ಆಕರ್ಷಕ ಬೆಲೆಯ ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ವಿಶೇಷತೆಗಳು
ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ 2020ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪೂರ್ವವೀಕ್ಷಣೆ ಮಾಡಿದ ನಂತರ ಸುಮಾರು 33 ತಿಂಗಳ ಕಾಯುವಿಕೆಯ ನಂತರ, ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿತು.

ಈ ಹೊಸ ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಎಸ್‍ಯುವಿಯ ಆರಂಭಿಕ ಬೆಲೆಯು ರೂ.10.35 ಲಕ್ಷವಾಗಿದೆ. ಹೊಸ ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ W6 TGDi, W8 TGDi ಮತ್ತು W8(O) TGDi ಎಂಬ ಮೂರು ಟ್ರಿಮ್ ಹಂತಗಳಲ್ಲಿ ಲಭ್ಯವಿದೆ, ಹೊಸ 1.2-ಲೀಟರ್ mStallion TGDi ಎಂಜಿನ್‌ನಿಂದ ಪಡೆದ ಮೊದಲ ಎಸ್‍ಯುವಿ ಇದಾಗಿದ್ದು, ಇದು ಪವರ್ ಫುಲ್ ಎಂಜಿನ್ ಆಗಿದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಜೋಡಿಸಲಾಗಿದೆ.

ಈ ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ವೆನ್ಯೂ ಎನ್-ಲೈನ್, ಕಿಯಾ ಸೋನೆಟ್ ಎಕ್ಸ್-ಲೈನ್ ಮತ್ತು ಹೊಸ ಮಾರುತಿ ಬ್ರೆಝಾ ಮಾದರಿಗಳಿಗೆ ಪೈಪೋಟಿ ನೀಡುತ್ತದೆ. ಇತ್ತೀಚೆಗೆ ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಎಸ್‍ಯುವಿಯ ಸ್ಪೋರ್ಟಿ ಡ್ರೈವಿಂಗ್ ಆಕರ್ಷಣೆಯನ್ನು ಒಳಗೊಂಡಿರುವ ಟಿವಿಸಿ ವೀಡಿಯೊವನ್ನು ಸಹ ಮಹೀಂದ್ರಾ ಬಿಡುಗಡೆಗೊಳಿಸಿತು.

ಏಸ್ ಇಂಡಿಯನ್ ಮೋಟಾರ್‌ಸ್ಪೋರ್ಟ್ ಐಕಾನ್ ಗೌರವ್ ಗಿಲ್ ವೀಡಿಯೊದಲ್ಲಿ ನಟಿಸಿದ್ದಾರೆ. ಮಹೀಂದ್ರಾ ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆ ಮಾಡಿದ ವೀಡಿಯೊದಲ್ಲಿ, ಹೊಸ ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಎಸ್‍ಯುವಿಯನ್ನು ಗೌರವ್ ಗಿಲ್ ಚಾಲನೆ ಮಾಡುತ್ತಿರುವುದನ್ನು ಕೂಡ ನೋಡಬಹುದು. ಇನ್ನು ಈ ಹೊಸ ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಎಸ್‍ಯುವಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ವಿನ್ಯಾಸ
ಈ ಹೊಸ ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಎಸ್‍ಯುವಿಯ ಒಟ್ಟಾರೆ ವಿನ್ಯಾಸವು ಸಾಮಾನ್ಯ ಮಾದರಿಗೆ ಹೋಲುತ್ತದೆ. ಮುಂಭಾಗದ ಫಾಸಿಕ ಹೊಸ ಬ್ಲ್ಯಾಕ್ ಗ್ರಿಲ್ ಅನ್ನು ಹೊಂದಿದೆ. ಮುಂಭಾಗದಲ್ಲಿ ಸೆಂಟ್ರಲ್ ಏರ್ ಇನ್‌ಟೇಕ್‌ನಲ್ಲಿ ಕ್ರೋಮ್ ಇನ್‌ಸರ್ಟ್‌ಗಳನ್ನು ಬ್ಲ್ಯಾಕ್ ಔಟ್ ಮಾಡಲಾಗಿದೆ.

ಈ ಹೊಸ ರೂಪಾಂತರದೊಂದಿಗೆ, ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿಯಲ್ಲಿ ಹೊಸ ಟ್ವಿನ್ ಪೀಕ್ಸ್ ಲೋಗೋವನ್ನು ಕೂಡ ಸೇರಿಸಿದೆ. ಸ್ವದೇಶಿ ಎಸ್‌ಯುವಿ ತಯಾರಕರು ಇದು ಮೂರು ಹೊಸ ಡ್ಯುಯಲ್-ಟೋನ್ ಬಣ್ಣಗಳನ್ನು ಒಳಗೊಂಡಂತೆ ಒಟ್ಟು ನಾಲ್ಕು ಬಾಹ್ಯ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಬ್ಲ್ಯಾಕ್ ರೂಫ್ ಟಾಪ್‌ನೊಂದಿಗೆ ಬ್ಲೇಜಿಂಗ್ ಬ್ರಾಂಜ್, ವೈಟ್ ರೂಫ್ ಟಾಪ್‌ನೊಂದಿಗೆ ನಪೋಲಿ ಬ್ಲ್ಯಾಕ್, ಬ್ಲ್ಯಾಕ್ ರೂಫ್ ಟಾಪ್‌ನೊಂದಿಗೆ ಪರ್ಲ್ ವೈಟ್ ಮತ್ತು ಬ್ಲೇಜಿಂಗ್ ಬ್ರೋಂಜ್ ಸಿಂಗಲ್- ಟೋನ್ ಶೇಡ್ ಪ್ರಸ್ತುತ ಪರ್ಲ್ ವೈಟ್ ಮತ್ತು ನಾಪೋಲಿ ಬ್ಲ್ಯಾಕ್ ಬಣ್ಣಗಳನ್ನು ಈ ರೂಪಾಂತರದೊಂದಿಗೆ ನೀಡುವುದನ್ನು ಮುಂದುವರೆಸಿದೆ.

ಇಂಟಿರಿಯರ್
ಈ ಹೊಸ ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಎಸ್‍ಯುವಿಯ ಕ್ಯಾಬಿನ್ ಒಳಗೆ ಸಂಪೂರ್ಣ ಬ್ಲ್ಯಾಕ್ ಥೀಮ್ ಅನ್ನು ಹೊಂದಿದೆ, ಕಂಪನಿಯು ಡ್ಯಾಶ್‌ಬೋರ್ಡ್ ಮತ್ತು ಸ್ಟೀರಿಂಗ್ ವೀಲ್‌ನಲ್ಲಿ ಸಿಲವರ್ ಅಸ್ಸೆಟ್ ಗಳನ್ನು ಕೂಡ ಸೇರಿಸಿದೆ. ಅಸ್ತಿತ್ವದಲ್ಲಿರುವ ಮಾದರಿಯು ಡ್ಯುಯಲ್-ಟೋನ್ ಕಪ್ಪು ಮತ್ತು ಬೀಜ್ ಇಂಟಿರಿಯರ್ ಅನ್ನು ಒಳಗೊಂಡಿದೆ.

ಫೀಚರ್ಸ್
ಈ ಹೊಸ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಎಸ್‍ಯುವಿಯಲ್ಲಿ 16-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಈ ಎಸ್‍ಯುವಿಯಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ Apple CarPlay ಮತ್ತು Android Auto ಜೊತೆಗೆ ಕನೆಕ್ಟಿವಿಟಿ ಕಾರ್ ಟೆಕ್ ಅನ್ನು ಒಳಗೊಂಡಿದೆ.

ಎಂಜಿನ್
ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಎಸ್‍ಯುವಿಯಲ್ಲಿ ಟರ್ಬೋಚಾರ್ಜ್ಡ್ 1.2-ಲೀಟರ್ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 128.2 ಬಿಹೆಚ್‍ಪಿ ಪವರ್ ಮತ್ತು 230 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಟರ್ಬೊ ಪೆಟ್ರೋಲ್ ಎಂಜಿನ್ ಹೆಚ್ಚುವರಿ 20 ಎನ್ಎಂ ಟಾರ್ಕ್ ಅನ್ನು ನೀಡುವ ಓವರ್-ಬೂಸ್ಟ್ ಕಾರ್ಯವನ್ನು ಹೊಂದಿದೆ.

ಸಾಮಾನ್ಯ ಎಕ್ಸ್‌ಯುವಿ300 ಪೆಟ್ರೋಲ್‌ಗೆ ಅಳವಡಿಸಲಾಗಿರುವ 1.2-ಲೀಟರ್ ಟರ್ಬೊ ಎಂಜಿನ್‌ಗೆ ಹೋಲಿಸಿದರೆ ಟರ್ಬೋಸ್ಪೋರ್ಟ್ ಹೊಸ ಟರ್ಬೋಚಾರ್ಜ್ಡ್ mStallion TGDi ಎಂಜಿನ್ ಹೆಚ್ಚುವರಿ 19 ಬಿಹೆಚ್‍ಪಿ ಮತ್ತು 30 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಹೊಸ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ನೀಡಲಾಗುತ್ತದೆ, ಈ ಎಸ್‍ಯುವಿಯು ಕೇವಲ 5 ಸೆಕೆಂಡುಗಳಲ್ಲಿ 0-60 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಹೊಸ ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಬಿಡುಗಡೆಯ ವೇಳೆ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್‌ನ ಆಟೋಮೋಟಿವ್ ಟೆಕ್ನಾಲಜಿ ಮತ್ತು ಉತ್ಪನ್ನ ಅಭಿವೃದ್ಧಿಯ ಅಧ್ಯಕ್ಷ ರಾದಆರ್ ವೇಲುಸಾಮಿ ಅವರು ಮಾತನಾಡಿ, "TGDi ಪವರ್‌ಟ್ರೇನ್‌ನಿಂದ ಚಾಲಿತವಾಗಿರುವ ಹೊಸ TurboSportTM ಸರಣಿಯನ್ನು ಅಂತಿಮ ಚಾಲನಾ ಅನುಭವವನ್ನು ಬಯಸುವ ಥ್ರಿಲೇನಿಯಲ್‌ಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಎಕ್ಸ್‌ಯುವಿ300 TGDi ಅನ್ನು ಅಡ್ರಿನಾಲಿನ್-ಪ್ಯಾಕ್ಡ್ ಎಸ್‍ಯುವಿಯನ್ನು ಬಯಸುವರಿಗಾಗಿ ಕಾರ್ಯಕ್ಷಮತೆ, ಸುರಕ್ಷತೆ, ಸೌಕರ್ಯ ಮತ್ತು ಆಕರ್ಷಕ ಶೈಲಿಯಲ್ಲಿ ವಿನ್ಯಾಸಗೊಳಿಸಿದೆ ಎಂದು ಹೇಳಿದ್ದರು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಈ ಹೊಸ ಮಹೀಂದ್ರಾ ಎಕ್ಸ್‌ಯುವಿ300 ಟರ್ಬೋಸ್ಪೋರ್ಟ್ ಎಸ್‍ಯುವಿಯು ಆಕರ್ಷಕ ಬೆಲೆ, ಹೆಚ್ಚುವರಿ ಪವರ್ ಮತ್ತು ಅಧಿಕ-ಬೂಸ್ಟ್ ಕಾರ್ಯದೊಂದಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಎಸ್‍ಯುವಿಯು ಎಷ್ಟರ ಮಟ್ಟಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications