ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ 2022ರ ಮಾರುತಿ ಆಲ್ಟೋ ಕಾರು
ದೇಶದ ಅತಿ ದೊಡ್ಡ ಮತ್ತು ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ಸರಣಿಯಲ್ಲಿ ಹಲವು ವೈವಿಧ್ಯಮಯ ಮಾದರಿಗಳನ್ನು ಹೊಂದಿದೆ. ಮಾರುತಿ ಸುಜುಕಿ ಕಂಪನಿಯ ಹಲವು ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಗಳಿಸಿದೆ.

ಮಾರುತಿ ಸುಜುಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲಿವೆ. ಇದರಲ್ಲಿ ಫೇಸ್‌ಲಿಫ್ಟ್‌ಗಳು, ಹೊಸ ತಲೆಮಾರಿನ ಆವೃತ್ತಿಗಳು ಮತ್ತು ಹೊಸ ಕಾರುಗಳನ್ನು ಒಳಗೊಂಡಿದೆ. ಮಾರುತಿ ಸುಜುಕಿಯು ಹೊಸ ಬಲೆನೊ, ಹೊಸ ಬ್ರೆಝಾ, ನವೀಕರಿಸಿದ ವ್ಯಾಗನ್‌ಆರ್ ಮತ್ತು ಎರ್ಟಿಗಾ ಮತ್ತು ಎಲ್ಲಾ ಹೊಸ ಮಧ್ಯಮ ಗಾತ್ರದ ಎಸ್‌ಯುವಿ ಸೇರಿದಂತೆ ವ್ಯಾಪಕ ಶ್ರೇಣಿಯ ಹೊಸ ಮಾದರಿಗಳನ್ನು ಸಿದ್ಧಪಡಿಸುತ್ತಿದೆ. ಈ ಸಾಲಿನ ಜನಪ್ರಿಯ ಆಲ್ಟೋ ಕಾರು ಕೂಡ ಒಳಗೊಂಡಿದೆ, ಕಂಪನಿಯು ಹೊಸ ತಲೆಮಾರಿನ ಆಲ್ಟೊ ಪ್ರವೇಶ ಮಟ್ಟದ ಹ್ಯಾಚ್‌ಬ್ಯಾಕ್ ಅನ್ನು ಸಹ ಪರೀಕ್ಷಿಸುತ್ತಿದೆ.

ಹೊಸ ಮಾರುತಿ ಆಲ್ಟೋ ಎಲ್ಲಾ-ಹೊಸ ವಿನ್ಯಾಸ ಮತ್ತು ಯಾಂತ್ರಿಕ ಬದಲಾವಣೆಗಳೊಂದಿಗೆ ನವೀಕರಿಸಿದ ಒಳಾಂಗಣದೊಂದಿಗೆ ಬರಲಿದೆ.ನ್ಯೂ ಜನರೇಷನ್ ಆಲ್ಟೋ ಹ್ಯಾಚ್‌ಬ್ಯಾಕ್ ಹಗುರವಾದ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಅದು ಎಸ್-ಪ್ರೆಸ್ಸೊ, ಹೊಸ ಸೆಲೆರಿಯೊ ಮತ್ತು ವ್ಯಾಗನ್‌ಆರ್ ಅನ್ನು ಆಧಾರವಾಗಿಸಲಿದೆ. ಸುಧಾರಿತ ಸುರಕ್ಷತೆಗಾಗಿ ಉತ್ತಮ ಗುಣಮಟ್ಟದ ಸ್ಟೀಲ್‌ನೊಂದಿಗೆ ಪ್ಲಾಟ್‌ಫಾರ್ಮ್ ಅನ್ನು ಮಾರ್ಪಡಿಸಲಾಗುತ್ತದೆ.

ಹೊಸ ಮಾರುತಿ ಆಲ್ಟೋ ಗಾತ್ರದಲ್ಲಿ ಸ್ವಲ್ಪ ದೊಡ್ದದಿರುತ್ತದೆ, ಏಕೆಂದರೆ ಇದು ಹೊರಹೋಗುವ ಮಾದರಿಗಿಂತ ಉದ್ದ, ಅಗಲ ಮತ್ತು ಎತ್ತರವಾಗಿ ಕಾಣುತ್ತದೆ. ಹೊಸ ಮಾದರಿಯು ಇತ್ತೀಚಿನ ಸೆಲೆರಿಯೊದೊಂದಿಗೆ ಕೆಲವು ವಿನ್ಯಾಸ ಹೋಲಿಕೆಗಳೊಂದಿಗೆ ಟಾಲ್ ಬಾಯ್ ಹ್ಯಾಚ್‌ಬ್ಯಾಕ್‌ನಂತೆ ಕಾಣುತ್ತದೆ.

ಹೊಸ ಆಲ್ಟೋದ ಮುಂಭಾಗದ ಫಾಸಿಕ ಸಂಪೂರ್ಣವಾಗಿ ಮರು-ವಿನ್ಯಾಸಗೊಳಿಸಲಾಗುವುದು, ದೊಡ್ಡ ಗ್ರಿಲ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ, ಸ್ವೆಪ್ಟ್‌ಬ್ಯಾಕ್ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿರುತ್ತದೆ. ಹೊಸ ಮಾದರಿಯು ಸ್ಕಪಲಟಡ್ ಬಾನೆಟ್ ಅನ್ನು ಹೊಂದಿರುತ್ತದೆ,

ಆದರೆ ಮುಂಭಾಗವು ಚಪ್ಪಟೆಯಾಗಿ ಮತ್ತು ಪ್ರಸ್ತುತ ಕಾರಿಗಿಂತ ದೊಡ್ಡದಾಗಿ ಕಾಣುತ್ತದೆ. ಸೈಡ್ ಪ್ರೊಫೈಲ್ ಸರಳವಾಗಿ ಕಾಣುತ್ತದೆ ಮತ್ತು ಇದು ಹೊರಹೋಗುವ ಮಾದರಿಗಿಂತ ಗಮನಾರ್ಹವಾಗಿ ಎತ್ತರವಾಗಿ ಕಾಣುತ್ತದೆ. ಹಿಂಭಾಗದ ವಿನ್ಯಾಸವನ್ನು ಸಹ ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಇದು ಒಂದು ಜೋಡಿ ಆಯತಾಕಾರದ ಹೆಡ್‌ಲ್ಯಾಂಪ್‌ಗಳು, ಹೊಸದಾಗಿ ವಿನ್ಯಾಸಗೊಳಿಸಲಾದ ಬಂಪರ್ ಮತ್ತು ದೊಡ್ಡದಾದ ಟೈಲ್‌ಗೇಟ್ ಅನ್ನು ಪಡೆಯುತ್ತದೆ.

ಈ ಹೊಸ ಮಾರುತಿ ಆಲ್ಟೋ ಕ್ಯಾಬಿನ್ ಒಳಗೆ ದೊಡ್ಡ ಬದಲಾವಣೆಗಳೊಂದಿಗೆ ಬರುವ ಸಾಧ್ಯತೆಯಿದೆ. ಇದು ಎಲ್ಲಾ ಹೊಸ ಡ್ಯಾಶ್‌ಬೋರ್ಡ್ ಮತ್ತು ಸೆಂಟ್ರಲ್ ಕನ್ಸೋಲ್ ವಿನ್ಯಾಸದೊಂದಿಗೆ ಬರುವ ನಿರೀಕ್ಷೆಯಿದೆ. ಹ್ಯಾಚ್‌ಬ್ಯಾಕ್ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಕೀಲೆಸ್ ಎಂಟ್ರಿ, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್ ಮತ್ತು ಇತರ ಆಧುನಿಕ ವೈಶಿಷ್ಟ್ಯಗಳನ್ನು ಪಡೆಯುವ ಸಾಧ್ಯತೆಯಿದೆ.

ನ್ಯೂ ಜನರೇಷನ್ ಮಾರುತಿ ಆಲ್ಟೋ ಕಾರು ಹೊಸ K10C Dualjet 1.0-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಐಡಲ್ ಸ್ಟಾರ್ಟ್/ಸ್ಟಾಪ್ ಸಿಸ್ಟಂನೊಂದಿಗೆ ಪಡೆಯುವ ಸಾಧ್ಯತೆಯಿದೆ. ಈ ಎಂಜಿನ್ 67 ಬಿಹೆಚ್‌ಪಿ ಪವರ್ ಮತ್ತು 89 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದರೊಂದಿಗೆ 47 ಬಿಹೆಚ್‍ಪಿ ಪವರ್ ಮತ್ತು 69 ಎನ್ಎಂ ಟಾರ್ಕ್ ಉತ್ತಮವಾದ 796cc, 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಬಹುದು. AMT ಗೇರ್‌ಬಾಕ್ಸ್‌ಗಳೆರಡೂ ಕೊಡುಗೆಯಲ್ಲಿರುತ್ತವೆ. ಇನ್ನು ಹ್ಯಾಚ್‌ಬ್ಯಾಕ್ ಸಿಎನ್‌ಜಿ ಆವೃತ್ತಿಯೊಂದಿಗೆ ಬರುವ ಸಾಧ್ಯತೆಯಿದೆ.

ನ್ಯೂ ಜನರೇಷನ್ ಮಾರುತಿ ಆಲ್ಟೋ ಅದರ ಪರೀಕ್ಷಾ ಹಂತದಲ್ಲಿದೆ ಮತ್ತು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಮೊದಲು ಕೆಲವು ತಿಂಗಳುಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ ಹೊಸ ಮಾರುತಿ ಆಲ್ಟೋ ಕಾರನ್ನು ದೀಪಾವಳಿ ಹಬ್ಬದ ಸಮಯದಲ್ಲಿ ಬಿಡುಗಡೆ ಮಾಡಲಾಗುವುದು.

ಇನ್ನು ಮಾರುತಿ ಸುಜುಕಿ ಇಂಡಿಯಾ 2022ರ ಜನವರಿ ತಿಂಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು 154,379 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ಇನ್ನು 2021ರ ಜನವರಿ ತಿಂಗಳಿನಲ್ಲಿ 160,752 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದರು. ಇಂಡೋ-ಜಪಾನೀಸ್ ಕಾರು ತಯಾರಕರು ವರ್ಷದಿಂದ ವರ್ಷಕ್ಕೆ ಸುಮಾರು ಶೇ.4 ರಷ್ಟು ಕುಸಿತವನ್ನು ಕಂಡಿದ್ದಾರೆ. ಮಾರುತಿ ಸುಜುಕಿ ಕಂಪನಿಯು 2021ರ ಡಿಸೆಂಬರ್ ತಿಂಗಳಿನಲ್ಲಿ 153,149 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದಾರೆ. ಇದನ್ನು ಮಾರಾಟದಲ್ಲಿನ ತಿಂಗಳ-ತಿಂಗಳ ವ್ಯತ್ಯಾಸವು ಸಮತಟ್ಟಾಗಿದೆ. ಎಲೆಕ್ಟ್ರಾನಿಕ್ ಯುನಿಟ್ ಗಳ ಕೊರತೆಯು ವಾಹನಗಳ ಉತ್ಪಾದನೆಯ ಮೇಲೆ ಸಣ್ಣ ಪರಿಣಾಮ ಬೀರಿತು.

ಮುಖ್ಯವಾಗಿ ದೇಶೀಯ ಮಾರುಕಟ್ಟೆಯ ಮಾರಾಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಮಾರುತಿ ಸುಜುಕಿ ಹೇಳಿದೆ. ಇದರಿಂದ ಮಾರುತಿ ಸುಜುಕಿ ಕಾರುಗಳ ದೀರ್ಘಾವಧಿಯ ಕಾಯುವಿಕೆ ಅವಧಿಯು ಗ್ರಾಹಕರ ಭಾವನೆಗಳನ್ನು ತಡೆಯುತ್ತಿದೆ ಎಂಬ ಅಂಶವನ್ನು ನಾವು ಪರಿಗಣಿಸಬೇಕು. ಹೆಚ್ಚುವರಿಯಾಗಿ, ಕಂಪನಿಯು ಟಾಟಾ ಮೋಟಾರ್ಸ್‌ನಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ, 2022ರಲ್ಲಿ ಟಾಟಾ 51 ಪ್ರತಿಶತದಷ್ಟು ಬೆಳವಣಿಗೆಯೊಂದಿಗೆ ತನ್ನ ಅತ್ಯಧಿಕ ಪ್ರಯಾಣಿಕ ವಾಹನ ಮಾರಾಟವನ್ನು ದಾಖಲಿಸಿದೆ.


Click it and Unblock the Notifications