ಪ್ರಮುಖ ಹತ್ತು ವೆರಿಯೆಂಟ್‌ಗಳೊಂದಿಗೆ ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿರಲಿದೆ 2022ರ ಮಾರುತಿ ಬ್ರೆಝಾ

ಮಾರುತಿ ಸುಜುಕಿ ಕಂಪನಿಯು ತನ್ನ ಹೊಸ ಬ್ರೆಝಾ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯನ್ನು ಇದೇ ತಿಂಗಳು 30ರಂದು ಬಿಡುಗಡೆ ಮಾಡಲಿದ್ದು, ಹೊಸ ಕಾರು ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗುತ್ತಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿರಲಿದೆ 2022ರ ಮಾರುತಿ ಬ್ರೆಝಾ

ಬ್ರೆಝಾ ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌‌ಯುವಿಯು ಈ ಹಿಂದಿನ ವಿಟಾರಾ ಬ್ರೆಝಾ ಬ್ಯಾಡ್ಜ್ ಬದಲಾಗಿ ಕೇವಲ ಬ್ರೆಝಾ ಬ್ಯಾಡ್ಜ್ ಮಾತ್ರ ಪಡೆದುಕೊಳ್ಳಲಿದ್ದು, ಹೊಸ ಕಾರು ಮಾದರಿಯು ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಗೆ ಅನುಗುಣವಾಗಿ ಪ್ರಮುಖ ಹತ್ತು ವೆರಿಯೆಂಟ್‌ಗಳನ್ನು ಹೊಂದಿಲಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿರಲಿದೆ 2022ರ ಮಾರುತಿ ಬ್ರೆಝಾ

ಖರೀದಿಗೆ ಲಭ್ಯವಾಗುವ ಹತ್ತು ವೆರಿಯೆಂಟ್‌ಗಳು ಏಳು ವೆರಿಯೆಂಟ್ ಮ್ಯಾನುವಲ್ ಮತ್ತು ಮೂರು ಆಟೋಮ್ಯಾಟಿಕ್ ವೆರಿಯೆಂಟ್ ಹೊಂದಿರಲಿದ್ದು, ಆಯ್ದ ವೆರಿಯೆಂಟ್‌ಗಳಲ್ಲಿ ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆ ಹೊಂದಿರಲಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿರಲಿದೆ 2022ರ ಮಾರುತಿ ಬ್ರೆಝಾ

ಹೊಸ ಬ್ರೆಝಾ ಮಾದರಿಯಲ್ಲಿ LXI, LXI (O), VXI, VXI (O), ZXI, ZXI (O) ಮತ್ತು ZXI+ ಮಾದರಿಗಳು ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ VXI, ZXI ಮತ್ತು ZXI+ ವೆರಿಯೆಂಟ್‌ಗಳು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಹೊಸ ಕಾರಿನಲ್ಲಿ 2022ರ ಎರ್ಟಿಗಾ ಮತ್ತು ಎಕ್ಸ್‌ಎಲ್6 ಮಾದರಿಯಲ್ಲಿ ನೀಡಲಾಗಿರುವ 1.5 ಲೀಟರ್ ಕೆ15ಸಿ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿರಲಿದೆ 2022ರ ಮಾರುತಿ ಬ್ರೆಝಾ

1.5 ಲೀಟರ್ ಕೆ15ಸಿ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಕಂಪನಿಯು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಬಳಕೆ ಮಾಡಿದ್ದು, ಇದು ಕಾರು ಚಾಲನೆ ಆರಂಭಕ್ಕೂ ಮುನ್ನ ಎಂಜಿನ್ ಆರಂಭಕ್ಕೆ ಶಕ್ತಿ ಪೂರೈಕೆ ಮೂಲಕ ಇಂಧನ ವ್ಯರ್ಥವಾಗುವುದನ್ನು ತಡೆದು ಮೈಲೇಜ್ ಪ್ರಮಾಣದಲ್ಲಿ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿರಲಿದೆ 2022ರ ಮಾರುತಿ ಬ್ರೆಝಾ

ಮಾರುತಿ ಸುಜುಕಿಯು ತನ್ನ ಹೊಸ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಗಳನ್ನು ತೆಗೆದುಹಾಕಿದ ನಂತರ ಡೀಸೆಲ್ ಕಾರುಗಳಲ್ಲಿದ್ದ ಮೈಲೇಜ್ ಪ್ರಮಾಣವನ್ನು ಪೆಟ್ರೋಲ್ ಮಾದರಿಗಳಲ್ಲೂ ಕಾಯ್ದುಕೊಳ್ಳುವ ಉದ್ದೇಶದಿಂದ ಪೆಟ್ರೋಲ್ ಮಾದರಿಗಳಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಬಳಕೆ ಆರಂಭಿಸಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿರಲಿದೆ 2022ರ ಮಾರುತಿ ಬ್ರೆಝಾ

ಇನ್ನು ಹೊಸ ಕಾರಿನಲ್ಲಿ ಕಂಪನಿಯು ಈ ಹಿಂದಿನ ಟಾರ್ಕ್ ಕನ್ವರ್ಟಕ್ ಗೇರ್‌ಬಾಕ್ಸ್ ಬದಲಾಗಿ 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಿದ್ದು, ಹೊಸ ಎಂಜಿನ್ ಮೂಲಕ ಕಾರು 104.6 ಬಿಎಚ್‌ಪಿ ಉತ್ಪಾದನೆ ಮೂಲಕ ಉತ್ತಮ ಇಂಧನ ದಕ್ಷತೆ ಕಾಯ್ದುಕೊಂಡಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿರಲಿದೆ 2022ರ ಮಾರುತಿ ಬ್ರೆಝಾ

ಇದರೊಂದಿಗೆ ಹೊಸ ಕಾರಿನಲ್ಲಿ ನವೀಕರಣಗೊಳಿಸಲಾದ ಎಂಜಿನ್ ಉನ್ನತೀಕರಣ ಸೇರಿದಂತೆ ಬದಲಾದ ಮುಂಭಾಗದ ವಿನ್ಯಾಸವು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದ್ದು, ನವೀಕರಿಸಲಾದ ಮುಂಭಾಗದ ವಿನ್ಯಾಸವು ಈ ಬಾರಿ ಸ್ಪೋರ್ಟಿಯಾಗಿ ಮತ್ತು ಹೆಚ್ಚು ಬಲಿಷ್ಠವಾಗಿ ಗಮನಸೆಳೆಯಲಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿರಲಿದೆ 2022ರ ಮಾರುತಿ ಬ್ರೆಝಾ

ಹೊಸ ಕಾರಿನಲ್ಲಿ ಕಂಪನಿಯು ಹೈ ಎಂಡ್ ಮಾದರಿಗಳಿಗಾಗಿ ಡ್ಯುಯಲ್ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಫಾಗ್ ಲ್ಯಾಂಪ್, ಆರಂಭಿಕ ಮಾದರಿಗಳಿಗಾಗಿ ಬಿ-ಹಾಲೊಜೆನ್ ಪ್ರೊಜೆಕ್ಟ್ ಹೆಡ್‌ಲ್ಯಾಂಪ್, ಸಂಪೂರ್ಣ ಕಪ್ಪು ಬಣ್ಣದ 16 ಇಂಚಿನ ಅಲಾಯ್ ವ್ಹೀಲ್ ಮತ್ತು ಬಾಡಿ ಕ್ಲಾಡಿಂಗ್ ನೀಡಲಾಗಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿರಲಿದೆ 2022ರ ಮಾರುತಿ ಬ್ರೆಝಾ

ಜೊತೆಗೆ ಹೊಸ ಕಾರಿನಲ್ಲಿ ಪ್ಯಾಡಲ್ ಶಿಫ್ಟರ್, ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ದೊಡ್ಡ ಟಚ್‌ಸ್ಕ್ರೀನ್, ಹೆಡ್ ಅಪ್ ಡಿಸ್‌ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಹೊಸ ಮಾದರಿಯ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ ಹೊಂದಿರಲಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿರಲಿದೆ 2022ರ ಮಾರುತಿ ಬ್ರೆಝಾ

ಇದರಲ್ಲದೆ 2022ರ ಬ್ರೆಝಾ ಹೆಚ್ಚು ಸುಧಾರಿತ ಕನೆಕ್ಟಿವಿಟಿ ಕಾರು ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಳ್ಳುತ್ತಿದ್ದು, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಕ್ಲೈಮೇಟ್ ಕಂಟ್ರೋಲ್ ಮತ್ತು ಹೆಡ್‌ಲೈಟ್ ಕಂಟ್ರೋಲ್‌ನಂತಹ ವೈಶಿಷ್ಟ್ಯತೆಗಳು ಪಡೆಯುವ ಸಾಧ್ಯತೆಗಳಿವೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿರಲಿದೆ 2022ರ ಮಾರುತಿ ಬ್ರೆಝಾ

ಹೊಸ ಬ್ರೆಝಾದ ಒಳಭಾಗ ಮತ್ತು 2022 ಬಲೆನೊದ ಒಳಭಾಗದ ನಡುವೆ ಸಾಕಷ್ಟು ಹೋಲಿಕೆಗಳಿದ್ದು, ಹೊಸ ವಿಟಾರಾ ಬ್ರೆಝಾದಲ್ಲಿ ಫ್ಲಾಟ್-ಬಾಟಮ್ ಸ್ಟೀರಿಂಗ್ ವ್ಹೀಲ್, ಹಿಲ್ ಹೋಲ್ಡ್, ಕ್ರೂಸ್ ಕಂಟ್ರೋಲ್ ಮುಂತಾದ ವೈಶಿಷ್ಟ್ಯತೆಗಳೊಂದಿಗೆ 4 ಸ್ಟಾರ್ ಗ್ಲೋಬರ್ ಕ್ರ್ಯಾಶ್ ಟೆಸ್ಟಿಂಗ್ ರೇಟಿಂಗ್ಸ್ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿರಲಿದೆ 2022ರ ಮಾರುತಿ ಬ್ರೆಝಾ

ಹೊಸ ಕಾರಿನಲ್ಲಿ ಕಂಪನಿಯು ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಿದ್ದು, ಹೊಸ ಕಾರಿನಲ್ಲಿ ಎಲೆಕ್ಟ್ರಿಕ್ ಸನ್‌ರೂಫ್, ಗರಿಷ್ಠ ಸುರಕ್ಷತೆಗಾಗಿ ಹೈ ಎಂಡ್ ಮಾದರಿಗಳಲ್ಲಿ 6 ಏರ್‌ಬ್ಯಾಗ್ ಜೋಡಣೆ ಹೊಂದಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿರಲಿದೆ 2022ರ ಮಾರುತಿ ಬ್ರೆಝಾ

ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ 6 ಸಿಂಗಲ್ ಟೋನ್(ಪರ್ಲ್ ಆರ್ಟಿಕ್ ವೈಟ್, ಪರ್ಲ್ ಸಿಲ್ವರ್, ಮೆಟಾಲಿಕ್ ಮ್ಯಾಗ್ಮಾ ಗ್ರೇ, ಸಿಜ್ಲಿಂಗ್ ರೆಡ್, ಎಕ್ಸೂಬೆರೆಂಟ್ ಬ್ಲ್ಯೂ, ಪರ್ಲ್ ಬ್ರೇವ್ ಕಾಕಿ) ಮತ್ತು 3 ಡ್ಯುಯಲ್ ಟೋನ್ ಬಣ್ಣದ(ಸಿಜ್ಲಿಂಗ್ ರೆಡ್ ಮತ್ತು ಬ್ಲ್ಯಾಕ್, ವೈಟ್ ಮತ್ತು ಕಾಕಿ ಬ್ರೇವ್, ಬ್ಲ್ಯಾಕ್ ಮತ್ತು ಸಿಲ್ವರ್) ಆಯ್ಕೆ ನೀಡಲಾಗಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿರಲಿದೆ 2022ರ ಮಾರುತಿ ಬ್ರೆಝಾ

ಈ ಮೂಲಕ ಬ್ರೆಝಾ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.84 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ. 11.49 ಲಕ್ಷ ಬೆಲೆ ಹೊಂದಿರುವ ಬ್ರೆಝಾ ಕಾರು ಹೊಸ ತಲೆಮಾರಿನ ಆವೃತ್ತಿಯೊಂದಿಗೆ ತುಸು ದುಬಾರಿಯಾಗಿರಲಿದೆ.

Article Published On: Wednesday, June 29, 2022, 11:30 [IST]
English summary
Maruti suzuki brezza will be available in 10 variants with hybrid powertrain
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+