ಮತ್ತೆ ರಸ್ತೆಗಿಳಿಯಲಿದೆ ಜನಪ್ರಿಯ ಮಾರುತಿ ಸುಜುಕಿ ಆಲ್ಟೋ ಕೆ10 ಕಾರು

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಭಾರತದಲ್ಲಿ ಆಲ್ಟೋ ಕೆ10 ಹ್ಯಾಚ್‌ಬ್ಯಾಕ್‌ನ ಹೊಸ ಆವೃತ್ತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಮಾರುತಿ ಸುಜಕಿ ಕಂಪನಿಯು ಸಾಮಾನ್ಯ ಆಲ್ಟೋದ ಮೂರು ರೂಪಾಂತರಗಳನ್ನು ಸ್ಥಗಿತಗೊಳಿಸಿದೆ.

ಮತ್ತೆ ರಸ್ತೆಗಿಳಿಯಲಿದೆ ಜನಪ್ರಿಯ ಮಾರುತಿ ಸುಜುಕಿ ಆಲ್ಟೋ ಕೆ10 ಕಾರು

ಹೊಸ ವರದಿಗಳ ಪ್ರಕಾರ, ಬಿಎಸ್ 6 ಮಾನದಂಡಗಳ ಅನುಷ್ಠಾನದಿಂದಾಗಿ ಸ್ಥಗಿತಗೊಂಡ ಎರಡು ವರ್ಷಗಳ ನಂತರ ಮಾರುತಿ ಆಲ್ಟೋ ಕೆ10 ಭಾರತೀಯ ಮಾರುಕಟ್ಟೆಗೆ ಮರುಪರಿಚಯಿಸಲು ನಿರ್ಧರಿಸಲಾಗಿದೆ ಕಾರಿಗೆ ಇನ್ನೂ ಮಾರುಕಟ್ಟೆ ಇದೆ ಮತ್ತು ಅದಕ್ಕೆ ಹೆಚ್ಚಿನ ಸ್ಪರ್ಧೆ ಇಲ್ಲ ಎಂದು ಕಾರು ತಯಾರಕರು ಭಾವಿಸಿದ್ದರಿಂದ ಕೆ10 ಅನ್ನು ಕೋಡ್ ನೇಮ್ Y0M ಮಾರುತಿ ಮರಳಿ ತರುತ್ತಿದೆ. ಮಾರುತಿ ಸುಜುಕಿ ನಿಯಮಿತ ಆಲ್ಟೋ ಸರಣಿಯನ್ನು ವಿಸ್ತರಿಸುತ್ತಿದೆ.

ಮತ್ತೆ ರಸ್ತೆಗಿಳಿಯಲಿದೆ ಜನಪ್ರಿಯ ಮಾರುತಿ ಸುಜುಕಿ ಆಲ್ಟೋ ಕೆ10 ಕಾರು

ಭಾರತೀಯ ಮಾರುಕಟ್ಟೆಯಿಂದ ಆಲ್ಟೋ ಹ್ಯಾಚ್‌ನ Std, LXi ಮತ್ತು LXi CNG ರೂಪಾಂತರಗಳನ್ನು ಕಾರು ತಯಾರಕರು ಸದ್ದಿಲ್ಲದೇ ಸ್ಥಗಿತಗೊಳಿಸಿದ್ದಾರೆ. ಮೂರು ರೂಪಾಂತರಗಳ ಕಡಿತದೊಂದಿಗೆ, 800ಸಿಸಿ ಆಲ್ಟೊದ ಬೆಲೆಗಳು ಈಗ ಎಕ್ಸ್ ಶೋ ರೂಂ ಪ್ರಕಾರ ರೂ3.39 ಲಕ್ಷದಿಂದ ಪ್ರಾರಂಭವಾಗುತ್ತವೆ

ಮತ್ತೆ ರಸ್ತೆಗಿಳಿಯಲಿದೆ ಜನಪ್ರಿಯ ಮಾರುತಿ ಸುಜುಕಿ ಆಲ್ಟೋ ಕೆ10 ಕಾರು

ಮಾರುತಿ ಸುಜುಕಿ ಆಲ್ಟೋವನ್ನು ಈಗ ಸಿಎನ್‌ಜಿಯನ್ನು ಇಂಧನವಾಗಿ ಬಳಸಲು ಬಯಸುವವರಿಗೆ [LXi (O)] ರೂಪಾಂತರದಲ್ಲಿ ಮಾತ್ರ ನೀಡಲಾಗುತ್ತದೆ. ಆಲ್ಟೋ ಕೆ10 ಅನ್ನು ಭಾರತೀಯ ಮಾರುಕಟ್ಟೆಗೆ ಹಿಂತಿರುಗಿಸುವುದರಿಂದ ಮಾರುತಿ ಸುಜುಕಿ ತನ್ನ ಇತರ ಕೊಡುಗೆಗಳೊಂದಿಗೆ ಮಾರಾಟದ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ

ಮತ್ತೆ ರಸ್ತೆಗಿಳಿಯಲಿದೆ ಜನಪ್ರಿಯ ಮಾರುತಿ ಸುಜುಕಿ ಆಲ್ಟೋ ಕೆ10 ಕಾರು

ನಿಯಮಿತ' ಆಲ್ಟೋ ಮತ್ತು ಎಸ್-ಪ್ರೆಸ್ಸೊ 2021/22 ಹಣಕಾಸು ವರ್ಷದಲ್ಲಿ ಸುಮಾರು 212,000 ಯುನಿಟ್‌ಗಳನ್ನು ಹೊಂದಿದೆ.ಆಲ್ಟೋ ಮಾರುತಿ ಸುಜುಕಿಯ ಇಲ್ಲಿಯವರೆಗೆ ಹೆಚ್ಚು ಮಾರಾಟವಾದ ಕಾರು. ಆಲ್ಟೋ ಮೊದಲ ಬಾರಿಗೆ 2000 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಕಾರಿನ ಮೊದಲ ತಲೆಮಾರಿನ ಕಾರು 2012 ರವರೆಗೆ ಇತ್ತು. ಆಲ್ಟೋದ ಎರಡನೇ ತಲೆಮಾರಿನ ನಂತರ ಸುಮಾರು ಮತ್ತು ಒಟ್ಟಾರೆಯಾಗಿ ಮಾರುತಿ 4.3 ಮಿಲಿಯನ್ (43 ಲಕ್ಷ) ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಮತ್ತೆ ರಸ್ತೆಗಿಳಿಯಲಿದೆ ಜನಪ್ರಿಯ ಮಾರುತಿ ಸುಜುಕಿ ಆಲ್ಟೋ ಕೆ10 ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಮಟ್ಟದ ಹ್ಯಾಚ್‌ಬ್ಯಾಕ್. 2005 ರಿಂದ 2018 ರವರೆಗೆ, ಡಿಜೈರ್ ಸೆಡಾನ್‌ನಿಂದ ಹಿಂದಿಕ್ಕುವ ಮೊದಲು ಆಲ್ಟೋ ಭಾರತದ ಅತ್ಯಂತ ಜನಪ್ರಿಯ ಕಾರು ಮಾದರಿ ಎಂಬ ದಾಖಲೆಯನ್ನು ಹೊಂದಿತ್ತು.

ಮತ್ತೆ ರಸ್ತೆಗಿಳಿಯಲಿದೆ ಜನಪ್ರಿಯ ಮಾರುತಿ ಸುಜುಕಿ ಆಲ್ಟೋ ಕೆ10 ಕಾರು

ಭಾರತದ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ವಿಭಾಗದ ಬೇಡಿಕೆಯು ವರ್ಷಗಳಲ್ಲಿ ಕಡಿಮೆಯಾಗುತ್ತಿದೆ. 2022ರ ಹಣಕಾಸು ವರ್ಷದಲ್ಲಿ, ಈ ವಿಭಾಗವು ಭಾರತದಲ್ಲಿನ ಎಲ್ಲಾ ಕಾರು ಮಾರಾಟಗಳಲ್ಲಿ ಕೇವಲ 7.8 ಪ್ರತಿಶತವನ್ನು ಹೊಂದಿದೆ. ಇದು ಆರ್ಥಿಕ ವರ್ಷ 2021 ಕ್ಕಿಂತ ಕಡಿಮೆಯಾಗಿದೆ, ಈ ವಿಭಾಗವು ದೇಶದಲ್ಲಿ ಮಾರಾಟವಾದ ಎಲ್ಲಾ ಕಾರುಗಳಲ್ಲಿ ಶೇಕಡಾ 9.8 ಮತ್ತು FY2020 ರಲ್ಲಿ ಶೇಕಡಾ 10.6 ರಷ್ಟಿತ್ತು.

ಮತ್ತೆ ರಸ್ತೆಗಿಳಿಯಲಿದೆ ಜನಪ್ರಿಯ ಮಾರುತಿ ಸುಜುಕಿ ಆಲ್ಟೋ ಕೆ10 ಕಾರು

ಭಾರತದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಮಾರುತಿ ಸುಜುಕಿ ದೇಶದಲ್ಲಿ ವಾಹನ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಮುಂಬರುವ ದಿನಗಳಲ್ಲಿ ಕಂಪನಿಯು ತನಗೆ ಹೆಚ್ಚು ಲಾಭ ತಂದುಕೊಡುತ್ತಿರುವ ಸಣ್ಣ ವಾಹನಗಳನ್ನು ಸ್ಥಗಿತಗೊಳಿಸಲು ಯೋಜಿಸುತ್ತಿದೆ ಎಂದು ಕೂಡ ವರದಿಗಳಾಗಿದೆ,

ಮತ್ತೆ ರಸ್ತೆಗಿಳಿಯಲಿದೆ ಜನಪ್ರಿಯ ಮಾರುತಿ ಸುಜುಕಿ ಆಲ್ಟೋ ಕೆ10 ಕಾರು

ಸಾಮಾನ್ಯ ಜನರಿಗೆ ಕೈಗೆಟುಕುವ ಬೆಲೆಗೆ ವಾಹನಗಳನ್ನು ತಯಾರಿಸುವ ಉದ್ದೇಶದಿಂದ ಕಂಪನಿಯು ಸಣ್ಣ ವಾಹನಗಳನ್ನು ತಯಾರಿಸಿದೆ. ಆದರೆ ಕೇಂದ್ರ ಸರ್ಕಾರದ ಹೊಸ ನೀತಿಗಳಿಂದಾಗಿ ಸಣ್ಣ ವಾಹನಗಳು ದುಬಾರಿಯಾಗುತ್ತಿವೆ. ಇದರಿಂದ ವಾಹನಗಳಿಗೆ ಬೇಡಿಕೆ ಕಡಿಮೆಯಾಗಿ ಕಂಪನಿಗೆ ನಷ್ಟವಾಗುತ್ತದೆ ಎಂದು ಮಾರುತಿ ಸುಜುಕಿ ಅಧ್ಯಕ್ಷ ಆರ್‌ಸಿ ಭಾರ್ಗವ ಹೇಳಿದ್ದಾರೆ. ಕೊರೊನಾದಿಂದಾಗಿ ಸೆಮಿಕಂಡಕ್ಟರ್ ಕೊರತೆ ಮತ್ತು ಪೂರೈಕೆ ಸರಪಳಿಯ ಅಡಚಣೆಗಳು ವಾಹನಗಳ ಉತ್ಪಾದನೆ ಮತ್ತು ಮಾರಾಟದ ಮೇಲೆ ಹೆಚ್ಚು ಪರಿಣಾಮ ಬೀರಿದೆ.

ಮತ್ತೆ ರಸ್ತೆಗಿಳಿಯಲಿದೆ ಜನಪ್ರಿಯ ಮಾರುತಿ ಸುಜುಕಿ ಆಲ್ಟೋ ಕೆ10 ಕಾರು

ಇದು ಕೂಡ ಎಲ್ಲಾ ಮಾದರಿಯ ವಾಹನಗಳ ಬೆಲೆಯಲ್ಲಿ ಅನಿರೀಕ್ಷಿತ ಏರಿಕೆಗೆ ಕಾರಣವಾಗಿದೆ. ಈಗ ಕಾರುಗಳಿಗೆ 6 ಏರ್‌ಬ್ಯಾಗ್ ನಿಯಮ ತಂದಿರುವುದರಿಂದ ಎಲ್ಲಾ ಪ್ರವೇಶ ಮಟ್ಟದ ಕಾರುಗಳು ದುಬಾರಿಯಾಗಲಿವೆ. ದ್ವಿಚಕ್ರ ವಾಹನದ ಬೆಲೆಯಲ್ಲಿ ಎಂಟ್ರಿ ಲೆವಲ್ ಕಾರು ಖರೀದಿಸಬಹುದು ಎಂದುಕೊಳ್ಳುವ ಗ್ರಾಹಕರಿಗೆ ನಿರಾಸೆಯಾಗುತ್ತದೆ. ಈ ವರ್ಷದ ಆರಂಭದಲ್ಲಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಅಕ್ಟೋಬರ್‌ನಿಂದ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳ ನಿಯಮವನ್ನು ಕಡ್ಡಾಯಗೊಳಿಸುವುದಾಗಿ ಹೇಳಿದ್ದರು.

ಮತ್ತೆ ರಸ್ತೆಗಿಳಿಯಲಿದೆ ಜನಪ್ರಿಯ ಮಾರುತಿ ಸುಜುಕಿ ಆಲ್ಟೋ ಕೆ10 ಕಾರು

ಕನಿಷ್ಠ 8 ಜನರು ಪ್ರಯಾಣಿಸುವ ಸಾಮರ್ಥ್ಯ ಹೊಂದಿರುವ ಕಾರುಗಳಿಗೆ ಹೊಸ ನಿಯಮ ಅನ್ವಯಿಸುತ್ತದೆ. ಪ್ರಯಾಣಿಕರ ಸುರಕ್ಷತೆಗಾಗಿ ಈ ನಿಯಮ ತರಲಾಗುತ್ತಿದೆ ಎಂದು ಗಡ್ಕರಿ ಹೇಳಿದ್ದರು. ಕಾರುಗಳಲ್ಲಿ ಏರ್‌ಬ್ಯಾಗ್ ಇಲ್ಲದಿರುವುದೇ ರಸ್ತೆ ಅಪಘಾತಗಳಲ್ಲಿ ಪ್ರಯಾಣಿಕರಿಗೆ ಭೀಕರ ಗಾಯಗಳು ಮತ್ತು ಸಾವಿಗೆ ಮುಖ್ಯ ಕಾರಣ ಎಂದು ಹೇಳಿದ್ದರು. ಕಳೆದ ಎರಡು ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ BS6 ಹೊರಸೂಸುವಿಕೆ ಮಾನದಂಡವನ್ನು ಅಳವಡಿಸಲಾಗಿದೆ, ಇದು ಸಾಲದೆಂಬಂತೆ ಕರೋನಾದಿಂದಾಗಿ ಕಚ್ಛಾ ವಸ್ತುಗಳು ದುಬಾರಿಯಾಗಿವೆ. ಇದರಿಂದಾಗಿ ಮಾರುತಿ ಸುಜುಕಿ ಈಗಾಗಲೇ 2021 ರಲ್ಲಿ 4 ಬಾರಿ ಮತ್ತು 2022 ರಲ್ಲಿ 3 ಬಾರಿ ಕಾರಿನ ಬೆಲೆಯನ್ನು ಹೆಚ್ಚಿಸಿದೆ.

ಮತ್ತೆ ರಸ್ತೆಗಿಳಿಯಲಿದೆ ಜನಪ್ರಿಯ ಮಾರುತಿ ಸುಜುಕಿ ಆಲ್ಟೋ ಕೆ10 ಕಾರು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕಟ್ಟುನಿಟ್ಟಾದ ಹೊರಸೂಸುವಿಕೆ ಮತ್ತು ಸುರಕ್ಷತಾ ಮಾನದಂಡಗಳ ಜೊತೆಗೆ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ವಿಭಾಗದ ಸ್ಥಿರ ಕುಸಿತವು 2020 ರಲ್ಲಿ ಆಲ್ಟೋ ಕೆ10 ಅನ್ನು ಮಾರುಕಟ್ಟೆಯಿಂದ ತೆಗೆದುಹಾಕಲು ಒಂದು ಕಾರಣವಾಗಿದೆ. ಮಾರುತಿ ಸುಜುಕಿಯು ಸರ್ಕಾರದ ಹೊಸ ನಿಯಮಗಳ ವಿರುದ್ಧ ಧ್ವನಿ ಎತ್ತುವ ಏಕೈಕ ಕಂಪನಿಯಾಗಿದೆ. ದೇಶದಲ್ಲಿ ಮಾರಾಟವಾಗುವ ಕಾರುಗಳಿಗೆ ಕನಿಷ್ಠ 6 ಏರ್‌ಬ್ಯಾಗ್‌ಗಳು, ಆದ್ದರಿಂದ ಕೆ10 ಅನ್ನು ಮರಳಿ ತರಲು ಈ ಕ್ರಮವು ಸ್ವಲ್ಪ ಗೊಂದಲಮಯವಾಗಿದೆ.

Most Read Articles

Kannada
English summary
Maruti suzuki to be launch new alto k10 hatchback soon details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X