ಮಳೆಗೆ ಹಾನಿಯಾದ ಕಾರುಗಳಿಗೆ ಲೆಕ್ಸಸ್ ವಿಶೇಷ ಪ್ಯಾಕೇಜ್: ರಿಪೇರಿವರೆಗೆ ಕಂಪನಿಯಿಂದ ಸ್ಪೇರ್ ಕಾರ್

ಭಾರತೀಯ ಅಂಗಸಂಸ್ಥೆಯಾದ ಲೆಕ್ಸಸ್ ಇಂಡಿಯಾ ತನ್ನ ಗ್ರಾಹಕರ ಆರೈಕೆಗೆ ಮುಂದಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಕೆಟ್ಟುನಿಂತಿರುವ ಕಾರುಗಳಿಗಾಗಿ ಲೆಕ್ಸಸ್ ಇಂಡಿಯಾ ಲೆಕ್ಸಸ್ ಕೇರ್ಸ್ ಪ್ಯಾಕೇಜ್ ಅನ್ನು ಹೊರತಂದಿದೆ.

ಮಳೆಗೆ ಹಾನಿಯಾದ ಕಾರುಗಳಿಗೆ ಲೆಕ್ಸಸ್ ವಿಶೇಷ ಪ್ಯಾಕೇಜ್: ರಿಪೇರಿವರೆಗೆ ಕಂಪನಿಯಿಂದ ಸ್ಪೇರ್ ಕಾರ್

ಜಪಾನಿನ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲೆಕ್ಸಸ್ ಕಂಪನಿಯು ಮಳೆಯಿಂದ ಹಾನಿಗೊಳಗಾದ ಲೆಕ್ಸಸ್ ಕಾರುಗಳ ದುರಸ್ತಿಗಾಗಿ ವಿಶೇಷ ಬೆಂಬಲ ಮತ್ತು ದರಗಳನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಪ್ರವಾಹ ಪೀಡಿತ ಕಾರುಗಳಿಗೆ ವಿಶೇಷ ಆರೈಕೆ ಪ್ಯಾಕೇಜ್ ಅನ್ನು ಘೋಷಿಸಿದೆ.

ಮಳೆಗೆ ಹಾನಿಯಾದ ಕಾರುಗಳಿಗೆ ಲೆಕ್ಸಸ್ ವಿಶೇಷ ಪ್ಯಾಕೇಜ್: ರಿಪೇರಿವರೆಗೆ ಕಂಪನಿಯಿಂದ ಸ್ಪೇರ್ ಕಾರ್

ಲೆಕ್ಸಸ್ ಕೇರ್ಸ್ ಪ್ಯಾಕೇಜ್

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಾನಿಯಾದ ಲೆಕ್ಸಸ್ ಕಾರುಗಳ ಮಾಲೀಕರಿಗೆ ಕಂಪನಿಯು 'ಲೆಕ್ಸಸ್ ಕೇರ್ಸ್ ಪ್ಯಾಕೇಜ್' ಪ್ರಯೋಜನವನ್ನು ನೀಡುತ್ತಿದೆ. ಪ್ಯಾಕೇಜ್ ಅಡಿಯಲ್ಲಿ, ಲೆಕ್ಸಸ್ ಇಂಡಿಯಾ ಬೆಂಗಳೂರಿನಲ್ಲಿ ಮಳೆ, ಪ್ರವಾಹ ಅಥವಾ ನೀರಿನಲ್ಲಿ ಮುಳುಗಡೆಯಾಗಿ ಕೆಟ್ಟುನಿಟಂತಿರುವ ಲೆಕ್ಸಸ್ ಕಾರುಗಳ ದುರಸ್ತಿಗಾಗಿ ವಿಶೇಷ ಬೆಂಬಲ ಮತ್ತು ದರಗಳನ್ನು ಕಡಿಮೆ ಮಾಡಿದೆ.

ಮಳೆಗೆ ಹಾನಿಯಾದ ಕಾರುಗಳಿಗೆ ಲೆಕ್ಸಸ್ ವಿಶೇಷ ಪ್ಯಾಕೇಜ್: ರಿಪೇರಿವರೆಗೆ ಕಂಪನಿಯಿಂದ ಸ್ಪೇರ್ ಕಾರ್

ಲೆಕ್ಸಸ್ ಇಂಡಿಯಾ, ಗ್ರಾಹಕರ ರಿಪೇರಿ ಮಾಡಿದ ಲೆಕ್ಸಸ್ ಕಾರುಗಳು ಬರುವವರೆಗೆ ಅಥವಾ ಕಾರುಗಳು ತೀವ್ರವಾಗಿ ಹಾನಿಗೊಳಗಾಗಿ ಚಲಿಸಲಾಗದ ಸ್ಥಿತಿಯಲ್ಲಿದ್ದರೆ ಸ್ಪೇರ್ ಲೆಕ್ಸಸ್ ಕಾರನ್ನು ನೀಡುವುದಾಗಿ ಕಂಪನಿ ಹೇಳಿದೆ. ಈ ಮೂಲಕ ದುಃಖಕರ ಪರಿಸ್ಥಿತಿಯಲ್ಲಿರುವ ಮಾಲೀಕರಿಗೆ ಬೆನ್ನಲುಬಾಗಿ ನಿಂತು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಮಳೆಗೆ ಹಾನಿಯಾದ ಕಾರುಗಳಿಗೆ ಲೆಕ್ಸಸ್ ವಿಶೇಷ ಪ್ಯಾಕೇಜ್: ರಿಪೇರಿವರೆಗೆ ಕಂಪನಿಯಿಂದ ಸ್ಪೇರ್ ಕಾರ್

ಮಳೆ-ಬಾಧಿತ ಕಾರುಗಳು ಇತರ ಲೆಕ್ಸಸ್ ಕಾರುಗಳ ಸೇವೆಯ ಮೇಲೆ ಪರಿಣಾಮ ಬೀರದಂತೆ ಪಿಕ್-ಅಪ್ ಮತ್ತು ವೇಗವಾಗಿ ಡೆಲಿವರಿ ಸೇರಿದಂತೆ ಆದ್ಯತೆಯ ಸೇವೆಯನ್ನು ನೀಡಲಾಗುವುದು ಎಂದು ಕಂಪನಿ ಹೇಳಿದೆ. ಲೆಕ್ಸಸ್ ಕೇರ್ಸ್ ಪ್ಯಾಕೇಜ್, ಆಟೋ ಬಿಡಿ ಭಾಗಗಳು ಮತ್ತು ಗ್ರಾಹಕರು ಪಾವತಿಸುವ ಲೇಬರ್ ಚಾರ್ಜ್ ಮೇಲೆ ರಿಯಾಯಿತಿಯನ್ನು ಸಹ ನೀಡುತ್ತಿದೆ.

ಮಳೆಗೆ ಹಾನಿಯಾದ ಕಾರುಗಳಿಗೆ ಲೆಕ್ಸಸ್ ವಿಶೇಷ ಪ್ಯಾಕೇಜ್: ರಿಪೇರಿವರೆಗೆ ಕಂಪನಿಯಿಂದ ಸ್ಪೇರ್ ಕಾರ್

ಕಂಪನಿಯು ತನ್ನ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ವಿವರವಾದ ಆಂತರಿಕ ಮತ್ತು ಬಾಹ್ಯ ಆರೈಕೆ ಪ್ಯಾಕ್ ಅನ್ನು ಲಭ್ಯವಾಗುವಂತೆ ಮಾಡುತ್ತದೆ ಎಂದು ಹೇಳಿದೆ. Lexus ಮಾಲೀಕರು 24X7 ಲಭ್ಯವಿರುವ Lexus ಇಂಡಿಯಾ ರೋಡ್‌ಸೈಡ್ ಅಸಿಸ್ಟೆನ್ಸ್ ಮತ್ತು Lexus ಮಾಲೀಕರ ಡೆಸ್ಕ್ ಮೂಲಕ ಯಾವುದೇ ಸಹಾಯಕ್ಕಾಗಿ ಸಂಪರ್ಕಿಸಬಹುದು.

ಮಳೆಗೆ ಹಾನಿಯಾದ ಕಾರುಗಳಿಗೆ ಲೆಕ್ಸಸ್ ವಿಶೇಷ ಪ್ಯಾಕೇಜ್: ರಿಪೇರಿವರೆಗೆ ಕಂಪನಿಯಿಂದ ಸ್ಪೇರ್ ಕಾರ್

ಗ್ರಾಹಕರು ಸಹಾಯಕ್ಕಾಗಿ 1800-300-53987 ಅಥವಾ +91 7618779898 ನಂಬರ್‌ಗಳನ್ನು ಸಂಪರ್ಕಿಸಬಹುದು. ಈ ಕೊಡುಗೆಯ ಕುರಿತು ಪ್ರತಿಕ್ರಿಯಿಸಿದ ಲೆಕ್ಸಸ್ ಇಂಡಿಯಾದ ಅಧ್ಯಕ್ಷ ನವೀನ್ ಸೋನಿ, "ಲೆಕ್ಸಸ್ ಇಂಡಿಯಾವು ಜಪಾನಿನ ಆತಿಥ್ಯ - ಓಮೊಟೆನಾಶಿಯ ಮನೋಭಾವದಿಂದ ನಡೆಸಲ್ಪಟ್ಟಿದೆ.

ಮಳೆಗೆ ಹಾನಿಯಾದ ಕಾರುಗಳಿಗೆ ಲೆಕ್ಸಸ್ ವಿಶೇಷ ಪ್ಯಾಕೇಜ್: ರಿಪೇರಿವರೆಗೆ ಕಂಪನಿಯಿಂದ ಸ್ಪೇರ್ ಕಾರ್

ಗ್ರಾಹಕ ಸೇವೆಯಲ್ಲಿ ಉತ್ಕೃಷ್ಟತೆಯನ್ನು ತಲುಪಿಸಲು ಬದ್ಧವಾಗಿದೆ. ಈ ಕಷ್ಟದ ಸಮಯದಲ್ಲಿ ನಾವು ನಮ್ಮ ಗ್ರಾಹಕರ ಪರವಾಗಿ ನಿಲ್ಲುತ್ತೇವೆ. ಅವರು ಯಾವುದೇ ಚಲನಶೀಲತೆ ಸವಾಲುಗಳನ್ನು ಎದುರಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ತಮ್ಮ ಗ್ರಾಹಕರಿಗೆ ಭರವಸೆ ನೀಡಿದ್ದಾರೆ.

ಮಳೆಗೆ ಹಾನಿಯಾದ ಕಾರುಗಳಿಗೆ ಲೆಕ್ಸಸ್ ವಿಶೇಷ ಪ್ಯಾಕೇಜ್: ರಿಪೇರಿವರೆಗೆ ಕಂಪನಿಯಿಂದ ಸ್ಪೇರ್ ಕಾರ್

ಪ್ರವಾಹದ ಸಂದರ್ಭಗಳಲ್ಲಿ ಪಾಲಿಸಬೇಕಾದ ಸಲಹೆಗಳು

ರೋಗ ಬಂದ ನಂತರ ಚಿಕಿತ್ಸೆಗಾಗಿ ಪರದಾಡುವುದಕ್ಕಿಂತ ಅದನ್ನು ತಡೆಯುವುದು ಉತ್ತಮ ಎನ್ನಬಹುದು. ಇದರಿಂದ ಪ್ರವಾಹ ಮುನ್ಸೂಚಣೆ ಇದ್ದಲ್ಲಿ ನಿಮ್ಮ ಅಮೂಲ್ಯವಾದ ವಾಹನಗಳನ್ನು ಅವಕಾಶವಿದ್ದರೆ ಎತ್ತರದ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿರುವುದು ಖಾತ್ರಿಪಡಿಸಿಕೊಳ್ಳಿ.

ಮಳೆಗೆ ಹಾನಿಯಾದ ಕಾರುಗಳಿಗೆ ಲೆಕ್ಸಸ್ ವಿಶೇಷ ಪ್ಯಾಕೇಜ್: ರಿಪೇರಿವರೆಗೆ ಕಂಪನಿಯಿಂದ ಸ್ಪೇರ್ ಕಾರ್

ಅದರಲ್ಲೂ ನೀವು ಸೆಡಾನ್ ಅಥವಾ ಹ್ಯಾಚ್‌ಬ್ಯಾಕ್ ಅನ್ನು ಹೊಂದಿದ್ದರೆ ಅವುಗಳನ್ನು ವಿಶೇಷವಾಗಿ ಪ್ರವಾಹದ ನೀರಿನಿಂದ ರಕ್ಷಿಸಲು ವಿಶೇಷವಾಗಿ ಕಾಳಜಿ ಮಾಡಬೇಕಾಗುತ್ತದೆ. ಹೀಗಾಗಿ ನಿಮ್ಮ ವಾಹನಗಳನ್ನು ಎತ್ತರದ ಮೈದಾನದಲ್ಲಿ ಪಾರ್ಕ್ ಮಾಡುವ ಮೂಲಕ ಎಲೆಕ್ಟ್ರಾನಿಕ್ಸ್ ಮತ್ತು ಯಾಂತ್ರಿಕ ಭಾಗಗಳಿಗೆ ಆಗುವ ಹಾನಿಯಾಗುವ ಹೆಚ್ಚಿನ ಹಾನಿಯನ್ನು ಕಡಿಮೆ ಮಾಡಬಹುದು.

ಮಳೆಗೆ ಹಾನಿಯಾದ ಕಾರುಗಳಿಗೆ ಲೆಕ್ಸಸ್ ವಿಶೇಷ ಪ್ಯಾಕೇಜ್: ರಿಪೇರಿವರೆಗೆ ಕಂಪನಿಯಿಂದ ಸ್ಪೇರ್ ಕಾರ್

ಪ್ರವಾಹ ನೀರಿನಲ್ಲಿ ನಿಮ್ಮ ಕಾರು ಸಿಲುಕಿದ್ದರೆ ಕಾರಿನ ಎಲ್ಲಾ ನಾಲ್ಕು ಕಿಟಕಿಗಳನ್ನು ಸರಿಯಾಗಿ ಮುಚ್ಚಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಸಣ್ಣದೊಂದು ಅಂತರವೂ ಇರಬಾರದು. ಏಕೆಂದರೆ ಇದು ಕ್ಯಾಬಿನ್‌ಗೆ ನೀರು ನುಗ್ಗಲು ಕಾರಣವಾಗುತ್ತದೆ ಮತ್ತು ಅದು ನಿಮ್ಮ ಕಾರಿಗೆ ಹೆಚ್ಚಿನ ಹಾನಿಉಂಟುಮಾಡಬಹುದು.

ಮಳೆಗೆ ಹಾನಿಯಾದ ಕಾರುಗಳಿಗೆ ಲೆಕ್ಸಸ್ ವಿಶೇಷ ಪ್ಯಾಕೇಜ್: ರಿಪೇರಿವರೆಗೆ ಕಂಪನಿಯಿಂದ ಸ್ಪೇರ್ ಕಾರ್

ಒಂದು ವೇಳೆ ನಿಮ್ಮ ವಾಹನವು ಹೆಚ್ಚಿನ ಮಟ್ಟದ ಪ್ರವಾಹ ಅಥವಾ ದಟ್ಟವಾದ ಜಲಾವೃತದಲ್ಲಿ ಸಿಲುಕಿಕೊಂಡರೆ ನೀವು ಕೂಡಲೇ ಕಾರಿನ ಬ್ಯಾಟರಿಗಳನ್ನು ಮುಂಚಿತವಾಗಿ ಅನ್‌ಪ್ಲಗ್ ಮಾಡಲು ಮರೆಯಬೇಡಿ. ನಿಮ್ಮ ಕಾರು ನೀರಿನಲ್ಲೂ ಮುಳುಗಿದರೆ ಅದರ ಎಲ್ಲಾ ಎಲೆಕ್ಟ್ರಿಕಲ್‌ ಉಪಕರಣಗಳನ್ನು ಸಾಧ್ಯವಿದಷ್ಟು ರಕ್ಷಿಸಲು ಇದು ಸಹಾಯ ಮಾಡುತ್ತದೆ.

ಮಳೆಗೆ ಹಾನಿಯಾದ ಕಾರುಗಳಿಗೆ ಲೆಕ್ಸಸ್ ವಿಶೇಷ ಪ್ಯಾಕೇಜ್: ರಿಪೇರಿವರೆಗೆ ಕಂಪನಿಯಿಂದ ಸ್ಪೇರ್ ಕಾರ್

ಪ್ರವಾಹದಲ್ಲಿ ನಿಮ್ಮ ಕಾರನ್ನು ಹೊರತೆಗೆದ ನಂತರ ತಕ್ಷಣವೇ ಅದನ್ನು ಸ್ಟಾರ್ಟ್ ಮಾಡುವ ತಪ್ಪನ್ನು ಮಾಡಬೇಡಿ. ಕಾರಿನ ಎಲ್ಲಾ ಯಾಂತ್ರಿಕ ಭಾಗಗಳ ಆಂತರಿಕ ಭಾಗಗಳು ಸಂಪೂರ್ಣವಾಗಿ ಒಣಗಿವೆ ಎಂದು ಖಚಿತಪಡಿಸಿಕೊಳ್ಳಬೇಕಾಗುತ್ತದೆ.

ಮಳೆಗೆ ಹಾನಿಯಾದ ಕಾರುಗಳಿಗೆ ಲೆಕ್ಸಸ್ ವಿಶೇಷ ಪ್ಯಾಕೇಜ್: ರಿಪೇರಿವರೆಗೆ ಕಂಪನಿಯಿಂದ ಸ್ಪೇರ್ ಕಾರ್

ಕೊಳಚೆ ನೀರಿನಲ್ಲಿ ಮುಳುಗಿರುವುದರಿಂದ ನಿಮ್ಮ ಕಾರಿನ ಬ್ರೇಕ್‌ಗಳಲ್ಲಿ ಮಣ್ಣು ಮತ್ತು ಇತರೆ ಕೊಳಚೆ ವಸ್ತುಗಳು ಸಿಲುಕಿಕೊಂಡಿರುತ್ತದೆ. ಅವು ಸರಿಯಾಗಿ ಕಾರ್ಯನಿರ್ವಹಿಸಲು ಬ್ರೇಕಿಂಗ್ ವಿಭಾಗವನ್ನು ಶುಚಿಗೊಳಿಸಿ ನಂತರ ಸಂಪೂರ್ಣವಾಗಿ ಒಣಗಬೇಕಾಗುತ್ತದೆ.

ಮಳೆಗೆ ಹಾನಿಯಾದ ಕಾರುಗಳಿಗೆ ಲೆಕ್ಸಸ್ ವಿಶೇಷ ಪ್ಯಾಕೇಜ್: ರಿಪೇರಿವರೆಗೆ ಕಂಪನಿಯಿಂದ ಸ್ಪೇರ್ ಕಾರ್

ಡ್ರೈವ್‌ ಸ್ಪಾರ್ಕ್ ಅಭಿಪ್ರಾಯ

ಪ್ರವಾಹದ ವೇಳೆ ನಿಮ್ಮ ಕಾರಿನ ಏರ್ ಫಿಲ್ಟರ್ ಕೂಡಾ ಕೊಳಚೆ ನೀರಿನಲ್ಲಿ ನೆನೆದಿರುತ್ತದೆ. ಹೀಗಾಗಿ ಅವಶ್ಯವಾಗಿ ಅದನ್ನು ಬದಲಿ ಮಾಡಬೇಕಾಗುತ್ತದೆ. ವಿಫಲವಾದರೆ ಅದು ತೇವಾಂಶವನ್ನು ದಹನ ಕೊಠಡಿಯೊಳಗೆ ಬಿಡುವ ಮೂಲಕ ಸಂಪೂರ್ಣ ದಹನ ಪ್ರಕ್ರಿಯೆಗೆ ಅಡ್ಡಿಪಡಿಸುತ್ತದೆ. ಆದ್ದರಿಂದ ಹಳೆಯ ಫಿಲ್ಟರ್ ಅನ್ನು ಬದಲಾಯಿಸುವುದು ಮತ್ತು ಹೊಸದನ್ನು ಬಳಸುವುದು ಅವಶ್ಯಕವಾಗಿರುತ್ತದೆ.

Most Read Articles

Kannada
English summary
Lexus Special Package for Rain Damaged Cars Spare car from company till repair
Story first published: Thursday, September 8, 2022, 12:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X