ಲಾಂಗ್ ರೈಡ್: ನಟ ಅಜಿತ್ ಅವರೊಂದಿಗೆ ಲಡಾಖ್‌ನಲ್ಲಿ ಪ್ರತ್ಯಕ್ಷವಾದ ನಟಿ ಮಂಜು ವಾರಿಯರ್

ಮಳಯಾಳಂ ನಟಿ ಮಂಜು ವಾರಿಯರ್ ಮತ್ತು ತಮಿಳು ನಟ ಅಜಿತ್ ಕುಮಾರ್ ಶೀಘ್ರದಲ್ಲೇ ತಮ್ಮ ಮುಂದಿನ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, ತಾತ್ಕಾಲಿಕವಾಗಿ ಈ ಸಿನಿಮಾಗೆ ಎಕೆ 61 ಎಂದು ಶೀರ್ಷಿಕೆ ಇಡಲಾಗಿದೆ.

ಆದರೆ ಈ ಇಬ್ಬರೂ ಸಿನಿಮಾದಲ್ಲಿ ನಟಿಸುವ ಮೊದಲೇ ಒಟ್ಟಾಗಿ ಕಾಣಿಸಿಕೊಂಡಿದ್ದು, ಲಡಾಖ್‌ನಲ್ಲಿ ಬೈಕ್ ಟ್ರಿಪ್ ಅನ್ನು ಆನಂದಿಸುತ್ತಿರುವ ಫೋಟೋವೊಂದು ವೈರಲ್ ಆಗಿದೆ. ಈ ಫೋಟೋವನ್ನು ನಟಿ ಮಂಜು ವಾರಿಯರ್ ಅವರು ತಮ್ಮ ಇನ್‌ಸ್ಟಾ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ನಟ ಅಜಿತ್ ಕುಮಾರ್ ಅಭಿಮಾನಿಗಳು ಇಬ್ಬರನ್ನು ಒಟ್ಟಿಗೆ ಫೋಟೋದಲ್ಲಿ ನೋಡಿ ಮುಂದಿನ ಸಿನಿಮಾಗೆ ಶುಭ ಹಾರೈಸಿದ್ದಾರೆ.

ಲಾಂಗ್ ಡ್ರೈವ್: ನಟ ಅಜಿತ್ ಅವರೊಂದಿಗೆ ಲಡಾಖ್‌ನಲ್ಲಿ ಪ್ರತ್ಯಕ್ಷವಾದ ನಟಿ ಮಂಜು ವಾರಿಯರ್

ನಟಿ ಮಂಜು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿರುವ ಸ್ಥಳವು ಲಡಾಖ್ ಆಗಿದ್ದು, ಫೋಟೋಗೆ ಪೋಸ್ ನೀಡುತ್ತಾ ನಟ-ನಟಿಯರಿಬ್ಬರು ನಗುತ್ತಿರುವುದನ್ನು ನೋಡಬಹುದು. ಈ ಇಬ್ಬರೊಂದಿಗೆ ಹಲವರು ಬೈಕ್ ರೈಡರ್‌ಗಳು ಕೂಡ ಕಾಣಿಸಿಕೊಂಡಿದ್ದು ಗುಂಪಾಗಿ ಲಾಂಗ್ ಡ್ರೈವ್ ಹೊರಟಿರುವಂತೆ ಕಾಣುತ್ತಿದೆ.

ಲಾಂಗ್ ಡ್ರೈವ್: ನಟ ಅಜಿತ್ ಅವರೊಂದಿಗೆ ಲಡಾಖ್‌ನಲ್ಲಿ ಪ್ರತ್ಯಕ್ಷವಾದ ನಟಿ ಮಂಜು ವಾರಿಯರ್

"ನಮ್ಮ ಸೂಪರ್ ಸ್ಟಾರ್ ರೈಡರ್ ಅಜಿತ್ ಕುಮಾರ್ ಸರ್ ಅವರಿಗೆ ಧನ್ಯವಾದಗಳು! ನನಗೆ ನಾಲ್ಕು ಚಕ್ರದ ವಾಹನಗಳಲ್ಲಿ ಸಾವಿರಾರು ಮೈಲುಗಳಷ್ಟು ಪ್ರಯಾಣಿಸಿರುವ ಅನುಭವವಿದೆ. ಆದರೆ ನಾನು ದ್ವಿಚಕ್ರ ವಾಹನದಲ್ಲಿ ಇದೇ ಮೊದಲ ಬಾರಿಗೆ ಪ್ರವಾಸ ಮಾಡುತ್ತಿದ್ದೇನೆ ಎಂದು ನಟಿ ಮಂಜು ವಾರಿಯರ್ ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ಲಾಂಗ್ ಡ್ರೈವ್: ನಟ ಅಜಿತ್ ಅವರೊಂದಿಗೆ ಲಡಾಖ್‌ನಲ್ಲಿ ಪ್ರತ್ಯಕ್ಷವಾದ ನಟಿ ಮಂಜು ವಾರಿಯರ್

ಅಲ್ಲದೇ ಭಾವೋದ್ರಿಕ್ತ ಬೈಕರ್‌ಗಳ ಈ ಅದ್ಭುತ ಗುಂಪಿಗೆ ಸೇರಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಅಡ್ವೆಂಚರ್ ರೈಡರ್ಸ್ ಇಂಡಿಯಾಗೆ ಹೃತ್ಪೂರ್ವಕ ಧನ್ಯವಾದಗಳು. ಅಜಿತ್ ಸರ್ ಅವರಿಂದ ಅಡ್ವೆಂಚರ್ ರೈಡರ್ಸ್ ಇಂಡಿಯಾದ suprej ಮತ್ತು sardar_sarfaraz_khan ಅವರನ್ನು ಪರಿಚಯಿಸಿದ್ದು ಗೌರವವಾಗಿದೆ! ನನ್ನ ಜೊತೆ ಸೇರಿದ್ದಕ್ಕಾಗಿ ಧನ್ಯವಾದ ಎಂದಿದ್ದಾರೆ.

ಲಾಂಗ್ ಡ್ರೈವ್: ನಟ ಅಜಿತ್ ಅವರೊಂದಿಗೆ ಲಡಾಖ್‌ನಲ್ಲಿ ಪ್ರತ್ಯಕ್ಷವಾದ ನಟಿ ಮಂಜು ವಾರಿಯರ್

ಬಿಎಂಡಬ್ಲ್ಯು ಆರ್ 1200 ಜಿಎಸ್ ಬೈಕ್ ಬಳಸಿದ ಅಜಿತ್

ನಟ ಅಜಿತ್ ಈ ಹಿಂದೆಯೂ ಹಲವು ಬಾರಿ ಸ್ನೇಹಿತರೊಂದಿಗೆ ಬೈಕ್ ರೈಡ್ ಮೂಲಕ ಲಡಾಖ್‌ಗೆ ಭೇಟಿ ನೀಡಿದ್ದಾರೆ. ಆದರೆ ಈ ಬಾರಿ ಅಜಿತ್ ಬಳಸಿದ ಬೈಕ್ ಅವರ ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಈಗ ಕಾಣಿಸಿಕೊಂಡಿರುವ ಫೋಟೋದಲ್ಲಿ ಅಜಿತ್ ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕಿನೊಂದಿಗಿರುವುದನ್ನು ನೋಡಬಹುದು.

ಲಾಂಗ್ ಡ್ರೈವ್: ನಟ ಅಜಿತ್ ಅವರೊಂದಿಗೆ ಲಡಾಖ್‌ನಲ್ಲಿ ಪ್ರತ್ಯಕ್ಷವಾದ ನಟಿ ಮಂಜು ವಾರಿಯರ್

ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕ್ ಸ್ಟ್ಯಾಂಡರ್ಡ್, ಪ್ರೊ ಹಾಗೂ ಡೈನಾಮಿಕ್ ಪ್ಲಸ್ ಎಂಬ ಮೂರು ಮಾದರಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಈ ಎಲ್ಲಾ ಮೂರು ಮಾದರಿಗಳಲ್ಲಿ 1170 ಸಿಸಿ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 125 ಬಿ‌ಹೆಚ್‌ಪಿ ಪವರ್ ಹಾಗೂ 125 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಲಾಂಗ್ ಡ್ರೈವ್: ನಟ ಅಜಿತ್ ಅವರೊಂದಿಗೆ ಲಡಾಖ್‌ನಲ್ಲಿ ಪ್ರತ್ಯಕ್ಷವಾದ ನಟಿ ಮಂಜು ವಾರಿಯರ್

ಈ ಬೈಕ್ ಪ್ರತಿ ಲೀಟರ್‌ ಪೆಟ್ರೋಲಿಗೆ 16 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. ಈ ಬೈಕಿನ ಸ್ಟ್ಯಾಂಡರ್ಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.17.25 ಲಕ್ಷಗಳಾಗಿದೆ. ಪ್ರೊ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.20.95 ಲಕ್ಷಗಳಾದರೆ, ಡೈನಾಮಿಕ್ ಪ್ಲಸ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.21.30 ಲಕ್ಷಗಳಾಗಿದೆ.

ಲಾಂಗ್ ಡ್ರೈವ್: ನಟ ಅಜಿತ್ ಅವರೊಂದಿಗೆ ಲಡಾಖ್‌ನಲ್ಲಿ ಪ್ರತ್ಯಕ್ಷವಾದ ನಟಿ ಮಂಜು ವಾರಿಯರ್

ಈ ಬೈಕ್‌ 30 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಹೊಂದಿದೆ. ಈ ಬೈಕಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ. ಜೊತೆಗೆ ಡ್ಯುಯಲ್ ಚಾನೆಲ್ ಎಬಿಎಸ್ ಒದಗಿಸಲಾಗಿದೆ. ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕ್ ಗಂಟೆಗೆ ಗರಿಷ್ಠ 200 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಈ ಬೈಕ್ ಕೇವಲ 3.7 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ತಲುಪಬಲ್ಲದು.

ಲಾಂಗ್ ಡ್ರೈವ್: ನಟ ಅಜಿತ್ ಅವರೊಂದಿಗೆ ಲಡಾಖ್‌ನಲ್ಲಿ ಪ್ರತ್ಯಕ್ಷವಾದ ನಟಿ ಮಂಜು ವಾರಿಯರ್

ಈ ಬೈಕಿನಲ್ಲಿ ಡ್ಯುಪ್ಲೆಕ್ಸ್ ಟಯರ್‌ಗಳನ್ನು ಒದಗಿಸಲಾಗಿದ್ದು, ಮುಂಭಾಗದಲ್ಲಿ 19 ಇಂಚಿನ ವ್ಹೀಲ್ ಹಾಗೂ ಹಿಂಭಾಗದಲ್ಲಿ 17 ಇಂಚಿನ ವ್ಹೀಲ್'ಗಳನ್ನು ಅಳವಡಿಸಲಾಗಿದೆ. ಅಜಿತ್'ರವರು ಬಿಎಂಡಬ್ಲ್ಯು ಆರ್ 1200 ಜಿಎಸ್ ಅಡ್ವೆಂಚರ್ ಬೈಕ್ ಚಾಲನೆ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಲಾಂಗ್ ಡ್ರೈವ್: ನಟ ಅಜಿತ್ ಅವರೊಂದಿಗೆ ಲಡಾಖ್‌ನಲ್ಲಿ ಪ್ರತ್ಯಕ್ಷವಾದ ನಟಿ ಮಂಜು ವಾರಿಯರ್

ಫಾರ್ಮುಲಾ ಒನ್‌ನಲ್ಲೂ ಭಾಗವಹಿದ್ದರು

2003 ರಲ್ಲಿ ನಟ ಅಜಿತ್ ಅವರು ಫಾರ್ಮುಲಾ ಒನ್ ಚಾಂಪಿಯನ್‌ಶಿಪ್‌ಗೆ ಪ್ರವೇಶಿಸಿದ್ದರು. ಮುಂಬೈ, ಚೆನ್ನೈ ಮತ್ತು ದೆಹಲಿಯಂತಹ ಸರ್ಕ್ಯೂಟ್‌ಗಳಲ್ಲಿ ಸ್ಪರ್ಧಿಸಿದ್ದಾರೆ ಎಂಬುದು ಹಲವರಿಗೆ ತಿಳಿದಿಲ್ಲ. ಅವರು ಜರ್ಮನಿ ಮತ್ತು ಮಲೇಷ್ಯಾ ಸೇರಿದಂತೆ ಅಂತರರಾಷ್ಟ್ರೀಯ ಸರ್ಕ್ಯೂಟ್‌ಗಳ ರೇಸ್‌ಗಳಲ್ಲಿ ಭಾಗವಹಿಸಿದ್ದಾರೆ.

ಲಾಂಗ್ ಡ್ರೈವ್: ನಟ ಅಜಿತ್ ಅವರೊಂದಿಗೆ ಲಡಾಖ್‌ನಲ್ಲಿ ಪ್ರತ್ಯಕ್ಷವಾದ ನಟಿ ಮಂಜು ವಾರಿಯರ್

ವಲಿಮೈಯ ಅಗಾಧ ಯಶಸ್ಸಿನ ನಂತರ, ಅಜಿತ್ ಅವರು ವಿರಾಮ ತೆಗೆದುಕೊಂಡಿದ್ದಾರೆ. ನಂತರ, ಅವರು ಮಂಜು ಅವರೊಂದಿಗೆ AK61 ಚಿತ್ರೀಕರಣವನ್ನು ಪ್ರಾರಂಭಿಸಬೇಕಿದೆ. ಕೆಲವು ದಿನಗಳ ಹಿಂದೆ ವೈಜಾಗ್‌ನಲ್ಲಿ ಸಿನಿಮಾ ಶೂಟಿಂಗ್ ಮಾಡಿದ್ದ ಅಜಿತ್ ಹಾಗೂ ಬೋನಿ ಕಪೂರ್ ನಿರ್ಮಿಸಿದ ವಲಿಮೈ ಸಿನಿಮಾ ತಮಿಳು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡಿತ್ತು.

ಲಾಂಗ್ ಡ್ರೈವ್: ನಟ ಅಜಿತ್ ಅವರೊಂದಿಗೆ ಲಡಾಖ್‌ನಲ್ಲಿ ಪ್ರತ್ಯಕ್ಷವಾದ ನಟಿ ಮಂಜು ವಾರಿಯರ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ನಟ ಅಜಿತ್ ಅವರಿಗೆ ಬೈಕ್‌ಗಳು ಹಾಗೂ ರೈಡ್‌ಗಳೆಂದರೆ ಬಹಳ ಇಷ್ಟ. ಅವರು ಹಲವು ರೇಸ್‌ಗಳಲ್ಲೂ ಭಾಗವಹಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ, ಅವರು ಆಗಾಗ್ಗೆ ಲಾಂಗ್‌ ಡ್ರೈವ್ ಹೋಗುವುದು ಅಭ್ಯಾಸ. ಸಿನಿಮಾ ಶೂಟಿಂಗ್ ಇಲ್ಲದಿದ್ದಾಗ ತಮ್ಮ ದುಬಾರಿ ಬೈಕ್‌ಗಳೊಂದಿಗೆ ಲಾಂಗ್ ಡ್ರೈವ್‌ ಹೋಗುತ್ತಿರುತ್ತಾರೆ.

Most Read Articles

Kannada
English summary
Long Drive Actress Manju Warrier spotted in Ladakh with actor Ajith
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X