ಶೀಘ್ರದಲ್ಲೇ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ಮಾರುತಿ ಸಿಯಾಜ್ ಕಾರು

ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ಸರಣಿಯಲ್ಲಿ ಹಲವು ವೈವಿಧ್ಯಮಯ ಮಾದರಿಗಳನ್ನು ಹೊಂದಿದೆ. ಮಾರುತಿ ಸುಜುಕಿ ಕಂಪನಿಯ ಬಹುತೇಕ ಎಲ್ಲಾ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಗಳಿಸಿದೆ.

ಶೀಘ್ರದಲ್ಲೇ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ಮಾರುತಿ ಸಿಯಾಜ್ ಕಾರು

ಇದೀಗ ಮಾರುತಿ ಸುಜುಕಿ ತನ್ನ ದೇಶೀಯ ಮಾದರಿಗಳಿಗೆ ಹೊಸ ಪವರ್‌ಟ್ರೇನ್ ಅನ್ನು ಪರಿಚಯಿಸಲು ಸಜ್ಜಾಗಿದೆ. ಲೀಟರ್ ಕೆ15ಸಿ ನಾಲ್ಕು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಎರ್ಟಿಗಾ ಫೇಸ್‌ಲಿಫ್ಟ್ ಮತ್ತು ನವೀಕರಿಸಿದ XL6 ನಲ್ಲಿ ಪ್ರಾರಂಭಗೊಳ್ಳುತ್ತದೆ. ಇನ್ನು ಹೊಸ ಬ್ರೆಝಾದಲ್ಲಿ ಲಭ್ಯವಾಗುವಂತೆ ನಿರೀಕ್ಷಿಸಲಾಗಿದೆ, 2022ರ ಜೂನ್ ತಿಂಗಳ ಸುಮಾರಿಗೆ ಎಸ್-ಕ್ರಾಸ್ ಮತ್ತು ಸಿಯಜ್ ಮಿಡ್ ಸೈಜ್ ಸೆಡಾನ್ ಅನ್ನು ಪ್ರಾರಂಭಿಸುತ್ತದೆ.

ಶೀಘ್ರದಲ್ಲೇ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ಮಾರುತಿ ಸಿಯಾಜ್ ಕಾರು

ಮಾರುತಿ ಸುಜುಕಿ ಸಿಯಾಜ್ 2014 ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿತ್ತು. ಇದನ್ನು ಆರಂಭದಲ್ಲಿ 1.4-ಲೀಟರ್ K14B ಪೆಟ್ರೋಲ್ ಮತ್ತು 1.3-ಲೀಟರ್ ಫಿಯೆಟ್ ಮೂಲದ ಡೀಸೆಲ್ ಎಂಜಿನ್‌ನೊಂದಿಗೆ ಮಾರಾಟ ಮಾಡಲಾಯಿತು.ಇದರಲ್ಲಿ ಪೆಟ್ರೋಲ್ ಎಂಜಿನ್ 95 ಬಿಹೆಚ್‍ಪಿ ಪವರ್ ಮತ್ತು 130 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಶೀಘ್ರದಲ್ಲೇ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ಮಾರುತಿ ಸಿಯಾಜ್ ಕಾರು

ಇನ್ನು ಡೀಸೆಲ್ ಎಂಜಿನ್‌ ಸುಮಾರು 90 ಬಿಹೆಚ್‍ಪಿ ಪವರ್ 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿತ್ತು 2018ರ ಆಗಸ್ಟ್ ತಿಂಗಳಿನಲ್ಲಿ ಸಿಯಾಜ್ ಒಂದು ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿತು ಮತ್ತು ಅದರ ಮೇಲೆ 1.4-ಲೀಟರ್ K14B ಪೆಟ್ರೋಲ್ ಎಂಜಿನ್ ಅನ್ನು ದೊಡ್ಡ 1.5-ಲೀಟರ್ K15B ಎಂಜಿನ್‌ನ ಪರವಾಗಿ ಬಿಡಲಾಯಿತು. 2019ರ ಮಾರ್ಚ್ ತಿಂಗಳಿನಲ್ಲಿ DDiS 200 ಡೀಸೆಲ್ ಮೋಟಾರ್ ಅನ್ನು ಸ್ಥಗಿತಗೊಳಿಸಲಾಯಿತು

ಶೀಘ್ರದಲ್ಲೇ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ಮಾರುತಿ ಸಿಯಾಜ್ ಕಾರು

1.5-ಲೀಟರ್ K15B ನಾಲ್ಕು ಸಿಲಿಂಡರ್ ಮ್ನೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ 104.7 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 1.5-ಲೀಟರ್ K15C ಡ್ಯುಯಲ್‌ಜೆಟ್ ಎಂಜಿನ್‌ನಿಂದ ಪ್ರತಿ ಸಿಲಿಂಡರ್‌ಗೆ ಎರಡು ಇಂಜೆಕ್ಟರ್‌ಗಳೊಂದಿಗೆ ಬದಲಾಯಿಸಲಾಗುವುದು ಮತ್ತು ಇದು ಇಂಧನ ಇಂಜೆಕ್ಷನ್‌ನ ಮೇಲೆ ಉತ್ತಮ ನಿಯಂತ್ರಣವನ್ನು ನೀಡುತ್ತದೆ.

ಶೀಘ್ರದಲ್ಲೇ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ಮಾರುತಿ ಸಿಯಾಜ್ ಕಾರು

ಇದರಿಂದಾಗಿ ಹೆಚ್ಚಿನ ಪವರ್ ಉತ್ಪಾದನೆ ಮತ್ತು ಹೆಚ್ಚಿನ ದಕ್ಷತೆಯನ್ನು ಪಡೆಯಬಹುದು. ಪ್ಯಾಡಲ್ ಶಿಫ್ಟರ್‌ನೊಂದಿಗೆ ಹೊಸ 6-ಸ್ಪೀಡ್ ಟಾರ್ಕ್ ಕರ್ನ್ವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಒಂದು ಆಯ್ಕೆಯಾಗಿರಬಹುದು ಆದರೆ ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸ್ಟ್ಯಾಂಡರ್ಡ್ ಆಗಿ ಸಂಯೋಜಿಸಲ್ಪಡುತ್ತದೆ.

ಶೀಘ್ರದಲ್ಲೇ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ಮಾರುತಿ ಸಿಯಾಜ್ ಕಾರು

2022ರ ಮಾರುತಿ ಸುಜುಕಿ ಸಿಯಾಜ್ ಮುಂಬರುವ ವಾರಗಳಲ್ಲಿ ಬಿಡುಗಡೆಯಾಗಬಹುದು ಮತ್ತು ಇದು ಸಣ್ಣ ಕಾಸ್ಮೆಟಿಕ್ ಪರಿಷ್ಕರಣೆಗಳು ಮತ್ತು ಆಂತರಿಕ ನವೀಕರಣಗಳನ್ನು ಪಡೆಯಬಹುದು. ಮಾರುತಿ ಸುಜುಕಿ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಸಿಯಾಜ್ ಮಿಡ್ ಸೈಜ್ ಸೆಡಾನ್‌ಗಾಗಿ ನಾಲ್ಕು ಹೊಸ ಬಣ್ಣಗಳ ಆಯ್ಕೆಯನ್ನು ಇತ್ತೀಚೆಗೆ ಸೇರಿಸಿತು.

ಶೀಘ್ರದಲ್ಲೇ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ಮಾರುತಿ ಸಿಯಾಜ್ ಕಾರು

ಮಾರುತಿ ಸಿಯಾಜ್ ಮಾದರಿಯು ಸೆಲೆಸ್ಟಿಯಲ್ ಬ್ಲೂ, ಸ್ಪ್ಲೆಂಡಿಡ್ ಸಿಲ್ವರ್, ಒಪ್ಯುಲೆಂಟ್ ರೆಡ್ ಮತ್ತು ಗ್ರ್ಯಾಂಡ್ಯೂರ್ ಗ್ರೇ: ಪ್ರೈಮ್ ಡಿಗ್ನಿಟಿ ಬ್ರೌನ್, ಪರ್ಲ್ ಆರ್ಕ್ಟಿಕ್ ವೈಟ್ ಮತ್ತು ಮಿಡ್ನೈಟ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಸಿಯಾಜ್ ಕಾರಿನ ನೆಕ್ಸಾ ಬ್ಲೂ, ಸಾಂಗ್ರಿಯಾ ರೆಡ್ ಮತ್ತು ಮ್ಯಾಗ್ಮಾ ಗ್ರೇ ಬಣ್ಣಗಳ ಆಯ್ಕೆಗಳನ್ನು ಸ್ಥಗಿತಗೊಳಿಸಿದ್ದಾರೆ.

ಶೀಘ್ರದಲ್ಲೇ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ಮಾರುತಿ ಸಿಯಾಜ್ ಕಾರು

ಈ ಮಾರುತಿ ಸಿಯಾಜ್ ಕಾರಿನಲ್ಲಿ ಮುಂಭಾಗದ ಗ್ರಿಲ್, ನಯವಾದ ಬಂಪರ್ ಮತ್ತು ಎಲ್ ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳನ್ನು ಪಡೆದುಕೊಂಡಿತು. ಹಲವಾರು ಕ್ರೋಮ್ ಅಲಂಕಾರಗಳೂ ಇವೆ, ಮತ್ತು ಸ್ಟೀರಿಂಗ್ ವೀಲ್, ಒಳಗಿನ ಡೋರ್ ಹ್ಯಾಂಡಲ್‌ಗಳು, ಎಸಿ ಲೌವ್ರೆಸ್ ನಾಬ್ ಮತ್ತು ಪಾರ್ಕಿಂಗ್ ಬ್ರೇಕ್ ಲಿವರ್ ಹೊಂದಿದೆ.

ಶೀಘ್ರದಲ್ಲೇ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ಮಾರುತಿ ಸಿಯಾಜ್ ಕಾರು

ಈ ಮಾರುತಿ ಸಿಯಾಜ್ ಕಾರಿನ ಒಳಭಾಗದಲ್ಲಿ, ಸಿಯಾಜ್ 4.2 ಇಂಚಿನ ಟಿಎಫ್‌ಟಿ ಮಲ್ಟಿ-ಇನ್ಫರ್ಮೇಷನ್ ಡಿಸ್‌ಪ್ಲೇ (ಎಂಐಡಿ) ಯೊಂದಿಗೆ ಬರುತ್ತದೆ. ಪ್ರಯಾಣಿಕರಿಗೆ ಸ್ಟ್ಯಾಂಡರ್ಡ್ ಆಗಿ ಹಿಂಭಾಗದ ಎಸಿ ವೆಂಟ್‌ಗಳಿವೆ. ಮುಂದಿನ ಸೀಟುಗಳು ಮತ್ತು ಹಿಂಭಾಗದ ಸೀಟುಗಳು ಸೆಂಟರ್ ಆರ್ಮ್‌ರೆಸ್ಟ್ ಅನ್ನು ಕೂಡ ಪಡೆಯುತ್ತವೆ. ಮುಂಭಾಗದ ಸೀಟಿನ ಆರ್ಮ್‌ರೆಸ್ಟ್ ಅದರ ಅಡಿಯಲ್ಲಿ ಸ್ಟ್ರೋರೇಂಜ್ ಸ್ಪೇಸ್ ಹೊಂದಿದ್ದರೆ ಹಿಂಭಾಗದ ಸೀಟಿನ ಆರ್ಮ್‌ರೆಸ್ಟ್ ಕಪ್ ಹೋಲ್ಡರ್‌ಗಳನ್ನು ಪಡೆಯುತ್ತದೆ .ಸಿಯಾಜ್ ಅನ್ನು ಕೀಲೆಸ್ ಎಂಟ್ರಿ, ಕ್ರೂಸ್ ಕಂಟ್ರೋಲ್, ಎಲೆಕ್ಟ್ರಿಕಲ್ ಅಡ್ಜಸ್ಟಬಲ್ ಒಆರ್‌ವಿಎಮ್‌ಗಳು ಮತ್ತು ಇತರ ಫೀಚರ್‌ಗಳನ್ನು ಕೂಡ ಒಳಗೊಂಡಿವೆ.

ಶೀಘ್ರದಲ್ಲೇ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ಮಾರುತಿ ಸಿಯಾಜ್ ಕಾರು

ಇನ್ನು ಈ ಮಾರುತಿ ಸಿಯಾಜ್ ಕಾರಿನಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ, ಸಿಯಾಜ್ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ಸ್ಪೀಡ್ ಅಲರ್ಟ್ ಸಿಸ್ಟಮ್ ಮತ್ತು ಡ್ರೈವರ್ ಮತ್ತು ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್ ಫೀಚರ್ಸ್ ಅನ್ನು ನೀಡಲಾಗಿದೆ.

ಶೀಘ್ರದಲ್ಲೇ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ಮಾರುತಿ ಸಿಯಾಜ್ ಕಾರು

ಇನ್ನು ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು 170,395 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. 2021ರ ಮಾರ್ಚ್ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 167,014 ವಾಹನಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಕೇವಲ 2 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿದ್ದಾರೆ. ಇನ್ನು 2022ರ ಫೆಬ್ರವರಿ ತಿಂಗಳಿನಲ್ಲಿ 164,056 ಯುನಿಟ್‌ಗಳನ್ನು ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಮಾರುತಿ ಸುಜುಕಿ ತಿಂಗಳಿನಿಂದ ತಿಂಗಳಿಗೆ ಶೇಕಡಾ 3.8 ರಷ್ಟು ಬೆಳವಣಿಗೆಯನ್ನು ಕಂಡಿದೆ.

ಶೀಘ್ರದಲ್ಲೇ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ಮಾರುತಿ ಸಿಯಾಜ್ ಕಾರು

ಮಾರುತಿ ಸುಜುಕಿ ಕಂಪನಿಯು ತನ್ನ ಹಲವು ಜನಪ್ರಿಯ ಮಾದರಿಗಳು ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ, ಇದರ ಮೂಲಕ ಮಾರುತಿ ಸುಜುಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಕಾರು ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.

Article Published On: Friday, April 15, 2022, 10:33 [IST]
English summary
Maruti suzuki to be offers new k15c petrol engine for ciaz sedan details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+