ನವೀಕರಿಸಿದ ಬಲೆನೊ ಮಾದರಿಯಲ್ಲಿ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಲಿದೆ ಮಾರುತಿ ಸುಜುಕಿ

ದೇಶದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿಯು ತನ್ನ ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಾದ ಬಲೆನೊ 2022ರ ಆವೃತ್ತಿಯನ್ನು ಇದೇ ತಿಂಗಳು 23ರಂದು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಹೊಸ ಕಾರು ಮಾದರಿಯು ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ನವೀಕರಿಸಿದ ಬಲೆನೊ ಮಾದರಿಯಲ್ಲಿ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಲಿದೆ ಮಾರುತಿ ಸುಜುಕಿ

2022ರ ಬಲೆನೊ ಮಾದರಿಯೊಂದಿಗೆ ಮಾರುತಿ ಸುಜುಕಿ ಕಂಪನಿಯು ಹ್ಯಾಚ್‌ಬ್ಯಾಕ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಐ20 ಮತ್ತು ಟಾಟಾ ಆಲ್‌ಟ್ರೊಜ್ ಮಾದರಿಗಳಿಗೆ ಮತ್ತಷ್ಟು ಪೈಪೋಟಿ ನೀಡುವ ನೀರಿಕ್ಷೆಯಿದ್ದು, ಹೊಸ ಕಾರಿನಲ್ಲಿ ಉನ್ನತೀಕರಿಸಿದ ತಾಂತ್ರಿಕ ಸೌಲಭ್ಯಗಳೊಂದಿಗೆ ಸುಜುಕಿ ಕಾರ್ ಕನೆಕ್ಟ್ ತಂತ್ರಜ್ಞಾನದಲ್ಲೂ ಸಹ ಸುಧಾರಿತ ವೈಶಿಷ್ಟ್ಯತೆಗಳನ್ನು ಸೇರ್ಪಡೆಗೊಳಿಸಿದೆ.

ನವೀಕರಿಸಿದ ಬಲೆನೊ ಮಾದರಿಯಲ್ಲಿ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಲಿದೆ ಮಾರುತಿ ಸುಜುಕಿ

ಕಾರ್ ಕನೆಕ್ಟ್ ಫೀಚರ್ಸ್ ಕುರಿತಾಗಿ ಹೊಸ ಟೀಸರ್ ಸಹ ಬಿಡುಗಡೆ ಮಾಡಿರುವ ಮಾರುತಿ ಸುಜುಕಿ ಕಂಪನಿಯು ಒಂದೇ ಸೂರಿನಡಿ 40ಕ್ಕೂ ಹೆಚ್ಚು ತಾಂತ್ರಿಕ ಸೌಲಭ್ಯಗಳನ್ನು ಸ್ಮಾರ್ಟ್‌ಫೋನ್ ಮೂಲಕವೇ ನಿರ್ವಹಣೆ ಮಾಡಬಹುದಾಗಿದ್ದು, ಅಮೆಜಾನ್ ಅಲೆಕ್ಸಾ ವಾಯ್ಸ್ ಕಮಾಂಡ್ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದು.

ನವೀಕರಿಸಿದ ಬಲೆನೊ ಮಾದರಿಯಲ್ಲಿ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಲಿದೆ ಮಾರುತಿ ಸುಜುಕಿ

ಜೊತೆಗೆ ತುರ್ತುಸೇವೆಗಳಿಗಾಗಿ ಸುಧಾರಿತ ಟೆಲಿಮ್ಯಾಟಿಕ್ಸ್ ಪರಿಹಾರಗಳನ್ನು ಒಳಗೊಂಡಿರಲಿದ್ದು, ಸುಜುಕಿ ಕಾರ್ ಕನೆಕ್ಟ್ ಫೀಚರ್ಸ್‍ಗಳನ್ನು ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ಮೂಲಕ ಇಂಧನ ಲಭ್ಯತೆ, ಸಾಗಬಹುದಾದ ದೂರ, ಓಡೋಮೀಟರ್, ಕಾರ್ ಡಯಾಗ್ನೋಸಿಸ್, ಒಳಗೊಂಡಂತೆ ವಿವಿಧ ಮಾಹಿತಿಗಳ ಸಂಪೂರ್ಣ ಡೇಟಾ ಒದಗಿಸಲಿದೆ.

ನವೀಕರಿಸಿದ ಬಲೆನೊ ಮಾದರಿಯಲ್ಲಿ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಲಿದೆ ಮಾರುತಿ ಸುಜುಕಿ

ಕನೆಕ್ಟೆಡ್ ಕಾರ್ ಟೆಕ್ ವೈಶಿಷ್ಟ್ಯದ ಜೊತೆಗೆ ಮಾರುತಿ ಕಂಪನಿಯು ಹೊಸ ಬಲೆನೊದಲ್ಲಿ 9-ಇಂಚಿನ ಡಿಜಿಟಲ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 360 ಡಿಗ್ರಿ ವ್ಯೂ ಕ್ಯಾಮೆರಾ ಮತ್ತು ಹೆಡ್-ಅಪ್ ಡಿಸ್ಪ್ಲೇ (HUD) ಪರದೆ ಸೇರಿದಂತೆ ಈ ವಿಭಾಗದ ಮೊದಲ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ.

ನವೀಕರಿಸಿದ ಬಲೆನೊ ಮಾದರಿಯಲ್ಲಿ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಲಿದೆ ಮಾರುತಿ ಸುಜುಕಿ

ಹೊಸ ವೈಶಿಷ್ಟ್ಯತೆಗಳಲ್ಲಿ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕದೊಂದಿಗೆ 9.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹಿಂದಿನ ಮಾದರಿಗಳಿಂತೆ ಎಸಿ ವೆಂಟ್‌ಗಳು, ಫಾಸ್ಟ್ ಚಾರ್ಜಿಂಗ್ ಯುಎಸ್‌ಬಿ ಪೋರ್ಟ್‌, ಹೆಡ್ ಅಪ್ ಡಿಸ್ಪ್ಲೇ (ಎಚ್‌ಯುಡಿ) ಅನ್ನು ಒಳಗೊಂಡಿದೆ.

ನವೀಕರಿಸಿದ ಬಲೆನೊ ಮಾದರಿಯಲ್ಲಿ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಲಿದೆ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಈ ಬಾರಿ ಹೊಸ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಮಾದರಿಯಲ್ಲಿ ಹೆಚ್ಚಿನ ಸುರಕ್ಷತೆಗೆ ಒತ್ತು ನೀಡಿದ್ದು, ಉನ್ನತ ರೂಪಾಂತರದಲ್ಲಿ ಒಟ್ಟು 6 ಏರ್‌ಬ್ಯಾಗ್‌ಗಳ ಜೊತೆಗೆ ಸುರಕ್ಷತಾ ಸಾಧನಗಳನ್ನು ನವೀಕರಿಸಿದೆ.

ನವೀಕರಿಸಿದ ಬಲೆನೊ ಮಾದರಿಯಲ್ಲಿ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಲಿದೆ ಮಾರುತಿ ಸುಜುಕಿ

ಹೆಚ್ಚುವರಿ ಏರ್‌ಬ್ಯಾಗ್ ಸೌಲಭ್ಯದ ಜೊತೆಗೆ ಹೊಸ ಬಲೆನೊದಲ್ಲಿ ಹೊಸ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಹಿಲ್ ಹೋಲ್ಡ್ ಅಸಿಸ್ಟ್, ಕ್ರೂಸ್ ಕಂಟ್ರೋಲ್, ಎಬಿಎಸ್, ಇಎಸ್‌ಪಿ ಮತ್ತು ಇಬಿಡಿ ಸಹ ಸೇರ್ಪಡೆಯಾಗಲಿದ್ದು, 1.2 ಲೀಟರ್ ಡ್ಯುಯಲ್ ಜೆಟ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಹೊಂದಿದೆ.

ನವೀಕರಿಸಿದ ಬಲೆನೊ ಮಾದರಿಯಲ್ಲಿ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಲಿದೆ ಮಾರುತಿ ಸುಜುಕಿ

ಹೊಸ ಮಾದರಿಯು ಬಾಹ್ಯ ತಾಂತ್ರಿಕ ಅಂಶಗಳಲ್ಲಿ ಹಲವು ಬದಲಾವಣೆಗಳನ್ನು ಪಡೆದುಕೊಂಡರು ಎಂಜಿನ್ ಆಯ್ಕೆಯು ಈ ಮಾದರಿಯಲ್ಲಿರುವಂತೆ ಮುಂದುವರಿಸಲಾಗಿದ್ದು, 1.2 ಲೀಟರ್ ಪೆಟ್ರೋಲ್ ಮಾದರಿಯು 89 ಬಿಎಚ್‌ಪಿ ಮತ್ತು 113 ಎನ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ನವೀಕರಿಸಿದ ಬಲೆನೊ ಮಾದರಿಯಲ್ಲಿ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಲಿದೆ ಮಾರುತಿ ಸುಜುಕಿ

2020ರಲ್ಲಿ ಜಾರಿಗೆ ಹೊಸ ಬಂದ ಹೊಸ ಬಿಎಸ್ 6 ಮಾನದಂಡದ ನಂತರ ಮಾರುತಿ ಸುಜುಕಿ ಕಂಪನಿಯು ಸಂಪೂರ್ಣವಾಗಿ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿದ್ದು, ಕೇವಲ ಪೆಟ್ರೋಲ್, ಸ್ಮಾರ್ಟ್ ಹೈಬ್ರಿಡ್ ಹೊಂದಿರುವ ಪೆಟ್ರೋಲ್ ಮತ್ತು ಸಿಎನ್‌ಜಿ ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದೆ.

ನವೀಕರಿಸಿದ ಬಲೆನೊ ಮಾದರಿಯಲ್ಲಿ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಲಿದೆ ಮಾರುತಿ ಸುಜುಕಿ

ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಮಾದರಿಗಳ ಮೂಲಕ ಡೀಸೆಲ್ ಕಾರುಗಳಲ್ಲಿದ್ದ ಮೈಲೇಜ್ ಪ್ರಮಾಣವನ್ನು ಒದಗಿಸಲು ಯತ್ನಿಸಿರುವ ಮಾರುತಿ ಸುಜುಕಿ ಕಂಪನಿಯು ಸಿಎನ್‌ಜಿ ಮಾದರಿಗಳ ಮೇಲೆ ಹೆಚ್ಚಿನ ಗಮನಹರಿಸಿದೆ.

ನವೀಕರಿಸಿದ ಬಲೆನೊ ಮಾದರಿಯಲ್ಲಿ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಲಿದೆ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಈಗಾಗಲೇ ಪ್ರಮುಖ ಕಾರುಗಳಲ್ಲಿ ಸಿಎನ್‌ಜಿ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಇದುವರೆಗೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಸಿಎನ್‌ಜಿ ಕಾರುಗಳನ್ನು ಮಾರಾಟ ಮಾಡಿದೆ. ಇದೀಗ ಹೊಸದಾಗಿ ಬಿಡುಗಡೆಯಾಗಲಿರುವ 2022ರ ಬಲೆನೊ ಮಾದರಿಯಲ್ಲೂ ಸಿಎನ್‌ಜಿ ಮಾದರಿಗಳನ್ನು ಪರಿಚಯಿಸುವ ಸಾಧ್ಯತೆಗಳಿದ್ದು, ಹೊಸ ಕಾರುಗಳು ಪ್ರಮುಖ ಬದಲಾವಣೆಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳಲಿದೆ.

ನವೀಕರಿಸಿದ ಬಲೆನೊ ಮಾದರಿಯಲ್ಲಿ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಲಿದೆ ಮಾರುತಿ ಸುಜುಕಿ

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬಲೆನೊ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.14 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.66 ಲಕ್ಷ ತನಕ ಬೆಲೆ ಹೊಂದಿದ್ದು, ಹೊಸ ಬಲೆನೊ ಮಾದರಿಯು ಪ್ರಸ್ತುತ ಮಾದರಿಗಿಂತಲೂ ಸುಮಾರು ರೂ. 30 ಸಾವಿರದಿಂದ ರೂ. 60 ಸಾವಿರ ತನಕ ಹೆಚ್ಚುವರಿ ಬೆಲೆ ಹೊಂದಲಿದೆ.

ನವೀಕರಿಸಿದ ಬಲೆನೊ ಮಾದರಿಯಲ್ಲಿ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಲಿದೆ ಮಾರುತಿ ಸುಜುಕಿ

ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯು ಹ್ಯುಂಡೈ ಐ20, ಟಾಟಾ ಅಲ್ಟ್ರೋಸ್, ಹೋಂಡಾ ಜಾಝ್ ಮತ್ತು ಫೋಕ್ಸ್‌ವ್ಯಾಗನ್ ಪೊಲೊಗಳಿಗೆ ಉತ್ತಮ ಪೈಪೋಟಿಯಾಗಿದ್ದು, ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿರುವ ಗಮನಾರ್ಹ ಬದಲಾವಣೆ ಎನ್ನಬಹುದು.

Article Published On: Monday, February 21, 2022, 9:48 [IST]
English summary
Maruti suzuki new baleno to offer connected car tech
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+