ಇವಿ ವಾಹನಗಳಿಗೆ ಸುಲಭ ಚಾರ್ಜಿಂಗ್ ಸೌಲಭ್ಯ ಒದಗಿಸಲು 'ಎನರ್ಜಿ ಕೆಫೆ' ಬ್ಯಾಟರಿ ವಿನಿಮಯ ಕೇಂದ್ರ ಆರಂಭ

ದುಬಾರಿ ಇಂಧನಗಳ ಪರಿಣಾಮ ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚವು ಸಹ ಸಾಕಷ್ಟು ಏರಿಕೆಯಾಗಿದ್ದು, ಈ ಹಿನ್ನಲೆಯಲ್ಲಿ ಹೊಸ ವಾಹನ ಖರೀದಿದಾರರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಇವಿ ವಾಹನಗಳಿಗೆ ಪೂರಕವಾಗಿ ಚಾರ್ಜಿಂಗ್ ನಿಲ್ದಾಣಗಳ ಸೌಲಭ್ಯವು ಸಹ ಸುಧಾರಣೆಗೊಳ್ಳುತ್ತಿದ್ದು, ಬ್ಯಾಟರಿ ವಿನಿಮಯ ಕೇಂದ್ರಗಳು ಕೂಡಾ ಹೆಚ್ಚುತ್ತಿವೆ.

ಇವಿ ವಾಹನಗಳಿಗೆ ಸುಲಭ ಚಾರ್ಜಿಂಗ್ ಸೌಲಭ್ಯ ಒದಗಿಸಲು 'ಎನರ್ಜಿ ಕೆಫೆ' ಬ್ಯಾಟರಿ ವಿನಿಮಯ ಕೇಂದ್ರ ಆರಂಭ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳ ಪರಿಣಾಮ ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚದಲ್ಲಿ ಕಳೆದ ಕೆಲ ತಿಂಗಳಿನಿಂದ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಸರ್ಕಾರದ ಜೊತೆಗೆ ವಿವಿಧ ಖಾಸಗಿ ಕಂಪನಿಗಳು ಸಹ ಇವಿ ವಾಹನ ಪೂರಕವಾದ ಯೋಜನೆಗಳನ್ನು ಜಾರಿಗೆ ತರುತ್ತಿವೆ.

ಇವಿ ವಾಹನಗಳಿಗೆ ಸುಲಭ ಚಾರ್ಜಿಂಗ್ ಸೌಲಭ್ಯ ಒದಗಿಸಲು 'ಎನರ್ಜಿ ಕೆಫೆ' ಬ್ಯಾಟರಿ ವಿನಿಮಯ ಕೇಂದ್ರ ಆರಂಭ

ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಹೊರತುಪಡಿಸಿ ವಿವಿಧ ರಾಜ್ಯ ಸರ್ಕಾರಗಳು ರಾಜ್ಯ ಮಟ್ಟದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇವಿ ವಾಹನಗಳಿಗೆ ಸುಲಭ ಚಾರ್ಜಿಂಗ್ ಸೌಲಭ್ಯ ಒದಗಿಸಲು 'ಎನರ್ಜಿ ಕೆಫೆ' ಬ್ಯಾಟರಿ ವಿನಿಮಯ ಕೇಂದ್ರ ಆರಂಭ

ಇವಿ ವಾಹನಗಳಿಗೆ ನೀಡಲಾಗುತ್ತಿರುವ ಸಬ್ಸಡಿ ಯೋಜನೆಗಳಿಂದಾಗಿ ಇವಿ ವಾಹನ ಮಾರಾಟವು ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಏರಿಕೆಯಾಗಿದ್ದು, ಇವಿ ವಾಹನಗಳಿಗೆ ಪೂರಕವಾಗಿ ಪ್ರಮುಖ ಕಂಪನಿಗಳು ಚಾರ್ಜಿಂಗ್ ನಿಲ್ದಾಣಗಳ ಸ್ಥಾಪನೆ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿವೆ.

ಇವಿ ವಾಹನಗಳಿಗೆ ಸುಲಭ ಚಾರ್ಜಿಂಗ್ ಸೌಲಭ್ಯ ಒದಗಿಸಲು 'ಎನರ್ಜಿ ಕೆಫೆ' ಬ್ಯಾಟರಿ ವಿನಿಮಯ ಕೇಂದ್ರ ಆರಂಭ

ಇವಿ ವಾಹನಗಳನ್ನು ಪ್ರೊತ್ಸಾಹಿಸಲು ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಸಹ ಚಾರ್ಜಿಂಗ್ ನಿಲ್ದಾಣಗಳ ಸ್ಥಾಪನೆಗಾಗಿ ಯೋಜನೆ ರೂಪಿಸಿದ್ದು, ಖಾಸಗಿ ಕಂಪನಿಗಳು ಕೂಡಾ ಹೆಚ್ಚಿನ ಮಟ್ಟದಲ್ಲಿ ಚಾರ್ಜಿಂಗ್ ನಿಲ್ದಾಣಗಳನ್ನು ಪಾಲುದಾರಿಕೆ ಯೋಜನೆಯಡಿ ಸ್ಥಾಪಿಸುತ್ತಿವೆ.

ಇವಿ ವಾಹನಗಳಿಗೆ ಸುಲಭ ಚಾರ್ಜಿಂಗ್ ಸೌಲಭ್ಯ ಒದಗಿಸಲು 'ಎನರ್ಜಿ ಕೆಫೆ' ಬ್ಯಾಟರಿ ವಿನಿಮಯ ಕೇಂದ್ರ ಆರಂಭ

ಇತ್ತೀಚೆಗೆ ಸಿಎನ್‌ಜಿ ಸಗಟು ಮಾರಾಟ ಸಂಸ್ಥೆಯಾದ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಮತ್ತು ಕೈನೆಟಿಕ್ ಗ್ರೀನ್ ಕಂಪನಿಗಳು ಸಹಭಾಗಿತ್ವ ಯೋಜನೆ ಅಡಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ತೆರೆದಿದ್ದು, ಆರಂಭಿಕವಾಗಿ ದೆಹಲಿಯಲ್ಲಿ ಹೊಸ ಬ್ಯಾಟರಿ ವಿನಿಯಮ ಕೇಂದ್ರ ಸ್ಥಾಪಿಸಿರುವ ಎರಡು ಕಂಪನಿಗಳು ಶೀಘ್ರದಲ್ಲಿ ದೇಶಾದ್ಯಂತ ನಗರಗಳಿಗೆ ವಿಸ್ತರಿಸುವ ಯೋಜನೆ ಹೊಂದಿವೆ.

ಇವಿ ವಾಹನಗಳಿಗೆ ಸುಲಭ ಚಾರ್ಜಿಂಗ್ ಸೌಲಭ್ಯ ಒದಗಿಸಲು 'ಎನರ್ಜಿ ಕೆಫೆ' ಬ್ಯಾಟರಿ ವಿನಿಮಯ ಕೇಂದ್ರ ಆರಂಭ

ಸಹಭಾಗಿತ್ವ ಯೋಜನೆ ಅಡಿಯಲ್ಲಿ ಸ್ಥಾಪಿಸಲಾದ ಬ್ಯಾಟರಿ ವಿನಿಮಯ ಕೇಂದ್ರಗಳನ್ನು 'ಎನರ್ಜಿ ಕೆಫೆ' ಎಂದು ಕರೆಯಾಗುತ್ತಿದ್ದು, ಎನರ್ಜಿ ಕೆಫೆಗಳನ್ನು ನಿರ್ವಹಣೆ ಮಾಡಲಿರುವ ಕೈನೆಟಿಕ್ ಗ್ರೀನ್ ಕಂಪನಿಯು ಇಂದ್ರಪ್ರ ಸಿಎನ್‌ಜಿ ಸೆಂಟರ್‌ಗಳಲ್ಲಿ ಬ್ಯಾಟರಿ ವಿನಿಮಯ ಸೌಲಭ್ಯಗಳನ್ನು ತೆರೆಯಲಿದೆ.

ಇವಿ ವಾಹನಗಳಿಗೆ ಸುಲಭ ಚಾರ್ಜಿಂಗ್ ಸೌಲಭ್ಯ ಒದಗಿಸಲು 'ಎನರ್ಜಿ ಕೆಫೆ' ಬ್ಯಾಟರಿ ವಿನಿಮಯ ಕೇಂದ್ರ ಆರಂಭ

ಎನರ್ಜಿ ಕೆಫೆ ಬ್ಯಾಟರಿ ವಿನಿಯಮ ಕೇಂದ್ರಗಳಲ್ಲಿ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನಗಳಿಗೆ ಬ್ಯಾಟರಿ ವಿನಿಮಯ ಸೌಲಭ್ಯವನ್ನು ಒದಗಿಸಲಿರುವ ಕೈನೆಟಿಕ್ ಗ್ರೀನ್ ಕಂಪನಿಯು, ಬ್ಯಾಟರಿ ವಿನಿಯಮ ಸೌಲಭ್ಯದ ಮಾಹಿತಿಗಾಗಿ ಕಂಪನಿಯು ಎನರ್ಜಿ ಕೆಫೆ ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಪ್ರಾರಂಭಿಸಲಾಗಿದೆ.

ಇವಿ ವಾಹನಗಳಿಗೆ ಸುಲಭ ಚಾರ್ಜಿಂಗ್ ಸೌಲಭ್ಯ ಒದಗಿಸಲು 'ಎನರ್ಜಿ ಕೆಫೆ' ಬ್ಯಾಟರಿ ವಿನಿಮಯ ಕೇಂದ್ರ ಆರಂಭ

ಎನರ್ಜಿ ಕೆಫೆ ಮೊಬೈಲ್ ಅಪ್ಲಿಕೇಶನ್ ಮೂಲಕ ಇವಿ ವಾಹನ ಮಾಲೀಕರು ಸುಲಭವಾಗಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಪತ್ತೆಹಚ್ಚಲು ಮತ್ತು ಬ್ಯಾಟರಿ ಲಭ್ಯತೆ, ಪಾವತಿ ಮಾಡಬಹುದಾಗಿದ್ದು, ಗ್ರಾಹಕರನ್ನು ಸುಲಭವಾಗಿ ತಲುಪಲು ಹೊಸ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಪೆಟ್ರೋಲ್ ಬಂಕ್, ಪಾವತಿ ಮಾಡುವ ಪಾರ್ಕಿಂಗ್‌ಗಳಲ್ಲಿ ಮತ್ತು ವಾಣಿಜ್ಯ ಕಟ್ಟಡಗಳ ಪಾರ್ಕಿಂಗ್ ಸ್ಥಳಗಳಲ್ಲಿ ಎನರ್ಜಿ ಕೆಫೆ ಆರಂಭವಾಗಲಿವೆ.

ಇವಿ ವಾಹನಗಳಿಗೆ ಸುಲಭ ಚಾರ್ಜಿಂಗ್ ಸೌಲಭ್ಯ ಒದಗಿಸಲು 'ಎನರ್ಜಿ ಕೆಫೆ' ಬ್ಯಾಟರಿ ವಿನಿಮಯ ಕೇಂದ್ರ ಆರಂಭ

ಬ್ಯಾಟರಿ ವಿನಿಮಯವು ವೇಗದ ಚಾರ್ಜಿಂಗ್ ತಂತ್ರಜ್ಞಾನದ ಅಗತ್ಯವಿಲ್ಲದೇ ಎಲೆಕ್ಟ್ರಿಕ್ ವಾಹನಗಳಿಗೆ ತ್ವರಿತವಾಗಿ ಚಾರ್ಜ್ ಮಾಡಲಾದ ಬ್ಯಾಟರಿ ಒದಗಿಸುವ ಮಾರ್ಗವಾಗಿದೆ. ಇವಿ ಬಳಕೆದಾರರು ಬ್ಯಾಟರಿ ವಿನಿಮಯ ಕೇಂದ್ರಗಳಿಗೆ ಅಗತ್ಯ ಸಂದರ್ಭದಲ್ಲಿ ಭೇಟಿ ನೀಡಬಹುದು ಮತ್ತು ಖಾಲಿಯಾದ ಬ್ಯಾಟರಿಯನ್ನು ಹಿಂದಿರುಗಿಸಿ ಚಾರ್ಜ್ ಮಾಡಲಾದ ಬ್ಯಾಟರಿಯೊಂದಿಗೆ ಬದಲಾಯಿಕೊಳ್ಳಬಹುದು.

ಇವಿ ವಾಹನಗಳಿಗೆ ಸುಲಭ ಚಾರ್ಜಿಂಗ್ ಸೌಲಭ್ಯ ಒದಗಿಸಲು 'ಎನರ್ಜಿ ಕೆಫೆ' ಬ್ಯಾಟರಿ ವಿನಿಮಯ ಕೇಂದ್ರ ಆರಂಭ

ಇದಕ್ಕಾಗಿ ಭಾರತದಲ್ಲಿ ಇಂಧನ ಆಧಾರಿತ ವಾಹನಗಳನ್ನು ಖಡಿತಗೊಳಿಸಲು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲು ಬ್ಯಾಟರಿ ವಿನಿಮಯ ನೀತಿಯನ್ನು ಜಾರಿಗೆ ತರಲಾಗುತ್ತಿದ್ದು, ಬ್ಯಾಟರಿ ವಿನಿಮಯ ತಂತ್ರಜ್ಞಾನವು ಬಳಕೆದಾರರಿಗೆ ತಮ್ಮ ವಾಹನಗಳನ್ನು ಕೆಲವೇ ನಿಮಿಷಗಳಲ್ಲಿ ರೀಚಾರ್ಜ್ ಮಾಡಲು ಮತ್ತು ಬ್ಯಾಟರಿ ರೇಂಜ್ ಆತಂಕವನ್ನು ತೊಡೆದುಹಾಕಲು ಸಾಕಷ್ಟು ಸಹಕಾರಿಯಾಗಲಿದೆ.

ಇವಿ ವಾಹನಗಳಿಗೆ ಸುಲಭ ಚಾರ್ಜಿಂಗ್ ಸೌಲಭ್ಯ ಒದಗಿಸಲು 'ಎನರ್ಜಿ ಕೆಫೆ' ಬ್ಯಾಟರಿ ವಿನಿಮಯ ಕೇಂದ್ರ ಆರಂಭ

ಬ್ಯಾಟರಿ ವಿನಿಮಯ ತಂತ್ರಜ್ಞಾನವನ್ನು ಸಾಮೂಹಿಕ ಅಳವಡಿಕೆಯಲ್ಲಿ ಹಲವಾರು ಸವಾಲುಗಳಿದ್ದು, ಹೊಸ ನೀತಿಯ ಮೂಲಕ ಭಾರತದಲ್ಲಿ ಇವಿ ಬಳಕೆಗೆ ಇರುವ ಸವಾಲುಗಳನ್ನು ಪರಿಹರಿಸಲು ಮತ್ತು ಇವಿ ವಾಹನ ಮಾರಾಟ ಹೆಚ್ಚಿಸಲು ಗುರಿಯನ್ನು ಹೊಂದಿದೆ.

ಇವಿ ವಾಹನಗಳಿಗೆ ಸುಲಭ ಚಾರ್ಜಿಂಗ್ ಸೌಲಭ್ಯ ಒದಗಿಸಲು 'ಎನರ್ಜಿ ಕೆಫೆ' ಬ್ಯಾಟರಿ ವಿನಿಮಯ ಕೇಂದ್ರ ಆರಂಭ

ಬ್ಯಾಟರಿ ವಿನಿಮಯ ನೀತಿಯು ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯು ತ್ವರಿತ ಗತಿಯಲ್ಲಿ ಬೆಳವಣಿಗೆ ಸಾಧಿಸಲು ಮತ್ತು ಭಾರತದಲ್ಲಿ ಇವಿ ವಾಹನಗಳನ್ನು ವೇಗವಾಗಿ ಅಳವಡಿಸಿಕೊಳ್ಳಲು ಸಹಾಯ ಮಾಡಲಿದೆ.

ಇವಿ ವಾಹನಗಳಿಗೆ ಸುಲಭ ಚಾರ್ಜಿಂಗ್ ಸೌಲಭ್ಯ ಒದಗಿಸಲು 'ಎನರ್ಜಿ ಕೆಫೆ' ಬ್ಯಾಟರಿ ವಿನಿಮಯ ಕೇಂದ್ರ ಆರಂಭ

ಮುಖ್ಯವಾಗಿ ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸಲಾದ ಬ್ಯಾಟರಿ ಪ್ಯಾಕ್ ಅನ್ನು ಸಾಮಾನ್ಯೀಕರಿಸಲು ಎಲ್ಲಾ ಇವಿ ವಾಹನ ತಯಾರಕರು ಒಂದೇ ಮಾನದಂಡವನ್ನು ಅನುಸರಿಸುವ ಅಗತ್ಯವಿದೆ. ಇದನ್ನು ಹೊಸ ಬ್ಯಾಟರಿ ವಿನಿಮಯ ನೀತಿಯಲ್ಲಿ ಉಲ್ಲೇಖಿಸಲಾಗಿದ್ದು, ಹೊಸ ನೀತಿಯಲ್ಲಿ ಮಾನದಂಡಗಳನ್ನು ಶೀಘ್ರದಲ್ಲಿಯೇ ಕಡ್ಡಾಯಗೊಳ್ಳಲಿವೆ.

Most Read Articles

Kannada
English summary
Kinetic green and igl launched battery swapping stations details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X