Just In
- 34 min ago
ಆಕರ್ಷಕದ ವಿನ್ಯಾಸದಲ್ಲಿ ಹ್ಯುಂಡೈ ಐಯಾನಿಕ್ ಎಲೆಕ್ಟ್ರಿಕ್ ಕಾರು ಅನಾವರಣ
- 1 hr ago
ಮಳೆಯಲ್ಲಿ ಬೈಕ್ ಚಾಲನೆ ಮಾಡುವ ಸವಾರರು ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ
- 1 hr ago
ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ ಎನ್-ಲೈನ್
- 2 hrs ago
ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಹೊಸ ಟೊಯೊಟಾ ಹೈರೈಡರ್ ಎಸ್ಯುವಿ
Don't Miss!
- News
ಹೆಂಡತಿಯಿಂದ ಡೈವೋರ್ಸ್ ನಿರಾಕರಣೆ, ಮಾವನಿಗೆ ಬೆಂಕಿಯಿಟ್ಟ ಭೂಪ..!
- Movies
ದಿವ್ಯಾಗೆ ಸತ್ಯ ಹೇಳಿ ಸಿಕ್ಕಿ ಬಿದ್ದ ಬಾಲ!
- Sports
ರೋಹಿತ್ ಅಲಭ್ಯರಾದರೆ ಇಂಗ್ಲೆಂಡ್ ಟೆಸ್ಟ್ನಲ್ಲಿ ಕಣಕ್ಕಿಳಿಯುಬಹುದಾದ 3 ಆರಂಭಿಕ ಜೋಡಿ; ಯಾರು ಬೆಸ್ಟ್?
- Finance
ಸೆನ್ಸೆಕ್ಸ್, ನಿಫ್ಟಿ ಇಳಿಕೆ: ಎಚ್ಡಿಎಫ್ಸಿ ಲೈಫ್ ಪಾತಾಳಕ್ಕೆ
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Lifestyle
ಫಸ್ಟ್ ಟೈಮ್ ಪ್ರೆಗ್ನೆನ್ಸಿ?ನೀವು ತಿಳಿಯಲೇಬೇಕಾದ ಸಂಗತಿಗಳಿವು
- Education
Kolar District Court Recruitment 2022 : 32 ಜವಾನ ಮತ್ತು ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ಬೆಂಗಳೂರಿನಲ್ಲಿ ಆರಂಭಗೊಂಡ ದೇಶದ ಮೊದಲ ಲಾಗ್9 ಇವಿ ಬ್ಯಾಟರಿ ಸೆಲ್ ಉತ್ಪಾದನಾ ಘಟಕ
ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸ್ಥಳೀಯವಾಗಿ ಇವಿ ವಾಹನಗಳ ಉತ್ಪಾದನೆ ಹೆಚ್ಚುತ್ತಿದ್ದರೂ ಇವಿ ವಾಹನಗಳ ಮುಖ್ಯ ತಾಂತ್ರಿಕ ಅಂಶವಾಗಿರುವ ಬ್ಯಾಟರಿ ಸೌಲಭ್ಯಕ್ಕಾಗಿ ವಿದೇಶಿ ಮಾರುಕಟ್ಟೆಗಳನ್ನು ಅವಲಂಬಿಸಿರುವುದೇ ಇವಿ ವಾಹನಗಳು ದುಬಾರಿಯಾಗಿರಲು ಮುಖ್ಯ ಕಾರಣವಾಗಿದೆ.

ಭಾರತದಲ್ಲಿ ಸದ್ಯ ಪ್ರಮುಖ ಇವಿ ವಾಹನಗಳ ಕಂಪನಿಗಳು ಇವಿ ವಾಹನ ಉತ್ಪಾದನೆ ಸ್ಥಳೀಕರಣ ಅಳವಡಿಸಿಕೊಂಡರೂ ಬ್ಯಾಟರಿ ಸೌಲಭ್ಯಕ್ಕಾಗಿ ವಿದೇಶಿ ಮಾರುಕಟ್ಟೆಗಳನ್ನು ಅವಲಂಬಿಸಿರುವುದು ಹೆಚ್ಚಿನ ಮಟ್ಟದ ಬೆಲೆ ಹೊಂದಿರುವುದಕ್ಕೆ ಪ್ರಮುಖ ಕಾರಣವಾಗಿದ್ದು, ಸ್ಥಳೀಯವಾಗಿ ಬ್ಯಾಟರಿ ನಿರ್ಮಾಣ ಮಾಡಲು ಸದ್ಯ ಪ್ರಮುಖ ಕಂಪನಿಗಳು ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಬ್ಯಾಟರಿ ಉತ್ಪಾದನಾ ಘಟಕಗಳನ್ನು ನಿರ್ಮಾಣ ಮಾಡುತ್ತಿವೆ.

ಮುಂಬರುವ ದಿನಗಳಲ್ಲಿ ವಿವಿಧ ಕಂಪನಿಗಳು ಸ್ಥಳೀಯ ಬ್ಯಾಟರಿ ಪ್ಯಾಕ್ ಅಭಿವೃದ್ದಿಪಡಿಸಿದರೂ ಸಹ ಅದಕ್ಕೆ ಮುಖ್ಯವಾಗಿರುವ ಬೇಕಿರುವ ಸೆಲ್ ಅಳವಡಿಕೆಗೆ ಮತ್ತೆ ವಿದೇಶಿ ಕಂಪನಿಗಳನ್ನೇ ಅವಲಂಬನೆ ಮಾಡುಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಮಹತ್ವದ ಯೋಜನೆ ಆರಂಭಿಸಿದ ನಮ್ಮ ಬೆಂಗಳೂರು ಮೂಲದ ಲಾಗ್9 ಮೆಟೀರಿಯಲ್ಸ್ ಕಂಪನಿಯು ಸ್ಥಳೀಯವಾಗಿ ಬ್ಯಾಟರಿ ಸೆಲ್ ಉತ್ಪಾದನೆಯನ್ನು ಆರಂಭಿಸುತ್ತಿದ್ದು, ಪ್ರಾಯೋಗಿಕ ಪರೀಕ್ಷೆಗಳಲ್ಲಿ ಯಶಸ್ವಿ ಹೊಂದಿರುವ ಕಂಪನಿಯು ಇದೀಗ ಬೃಹತ್ ಪ್ರಮಾಣದಲ್ಲಿ ಬ್ಯಾಟರಿ ಸೆಲ್ ನಿರ್ಮಾಣಕ್ಕಾಗಿ ಪ್ರತ್ಯೇಕ ನಿಯಂತ್ರಿತ ಕಾರ್ಖಾನೆಯನ್ನು ಆರಂಭಿಸಿದೆ.

ಬೆಂಗಳೂರಿನ ಜಕ್ಕೂರಿನಲ್ಲಿರುವ ಲಾಗ್9 ಮೆಟೀರಿಯಲ್ಸ್ ಹೊಸ ಬ್ಯಾಟರಿ ಸೆಲ್ ಅಭಿವೃದ್ದಿ ಕೇಂದ್ರವು ಇವಿ ಬ್ಯಾಟರಿ ಬೇಕಿರುವ ಸೆಲ್ ನಿರ್ಮಾಣಗೊಳಿಸಲಿದ್ದು, ಇದು ಭಾರತದಲ್ಲಿ ಮಾತ್ರವಲ್ಲ ಆಗ್ನೇಯ ಏಷ್ಯಾದಲ್ಲಿ ಅತಿದೊಡ್ಡ ಸೆಲ್ ಉತ್ಪಾದನಾ ಘಟಕವಾಗಿದೆ.

ಲಾಗ್9 ಮೆಟೀರಿಯಲ್ಸ್‌ನಿಂದ ದೇಶದ ಮೊದಲ ಸೆಲ್ ಉತ್ಪಾದನಾ ಘಟಕದ ಉದ್ಘಾಟನಾ ದಿನದಂದು ಕಂಪನಿಯು 'ಡೇ ಝೀರೋ' ಎಂದು ಘೋಷಣೆ ಮಾಡಿದ್ದು, 2015ರಲ್ಲಿ ಈ ದಿನದಂದು ಸ್ಥಾಪನೆಗೊಂಡಿದ್ದ ಕಂಪನಿಯು ತನ್ನ 7ನೇ ವಾರ್ಷಿಕೋತ್ಸದ ವೇಳೆಗೆ ಹೊಸ ಬ್ಯಾಟರಿ ಸೆಲ್ ಅಭಿವೃದ್ದಿ ಕೇಂದ್ರದಲ್ಲಿ ಅಧಿಕೃತ ಉತ್ಪಾದನೆಗೆ ಚಾಲನೆ ನೀಡಿದೆ.

ಕಳೆದ 7 ವರ್ಷಗಳಲ್ಲಿ ಹಲವಾರು ಸಂಶೋಧನೆಗಳ ಫಲವಾಗಿ ಹೊಸ ಬ್ಯಾಟರಿ ಸೆಲ್ ಅಭಿವೃದ್ದಿ ಕೇಂದ್ರವು ಉತ್ಪಾದನಾ ಆರಂಭಕ್ಕೆ ಸಿದ್ದವಾಗಿದ್ದು, ಮುಂದಿನ ಒಂದು ವರ್ಷದಲ್ಲಿ ಕನಿಷ್ಠ 50MWh ಗರಿಷ್ಠ ಸೆಲ್ ಉತ್ಪಾದನಾ ಸಾಮರ್ಥ್ಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ.

ನಂತರ ಮುಂದಿನ 3 ರಿಂದ 5 ವರ್ಷಗಳಲ್ಲಿ 5GWh ಗಿಂತ ಹೆಚ್ಚಿನ ಬ್ಯಾಟರಿ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರಲಿದ್ದು, ಸಾಮಾನ್ಯ ಲೀಥಿಯಂ-ಐಯಾನ್ ಬ್ಯಾಟರಿಗಳಿಗಿಂತ 9 ಪಟ್ಟು ವೇಗವಾಗಿ ಚಾರ್ಜಿಂಗ್ ವೈಶಿಷ್ಟ್ಯತೆ ಹೊಂದಿರಲಿದೆ.

ಜೊತೆಗೆ ಲಾಗ್9 ನಿರ್ಮಾಣದ ಬ್ಯಾಟರಿ ಸೆಲ್ ಸಾಮಾನ್ಯ ಲೀಥಿಯಂ ಐಯಾನ್‌ಗಿಂತಲೂ 9 ಪಟ್ಟು ಉತ್ತಮ ಕಾರ್ಯಕ್ಷಮತೆ ಮತ್ತು 9 ಪಟ್ಟು ಹೆಚ್ಚು ಬ್ಯಾಟರಿ ಅವಧಿಯನ್ನು ಒದಗಿಸಲಿದ್ದು, ಈ ಮೂಲಕ ಕಂಪನಿಯು ಎಲೆಕ್ಟ್ರೋಡ್ ವಸ್ತುಗಳಿಂದ ಸೆಲ್ ಫ್ಯಾಬ್ರಿಕೇಶನ್ ಮತ್ತು ಬ್ಯಾಟರಿ ಪ್ಯಾಕ್‌ಗಳವರೆಗೆ ಆಂತರಿಕ ಸಾಮರ್ಥ್ಯಗಳನ್ನು ಹೊಂದಿರುವ ಏಕೈಕ ಭಾರತೀಯ ಕಂಪನಿಯಾಗಿದೆ.

ಲಾಗ್9 ಕಂಪನಿಯ ಏಕೈಕ ಉದ್ದೇಶವೆಂದರೆ ಭಾರತವನ್ನು ಬ್ಯಾಟರಿ ಮತ್ತು ಇವಿ ಸೆಲ್ ತಂತ್ರಜ್ಞಾನದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವುದು ಮತ್ತು ಶಕ್ತಿಯ ಸಂಗ್ರಹಣೆಯ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವುದು ಮುಖ್ಯ ಗುರಿಯಾಗಿದ್ದು, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಉದ್ಯಮಗಳ ಮೇಲೆ ಕಣ್ಣಿಟ್ಟಿರುವ ಕಂಪನಿಯು ಅಲ್ಯೂಮಿನಿಯಂ ಇಂಧನ ಕೋಶದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದೆ.

ಸದ್ಯ ಲಾಗ್9 ಕಂಪನಿಯು ತನ್ನದೆ ಆದ ಹೊಸ ತಂತ್ರಜ್ಞಾನ ಅಭಿವೃದ್ದಿ ಯೋಜನೆ ಅಡಿ ಪ್ರಮುಖ ಇವಿ ವಾಹನ ತಯಾರಕ ಕಂಪನಿಗಳಿಗೆ ಇನ್‌ಸ್ಟಾಚಾರ್ಜ್ ಬ್ಯಾಟರಿ ಪ್ಯಾಕ್ ಒದಗಿಸುತ್ತಿದ್ದು, ಜೊತೆಗೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸೇವೆಯನ್ನು ಒದಗಿಸುತ್ತಿದೆ.

ಲಾಗ್9 ಹೊಸ ಪ್ಯಾಟರಿ ಪ್ಯಾಕ್ ಸಾಮಾನ್ಯ ಬ್ಯಾಟರಿಗಿಂತಲೂ ಹೆಚ್ಚು ಕಾರ್ಯಕ್ಷಮತೆ ಹೊಂದಿದ್ದು, -30 ಡಿಗ್ರಿಯಿಂದ 60 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲೂ ಅಚ್ಚುಕಟ್ಟಾಗಿ ಕಾರ್ಯಾನಿರ್ವಹಿಸುದಲ್ಲದೆ 15 ಸಾವಿರಕ್ಕೂ ಹೆಚ್ಚು ಬಾರಿ ಬ್ಯಾಟರಿ ಚಾರ್ಜಿಂಗ್ ವೈಶಿಷ್ಟ್ಯತೆ ಹೊಂದಿದೆ.

ಹೀಗಾಗಿ ಲಾಗ್9 ಹೊಸ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಮಾದರಿಗಾಗಿ ಪ್ರಮುಖ ಇವಿ ಕಂಪನಿಗಳು ಸಹಭಾಗಿತ್ವ ಪ್ರಕಟಿಸುತ್ತಿದ್ದು, ಇದೀಗ ಪೈ ಬೀಮ್ ಕಂಪನಿಯು ಸಹ ಹೊಸ ಪಾಲುದಾರಿಕೆ ಯೋಜನೆ ಅಡಿ ಭಾರೀ ಪ್ರಮಾಣದ ಇವಿ ವಾಹನಗಳನ್ನು ಅಳವಡಿಸಿಕೊಳ್ಳುತ್ತಿದೆ.

ಇನ್ನು ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

ಕಳೆದ ಕೆಲ ತಿಂಗಳಿನಿಂದ ಒಟ್ಟಾರೆ ವಾಹನಗಳ ನೋಂದಣಿ ಪ್ರಮಾಣದಲ್ಲಿ ಶೇ.2 ರಿಂದ ಶೇ. 3 ರಷ್ಟು ಪಾಲು ಹೊಂದಿದ್ದ ಇವಿ ವಾಹನಗಳ ನೋಂದಣಿ ಪ್ರಮಾಣ ಇದೀಗ ಗರಿಷ್ಠ ಪ್ರಮಾಣಕ್ಕೆ ಏರಿಕೆ ಕಂಡಿದ್ದು, ಸದ್ಯ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಪರಿಣಾಮ ಇವಿ ವಾಹನಗಳು ಇನ್ನು ಹೆಚ್ಚಿನ ಮಟ್ಟದಲ್ಲಿ ರಸ್ತೆಗಿಳಿಯಲಿವೆ.
ಮಾಹಿತಿಗಳ ಪ್ರಕಾರ ದೇಶಾದ್ಯಂತ ಇದುವರೆಗೆ ಸುಮಾರು 10 ಲಕ್ಷ ಇವಿ ವಾಹನಗಳು ನೋಂದಣಿಯಾಗಿ ಎನ್ನಲಾಗಿದ್ದು, ಸಾಮಾನ್ಯ ವಾಹನಗಳ ನೋಂದಣಿ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ತೀರಾ ಕಡಿಮೆ ಪ್ರಮಾಣ ಎನ್ನಬಹುದು. ಹೀಗಾಗಿ ಇವಿ ವಾಹನಗಳ ಉತ್ತೇಜನಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಇವಿ ವಾಹನಗಳ ಹೆಚ್ಚಳಕ್ಕೆ ಮುಖ್ಯವಾಗಿ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸಲಾಗುತ್ತಿದೆ.