ಭಾರೀ ಬೆಲೆಯ ಲ್ಯಾಂಬೋರ್ಗಿನಿ ಹುರಾಕನ್ ಸ್ಟೆರಾಟೊ ಭಾರತದಲ್ಲಿ ಬಿಡುಗಡೆ

ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಹುರಾಕನ್ ಸ್ಟೆರಾಟೊ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಆಫ್-ರೋಡ್ ಕಾರು ಇದಾಗಿದ್ದು, ಬರೋಬ್ಬರಿ 4.61 ಕೋಟಿ ರೂ. (ಎಕ್ಸ್ ಶೋರೂಂ) ಬೆಲೆಯಿದೆ. 2023ರ ಮೂರನೇ ತ್ರೈಮಾಸಿಕದಲ್ಲಿ ಈ ಕಾರಿನ ವಿತರಣೆ ಆರಂಭವಾಗಲಿದೆ. ಹುರಾಕನ್ ಸ್ಟೆರಾಟೊವನ್ನು ನವೆಂಬರ್‌ನಲ್ಲಿ ಅನಾವರಣಗೊಳಿಸಲಾಗಿತ್ತು. ಜಾಗತಿಕವಾಗಿ 1,499 ಯುನಿಟ್ ಗಳಿಗೆ ಸೀಮಿತವಾಗಿದೆ.

ಲ್ಯಾಂಬೋರ್ಗಿನಿ ಹ್ಯುರಾಕನ್ ಸ್ಟೆರಾಟೊ ಹಲವಾರು ಹೊಸ ನವೀಕರಣಗಳನ್ನು ಪಡೆದುಕೊಳ್ಳುವ ಮೂಲಕ ಪಕ್ಕಾ ಆಫ್-ರೋಡ್ ಕಾರು ಆಗಿದೆ. ಲ್ಯಾಂಬೋರ್ಗಿನಿಯು ಫ್ರಂಟ್ ಮತ್ತು ರೇರ್ ಟ್ರ್ಯಾಕ್‌ಗಳನ್ನು ಕ್ರಮವಾಗಿ 30 mm ಮತ್ತು 34 mm ಹೆಚ್ಚಿಸಿದೆ. ಆದರೆ, ಹೆಚ್ಚಿನ ಸಸ್ಪೆನ್ಷನ್ ಟ್ರಾವೆಲ್ ಗೆ ಅನುಕೂಲವಾಗುವಂತೆ ಗ್ರೌಂಡ್ ಕ್ಲಿಯರೆನ್ಸ್ ಅನ್ನು 44 mm ಹೆಚ್ಚಿಸಲಾಗಿದೆ. ಇದು ಅಲ್ಯೂಮಿನಿಯಂ ಫ್ರಂಟ್ ಒಳಭಾಗದ ರಕ್ಷಣೆ ಹಾಗೂ ಗಟ್ಟಿಯಾದ ಸಿಲ್‌ಗಳನ್ನು ಪಡೆದುಕೊಂಡಿದೆ ಎಂದು ಹೇಳಬಹುದು.

ಭಾರೀ ಬೆಲೆಯ ಲ್ಯಾಂಬೋರ್ಗಿನಿ ಹುರಾಕನ್ ಸ್ಟೆರಾಟೊ ಭಾರತದಲ್ಲಿ ಬಿಡುಗಡೆ

ಹೊಸ ಹ್ಯುರಾಕನ್ ಸ್ಟೆರಾಟೊ, ಅಪ್ಡೇಟೆಡ್ ವೆಹಿಕಲ್ ಡೈನಾಮಿಕ್ ಪ್ಯಾಕ್ ಅಥವಾ LDVI (ಲ್ಯಾಂಬೋರ್ಗಿನಿ ಇಂಟಿಗ್ರೇಟೆಡ್ ವೆಹಿಕಲ್ ಡೈನಾಮಿಕ್ಸ್)ನೊಂದಿಗೆ ಬರುತ್ತದೆ. ಅದು ಈ ಸೂಪರ್‌ಕಾರ್‌ಗೆ ಸ್ಟ್ರಾಡಾ ಮತ್ತು ಸ್ಪೋರ್ಟ್ ಮೋಡ್‌ಗಳ ಜೊತೆಗೆ ಹೊಸ ರ‍್ಯಾಲಿ ಮೋಡ್ ಅನ್ನು ಪರಿಚಯಿಸುತ್ತಿದೆ. ಆಫ್-ರೋಡ್ ಡ್ರೈವ್ ಮಾಡಲು ರೆಡಿ ಮಾಡಿರುವ ಹ್ಯುರಾಕನ್ ಸ್ಟೆರಾಟೊ 19-ಇಂಚಿನ ಅಲಾಯ್ ವೀಲ್ ಗಳನ್ನು ಹೊಂದಿದೆ. ಕಸ್ಟಮ್ ಬ್ರಿಡ್ಜ್‌ಸ್ಟೋನ್ ಡ್ಯುಲರ್ AT002 ಟೈರ್‌ಗಳಿದ್ದು, ಮುಂಭಾಗದಲ್ಲಿ 235/40-R19 ಮತ್ತು ಹಿಂಭಾಗದಲ್ಲಿ 285/40-R19 ಅಳೆತೆಯನ್ನು ಹೊಂದಿವೆ. ಅಲ್ಲದೆ, ರನ್-ಫ್ಲಾಟ್ ತಂತ್ರಜ್ಞಾನದೊಂದಿಗೆ ಈ ಕಾರು ಮಾರುಕಟ್ಟೆಗೆ ಬಂದಿದೆ.

ಎಂಜಿನ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೇ ಲ್ಯಾಂಬೋರ್ಗಿನಿ ಹುರಾಕನ್ ಸ್ಟೆರಾಟೊ, ಸ್ಟ್ಯಾಂಡರ್ಡ್ ಹ್ಯುರಾಕನ್‌ ಕಾರಿನ ರೀತಿಯಲ್ಲೇ ಅದೇ 5.2-ಲೀಟರ್, ನ್ಯಾಚುರಲ್ ಆಸ್ಪಿರೇಟೆಡ್ ವಿ10 ಎಂಜಿನ್ ಅನ್ನು ಹೊಂದಿದೆ. ಇದು 610 hp ಪವರ್ ಮತ್ತು 560 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸಾಮಾನ್ಯ ಹುರಾಕನ್‌ಗೆ ಹೋಲಿಸಿದರೆ ಸ್ಟೆರಾಟೊ 30 hp ಪವರ್ ಮತ್ತು 40Nm ಟಾರ್ಕ್‌ ಕಡಿಮೆ ಉತ್ಪಾದಿಸುತ್ತದೆ. ಈ ಕಾರಿನ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಇದು ಎಲೆಕ್ಟ್ರಾನಿಕ್ ಕಂಟ್ರೋಲ್ ಆಲ್-ವೀಲ್-ಡ್ರೈವ್ ಸಿಸ್ಟಮ್ ಮತ್ತು ರೇರ್ ಮೆಕ್ಯಾನಿಕಲ್ ಸೆಲ್ಫ್-ಲಾಕಿಂಗ್ ಡಿಫರೆನ್ಷಿಯಲ್ ಮೂಲಕ ಎಲ್ಲಾ ನಾಲ್ಕು ವೀಲ್ ಗಳಿಗೆ ಪವರ್ ಅನ್ನು ವರ್ಗಾಯಿಸುತ್ತದೆ. ಹೊಸ ಹುರಾಕನ್ ಸ್ಟೆರಾಟೊ 3.4 ಸೆಕೆಂಡುಗಳಲ್ಲಿ 0-100km/h ತಲುಪುವ ಸಾಮರ್ಥ್ಯ ಹೊಂದಿದ್ದು, ಟಾಪ್ ಸ್ಪೀಡ್ 260kph ಇದೆ ಎಂದು ಲ್ಯಾಂಬೋರ್ಗಿನಿ ಕಂಪನಿ ಹೇಳಿಕೊಂಡಿದೆ. 0-100kph ತಲುಪುವ ಸಾಮರ್ಥ್ಯವು Huracan AWDಗಿಂತ ಅರ್ಧ ಸೆಕೆಂಡ್ ಕಡಿಮೆ ಇದೆ ಎಂದು ಹೇಳಬಹುದು.

ಹುರಾಕನ್ ಸ್ಟೆರಾಟೊ, ಒಂದು ಪೇರ್ ಸ್ಪಾಟ್ ಲ್ಯಾಂಪ್‌ಗಳ ಜೊತೆಗೆ ಗಟ್ಟಿಯಾದ ಸ್ಟೋನ್ ಗಾರ್ಡ್ ಅನ್ನು ಸಹ ಹೊಂದಿದೆ. ಇದರ ಪ್ರೊಫೈಲ್‌ನಲ್ಲಿ, ಇದು ದಪ್ಪನಾದ ಸೈಡ್ ಸ್ಕರ್ಟ್‌ಗಳು, ರೂಫ್ ರೈಲ್‌ಗಳು ಮತ್ತು ಬೋಲ್ಟ್-ಆನ್ ಒರಟಾದ ಫೆಂಡರ್ ಫ್ಲೇರ್‌ಗಳು ಇದೆ. ಆದರೆ ಹಿಂಭಾಗವು ಉತ್ತಮ ಡಿಪಾರ್ಚರ್ ಹೊಂದಿರುವ ಪರಿಷ್ಕೃತ ಡಿಫ್ಯೂಸರ್ ಅನ್ನು ಹೊಂದಿದೆ. ಇಟಾಲಿಯನ್ ಧ್ವಜದ ಬಣ್ಣಗಳನ್ನು ಹೋಲುವ ಹಸಿರು, ಬಿಳಿ ಹಾಗೂ ಕೆಂಪು ಬಣ್ಣವನ್ನು ಮಾರುಕಟ್ಟೆಗೆ ಬಿಡುಗಡೆಯಾಗಿರುವ ಹೊಸ ಹುರಾಕನ್ ಸ್ಟೆರಾಟೊ ಹೊಂದಿದೆ.

ಅಲ್ಲದೆ, ಈ ಹೊಸ ಕಾರು ಟಚ್‌ಸ್ಕ್ರೀನ್‌ಗಾಗಿ ನೂತನ ಗ್ರಾಫಿಕ್ಸ್‌ನೊಂದಿಗೆ ಅಲ್ಕಾಂಟರಾ ವರ್ಡೆ ಅಪ್ಹೋಲ್ಸ್ಟರಿಯನ್ನು ಹೊಂದಿದೆ. ಪಿಚ್ ಮತ್ತು ರೋಲ್ ಇಂಡಿಕೇಟರ್ ಡಿಜಿಟಲ್ ಇನ್ಕ್ಲಿನೋಮೀಟರ್, ಕಂಪಾಸ್, ಜಿಯೋಗ್ರಾಫಿಕ್ ಕೋ-ಆರ್ಡಿನೇಟ್ ಇಂಡಿಕೇಟರ್ ಮತ್ತು ಸ್ಟೀರಿಂಗ್ ಆಂಗಲ್ ಇಂಡಿಕೇಟರ್ ಜೊತೆಗೆ ವಿಶೇಷ ಆಫ್-ರೋಡ್ ವೈಶಿಷ್ಟ್ಯಗಳಿವೆ. ಸ್ಟೆರಾಟೊ ಕನೆಕ್ಟೆಡ್ ಟೆಲಿಮೆಟ್ರಿ ವ್ಯವಸ್ಥೆ ಹೊಂದಿದೆ. ಇದು ಚಾಲಕನು ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಲು ಜೊತೆಗೆ ಮೊಬೈಲ್ ಅಪ್ಲಿಕೇಶನ್ ಮೂಲಕ ಡೇಟಾವನ್ನು ವಿಶ್ಲೇಷಿಸಲು ಸಹಾಯ ಮಾಡುತ್ತದೆ.

ಲ್ಯಾಂಬೋರ್ಗಿನಿ ಹುರಾಕನ್ ಸ್ಟೆರಾಟೊ, ತನ್ನ ಹಲವು ಉತ್ತಮ ಫೀಚರ್ ಗಳಿಂದ ಸೂಪರ್‌ಕಾರ್ ವಿಭಾಗದಲ್ಲಿ ತನ್ನದೇ ಆದ ಪಾಬಲ್ಯವನ್ನು ಹೊಂದಿದ್ದು, ಅದಕ್ಕೆ ಸಾರಿ ಸಾಟಿ ಯಾವುದು ಇಲ್ಲ. ಜಾಗತಿಕವಾಗಿ, ಇದು ಪೋರ್ಷೆ 911 ಡಾಕರ್‌ಗೆ ಬಾರಿ ಮಟ್ಟದಲ್ಲಿ ಪೈಪೋಟಿ ನೀಡಲಾಗಿದೆ. ಸದ್ಯ ಭಾರತದಲ್ಲಿ ದುಬಾರಿ, ಐಷಾರಾಮಿಯಾಗಿರುವ ಈ ಹುರಾಕನ್ ಸ್ಟೆರಾಟೊ ಕಾರನ್ನು ಯಾವ ಸೆಲೆಬ್ರಿಟಿ ಖರೀದಿ ಮಾಡಲು ಬುಕಿಂಗ್ ಮಾಡಿದ್ದಾರೆ ಎಂಬುದರ ಬಗ್ಗೆ ಈವರೆಗೆ ಮಾಹಿತಿ ಇಲ್ಲ.

Article Published On: Friday, December 9, 2022, 16:11 [IST]
English summary
Lamborghini huracan sterato launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+