ಭರ್ಜರಿ ಬೇಡಿಕೆ ಪಡೆದುಕೊಂಡ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ
ಮಹೀಂದ್ರಾ ಕಂಪನಿಯ ಗೇಮ್ ಚೇಂಜರ್ ಎಸ್‍ಯುವಿ ಸ್ಕಾರ್ಪಿಯೋ ಎರಡು ದಶಕಗಳಿಂದ ಬ್ರ್ಯಾಂಡ್‌ನ ಅತ್ಯಂತ ಜನಪ್ರಿಯ ಉತ್ಪನ್ನಗಳಲ್ಲಿ ಒಂದಾಗಿದೆ. ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಕಂಪನಿಯು ಹಳೆಯ ತಲೆಮಾರಿನ ನವೀಕೃತ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಮಾದರಿಯನ್ನು ಕಳೆದ ತಿಂಗಳು ಬಿಡುಗಡೆಗೊಳಿಸಿತ್ತು.

ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಯು ಗಟ್ಟಿಮುಟ್ಟಾದ ನಿರ್ಮಾಣ, ವಿಶ್ವಾಸಾರ್ಹ ಕಾರ್ಯಕ್ಷಮತೆ ಮತ್ತು ಸಿಗ್ನೇಚರ್ ಬೋಲ್ಡ್ ಲುಕ್‌ನೊಂದಿಗೆ ಎಸ್‍ಯುವಿ ದೇಶದಾದ್ಯಂತ ಗ್ರಾಹಕರನ್ನು ಆಕರ್ಷಿಸಿದೆ.ಅದರ ಜನಪ್ರಿಯತೆಯಿಂದಾಗಿ, ಮೂರನೇ ತಲೆಮಾರಿನ ಮಾದರಿಯ ಆಗಮನದ ಹೊರತಾಗಿಯೂ, ಸ್ಕಾರ್ಪಿಯೊ ಎನ್, ಮಹೀಂದ್ರಾ ಎರಡನೇ ತಲೆಮಾರಿನ ಮಾದರಿಯನ್ನು ಮಾರಾಟದಲ್ಲಿ ಇರಿಸಿದೆ. 2022ರ ಆಗಸ್ಟ್ ತಿಂಗಳಿನಲ್ಲಿ ಸ್ಕಾರ್ಪಿಯೊ ಕ್ಲಾಸಿಕ್ ಎಂದು ಮರುನಾಮಕರಣ ಮಾಡಿದರು.

ಆಗಸ್ಟ್ ತಿಂಗಳಿನಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ (Mahindra Scorpio Classic) ಮಾದರಿಯ 7,000 ಯುನಿಟ್ ಗಳು ಮಾರಾಟವಾಗಿವೆ. ಸ್ಕಾರ್ಪಿಯೊದ ಮಾರಾಟದ ಅಂಕಿಅಂಶವು ಕ್ಲಾಸಿಕ್ ಪ್ರತ್ಯಯವನ್ನು ತೆಗೆದುಕೊಂಡ ನಂತರ ಸುಮಾರು ದ್ವಿಗುಣಗೊಂಡಿದೆ. ರಿಫ್ರೆಶ್ ಲುಕ್ ಮತ್ತು ಪವರ್‌ಟ್ರೇನ್ ಅಪ್‌ಗ್ರೇಡ್‌ಗಳು ಎಸ್‌ಯುವಿಯ ಮಾರಾಟಕ್ಕೆ ಒಲವು ತೋರುತ್ತಿವೆ.

ನವೀಕೃತ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‍ಯುವಿ ಕೇವಲ ಎರಡು ವೆರಿಯೆಂಟ್‌ಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ. ಹಳೆಯ ಸ್ಕಾರ್ಪಿಯೋ ಮಾದರಿಯಲ್ಲಿನ ಕೆಲವು ಫೀಚರ್ಸ್‌ಗಳೊಂದಿಗೆ ವಿನ್ಯಾಸದಲ್ಲಿ ತುಸು ಹೊಸ ಬದಲಾವಣೆ ತರಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಕೆಲವು ಪ್ರೀಮಿಯಂ ಫೀಚರ್ಸ್ ಸಹ ಹೊಂದಿದೆ.

ಸ್ಕಾರ್ಪಿಯೋ-ಎನ್ ಮಾದರಿಗಿಂತ ಇದು ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಸ್ಕಾರ್ಪಿಯೋ-ಎನ್ ಮಾದರಿಯು ಸಂಪೂರ್ಣವಾಗಿ ಹೊಸ ಮಾದರಿಯಾಗಿದ್ದರೆ ಸ್ಕಾರ್ಪಿಯೋ-ಕ್ಲಾಸಿಕ್ ಮಾದರಿಯು ಈ ಹಿಂದಿನ ತಲೆಮಾರಿನ ಫೀಚರ್ಸ್ ಗಳೊಂದಿಗೆ ಕೆಲವು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯ ಮುಂಭಾಗದ ಡಿಸೈನ್ ಮತ್ತು ಕ್ಯಾಬಿನ್ ಒಳಾಂಗಣದಲ್ಲಿ ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹೊಸ ಬದಲಾವಣೆಯ ನಂತರ ನವೀಕೃತ ಮಾದರಿಯು ಹಳೆಯ ಮಾದರಿಯ ವಿನ್ಯಾಸವನ್ನೇ ನೆನಪಿಸುತ್ತದೆ.

ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯು ಹೊಸದಾಗಿ 2.2 ಲೀಟರ್ ಎಂಹ್ವಾಕ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಇದರಲ್ಲಿ ಸ್ಕಾರ್ಪಿಯೋ-ಎನ್ ಮಾದರಿಯಲ್ಲಿ ಪೆಟ್ರೋಲ್ ಎಂಜಿನ್, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿಲ್ಲ.

ಹೊಸ ಎಸ್‍ಯುವಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ. ಇದು 132 ಬಿಎಚ್‌ಪಿ ಪವರ್ ಮತ್ತು 300 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಹಳೆಯ ಮಾದರಿಯಲ್ಲಿನ ಎಂಜಿನ್‌ಗಿಂತಲೂ 55 ಕೆ.ಜಿ ಕಡಿಮೆ ತೂಕ ಹೊಂದಿದ್ದು, ಈ ಮೂಲಕ ಶೇ.14 ರಷ್ಟು ಉತ್ತಮ ಇಂಧನ ದಕ್ಷತೆ ಪಡೆದುಕೊಂಡಿದೆ.

ಇದರೊಂದಿಗೆ ಹೊಸ ಮಾದರಿಯು ಈ ಹಿಂದಿನಂತೆ ಹೊರನೋಟ ಹೊಂದಿದ್ದರು ಕೆಲವು ಹೊಸ ಫೀಚರ್ಸ್‌ಗಳು ಕಾರಿನ ನೋಟಕ್ಕೆ ಪ್ರಿಮಿಯಂ ಮೆರಗು ನೀಡಲಿದ್ದು, ಮರುವಿನ್ಯಾಸಗೊಳಿಸಲಾದ ಸಿಕ್ಸ್ ಸ್ಲಾಟ್ ಫ್ರಂಟ್ ಗ್ರಿಲ್ ಮತ್ತು ಬಂಪರ್ ಜೊತೆ ಹೊಸ ಲೊಗೊ ಸಾಕಷ್ಟು ಆಕರ್ಷಕವಾಗಿದೆ.

ಮುಖ್ಯವಾಗಿ ಹೊಸ ಎಸ್‍ಯುವಿಯಲ್ಲಿ ಈ ಬಾರಿ ಎಲ್ಇಡಿ ಐಬೋ ಜೊತೆಗೆ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ನೀಡಲಾಗಿದ್ದು, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ ಸೇರಿದಂತೆ ಪ್ರಮುಖ ಬದಲಾವಣೆಗಳನ್ನು ನೀಡಲಾಗಿದೆ. ಇದರೊಂದಿಗೆ ಹೊಸ ಕಾರಿನ ಮುಂಭಾಗದಲ್ಲಿ ಮತ್ತಷ್ಟು ಬದಲಾವಣೆಗಾಗಿ ಫಾಗ್ ಲ್ಯಾಂಪ್ ಹೌಸಿಂಗ್ ಸಹ ಬದಲಾವಣೆಗೊಳಿಸಲಾಗಿದೆ.

ಡೈಮಂಡ್ ಕಟ್ ಹೊಂದಿರುವ 17 ಇಂಚಿನ ಅಲಾಯ್ ವ್ಹೀಲ್, ಡ್ಯುಯಲ್ ಟೋನ್ ಕ್ಲಾಡಿಂಗ್, ಹಿಂಬದಿಯಲ್ಲಿ ಸಿಗ್ನಿಚೆರ್ ಟವರ್ ವಿನ್ಯಾಸದ ಎಲ್‌ಇಡಿ ಟೈಲ್ ಲ್ಯಾಂಪ್ ನೀಡಲಾಗಿದೆ. ಹೊಸ ಕಾರು ಮಾದರಿಯ ಇಂಟಿರಿಯರ್ ವಿನ್ಯಾಸದ ಕುರಿತಾಗಿ ಮಾತನಾಡುವುದಾದರೇ ಸ್ಕಾರ್ಪಿಯೋ ಕ್ಲಾಸಿಕ್ ಹಳೆಯ ಮಾದರಿಗಿಂತ ಕೆಲವೇ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ. ವುಡ್ ಟ್ರಿಮ್ ಹೊಂದಿರುವ ಸುಧಾರಿತ ಡ್ಯಾಶ್‌ಬೋರ್ಡ್, 9 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಲೆದರ್ ವ್ಯಾರ್ಪ್ ಹೊಂದಿರುವ ಸ್ಟೀರಿಂಗ್ ವ್ಹೀಲ್, ಬ್ಲ್ಯಾಕ್ ಮತ್ತು ಬ್ರಿಝ್ ಇಂಟಿರಿಯರ್ ಹೊಂದಿದೆ.

ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ 7 ಸೀಟರ್ ಮತ್ತು 9 ಸೀಟರ್ ಸೌಲಭ್ಯದ ಆಯ್ಕೆ ನೀಡಲಾಗಿದ್ದು, ಮೂರನೇ ಸಾಲಿನಲ್ಲಿ ಬೆಂಚ್ ಆಸನ ಸೌಲಭ್ಯದೊಂದಿಗೆ 7 ಸೀಟರ್ ಮಾದರಿಯ ತುಸು ಹೆಚ್ಚಿನ ಸ್ಥಳವಾಕಾಶ ಹೊಂದಿದ್ದರೆ 9 ಸೀಟರ್ ಮಾದರಿಯ ಆಸನ ಸೌಲಭ್ಯವು ತುಸು ಇಕ್ಕಟ್ಟಾದ ಸ್ಥಳಾವಕಾಶ ಹೊಂದಿದೆ. ಹೊಸ ಮಾದರಿಯಲ್ಲಿ ಈ ಹಿಂದಿನ ಮಾದರಿಯಲ್ಲಿನ ಕೆಲವು ಫೀಚರ್ಸ್‌ಗಳೊಂದಿಗೆ ಹೊಸದಾಗಿ ಕ್ರೂಸ್ ಕಂಟ್ರೋಲ್, ಎರಡನೇ ಸಾಲಿನ ಆಸನಗಳಿಗೆ ರಿಯರ್ ಎಸಿ ವೆಂಟ್ಸ್ ಮತ್ತು ಸುರಕ್ಷತೆಗಾಗಿ ಎರಡು ಮಾದರಿಯಲ್ಲೂ ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯವನ್ನು ಹೊಂದಿದೆ.

ಹಾಗೆಯೇ ಹೊಸ ಎಸ್‍ಯುವಿಯಲ್ಲಿ ಡ್ಯುಯಲ್ ವಿಶ್ ಬೋನ್ ಸಸ್ಷೆಂಷನ್ ಹೊಂದಿರುವ ಹೊಸ ಲ್ಯಾಡರ್ ಫ್ರೇಮ್ ಚಾಸಿಸ್ ನೀಡಿರುವ ಕೂಡ ಕಾರಿನ ಬಾಡಿ ರೋಲ್ ಸಾಕಷ್ಟು ಸುಧಾರಿಸಿದೆ. ಹೈ ಸ್ಪೀಡ್‌ನಲ್ಲೂ ಈ ಎಸ್‍ಯುವಿಯನ್ನು ಅರಾಮವಾಗಿ ನಿಯಂತ್ರಿಸಬಹುದಾಗಿದೆ.


Click it and Unblock the Notifications