ಬಿಡುಗಡೆಗೊಂಡಿರುವ ಹೊಸ ಸ್ಕಾರ್ಪಿಯೋ-ಎನ್ ಮಾದರಿಗಾಗಿ ಆಕ್ಸೆಸರಿಸ್ ಪರಿಚಯಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ತನ್ನ ಹೊಸ ಸ್ಕಾರ್ಪಿಯೋ-ಎನ್ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರು ಮಾದರಿಗಾಗಿ ಕಂಪನಿಯು ಇದೀಗ ಆಸಕ್ತ ಗ್ರಾಹಕರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಿದೆ.

ಬಿಡುಗಡೆಗೊಂಡಿರುವ ಹೊಸ ಸ್ಕಾರ್ಪಿಯೋ-ಎನ್ ಮಾದರಿಗಾಗಿ ಆಕ್ಸೆಸರಿಸ್ ಪರಿಚಯಿಸಿದ ಮಹೀಂದ್ರಾ

ಹೊಸ ಸ್ಕಾರ್ಪಿಯೋ ಮಾದರಿಯನ್ನು ಮಾರುಕಟ್ಟೆಯಲ್ಲಿನ ಬೇಡಿಕೆ ಭಾರೀ ಬದಲಾವಣೆಯೊಂದಿಗೆ ಬಿಡುಗಡೆಗೊಳಿಸಿರುವ ಮಹೀಂದ್ರಾ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಿದ್ದು, ಹೊಸ ಕಾರು ಮಾದರಿಗಾಗಿ ಕಂಪನಿಯು ಇದೀಗ ಹೊಸ ಕಾರಿನ ನೋಟಕ್ಕೆ ಮತ್ತಷ್ಟು ಮೆರುಗು ನೀಡುವಂತಹ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದೆ.

ಬಿಡುಗಡೆಗೊಂಡಿರುವ ಹೊಸ ಸ್ಕಾರ್ಪಿಯೋ-ಎನ್ ಮಾದರಿಗಾಗಿ ಆಕ್ಸೆಸರಿಸ್ ಪರಿಚಯಿಸಿದ ಮಹೀಂದ್ರಾ

ಹೊಸ ಕಾರಿನಲ್ಲಿ ಕಂಪನಿಯು ಆಕ್ಸೆಸರಿಸ್ ಪ್ಯಾಕೇಜ್ ಅನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಿದ್ದು, ಆಸಕ್ತ ಗ್ರಾಹಕರು ಕಾರಿನ ದರ ಹೊರತುಪಡಿಸಿ ಪ್ರತ್ಯೇಕವಾಗಿ ಆಕ್ಸೆಸರಿಸ್ ಖರೀದಿ ಮಾಡಬೇಕಾಗುತ್ತದೆ. ಹೊಸ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಕಂಪನಿಯು ಹೊರ ಮತ್ತು ಒಳಭಾಗದಲ್ಲಿ ಅಂದವನ್ನು ಹೆಚ್ಚಿಸುವ ಹಲವಾರ ಬಿಡಿಭಾಗಗಳನ್ನು ನೀಡಲಾಗಿದ್ದು, ಸುಮಾರು ರೂ. 1 ಲಕ್ಷ ಮೌಲ್ಯದ ಆಕ್ಸೆಸರಿಸ್ ಪರಿಚಯಿಸಿದೆ.

ಬಿಡುಗಡೆಗೊಂಡಿರುವ ಹೊಸ ಸ್ಕಾರ್ಪಿಯೋ-ಎನ್ ಮಾದರಿಗಾಗಿ ಆಕ್ಸೆಸರಿಸ್ ಪರಿಚಯಿಸಿದ ಮಹೀಂದ್ರಾ

ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಕಂಪನಿಯು ಹೆಡ್‌ಲೈಟ್, ಡೋರ್ ಹ್ಯಾಂಡಲ್, ಫ್ರಂಟ್ ಗ್ರಿಲ್, ಫಾಗ್ ಲ್ಯಾಂಪ್, ವೀಲ್ ಆರ್ಚ್‌ಗಳು ಮತ್ತು ಒಆರ್‌ವಿಎಂಗಳಿಗೆ ಕ್ರೋಮ್ ಅನ್ನು ಒದಗಿಸಲಿದ್ದು, ಸೈಡ್ ಮತ್ತು ರಿಯರ್‌ನಲ್ಲಿಯೂ ಸಹ ಟೈಲ್‌ಗೇಟ್, ಟೈಲ್ ಲೈಟ್, ಡೋರ್ ಹ್ಯಾಂಡಲ್ ಮತ್ತು ಡೋರ್ ಕ್ಲಾಡಿಂಗ್‌ನಲ್ಲಿ ಕ್ರೋಮ್ ಅನ್ನು ನೀಡಲಾಗುತ್ತದೆ.

ಬಿಡುಗಡೆಗೊಂಡಿರುವ ಹೊಸ ಸ್ಕಾರ್ಪಿಯೋ-ಎನ್ ಮಾದರಿಗಾಗಿ ಆಕ್ಸೆಸರಿಸ್ ಪರಿಚಯಿಸಿದ ಮಹೀಂದ್ರಾ

ಇಂಟಿರಿಯರ್‌ನಲ್ಲಿ ಆಕ್ಸೆಸರಿಸ್‌ಗಾಗಿ ಕಂಪನಿಯು ಕಂಫರ್ಟ್ ಮತ್ತು ನೋ ಲಿಮಿಟ್ ಎರಡು ಥೀಮ್‌ಗಳಲ್ಲಿ ವಿವಿಧ ಬಿಡಿಭಾಗಗಳನ್ನು ನೀಡಲಿದ್ದು, ವಿವಿಧ ಬಣ್ಣಗಳಲ್ಲಿರುವ ಸೀಟ್ ಕವರ್‌, ಫ್ಲೋರ್ ಮ್ಯಾಟ್, ಆಂಟಿ-ಸ್ಕಿಡ್ ಮ್ಯಾಟ್, ಡಿಸೈನರ್ ಮ್ಯಾಟ್ಸ್, ಪ್ರಿಂಟೆಡ್ ಕಾರ್ಪೆಟ್ ಫ್ಲೋರ್, 3 ಡಿ ಫ್ಲೋರ್ ಮ್ಯಾಟ್ಸ್ ಸೇರಿದಂತೆ ಅಲ್ಯೂಮಿನಿಯಂ ಮತ್ತು ಸ್ಟೇನ್ಲೆಸ್ ಸ್ಟೀಲ್ ಹೊಂದಿರುವ ಸ್ಕಫ್ ಪ್ಲೇಟ್, ಸನ್‌ಶೇಡ್ ಮತ್ತು ಸ್ಪೋರ್ಟಿ ಪೆಡಲ್‌ ಬಿಡಿಭಾಗಗಳನ್ನು ನೀಡಿದೆ.

ಬಿಡುಗಡೆಗೊಂಡಿರುವ ಹೊಸ ಸ್ಕಾರ್ಪಿಯೋ-ಎನ್ ಮಾದರಿಗಾಗಿ ಆಕ್ಸೆಸರಿಸ್ ಪರಿಚಯಿಸಿದ ಮಹೀಂದ್ರಾ

ಹೊಸ ಕಾರು ಮಾದರಿಯು ವಿವಿಧ ಎಂಜಿನ್ ಆಯ್ಕೆಗಳಿಗೆ ಅನುಗುಣವಾಗಿ ಜೆಡ್2, ಜೆಡ್4, ಜೆಡ್6, ಜೆಡ್8 ಮತ್ತು ಜೆಡ್ಎಲ್ ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಕಾರು

ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.49 ಲಕ್ಷ ಬೆಲೆ ಹೊಂದಿದೆ.

ಬಿಡುಗಡೆಗೊಂಡಿರುವ ಹೊಸ ಸ್ಕಾರ್ಪಿಯೋ-ಎನ್ ಮಾದರಿಗಾಗಿ ಆಕ್ಸೆಸರಿಸ್ ಪರಿಚಯಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಹೊಸ ಸ್ಕಾರ್ಪಿಯೋ-ಎನ್ ಮಾದರಿಯನ್ನು ಎಕ್ಸ್‌ಯುವಿ700 ಮಾದರಿಯಲ್ಲಿರುವಂತೆ 2.0 ಲೀಟರ್ ಪೆಟ್ರೋಲ್ ಮತ್ತು 2.2 ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಕಾರನ್ನು ಗ್ರಾಹಕರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಖರೀದಿ ಮಾಡಬಹುದಾಗಿದೆ.

ಬಿಡುಗಡೆಗೊಂಡಿರುವ ಹೊಸ ಸ್ಕಾರ್ಪಿಯೋ-ಎನ್ ಮಾದರಿಗಾಗಿ ಆಕ್ಸೆಸರಿಸ್ ಪರಿಚಯಿಸಿದ ಮಹೀಂದ್ರಾ

ಸ್ಕಾರ್ಪಿಯೋ-ಎನ್ 2.0-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಹೊಸ ಕಾರಿನ ಹೈಎಂಡ್ ಮಾದರಿಗಳಲ್ಲಿ 4x4 ಡ್ರೈವ್ ಸಿಸ್ಟಂ ನೀಡಲಾಗಿದೆ.

ಬಿಡುಗಡೆಗೊಂಡಿರುವ ಹೊಸ ಸ್ಕಾರ್ಪಿಯೋ-ಎನ್ ಮಾದರಿಗಾಗಿ ಆಕ್ಸೆಸರಿಸ್ ಪರಿಚಯಿಸಿದ ಮಹೀಂದ್ರಾ

ಹೊಸ ಕಾರಿನ ಮುಂಭಾಗದಲ್ಲಿ ಮಹೀಂದ್ರಾ ಕಂಪನಿಯ ಸಾಂಪ್ರದಾಯಿಕ ಸಿಕ್ಸ್ ಸ್ಲಾಟ್ ಫ್ರಂಟ್ ಗ್ರಿಲ್ ಜೊತೆಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಸ್ಕಾರ್ಪಿಯನ್ ಟೈಲ್ ಶೇಪ್ ಹೊಂದಿರುವ ಡಿಆರ್‌ಎಲ್ಎಸ್ ಮತ್ತು ಫಾಗ್ ಲ್ಯಾಂಪ್ ಹೊಂದಿದ್ದು, 18 ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಮತ್ತು ಲಂಬವಾಗಿ ಜೋಡಿಸಲಾಗಿರುವ ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ಸ್ಪಾಯ್ಲರ್ ಹೊಂದಿವೆ.

ಬಿಡುಗಡೆಗೊಂಡಿರುವ ಹೊಸ ಸ್ಕಾರ್ಪಿಯೋ-ಎನ್ ಮಾದರಿಗಾಗಿ ಆಕ್ಸೆಸರಿಸ್ ಪರಿಚಯಿಸಿದ ಮಹೀಂದ್ರಾ

ಸ್ಕಾರ್ಪಿಯೋ-ಎನ್ ಮಾದರಿಯ ಮಧ್ಯಂತರ ವೆರಿಯೆಂಟ್‌ ನಂತರ ಲಭ್ಯವಾಗುವಂತೆ ಸನ್‌ರೂಫ್, ಎಲೆಕ್ಟ್ರಿಕಲ್ ಫೋಲ್ಡಿಂಗ್ ರಿಯರ್ ವ್ಯೂ ಮಿರರ್‌ಗಳು ಮತ್ತು ಶಾರ್ಕ್-ಫಿನ್ ಆಂಟೆನಾವನ್ನು ಸಹ ಒಳಗೊಂಡಿದ್ದು, ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್ ಮತ್ತು ಮೆಟಲ್-ಫಿನಿಶ್ಡ್ ಡ್ಯುಯಲ್ ರೈಲ್‌ಗಳೊಂದಿಗೆ ಆಕರ್ಷಕವಾದ ಸೆಂಟರ್ ಕನ್ಸೋಲ್‌, ರಿಚ್ ಕಾಫಿ ಬ್ಲ್ಯಾಕ್ ಲೆದರ್ ಆಸನಗಳು, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಆಸನವನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡಿರುವ ಹೊಸ ಸ್ಕಾರ್ಪಿಯೋ-ಎನ್ ಮಾದರಿಗಾಗಿ ಆಕ್ಸೆಸರಿಸ್ ಪರಿಚಯಿಸಿದ ಮಹೀಂದ್ರಾ

ಹಾಗೆಯೇ ಹೊಸ ಕಾರಿನಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, 70ಕ್ಕೂ ಹೆಚ್ಚು ಕಾರ್ ಕನೆಕ್ಟ್ ಫೀಚರ್ಸ್, ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ, ಅಮೆಜಾನ್ ಅಲೆಕ್ಸಾ ವಾಯ್ಸ್ ಸರ್ಪೊಟ್, 3ಡಿ ಸೊನಿ ಸರೌಂಡ್ ಸೌಂಡ್ ಸಿಸ್ಟಂ ಮತ್ತು ವಾಯ್ಸ್ ಕಮಾಂಡ್ ಫೀಚರ್ಸ್ ಹೊಂದಿದೆ.

ಬಿಡುಗಡೆಗೊಂಡಿರುವ ಹೊಸ ಸ್ಕಾರ್ಪಿಯೋ-ಎನ್ ಮಾದರಿಗಾಗಿ ಆಕ್ಸೆಸರಿಸ್ ಪರಿಚಯಿಸಿದ ಮಹೀಂದ್ರಾ

ಇದಲ್ಲದೆ ಹೊಸ ಕಾರಿನಲ್ಲಿ ಡ್ಯುಯಲ್-ಜೋನ್ ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಮುಂಭಾಗ ಮತ್ತು ಹಿಂಭಾಗದಲ್ಲಿ ಕ್ಯಾಮೆರಾಗಳು ಮತ್ತು ಸ್ಮಾರ್ಟ್‌ಫೋನ್‌ಗಾಗಿ ವೈರ್‌ಲೆಸ್ ಚಾರ್ಜರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿರಲಿದ್ದು, ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಇಎಸ್ಇ, ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಐಸೋಫಿಕ್ಸ್ ಆಂಕರ್ ಪಾಯಿಂಟ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ಹಲವಾರು ಫೀಚರ್ಸ್‌ಗಳಿವೆ.

ಬಿಡುಗಡೆಗೊಂಡಿರುವ ಹೊಸ ಸ್ಕಾರ್ಪಿಯೋ-ಎನ್ ಮಾದರಿಗಾಗಿ ಆಕ್ಸೆಸರಿಸ್ ಪರಿಚಯಿಸಿದ ಮಹೀಂದ್ರಾ

ಈ ಮೂಲಕ ಹೊಸ ಕಾರು ಬಲಿಷ್ಠ ವಿನ್ಯಾಸ ಮತ್ತು ಪ್ರೀಮಿಯಂ ಫೀಚರ್ಸ್‌ನೊಂದಿಗೆ 4,662 ಎಂಎಂ ಉದ್ದಳತೆ ಮತ್ತು 2,750 ಎಂಎಂ ವಿಸ್ತರಿತ ವೀಲ್ಹ್ ಬೆಸ್ ಮೂಲಕ ಅರಾಮದಾಯಕ ಕ್ಯಾಬಿನ್ ಸ್ಪೆಸ್ ಹೊಂದಿದ್ದು, ಹೊಸ ಕಾರು ಪ್ರಸ್ತುತ ಮಾದರಿಗಿಂತಲೂ ಹೆಚ್ಚುವರಿಯಾಗಿ 206 ಎಂಎಂ ಉದ್ದ ಮತ್ತು 97 ಎಂಎಂ ಅಗಲ ಹೊಂದಿದ್ದರೆ 125 ಎಂಎಂ ನಷ್ಟು ಪ್ರಸ್ತುತ ಮಾದರಿಗಿಂತಲೂ ಕಡಿಮೆ ಎತ್ತರ ಹೊಂದಿದೆ.

ಬಿಡುಗಡೆಗೊಂಡಿರುವ ಹೊಸ ಸ್ಕಾರ್ಪಿಯೋ-ಎನ್ ಮಾದರಿಗಾಗಿ ಆಕ್ಸೆಸರಿಸ್ ಪರಿಚಯಿಸಿದ ಮಹೀಂದ್ರಾ

ವ್ಹೀಲ್‌ಬೇಸ್ ಸೌಲಭ್ಯವು ಪ್ರಸ್ತುತ ಮಾದರಿಗಿಂತಲೂ 70 ಎಂಎಂ ಹೆಚ್ಚು ಉದ್ದವಾಗಿರುವುದರಿಂದ ಹೆಚ್ಚಿನ ವೇಗದಲ್ಲೂ ಸ್ಥಿರತೆಯನ್ನು ಸುಧಾರಿಸಲು ಸಹಾಯ ಮಾಡವುದಲ್ಲದೆ 2ನೇ ಸಾಲಿನಲ್ಲಿ ಕೂರುವ ಪ್ರಯಾಣಿಕರ ಮೊಣಕಾಲುಗಳಿಗೆ ಹೆಚ್ಚಿನ ಸ್ಥಳಾವಕಾಶ ಒದಗಿಸುತ್ತದೆ.

Most Read Articles

Kannada
English summary
Mahindra revealed scorpio n accessories for exterior interior details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X