ಎಕ್ಸ್‌ಯುವಿ700 ಎಸ್‌ಯುವಿ ಬೆಲೆಯಲ್ಲಿ ತುಸು ಇಳಿಕೆ ಮಾಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ700 ಮೂಲಕ ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಇದೀಗ ಹೊಸ ಕಾರಿನಲ್ಲಿ ಕೆಲವು ಬದಲಾವಣೆಗಳೊಂದಿಗೆ ಬೆಲೆ ಇಳಿಕೆ ಘೋಷಣೆ ಮಾಡಿದೆ.

ಎಕ್ಸ್‌ಯುವಿ700 ಎಸ್‌ಯುವಿ ಬೆಲೆಯಲ್ಲಿ ತುಸು ಇಳಿಕೆ ಮಾಡಿದ ಮಹೀಂದ್ರಾ

ಎಕ್ಸ್‌ಯುವಿ700 ಎಸ್‌ಯುವಿ ಬಿಡುಗಡೆಯ ನಂತರ ಇದುವರೆಗೆ ಸುಮಾರು 1.50 ಲಕ್ಷಕ್ಕಿಂತಲೂ ಹೆಚ್ಚು ಗ್ರಾಹಕರಿಂದ ಬುಕಿಂಗ್ ಪಡೆದುಕೊಂಡಿದ್ದು, ಇದರಲ್ಲಿ ಇದುವರೆಗೆ 35 ಸಾವಿರ ಯುನಿಟ್‌ನಷ್ಟು ವಿತರಣೆ ಮಾಡಲಾಗಿದೆ. ಹೊಸ ಕಾರಿಗೆ ಹೆಚ್ಚಿನ ಬೇಡಿಕೆಯಿದ್ದರೂ ಸೆಮಿಕಂಡಕ್ಟರ್ ಕೊರತೆಯು ಉತ್ಪಾದನಾ ಪ್ರಮಾಣ ಹೆಚ್ಚಳಕ್ಕೆ ಅಡ್ಡಿಯಾಗುತ್ತಿದ್ದು, ವಿತರಣೆ ಹೆಚ್ಚಿಸುವುದಕ್ಕಾಗಿ ಸೆಮಿಕಂಡಕ್ಟರ್ ಆಧರಿಸಿದ ಕೆಲವು ಫೀಚರ್ಸ್ ಕೈಬಿಡಲಾಗಿದೆ.

ಎಕ್ಸ್‌ಯುವಿ700 ಎಸ್‌ಯುವಿ ಬೆಲೆಯಲ್ಲಿ ತುಸು ಇಳಿಕೆ ಮಾಡಿದ ಮಹೀಂದ್ರಾ

ಫೀಚರ್ಸ್ ಕಡಿತದಿಂದಾಗಿ ಹೊಸ ಎಕ್ಸ್‌ಯುವಿ700 ಪ್ರಮುಖ ವೆರಿಯೆಂಟ್‌ಗಳ ಉತ್ಪಾದನೆಯು ವೇಗಪಡೆದುಕೊಳ್ಳುತ್ತಿದ್ದು, ಉತ್ಪಾದನೆ ಹೆಚ್ಚಳ ನಂತರ ಕಂಪನಿಯು ಹೊಸ ಕಾರಿನ ಬೆಲೆಯಲ್ಲಿ ಇಳಿಕೆ ಮಾಡಿರುವುದಾಗಿ ಹೇಳಿಕೊಂಡಿದೆ.

ಎಕ್ಸ್‌ಯುವಿ700 ಎಸ್‌ಯುವಿ ಬೆಲೆಯಲ್ಲಿ ತುಸು ಇಳಿಕೆ ಮಾಡಿದ ಮಹೀಂದ್ರಾ

ಎಕ್ಸ್‌ಯುವಿ700 ಎಸ್‌ಯುವಿಯ ಪ್ರಮುಖ ವೆರಿಯೆಂಟ್‌ಗಳ ಬೆಲೆಯಲ್ಲಿ ಕಂಪನಿಯು ಎಕ್ಸ್‌ಶೋರೂಂ ದರದಲ್ಲಿ ಸುಮಾರು ರೂ. 6 ಸಾವಿರದಷ್ಟು ಬೆಲೆ ಇಳಿಕೆ ಮಾಡಿದ್ದು, ಹೊಸ ದರಪಟ್ಟಿಯಲ್ಲಿ ಇದೀಗ ಆರಂಭಿಕ ಮಾದರಿಯು 13.18 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 24.58 ಲಕ್ಷ ಬೆಲೆ ಹೊಂದಿದೆ.

ಎಕ್ಸ್‌ಯುವಿ700 ಎಸ್‌ಯುವಿ ಬೆಲೆಯಲ್ಲಿ ತುಸು ಇಳಿಕೆ ಮಾಡಿದ ಮಹೀಂದ್ರಾ

ಹೊಸ ಎಕ್ಸ್‌ಯುವಿ700 ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದೆ.

ಎಕ್ಸ್‌ಯುವಿ700 ಎಸ್‌ಯುವಿ ಬೆಲೆಯಲ್ಲಿ ತುಸು ಇಳಿಕೆ ಮಾಡಿದ ಮಹೀಂದ್ರಾ

2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(6-ಸ್ಪೀಡ್ ಎಂಟಿ),450-ಎನ್ಎಂ ಟಾರ್ಕ್(6-ಸ್ಪೀಡ್ ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

ಎಕ್ಸ್‌ಯುವಿ700 ಎಸ್‌ಯುವಿ ಬೆಲೆಯಲ್ಲಿ ತುಸು ಇಳಿಕೆ ಮಾಡಿದ ಮಹೀಂದ್ರಾ

ಎಕ್ಸ್‌ಯುವಿ700 ಮಾದರಿಯಲ್ಲಿ ಎಂಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7 ಮತ್ತು ಎಎಕ್ಸ್7 ಲಗ್ಷುರಿ ವೆರಿಯೆಂಟ್‌ ಖರೀದಿಗೆ ಲಭ್ಯವಿದ್ದು, ಆಕರ್ಷಕ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿವೆ. ಕಂಪನಿಯೇ ಜೋಡಣೆ ಮಾಡುವ 7 ಸೀಟರ್ ಮಾದರಿಗಳನ್ನು ಹೊರತುಪಡಿಸಿ 5 ಸೀಟರ್ ಹೊಂದಿರುವ ಮಾದರಿಗಳಲ್ಲಿ 7 ಸೀಟರ್ ಬಯಸುವ ಗ್ರಾಹಕರು ಹೆಚ್ಚುವರಿ ರೂ. 70 ಸಾವಿರ ಪಾವತಿ ಮಾಡಬೇಕಾಗುತ್ತದೆ.

ಎಕ್ಸ್‌ಯುವಿ700 ಎಸ್‌ಯುವಿ ಬೆಲೆಯಲ್ಲಿ ತುಸು ಇಳಿಕೆ ಮಾಡಿದ ಮಹೀಂದ್ರಾ

ಹೊಸ ಕಾರಿನಲ್ಲಿ ಫ್ರಂಟ್ ಫಾಸಿಯಾದೊಂದಿಗೆ ಸಂಯೋಜನೆಗೊಂಡಿರುವ ಎಲ್ಇಡಿ ಹೆಡ್‌ಲ್ಯಾಂಪ್ಸ್, ಸಿ ಆಕಾರದಲ್ಲಿರುವ ಎಲ್ಇಡಿ ಡಿಆರ್‌ಎಲ್ಎಸ್, ಸಿಲ್ವರ್ ಕೋಟಿಂಗ್ ಹೊಂದಿರುವ ಫ್ಲಕ್ಸ್ ಸ್ಕೀಡ್ ಪ್ಲೇಟ್, 18-ಇಂಚಿನ ಡ್ಯುಯಲ್ ಟೋನ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಪಡೆದುಕೊಂಡಿದೆ.

ಎಕ್ಸ್‌ಯುವಿ700 ಎಸ್‌ಯುವಿ ಬೆಲೆಯಲ್ಲಿ ತುಸು ಇಳಿಕೆ ಮಾಡಿದ ಮಹೀಂದ್ರಾ

ಎಕ್ಸ್‌ಯುವಿ700 ಮಾದರಿಯ ಸೈಡ್ ಪ್ರೋಫೈಲ್ ಮತ್ತು ಹಿಂಬದಿಯ ವಿನ್ಯಾಸವು ಕೂಡಾ ಸಾಕಷ್ಟು ಹೊಸತನದಿಂದ ಕೂಡಿದ್ದು, ಹಿಂಬದಿಯ ಫೆಂಡರ್‌ನೊಂದಿಗೆ ಹರಡಿಕೊಂಡಿರುವ ವಿಭಜಿತ ಟೈಲ್‌ಲ್ಯಾಂಪ್, ವಿನೂತನ ವಿನ್ಯಾಸದ ಬಂಪರ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ರೂಫ್ ರೈಲ್ಸ್, ಶಾರ್ಕ್ ಫಿನ್ ಆಂಟೆನಾ, ರೂಫ್ ಸ್ಪಾಯ್ಲರ್ ಪಡೆದುಕೊಂಡಿದೆ.

ಎಕ್ಸ್‌ಯುವಿ700 ಎಸ್‌ಯುವಿ ಬೆಲೆಯಲ್ಲಿ ತುಸು ಇಳಿಕೆ ಮಾಡಿದ ಮಹೀಂದ್ರಾ

ಹಾಗೆಯೇ ಹೊಸ ಕಾರಿನಲ್ಲಿ 10.25 ಇಂಚಿನ ಡಿಜಿಟಲ್ ಮತ್ತು ಇನ್ಪೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ, ಅಮೆಜಾನ್ ಅಲೆಕ್ಸಾ, 60 ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದಾದ ಕಾರ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಅಸಿಸ್ಟೆನ್ಸ್, ಆ್ಯಂಬಿಯೆಂಟ್ ಲೈಟಿಂಗ್ಸ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, 2 ಮತ್ತು 3ನೇ ಸಾಲಿನಲ್ಲೂ ಎಸಿ ವೆಂಟ್ಸ್, ಪನೋರಮಿಕ್ ಸನ್‌ರೂಫ್ ಮತ್ತು ಏರ್ ಪ್ಯೂರಿಫ್ಲೈರ್ ಸೌಲಭ್ಯಗಳಿವೆ.

ಎಕ್ಸ್‌ಯುವಿ700 ಎಸ್‌ಯುವಿ ಬೆಲೆಯಲ್ಲಿ ತುಸು ಇಳಿಕೆ ಮಾಡಿದ ಮಹೀಂದ್ರಾ

ಅಡ್ವಾನ್ಸ್ ಡ್ರೈವರ್ ಅಸಿಸ್ಟೆಡ್ ಸಿಸ್ಟಂ ಸೌಲಭ್ಯವು ಹೊಸ ಕಾರಿನ ಪ್ರಮುಖ ಸುರಕ್ಷಾ ಸೌಲಭ್ಯವಾಗಿದ್ದು, ಇದರ ಜೊತೆಗೆ 7-ಏರ್‌ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಲಾಕಿಂಗ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್ ಬೂಸ್ಟರ್, ವ್ಯಯಕ್ತಿಕರಣಗೊಳಿಸಿದ ಸೇಫ್ಟಿ ಅಲರ್ಟ್, ಡ್ರೈವರ್ ಡ್ರಾಸಿನೆಸ್ ಅಲರ್ಟ್, ಲೆನ್ ಕಿಪ್ ಅಸಿಸ್ಟ್ ಸೌಲಭ್ಯ ಹೊಂದಿದೆ.

ಎಕ್ಸ್‌ಯುವಿ700 ಎಸ್‌ಯುವಿ ಬೆಲೆಯಲ್ಲಿ ತುಸು ಇಳಿಕೆ ಮಾಡಿದ ಮಹೀಂದ್ರಾ

ಇದರೊಂದಿಗೆ ಹೊಸ ಕಾರು ಸುರಕ್ಷಾ ವಿಚಾರವಾಗಿ ಭಾರತದಲ್ಲಿ 'ಸೇಫರ್ ಛಾಯ್ಸ್' ಪ್ರಶಸ್ತಿ ಪಡೆದ ಮೊದಲ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಹೊಸ ಕಾರಿನಲ್ಲಿ ಪ್ರಯಾಣಿಕರ ಗರಿಷ್ಠ ಸುರಕ್ಷತೆಗಾಗಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ.

ಎಕ್ಸ್‌ಯುವಿ700 ಎಸ್‌ಯುವಿ ಬೆಲೆಯಲ್ಲಿ ತುಸು ಇಳಿಕೆ ಮಾಡಿದ ಮಹೀಂದ್ರಾ

ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್‌ಟೆಸ್ಟಿಂಗ್‌ನಲ್ಲಿ ಎಕ್ಸ್‌ಯುವಿ700 ಮಾದರಿಯು ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ ನೀಡುವ 17 ಅಂಕಗಳಲ್ಲಿ 16.03 ಅಂಕಗಳನ್ನು ಮತ್ತು ಮಕ್ಕಳ ಸುರಕ್ಷತೆಗಾಗಿ ನೀಡಲಾಗುವ 49 ಅಂಕಗಳಲ್ಲಿ 41.66 ಅಂಕಗಳೊಂದಿಗೆ ಗರಿಷ್ಠ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದ್ದು, ಇದೀಗ ಹೊಸ ಕಾರಿನ ಸುರಕ್ಷಾ ಸೌಲಭ್ಯಗಳನ್ನು ಆಧರಿಸಿ ಗ್ಲೊಬಲ್ ಎನ್‌ಸಿಎಪಿ ಸಂಸ್ಥೆಯು ಮತ್ತೊಂದು ಅತ್ಯುನ್ನತ ಪ್ರಶಸ್ತಿ ನೀಡಿದೆ.

ಎಕ್ಸ್‌ಯುವಿ700 ಎಸ್‌ಯುವಿ ಬೆಲೆಯಲ್ಲಿ ತುಸು ಇಳಿಕೆ ಮಾಡಿದ ಮಹೀಂದ್ರಾ

ಹೊಸ ಕಾರಿನಲ್ಲಿರುವ ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟಂ ಸಿಸ್ಟಂ ಸೌಲಭ್ಯವನ್ನು ಪ್ರತ್ಯೇಕವಾಗಿ ಪರೀಕ್ಷಿಸಿರುವ ಗ್ಲೊಬಲ್ ಎನ್‌ಸಿಎಪಿ ಸಂಸ್ಥೆಯು ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್ ಮತ್ತು ಪೆಡೆಟ್ರೆಷಿಯನ್ ಪ್ರೊಟೆಕ್ಷನ್ ಸೌಲಭ್ಯಗಳಿಗೆಗಾಗಿ 'ಸೇಫರ್ ಛಾಯ್ಸ್' ಪ್ರಶಸ್ತಿ ನೀಡಿದೆ.

Article Published On: Saturday, September 10, 2022, 14:02 [IST]
English summary
Mahindra xuv700 selected variants price slashed details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+