್ ಮತ್ತು ಸೊನೆಟ್ ಕಾರುಗಳಲ್ಲೂ ಹೊಸ ಸೇಫ್ಟಿ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಲು ನಿರ್ಧರಿಸಿದೆ.

ಮುಂಬರುವ ಹೊಸ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್ ಜೋಡಣೆ ಮಾಡಲಿದೆ ಕಿಯಾ

ಸೆಲ್ಟೊಸ್ ಮತ್ತು ಸೊನೆಟ್ ಮಾದರಿಯ ಹೈ ಎಂಡ್ ಮಾದರಿಯಲ್ಲಿ ಈಗಾಗಲೇ ಹಲವಾರು ಸುರಕ್ಷಾ ಫೀಚರ್ಸ್‌ಗಳಿದ್ದರೂ ಬೆಸ್ ಮಾದರಿಗಳಲ್ಲಿನ ಸುರಕ್ಷಾ ಫೀಚರ್ಸ್‌ಗಳನ್ನು ಉನ್ನತೀಕರಿಸುತ್ತಿದ್ದು, ಬೆಸ್ ಮಾದರಿಯಲ್ಲೂ 6 ಏರ್‌ಬ್ಯಾಗ್ ಜೋಡಣೆ ಮಾಡುತ್ತಿದೆ.

ಮುಂಬರುವ ಹೊಸ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್ ಜೋಡಣೆ ಮಾಡಲಿದೆ ಕಿಯಾ

ಕೇಂದ್ರ ಸರ್ಕಾರದ ಸುರಕ್ಷಾ ಮಾನದಂಡಗಳಿಗೆ ಅನುಗುಣವಾಗಿ ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗುತ್ತಿದ್ದರೂ ಹೆಚ್ಚುವರಿ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳನ್ನು ಜೋಡಣೆ ಮಾಡಲು ನಿರ್ಧರಿಸಿದ್ದು, ಕಂಪನಿಯು ಈಗಾಗಲೇ ಕಾರೆನ್ಸ್ ಮಾದರಿಯಲ್ಲಿ ಗರಿಷ್ಠ ಏರ್‌ಬ್ಯಾಗ್ ಜೋಡಣೆ ಮಾಡಿದೆ.

ಮುಂಬರುವ ಹೊಸ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್ ಜೋಡಣೆ ಮಾಡಲಿದೆ ಕಿಯಾ

ಮುಂಬರುವ ಸೊನೆಟ್ ಮತ್ತು ಸೆಲ್ಟೊಸ್ ಕಾರುಗಳ 2022ರ ಆವೃತ್ತಿಗಳಲ್ಲೂ ಹೊಸ ಸೇಫ್ಟಿ ಫೀಚರ್ಸ್ ಉನ್ನತೀಕರಣಗೊಳ್ಳಲಿದ್ದು, ಹೊಸ ಮಾದರಿಯು ಶೀಘ್ರದಲ್ಲಿಯೇ ಮಾರುಕಟ್ಟೆ ಪ್ರವೇಶಿಸಲಿವೆ.

ಮುಂಬರುವ ಹೊಸ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್ ಜೋಡಣೆ ಮಾಡಲಿದೆ ಕಿಯಾ

ಇದರೊಂದಿಗೆ ಕಿಯಾ ಕಂಪನಿಯು ಸೆಲ್ಟೊಸ್ ಡೀಸೆಲ್ ಐಎಂಟಿ ಗ್ರಾಹಕರ ಬೇಡಿಕೆಯೆಂತೆ ಹೊಸ ಸುರಕ್ಷಾ ಫೀಚರ್ಸ್‌ಗಳನ್ನು ಉನ್ನತೀಕರಿಸುವುದರ ಜೊತೆಗೆ ಗ್ರಾಹಕರ ಬೇಡಿಕೆ ಆಧರಿಸಿ ಮಧ್ಯಂತರ ಆವೃತ್ತಿಯಾದ ಹೆಚ್‌ಟಿಎಕ್ಸ್ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್ ಮಾದರಿಯನ್ನು ಸ್ಥಗಿತಗೊಳಿಸಲಾಗಿದೆ.

ಮುಂಬರುವ ಹೊಸ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್ ಜೋಡಣೆ ಮಾಡಲಿದೆ ಕಿಯಾ

ಹೆಚ್‌ಟಿಎಕ್ಸ್ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್ ಮಾದರಿಯನ್ನು ಸ್ಥಗಿತದ ನಂತರ ಕಂಪನಿಯು ಡೀಸೆಲ್ ಐಎಂಟಿ ವರ್ಷನ್ ಮಾದರಿಯನ್ನು ಉನ್ನತೀಕರಿಸುತ್ತಿದ್ದು, ಹೆಚ್‌ಟಿಎಕ್ಸ್ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್ ಸ್ಧಗಿತದ ನಂತರ ಡೀಸೆಲ್ ಆಟೋಮ್ಯಾಟಿಕ್ ಬಯಸುವ ಗ್ರಾಹಕರು ಈಗ ಟಾಪ್-ಸ್ಪೆಕ್ ಜಿಟಿಎಕ್ಸ್ ಪ್ಲಸ್ ಮಾದರಿಯನ್ನು ಆಯ್ದುಕೊಳ್ಳಬೇಕಾಗುತ್ತದೆ.

ಮುಂಬರುವ ಹೊಸ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್ ಜೋಡಣೆ ಮಾಡಲಿದೆ ಕಿಯಾ

ಸ್ಥಗಿತಗೊಳಿಸಲಾದ ಹೆಚ್‌ಟಿಎಕ್ಸ್ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್ ಮಾದರಿಯ ಎಕ್ಸ್‌ಶೋರೂಂ ಪ್ರಕಾರ ರೂ.14.25 ಲಕ್ಷ ಹೊಂದಿದ್ದರೆ ಟಾಪ್-ಸ್ಪೆಕ್ ಜಿಟಿಎಕ್ಸ್ ಪ್ಲಸ್ ಮಾದರಿಯು ಎಕ್ಸ್ ಶೋ ರೂಂ ಪ್ರಕಾರ ಬೆಲೆ ರೂ. 17.95 ಲಕ್ಷ ಆಗುತ್ತದೆ.

ಮುಂಬರುವ ಹೊಸ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್ ಜೋಡಣೆ ಮಾಡಲಿದೆ ಕಿಯಾ

ಹೀಗಾಗಿ ಈ ಎರಡು ಮಾದರಿಗಳ ನಡುವಿನ ಸ್ಥಾನ ತುಂಬುವ ಡೀಸೆಲ್ ಐಎಂಟಿ ಮಾದರಿಯು ಉತ್ತಮ ಬೆಲೆ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದ್ದು, ಇದೇ ಮಾದರಿಗಾಗಿ ಕಂಪನಿಯು ಇದೀಗ ಸ್ಟ್ಯಾಂಡರ್ಡ್ ಆಗಿ ಆರು ಏರ್‌ಬ್ಯಾಗ್‌ಗಳನ್ನು ಜೋಡಣೆ ಮಾಡುತ್ತಿದೆ.

ಮುಂಬರುವ ಹೊಸ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್ ಜೋಡಣೆ ಮಾಡಲಿದೆ ಕಿಯಾ

ಹೊಸ ಸುರಕ್ಷಾ ಫೀಚರ್ಸ್ ಹೊಂದಿರುವ ಡೀಸೆಲ್ ಐಎಂಟಿ ಮಾದರಿಯು ಶೀಘ್ರದಲ್ಲಿಯೇ ಖರೀದಿಗೆ ಲಭ್ಯವಾಗಲಿದ್ದು, ಸ್ಟ್ಯಾಂಡರ್ಡ್ ಮಾದರಿಗಳೊಂದಿಗೆ ಸೆಲ್ಟೊಸ್ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.9.95 ಲಕ್ಷ ಆರಂಭಿಕ ಬೆಲೆಯೊಂದಿಗೆ ಟಾಪ್ ಎಂಡ್ ಮಾದರಿಯು ರೂ. 18.19 ಲಕ್ಷ ಬೆಲೆ ಹೊಂದಿದೆ.

ಮುಂಬರುವ ಹೊಸ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್‌ ಬ್ಯಾಗ್ ಜೋಡಣೆ ಮಾಡಲಿದೆ ಕಿಯಾ

ಸೆಲ್ಟೊಸ್ ಮಾದರಿಯು ಪ್ರಮುಖವಾಗಿ ಹೆಚ್‌ಟಿ ಮತ್ತು ಜಿಟಿ ಎನ್ನುವ ಎರಡು ಮಾದರಿಗಳೊಂದಿಗೆ ವಿವಿಧ ಎಂಜಿನ್ ಆಯ್ಕೆಯೊಂದಿಗೆ ಬರೋಬ್ಬರಿ 18 ವೆರಿಯೆಂಟ್‌ಗಳನ್ನು ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಮೂರು ಎಂಜಿನ್ ಆಯ್ಕೆ ಹೊಂದಿದೆ.

ಮುಂಬರುವ ಹೊಸ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್‌ ಬ್ಯಾಗ್ ಜೋಡಣೆ ಮಾಡಲಿದೆ ಕಿಯಾ

ಭಾರತದಲ್ಲಿ ಕಿಯಾ ಮೋಟಾರ್ಸ್ ನಿರ್ಮಾಣದ ಮೂರನೇ ಕಾರು ಮಾದರಿಯಾಗಿ ಬಿಡುಗಡೆಯಾಗಿರುವ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಸಾಮಾನ್ಯ ಮಾದರಿಯ ಪೆಟ್ರೋಲ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ.

ಮುಂಬರುವ ಹೊಸ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್‌ ಬ್ಯಾಗ್ ಜೋಡಣೆ ಮಾಡಲಿದೆ ಕಿಯಾ

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಸೊನೆಟ್ ಕಾರು ಆರಂಭಿಕವಾಗಿ ರೂ. 6.95 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.69 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರನ್ನು ಜಿಟಿ-ಲೈನ್ ಮತ್ತು ಟೆಕ್-ಲೈನ್ ವೆರಿಯೆಂಟ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.

ಮುಂಬರುವ ಹೊಸ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್‌ ಬ್ಯಾಗ್ ಜೋಡಣೆ ಮಾಡಲಿದೆ ಕಿಯಾ

ಜಿಟಿ-ಲೈನ್ ಮಾದರಿಯಲ್ಲಿ ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್ ಮತ್ತು ಹೆಚ್‌ಟಿಎಕ್ಸ್ ಪ್ಲಸ್ ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದಲ್ಲಿ ಜಿಟಿ ಲೈನ್‌ನಲ್ಲಿ ಜಿಟಿಎಕ್ಸ್ ಪ್ಲಸ್ ವೆರಿಯೆಂಟ್ ಖರೀದಿಗೆ ಲಭ್ಯವಿದೆ. ಮುಂಬರುವ 2022ರ ಆವೃತ್ತಿಯಲ್ಲಿ ಎಂಜಿನ್ ಆಯ್ಕೆಯಲ್ಲಿ ಪ್ರಸ್ತುತ ಮಾದರಿಯಲ್ಲಿರುವಂತೆ ಮುಂದುವರಿಸಲಿದ್ದು, ಪ್ರಮುಖ ಪ್ರೀಮಿಯಂ ಫೀಚರ್ಸ್ ಜೊತೆ ಹೆಚ್ಚುವರಿ ಸೇಫ್ಟಿ ಫೀಚರ್ಸ್ ಜೋಡಣೆ ಮಾಡಲಾಗುತ್ತಿದೆ.

More from DriveSpark

Article Published On: Monday, February 21, 2022, 16:56 [IST]
English summary
Kia seltos and sonet suv to get 6 airbags as standard soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+