600 ಕಿ.ಮೀ ಮೈಲೇಜ್ ನೀಡುವ Mercedes-Benz ನ ಈ ಐಷಾರಾಮಿ ಕಾರು ಭಾರತದಲ್ಲಿ ತಯಾರಾಗಲಿದೆ!
Mercedes-Benz ಶೀಘ್ರದಲ್ಲೇ ತನ್ನ ಹೊಸ ಎಲೆಕ್ಟ್ರಿಕ್ ಸೆಡಾನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ವರ್ಷ ಭಾರತದಲ್ಲಿ EQS (Mercedes-Benz EQS) ಅನ್ನು ಪ್ರಾರಂಭಿಸುವುದಾಗಿ ಕಂಪನಿಯು ಬಹಿರಂಗಪಡಿಸಿದೆ. ಪುಣೆಯ ಚಕನ್ ಸ್ಥಾವರದಲ್ಲಿ ಕಂಪನಿಯು ಈ ಹೊಸ ಎಲೆಕ್ಟ್ರಿಕ್ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇದನ್ನು ನಾಕ್ಡ್ ಡೌನ್ ಯುನಿಟ್ (ಸಿಕೆಡಿ) ಆಗಿ ಭಾರತಕ್ಕೆ ತರಲಾಗುತ್ತಿದ್ದು ಇದನ್ನು ಸ್ಥಳೀಯವಾಗಿ ಜೋಡಿಸಲು ಯೋಜಿಸಲಾಗಿದೆ. EQS ಭಾರತದಲ್ಲಿ ಬೆಂಝ್ ಕಂಪನಿಯ ಎರಡನೇ ಎಲೆಕ್ಟ್ರಿಕ್ ಕಾರ್ ಆಗಿದ್ದು, ಈ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಎರಡು ರೂಪಾಂತರಗಳಲ್ಲಿ ಲಭ್ಯ
EQS ಎಲೆಕ್ಟ್ರಿಕ್ ಸೆಡಾನ್ ಎರಡು ಟ್ರಿಮ್‌ಗಳಲ್ಲಿ ಲಭ್ಯವಿರುತ್ತದೆ - EQS 450+ ಮತ್ತು EQS 580 4MATIC. EQS 450+ ಬೇಸ್ ರೂಪಾಂತರವಾಗಿದ್ದು, ಹಿಂದಿನ ಆಕ್ಸಲ್‌ನಲ್ಲಿ ಒಂದೇ ಎಲೆಕ್ಟ್ರಿಕ್ ಮೋಟರ್ ಅನ್ನು ಅಳವಡಿಸಲಾಗಿದೆ. ಜೊತೆಗೆ 328 Bhp ಪವರ್ ಮತ್ತು 568 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ.

EQS 580 4MATIC ಆಲ್-ವೀಲ್-ಡ್ರೈವ್ (AWD) ಉನ್ನತ ಶ್ರೇಣಿಯ ಟ್ರಿಮ್ ಆಗಿದ್ದು ಅದು ಮುಂಭಾಗ ಮತ್ತು ಹಿಂಭಾಗದ ಆಕ್ಸಲ್‌ಗಳಲ್ಲಿ ಎಲೆಕ್ಟ್ರಿಕ್ ಮೋಟರ್ ಅನ್ನು ಪಡೆಯುತ್ತದೆ. ಇದು ಒಟ್ಟು 516 Bhp ಪವರ್ ಮತ್ತು 855 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಕಾರು ಕೇವಲ 4.1 ಸೆಕೆಂಡ್‌ಗಳಲ್ಲಿ 0-100 ಕಿಮೀ ವೇಗವನ್ನು ತಲುಪುತ್ತದೆ.

600 ಕಿ.ಮೀ ಮೈಲೇಜ್
ವರದಿಗಳ ಪ್ರಕಾರ, EQS ಕಂಪನಿಯ ಎರಡನೇ ದೀರ್ಘ ಶ್ರೇಣಿಯ ಎಲೆಕ್ಟ್ರಿಕ್ ಕಾರ್ ಆಗಿದ್ದು, ಸುಮಾರು 600 ಕಿ.ಮೀ. ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. Mercedes-Benz EQS ಗೆ ಗಾಳಿಯ ಒತ್ತಡವನ್ನು ಕಡಿಮೆ ಮಾಡಲು ಮತ್ತು ಹೆಚ್ಚಿನ ಶ್ರೇಣಿಯನ್ನು ಒದಗಿಸಲು ಏರೋಡೈನಾಮಿಕ್ ವಿನ್ಯಾಸವನ್ನು ನೀಡಲಾಗಿದೆ.

ಮರ್ಸಿಡಿಸ್ ಈ SUV ನಲ್ಲಿ ಹೊಸ MBUX ಹೈಪರ್‌ಸ್ಕ್ರೀನ್ ಅನ್ನು ಬಳಸಿದೆ. ಈ ಹೈಪರ್‌ಸ್ಕ್ರೀನ್ ಮೂರು ಪ್ರತ್ಯೇಕ ಪರದೆಗಳನ್ನು ಸಂಯೋಜಿಸಿ ಒಂದು ದೈತ್ಯ ಸ್ಕ್ರೀನ್ ಅನ್ನು ರೂಪಿಸುತ್ತದೆ. ಈ ಪರದೆಯು ಡ್ಯಾಶ್‌ಬೋರ್ಡ್‌ನ ಸಂಪೂರ್ಣ ಅಗಲವನ್ನು ವ್ಯಾಪಿಸುತ್ತದೆ. MBUX ಸ್ಕ್ರೀನ್, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಮನರಂಜನಾ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ಕಡಿಮೆ ಸಮಯದಲ್ಲಿ ಫುಲ್ ಚಾರ್ಜ್
ಚಾರ್ಜಿಂಗ್ ಬಗ್ಗೆ ಮಾತನಾಡುವುದಾದರೆ, EQS ನಲ್ಲಿ ನೀಡಲಾದ 107.8 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಚಾರ್ಜ್ ಮಾಡಲು ಎರಡು ರೀತಿಯ ಚಾರ್ಜರ್‌ಗಳನ್ನು ಒದಗಿಸಲಾಗಿದೆ. ಮೊದಲನೆಯದು 11 kW ಸ್ಟ್ಯಾಂಡರ್ಡ್ ಚಾರ್ಜರ್ ಮತ್ತು ಎರಡನೆಯದು 22 kW ವೇಗದ ಚಾರ್ಜರ್ ಆಗಿದ್ದು, ಕಂಪನಿಯು ಒಂದು ಆಯ್ಕೆಯಾಗಿ ಲಭ್ಯವಾಗುವಂತೆ ಮಾಡುತ್ತದೆ.

ಕಂಪನಿಯು ಅತ್ಯುನ್ನ ತಂತ್ರಜ್ಜಾನ ಬಳಸಿ ತಯಾರಿಸಲಾದ ವೇಗದ ಚಾರ್ಜರ್ ಸಹಾಯದಿಂದ, ಈ ಕಾರು ಕೇವಲ 35 ನಿಮಿಷಗಳಲ್ಲಿ ಶೇಕಡಾ 10 ರಿಂದ 80 ರಷ್ಟು ಚಾರ್ಜ್ ಆಗುತ್ತದೆ. ಸರಳವಾದ 240 ವೋಲ್ಟ್ ವಾಲ್ ಸಾಕೆಟ್‌ನೊಂದಿಗೆ ಚಾರ್ಜ್ ಮಾಡಲು ಇದು ಸಂಪೂರ್ಣ 11 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Mercedes-Benz EQS ಮೊದಲು ಯುರೋಪಿಯನ್ ಮತ್ತು US ಮಾರುಕಟ್ಟೆಗಳಲ್ಲಿ ಮಾರಾಟವಾಗಲಿದೆ. ಇದರ ನಂತರ, EQE, EQS ಮತ್ತು EQE ನ ಕ್ರಾಸ್ಒವರ್ ಮಾದರಿಗಳನ್ನು ಭಾರತಕ್ಕೆ ತರಲಾಗುತ್ತದೆ. ಈ ಎಲ್ಲಾ ಎಲೆಕ್ಟ್ರಿಕ್ ಕಾರುಗಳನ್ನು ಮಾಡ್ಯುಲರ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುತ್ತಿದ್ದು ಅದು ಒಂದೇ ವೀಲ್‌ಬೇಸ್ ಮತ್ತು ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ.

ಈ ವರ್ಷ 6 ಎಲೆಕ್ಟ್ರಿಕ್ ಮಾದರಿಗಳ ಬಿಡುಗಡೆ
2022ರ ಅಂತ್ಯದ ವೇಳೆಗೆ EQ ಶ್ರೇಣಿಯ 6 ವಿಭಿನ್ನ ಎಲೆಕ್ಟ್ರಿಕ್ ಮಾದರಿಗಳನ್ನು ಪ್ರಾರಂಭಿಸುವುದಾಗಿ Mercedes-Benz ಈಗಾಗಲೇ ಘೋಷಿಸಿದೆ. ಕಂಪನಿಯು ಪ್ರಮುಖ ಸೆಡಾನ್‌ಗಳಾದ EQA, EQB, EQE ಮತ್ತು EQS ಅನ್ನು EQ ಬ್ರಾಂಡ್‌ನ ಅಡಿಯಲ್ಲಿ ತರಲಿದೆ.

ಅಷ್ಟೇ ಅಲ್ಲ, ಕಂಪನಿಯು 2025 ರ ವೇಳೆಗೆ 25 ಹೊಸ ಪ್ಲಗ್-ಇನ್ ಹೈಬ್ರಿಡ್ ಮಾದರಿಗಳನ್ನು ತರಲಿದ್ದು, ಇವು ಅತ್ಯಾಧುನಿಕ ತಂತ್ರಜ್ಞಾನವನ್ನು ಪಡೆದುಕೊಂಡಿರಲಿವೆ. ಮೂಲಸೌಕರ್ಯಗಳ ಲಭ್ಯತೆಗೆ ಅನುಗುಣವಾಗಿ ಕಂಪನಿಯು ಈ ಕಾರುಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ.

Mercedes-Benz EQS ಕಂಪನಿಯ S-ಕ್ಲಾಸ್ ಸೆಡಾನ್‌ನ ಎಲೆಕ್ಟ್ರಿಕ್ ಆವೃತ್ತಿಯಾಗಿದೆ ಮತ್ತು EQ ಸರಣಿಯಲ್ಲಿ ಬಿಡುಗಡೆಯಾಗುವ ಮೊದಲನೆಯದಾಗಿದೆ. Mercedes-Benz EQS ಅನ್ನು ಜರ್ಮನಿಯಲ್ಲಿರುವ ಸ್ಪ್ರಿಂಗ್‌ಫೀಲ್ಡ್ ಸ್ಥಾವರದಲ್ಲಿ ತಯಾರಿಸಲಾಗುವುದು ಮತ್ತು 2022 ರ ಮಧ್ಯದಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.


Click it and Unblock the Notifications








