Just In
Don't Miss!
- News
ಲಾಲು ಹಿರಿಯ ಪುತ್ರ, ಸೊಸೆ ವಿಚ್ಛೇದನ ಸಮಾಲೋಚನೆಗೆ ಹಾಜರ್
- Sports
Ind vs Eng 5ನೇ ಟೆಸ್ಟ್: ಭಾರತದ ಆಡುವ 11ರ ಬಳಗದಲ್ಲಿ ಈ ಇಬ್ಬರು ವೇಗಿಗಳಿರಬೇಕು; ಅಜಿತ್ ಅಗರ್ಕರ್
- Movies
ಅಸ್ಸಾಂ ಪ್ರವಾಹ ಪೀಡಿತರ ನೆರವಿಗೆ ಬಂದ ಆಮಿರ್ ಖಾನ್: 25 ಲಕ್ಷ ರೂ. ದೇಣಿಗೆ!
- Finance
ಜೂ.28ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Lifestyle
ಆಷಾಢ ಮಾಸ 2022: ಆಷಾಢದಲ್ಲಿ ಗರ್ಭವತಿಯಾದರೆ ಅಶುಭ ಎನ್ನಲು ವೈಜ್ಞಾನಿಕ ಕಾರಣ ಇದೇ ನೋಡಿ
- Technology
Reliance Jio: ಮುಖೇಶ್ ಅಂಬಾನಿ ರಾಜೀನಾಮೆ; ಆಕಾಶ್ ಅಂಬಾನಿ ನೂತನ ಸಾರಥಿ!
- Education
Cochin Shipyard Limited Recruitment 2022 : 106 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ
ನಮ್ಮ ಬೆಂಗಳೂರಿನಲ್ಲಿ ಕೊನೆಯ ಹಂತದ 26 ಪೊಲೊ ಕಾರುಗಳನ್ನು ವಿತರಿಸಿದ ಫೋಕ್ಸ್‌ವ್ಯಾಗನ್
ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ಹೊಸ ಜನಪ್ರಿಯ ಹ್ಯಾಚ್‌ಬ್ಯಾಕ್ ಮಾದರಿಯಾದ ಪೊಲೊ ಆವೃತ್ತಿಯನ್ನು ಭಾರತದಲ್ಲಿ ಮಾರಾಟದಿಂದ ಸ್ಥಗಿತಗೊಳಿಸಲು ನಿರ್ಧಿರಿಸಿದ್ದು, ಕಂಪನಿಯು ಪೊಲೊ ಕಾರಿನ ಕೊನೆಯ ಹಂತದ ವಿತರಣೆಯನ್ನು ಪೂರ್ಣಗೊಳಿಸಿತು.

ನಮ್ಮ ಬೆಂಗಳೂರಿನ ಪ್ರಮುಖ ಫೋಕ್ಸ್‌ವ್ಯಾಗನ್ ಡೀಲರ್ಸ್ ಮೂಲಕ ಕಂಪನಿಯು ಒಂದೇ ದಿನದಲ್ಲಿ 26 ಯುನಿಟ್ ವಿತರಿಸುವ ಮೂಲಕ ಪೊಲೊ ಮಾರಾಟವನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದ್ದು, ಪೊಲೊ ಕಾರು ಮಾರಾಟ ಸ್ಥಗಿತಕ್ಕೂ ಮುನ್ನ ಕಂಪನಿಯು ವಿಶೇಷ ಬ್ಯಾಡ್ಜ್ ಹೊಂದಿದ್ದ ಲೆಜೆಂಡ್ ಎಡಿಷನ್ ಬಿಡುಗಡೆ ಮಾಡಿತ್ತು.

ಕೇವಲ 700 ಯುನಿಟ್ ಮಾತ್ರ ಉತ್ಪಾದನೆ ಮಾಡಲು ನಿರ್ಧರಿಸಿದ್ದ ಕಂಪನಿಯು ಮಾರಾಟದ ಮುಕ್ತಾಯದ ನಂತರ ಹೊಸ ಕಾರನ್ನು ಸ್ಥಗಿತಗೊಳಿಸಿದ್ದು, ವಿಶೇಷ ಮಾದರಿಯನ್ನು ಫೋಕ್ಸ್‌ವ್ಯಾಗನ್ ಕಂಪನಿಯು ಸೀಮಿತ ಅವಧಿಗಾಗಿ ಮಾತ್ರ ಬಿಡುಗಡೆ ಮಾಡಿತ್ತು.

ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿ ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಪೊಲೊ ಮೂಲಕ ಹಲವಾರು ದಾಖಲೆಗಳಿಗೆ ಕಾರಣವಾಗಿದ್ದು, ಭಾರತದಲ್ಲಿ ಪೊಲೊ ಮೊದಲ ಮಾದರಿಯನ್ನು ಬಿಡುಗಡೆ ಮಾಡಿ ಯಶಸ್ವಿ 12 ವರ್ಷ ಪೂರೈಸಿದ ಹಿನ್ನಲೆ ಕಂಪನಿಯು ಪೊಲೊ ಪ್ರಿಯರಿಗಾಗಿ ಲೆಜೆಂಡ್ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು.

ಹೊಸ ಪೊಲೊ ಲೆಜೆಂಡ್ ಮಾದರಿಯು ಜಿಟಿ ಟಿಎಸ್ಐ ಟಾಪ್ ಎಂಡ್ ಮಾದರಿಯನ್ನು ಆಧರಿಸಿ ಬಿಡುಗಡೆ ಮಾಡಿದ್ದ ಕಂಪನಿಯು ಹೊಸ ಆವೃತ್ತಿಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10.25 ಲಕ್ಷ ನಿಗದಿಪಡಿಸಿತ್ತು.

ಪೊಲೊ ಲೆಜೆಂಡ್ ಮಾದರಿಯಲ್ಲಿ ಕಂಪನಿಯು ಕೆಲವು ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ನೀಡಿದ್ದ ಕಂಪನಿಯು ಕಾರಿನ ಫೆಂಡರ್ ಮತ್ತು ಹಿಂಬದಿಯಲ್ಲಿ ಲೆಜೆಂಡ್ ಬೂಟ್ ಬ್ಯಾಜ್ಡ್ ಸೇರ್ಪಡೆಗೊಳಿಸಿತ್ತು. ಹಾಗೆಯೇ ಹೊಸ ಮಾದರಿಯಲ್ಲಿ ಸೈಡ್ ಬಾಡಿ ಗ್ರಾಫಿಕ್ಸ್, ಬ್ಲ್ಯಾಕ್ ಟ್ರಂಕ್ ಗಾರ್ನಿಶ್, ಬ್ಲ್ಯಾಕ್ ರೂಫ್ ಫಾಯ್ಲ್ ಸೌಲಭ್ಯಗಳು ಮತ್ತಷ್ಟು ಸ್ಪೋರ್ಟಿ ಲುಕ್ ನೀಡಿದ್ದು, ಸೀಮಿತ ಅವಧಿಗೆ ಲಭ್ಯವಿದ್ದ ಹೊಸ ಕಾರು ಇದೀಗ ಮಾರಾಟ ಪೂರ್ಣಗೊಂಡಿದೆ.

ಇನ್ನು ಫೋಕ್ಸ್‌ವ್ಯಾಗನ್ ಕಂಪನಿಯು ಪೊಲೊ ಹ್ಯಾಚ್‌ಬ್ಯಾಕ್ ಮಾದರಿಯೊಂದಿಗೆ ಜಾಗತಿಕವಾಗಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಭಾರತದಲ್ಲೂ ಉತ್ತಮ ಬೇಡಿಕೆ ಹೊಂದಿದ್ದ ಪೊಲೊ ಕಾರು ಇತ್ತೀಚೆಗೆ ಪ್ರತಿಸ್ಪರ್ಧಿ ಮಾದರಿಗಳ ಅಬ್ಬರದ ನಡುವೆ ಬೇಡಿಕೆಯಲ್ಲಿ ಹಿನ್ನಡೆ ಅನುಭವಿಸುತ್ತಿದೆ.

ಈ ನಡುವೆ ಪೊಲೊ ಹೊಸ ತಲೆಮಾರಿನ ಮಾದರಿಯನ್ನು ಫೋಕ್ಸ್‌ವ್ಯಾಗನ್ ಕಂಪನಿಯು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದರೂ ಭಾರತದಲ್ಲಿ ಹಳೆಯ ಮಾದರಿಯನ್ನೇ ಮಾರಾಟವನ್ನು ಮುಂದುವರಿಸಿ ಸ್ಥಗಿತಗೊಳಿಸುವ ಸುಳಿವು ನೀಡಿತ್ತು.

2010ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಪೊಲೊ ಹ್ಯಾಚ್‌ಬ್ಯಾಕ್ ಮಾದರಿಯು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸದ್ಯ 6ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, ಭಾರತದಲ್ಲಿ ಸದ್ಯ 5ನೇ ತಲೆಮಾರಿನ ವೈಶಿಷ್ಟ್ಯತೆ ಹೊಂದಿತ್ತು.

ಫೋಕ್ಸ್‌ವ್ಯಾಗನ್ ಕಂಪನಿಯು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಳೆದ ವರ್ಷವೇ ಪೊಲೊ ಹೊಸ ತಲೆಮಾರಿನ ಆವೃತ್ತಿಯನ್ನು ಉನ್ನತೀಕರಿಸಿದ್ದರೂ ಭಾರತದಲ್ಲಿ ಮಾತ್ರ ಹಳೆಯ ಆವೃತ್ತಿಯ ಮಾರಾಟವನ್ನೇ ಮುಂದುವರಿಸಿತ್ತು.

ಇದೀಗ ಅಂತಿಮವಾಗಿ ಪೊಲೊ ಮಾದರಿಯ ಮಾರಾಟವನ್ನು ಅಧಿಕೃತವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಇದಕ್ಕೂ ಮುನ್ನ ಕಂಪನಿಯು ಲೆಜೆಂಡ್ ಎಡಿಷನ್ ಮೂಲಕ ಪೊಲೊ ಖರೀದಿಗಾಗಿ ಕೊನೆಯ ಅವಕಾಶ ನೀಡಿತ್ತು.

ಬದಲಾಗುತ್ತಿರುವ ಮಾರುಕಟ್ಟೆ ಬೇಡಿಕೆ ಆಧರಿಸಿ ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿ ಎಸ್‌ಯುವಿ ಮತ್ತು ಸೆಡಾನ್ ಮಾದರಿಗಳ ಮೇಲೆ ಹೆಚ್ಚಿನ ಗಮನಹರಿಸಲು ನಿರ್ಧರಿಸಿದ್ದು, ಪೊಲೊ ಹೊಸ ತಲೆಮಾರಿನ ಆವೃತ್ತಿಯ ಬಿಡುಗಡೆಯು ಭಾರತದಲ್ಲಿ ಹೆಚ್ಚಿನ ಮಟ್ಟದ ಬೆಲೆ ಪಡೆದುಕೊಳ್ಳುವ ಕಾರಣಕ್ಕೆ ಬಿಡುಗಡೆ ಯೋಜನೆಯಿಂದ ಹಿಂದೆ ಸರಿಯಲಾಗಿದೆಯೆಂತೆ.

ಪ್ರತಿಸ್ಪರ್ಧಿ ಮಾದರಿಗಳಿಗೆ ಅನುಗುಣವಾಗಿ ಫೀಚರ್ಸ್, ಎಂಜಿನ್ ಆಯ್ಕೆಯೊಂದಿಗೆ ಸ್ಥಳೀಯಕರಣ ಮಾಡಿದರೂ ಸಹ ಹೊಸ ತಲೆಮಾರಿನ ಪೊಲೊ ಮಾದರಿಯೂ ದುಬಾರಿಯಾಗುತ್ತಿರುವ ಕಾರಣಕ್ಕೆ ಹೊಸ ಕಾರು ಬಿಡುಗಡೆ ಮಾಡಲಾಗುತ್ತಿಲ್ಲ ಎನ್ನಲಾಗಿದೆ.

ಪೊಲೊ ಮಾದರಿಯು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಇದರಲ್ಲಿ 1.0-ಲೀಟರ್ ಎಂಪಿಐ ನ್ಯಾಚುರಲಿ ಆಸ್ಪೆರೆಟೆಡ್ ಮತ್ತು ಹೆಚ್ಚು ಶಕ್ತಿಶಾಲಿಯುಳ್ಳ 1.0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ.

ಆರಂಭಿಕ ಪೊಲೊ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 74 ಬಿಎಚ್‌ಪಿ ಮತ್ತು 95 ಎನ್ಎಂ ಟಾರ್ಕ್ ಅನ್ನು ಉತ್ಪಾದನಾ ಗುಣಹೊಂದಿದ್ದರೆ ಎರಡನೆಯ ಎಂಜಿನ್ ಮಾದರಿಯಾದ ಟರ್ಬೊ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್‌ನೊಂದಿಗೆ 109 ಬಿಎಚ್‌ಪಿ ಮತ್ತು 174 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.