Just In
- 3 hrs ago
ಎಲೆಕ್ಟ್ರಿಕ್, ಹೈಬ್ರಿಡ್ ಕಾರುಗಳಲ್ಲಿ ಮಾತ್ರ ರಿಜನರೇಟಿವ್ ಬ್ರೇಕಿಂಗ್ ಏಕೆ ಲಭ್ಯವಿದೆ: ಇದರ ಉಪಯೋಗವೇನು?
- 3 hrs ago
ಹೊಸ ನವೀಕರಣಗಳೊಂದಿಗೆ ಸಿಎಫ್ಮೋಟೋ 150ಎನ್ಕೆ ಬೈಕ್ ಬಿಡುಗಡೆ
- 5 hrs ago
ಏಪ್ರಿಲ್ ತಿಂಗಳ ಟಿವಿಎಸ್ ವಾಹನ ಮಾರಾಟ ವರದಿ: ರಫ್ತಿನಲ್ಲಿ ದಾಖಲೆ ನಿರ್ಮಾಣ
- 5 hrs ago
ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತನೆಗೊಂಡು ಮಿಂಚುತ್ತಿದೆ 1954ರ ಫಿಯೆಟ್ ಕಾರು
Don't Miss!
- News
ಶಿವಮೊಗ್ಗ: ಮಳೆಯಲ್ಲಿ ಸಿಲುಕಿದ್ದ 150 ಮಂದಿಗೆ ಆಪತ್ಭಾಂಧವರಾದ ಅಗ್ನಿಶಾಮಕ ದಳ
- Sports
MI ಆಡುವ 11ರ ಬಳಗದಲ್ಲಿ ಮಗನಿಗೆ ಅವಕಾಶ ಸಿಗದ ಕುರಿತು ಸಚಿನ್ ತೆಂಡೂಲ್ಕರ್ ಹೇಳಿದ್ದೇನು?
- Lifestyle
ಮೇ. 30ಕ್ಕೆ ಶನಿ ಜಯಂತಿ: ಶನಿ ಧೈಯ್ಯಾ, ಶನಿ ದೋಷವಿದ್ದರೆ ಈ ಪರಿಹಾರಗಳನ್ನು ಮಾಡಿ
- Finance
ಮೇ 24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
'ಯುಗಾಂತರ' ಧಾರಾವಾಹಿಗೆ ಪ್ರಾಮಾಣಿಕ ಐಎಎಸ್ ಅಧಿಕಾರಿ ಪ್ರೇರಣೆ: ವಾಹಿನಿ ಮುಖ್ಯಸ್ಥರ ಸ್ಪಷ್ಟನೆಯೇನು?
- Technology
ಭಾರತದಲ್ಲಿ ಎಲ್ಜಿ OLED 2022 ಸ್ಮಾರ್ಟ್ ಟಿವಿ ಸರಣಿ ಅನಾವರಣ!
- Education
BSF Recruitment 2022 : 281 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪಾಲುದಾರಿಕೆ ಯೋಜನೆಯಡಿ 1 ಸಾವಿರ ಇವಿ ತ್ರಿ-ಚಕ್ರ ವಾಹನಗಳನ್ನು ರಸ್ತೆಗಿಳಿಸಲಿದೆ ಮೆಜೆಂಟಾ
ಲಾಜಿಸ್ಟಿಕ್ ಸೇವಾ ವಲಯದಲ್ಲಿ ಇವಿ ವಾಹನ ಮಾದರಿಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಮೆಜೆಂಟಾ ಕಂಪನಿಯು ಸಹ ಇವಿ ಬ್ರಾಂಡ್ ಇವೆಟ್ ಮೂಲಕ ಇ-ಕಾರ್ಗೊ ವಲಯವನ್ನು ಇವಿ ಮಾದರಿಯೊಂದಿಗೆ ಪ್ರಾಬಲ್ಯ ಹೊಂದುತ್ತಿದೆ.

ಮೆಜೆಂಟಾ ಕಂಪನಿಯು ದೇಶದ ಪ್ರಮುಖ ಮಹಾನಗರಗಳಲ್ಲಿ ಇ-ಫ್ಲೀಟ್ ಹೊಂದಿರುವುದರ ಜೊತೆಗೆ ಕೊನೆಯ-ಮೈಲಿ ವಿತರಣೆ, ಇ-ಕಾಮರ್ಸ್, ಆಹಾರ ವಿತರಣೆ, ಫಾರ್ಮಾ ಮತ್ತು ಇತರೆ ಲಾಜಿಸ್ಟಿಕ್ಸ್ ಸೇವೆಗಳೊಂದಿಗೆ ಉತ್ತಮ ಗ್ರಾಹಕ ವರ್ಗವನ್ನು ಹೊಂದಿದ್ದು, ಇದೀಗ ಉದ್ಯಮ ವಿಸ್ತರಣೆಗಾಗಿ ಶೀಘ್ರದಲ್ಲಿಯೇ ಸುಮಾರು 1 ಸಾವಿರ ಯೂಲರ್ ನಿರ್ಮಾಣದ ಹೈಲೋಡ್ ಇವಿ ತ್ರಿ-ಚಕ್ರ ವಾಹನಗಳನ್ನು ನಿಯೋಜಿಸುತ್ತಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ ಯೂಲರ್ ಕಂಪನಿಯು ಮೆಜೆಂಟಾ ಕಂಪನಿಗೆ ಸುಮಾರು 1 ಸಾವಿರ ಹೈಲೋಡ್ ಇವಿ ತ್ರಿ-ಚಕ್ರ ವಾಹನಗಳನ್ನು ಒದಗಿಸಲಿದ್ದು, ಇ-ಕಾಮರ್ಸ್ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಇವಿ ಮಾದರಿಗಳನ್ನು ನಿಯೋಜಿಸಲಾಗುತ್ತಿದೆ.

ದೇಶಾದ್ಯಂತ ತೈಲ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚದಲ್ಲಿ ಭಾರೀ ಏರಿಕೆಯಾಗಿದೆ. ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ಕೂಡಾ ಜಾರಿಗೆ ತರಲಾಗಿದೆ.

ಹೊಸ ಹೈಲೋಡ್(HiLoad) ವೈಶಿಷ್ಟ್ಯತೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಮುಖ ವಾಣಿಜ್ಯ ವಾಹನಗಳ ಫ್ಲೀಟ್ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆ ಸಲ್ಲಿಸುತ್ತಿದ್ದು, ಫೇಮ್ 2 ಯೋಜನೆ ಅಡಿ ಸಬ್ಸಡಿ ಹೊಂದಿರುವ ಹೊಸ ವಾಹನ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 3.50 ಲಕ್ಷ ಬೆಲೆ ಹೊಂದಿದೆ.

ಹೊಸ ಇವಿ ವಾಣಿಜ್ಯ ವಾಹನದಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು ಗ್ರಾಹಕರ ಆಕರ್ಷಿಸುತ್ತಿದ್ದು, ಮುಂಬರುವ ದಿನಗಳಲ್ಲಿಹೊಸ ಇವಿ ತ್ರಿ ಚಕ್ರ ವಾಹನವು ಬೆಸ್ಟ್ ಇನ್ ಕ್ಲಾಸ್ ಪ್ಲೇ ಲೋಡ್ ಸಾಮರ್ಥ್ಯದೊಂದಿಗೆ(680 ಕೆ.ಜಿ) ಉತ್ತಮ ಮೈಲೇಜ್ ಹಿಂದಿರುಗಿಸಲಿದ್ದು, ಸಿಂಗಲ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ 72V, 12.4kW ಲಿಕ್ವಿಡ್ ಕೂಲಿಂಗ್ ಬ್ಯಾಟರಿ ಪ್ಯಾಕ್ ಹೊಂದಿರಲಿದೆ.

ಹೈಲೋಡ್ ಮಾದರಿಯಲ್ಲಿ ಯೂಲರ್ ಮೋಟಾರ್ಸ್ ಕಂಪನಿಯು ತನ್ನ ವಿನೂತನ 'ಆರ್ಕ್ ರಿಯಾಕ್ಟರ್ 100' ತಂತ್ರಜ್ಞಾನ ಬಳಕೆ ಮಾಡಿದ್ದು, ಇದು ಸರಕು ಸಾಗಾಣಿಕೆಯ ವೇಳೆ ಒತ್ತಡದಲ್ಲೂ ಇವಿ ವಾಹನದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗಲಿದೆ.

ಹೊಸ ಹೈಲೋಡ್ ಇವಿ ವಾಹನವನ್ನು ಬಳಕೆದಾರರು ಸಾಮಾನ್ಯ ಬಳಕೆಯ ತ್ರಿ ಪಿನ್ ಸಾಕೆಟ್ ಮೂಲಕವು ಚಾರ್ಜ್ ಮಾಡಬಹುದು ಇಲ್ಲವೇ ಫಾಸ್ಟ್ ಡಿಸಿ ಚಾರ್ಜಿಂಗ್ ಸೌಲಭ್ಯವನ್ನು ಬಳಕೆ ಮಾಡಬಹುದಾಗಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯಕ್ಕೆ ಎರಡು ಮಾದರಿಯ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ.

ಗೃಹ ಬಳಕೆಯ ಚಾರ್ಜಿಂಗ್ ಸೌಲಭ್ಯದೊಂದಿಗೆ ಶೇ.80 ರಷ್ಟು ಆಗಲು ಮೂರು ಗಂಟೆ ಸಮಯ ತೆಗೆದುಕೊಳ್ಳುವ ಹೊಸ ವಾಹನವು ಫ್ಲ್ಯಾಶ್ 6 ಮೂಲಕ ಪೂರ್ತಿಯಾಗಿ ಚಾರ್ಜ್ ಆಗಲು ಕನಿಷ್ಠ ಎರಡು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಹಾಗೆಯೇ ಫ್ಲ್ಯಾಶ್ 27 ಮೂಲಕ ಕ್ವಿಕ್ ಚಾರ್ಜಿಂಗ್ ಮಾಡಬಹುದಾಗಿದ್ದು, ಫ್ಲ್ಯಾಶ್ 27 ಮೂಲಕ ಕೇವಲ 15 ನಿಮಿಷ ಚಾರ್ಜ್ ಮಾಡಿದರೂ ಕನಿಷ್ಠ 50 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಗೃಹ ಬಳಕೆಯ ಚಾರ್ಜಿಂಗ್ ಸೌಲಭ್ಯದ ಮೂಲಕ 30 ನಿಮಿಷ ಚಾರ್ಜ್ ಮಾಡಿದರೆ ಕನಿಷ್ಠ 20 ಕಿ.ಮೀ ಮೈಲೇಜ್ ಹಿಂಪಡೆಯಬಹುದಾಗಿದ್ದು, ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ವಾಹನ ನಿರ್ವಹಣೆಗೆ ಸಾಕಷ್ಟು ಸಹಕಾರಿಯಾಗಿದೆ.

ಹೊಸ ಹೈಲೋಡ್ ಇವಿ ವಾಹನವು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಕ್ಸ್ ಮತ್ತು ಎಕ್ಸ್ಆರ್ ಎನ್ನುವ ವೆರಿಯೆಂಟ್‌ಗಳನ್ನು ಹೊಂದಿರಲಿದ್ದು, ಎಕ್ಸ್ ವೆರಿಯೆಂಟ್ 680 ಕೆಜಿ ಪ್ಲೇ ಲೋಡ್ ಸಾಮರ್ಥ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 129 ಕಿ.ಮೀ ಮೈಲೇಜ್ ನೀಡುತ್ತದೆ.

ಎಕ್ಸ್ಆರ್ ವೆರಿಯೆಂಟ್ ಕೂಡಾ ಎಕ್ಸ್ ಮಾದರಿಯಲ್ಲಿ ಪ್ರತಿ ಚಾರ್ಜ್‌ಗೆ 129 ಕಿ.ಮೀ ಮೈಲೇಜ್ ಹೊಂದಿದ್ದು, ಇದು 655 ಕೆಜಿ ಪ್ಲೇ ಲೋಡ್ ಸಾಮರ್ಥ್ಯ ಹೊಂದಿದೆ. ಎರಡು ಮಾದರಿಗಳು ಪ್ರತಿ ಗಂಟೆಗೆ 42 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, 9.1 ಬಿಎಚ್‌ಪಿ, 88.55 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಹೈಲೋಡ್ ಇವಿ ವಾಹನವು ಒಟ್ಟು 2,100 ಎಂಎಂ ಉದ್ದಳತೆಯೊಂದಿಗೆ 190 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಅತ್ಯುತ್ತಮ ಪ್ಲೇ ಲೋಡ್ ಕಂಟನೈರ್ ಅಳವಡಿಸಲಾಗಿದೆ. ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಹಾಫ್ ಲೋಡ್ ಬಾಡಿ, ಡೆಲಿವರಿ ವ್ಯಾನ್, ಹೈ ಡೆಕ್ ಕಂಟನೈರ್ ಮತ್ತು ಫ್ಲ್ಯಾಟ್ ಡೆಕ್ ಆಯ್ಕೆಗಳನ್ನು ನೀಡಲಾಗಿದೆ.

ಜೊತೆಗೆ ಹೊಸ ವಾಹನದಲ್ಲಿ ಹಲವಾರು ಹೊಸ ಫೀಚರ್ಸ್ ನೀಡಲಾಗಿದ್ದು, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಫ್ರಂಟ್ ಡಿಸ್ಕ್ ಬ್ರೇಕ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ರಿಯಲ್ ಟೈಮ್ ಡೆಟಾ, ತಾಂತ್ರಿಕ ಅಂಶಗಳ ನಿಯಂತ್ರಣಕ್ಕಾಗಿ ಶೇಫರ್ಡ್ ಆ್ಯಪ್(ಜಿಯೋ ಫೆನ್ಸ್, ಜಿಪಿಎಸ್ ಟ್ರ್ಯಾಕಿಂಗ್) ಹೊಂದಿದೆ.