ಒಂದೇ ಚಾರ್ಜ್‌ನಲ್ಲಿ 600 ಕಿ.ಮೀ ಮೈಲೇಜ್ ನೀಡಲಿದೆ ಹೊಸ Mercedes-Benz EQS

ಜರ್ಮನ್ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್-ಬೆಂಝ್ ತನ್ನ ಹೊಸ ಎಲೆಕ್ಟ್ರಿಕ್ SUV EQS ಅನ್ನು ಅನಾವರಣಗೊಳಿಸಿದೆ. ಇದು ಕಂಪನಿಯ ಪ್ರಮುಖ ಎಲೆಕ್ಟ್ರಿಕ್ SUV ಆಗಿದ್ದು ಇದನ್ನು 7-ಸೀಟರ್ ಆಯ್ಕೆಯಲ್ಲಿ ಪರಿಚಯಿಸಲಾಗಿದೆ. ಕಂಪನಿಯು ಆರಂಭದಲ್ಲಿ ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಯುರೋಪ್ ಮತ್ತು ಅಮೆರಿಕದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಿದೆ.

ಒಂದೇ ಚಾರ್ಜ್‌ನಲ್ಲಿ 600 ಕಿ.ಮೀ ಮೈಲೇಜ್ ನೀಡಲಿದೆ ಹೊಸ Mercedes-Benz EQS

ಮರ್ಸಿಡಿಸ್-ಬೆಂಝ್ ತನ್ನ ಹೊಸ ಎಲೆಕ್ಟ್ರಿಕ್ SUV EQS ಕಂಪನಿಯ ಅತ್ಯಂತ ವಿಶೇಷವಾದ ಎಲೆಕ್ಟ್ರಿಕ್ ಎಸ್‌ಯುವಿ ಎಂದು ಕಂಪನಿ ಹೇಳಿಕೊಂಡಿದೆ. ಇದನ್ನು ಅತ್ಯಂತ ಶಕ್ತಿಶಾಲಿ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ಪರಿಚಯಿಸಲಾಗಿದೆ.

600 ಕಿ.ಮೀ ಮೈಲೇಜ್

EQS ಎಲೆಕ್ಟ್ರಿಕ್ SUV ಕಂಪನಿಯ ಎರಡನೇ ದೀರ್ಘ ಶ್ರೇಣಿಯ ಎಲೆಕ್ಟ್ರಿಕ್ ಕಾರು ಎಂದು ಕಂಪನಿ ತಿಳಿಸಿದೆ, ಇದು 500 ಕಿ.ಮೀ. Mercedes-Benz EQS ಎರಡು ಟ್ರಿಮ್‌ಗಳಲ್ಲಿ ಲಭ್ಯವಾಗಲಿದೆ - EQS 450 Plus ಮತ್ತು EQS 580 ಎರಡೂ ಟ್ರಿಮ್‌ಗಳಲ್ಲಿ 108.7 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಬಳಸಲಾಗಿದೆ.

ಒಂದೇ ಚಾರ್ಜ್‌ನಲ್ಲಿ 600 ಕಿ.ಮೀ ಮೈಲೇಜ್ ನೀಡಲಿದೆ ಹೊಸ Mercedes-Benz EQS

EQS 450 ಪ್ಲಸ್ ಮೂಲ ರೂಪಾಂತರವಾಗಿದೆ, ಇದು ಹಿಂದಿನ ಆಕ್ಸಲ್‌ನಲ್ಲಿ ಎಲೆಕ್ಟ್ರಿಕ್ ಮೋಟರ್ ಅನ್ನು ಪಡೆಯುತ್ತದೆ. ಈ ಕಾರು 324 ಬಿಎಚ್‌ಪಿ ಪವರ್ ಮತ್ತು 550 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಒಂದೇ ಚಾರ್ಜ್‌ನಲ್ಲಿ 600 ಕಿ.ಮೀ ಮೈಲೇಜ್ ನೀಡಲಿದೆ ಹೊಸ Mercedes-Benz EQS

EQS 580 4-ವೀಲ್ ಡ್ರೈವ್ ವ್ಯವಸ್ಥೆಯನ್ನು ಪಡೆಯುವ ಉನ್ನತ ರೂಪಾಂತರವಾಗಿದೆ. ಈ ಮಾದರಿಯ ಎರಡೂ ಆಕ್ಸಲ್‌ಗಳಲ್ಲಿ ಎಲೆಕ್ಟ್ರಿಕ್ ಮೋಟರ್ ಅನ್ನು ಸ್ಥಾಪಿಸಲಾಗಿದೆ. ಈ ಮಾದರಿಯು 509 bhp ಪವರ್ ಮತ್ತು 828 ನ್ಯೂಟನ್ ಮೀಟರ್ ಪೀಕ್ ಟಾರ್ಕ್ ಅನ್ನು ನೀಡುತ್ತದೆ. ಈ ಕಾರು ಕೇವಲ 4.1 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಒಂದೇ ಚಾರ್ಜ್‌ನಲ್ಲಿ 600 ಕಿ.ಮೀ ಮೈಲೇಜ್ ನೀಡಲಿದೆ ಹೊಸ Mercedes-Benz EQS

EQSನ ವಿನ್ಯಾಸ

Mercedes-Benz EQS ಗೆ ಗಾಳಿಯ ಒತ್ತಡವನ್ನು ಕಡಿಮೆ ಮಾಡಲು ಮತ್ತು ಹೆಚ್ಚಿನ ಶ್ರೇಣಿಯನ್ನು ಒದಗಿಸಲು ಏರೋಡೈನಾಮಿಕ್ ವಿನ್ಯಾಸವನ್ನು ನೀಡಲಾಗಿದೆ. ಮರ್ಸಿಡಿಸ್ ಈ SUV ನಲ್ಲಿ ಹೊಸ MBUX ಹೈಪರ್‌ಸ್ಕ್ರೀನ್ ಅನ್ನು ಬಳಸಿದೆ.

ಒಂದೇ ಚಾರ್ಜ್‌ನಲ್ಲಿ 600 ಕಿ.ಮೀ ಮೈಲೇಜ್ ನೀಡಲಿದೆ ಹೊಸ Mercedes-Benz EQS

ಈ ಹೈಪರ್‌ಸ್ಕ್ರೀನ್ ಮೂರು ಪ್ರತ್ಯೇಕ ಪರದೆಗಳನ್ನು ಸಂಯೋಜಿಸಿ ಒಂದು ದೈತ್ಯ ಪರದೆಯನ್ನು ರೂಪಿಸುತ್ತದೆ. ಈ ಪರದೆಯು ಡ್ಯಾಶ್‌ಬೋರ್ಡ್‌ನ ಸಂಪೂರ್ಣ ಅಗಲವನ್ನು ವ್ಯಾಪಿಸುತ್ತದೆ. MBUX ಸ್ಕ್ರೀನ್, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಮನರಂಜನಾ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ಒಂದೇ ಚಾರ್ಜ್‌ನಲ್ಲಿ 600 ಕಿ.ಮೀ ಮೈಲೇಜ್ ನೀಡಲಿದೆ ಹೊಸ Mercedes-Benz EQS

ಕಡಿಮೆ ಸಮಯದಲ್ಲಿ ಫುಲ್ ಚಾರ್ಜ್

ಚಾರ್ಜಿಂಗ್ ಕುರಿತು ಮಾತನಾಡುವುದಾದರೆ, ಈ SUV ವೇಗದ ಚಾರ್ಜರ್ ಸಹಾಯದಿಂದ ಕೇವಲ 35 ನಿಮಿಷಗಳಲ್ಲಿ ಶೇ10-80 ರಷ್ಟು ಚಾರ್ಜ್ ಆಗುತ್ತದೆ. Mercedes-Benz EQS ಮೊದಲು ಯುರೋಪಿಯನ್ ಮತ್ತು US ಮಾರುಕಟ್ಟೆಗಳಲ್ಲಿ ಮಾರಾಟವಾಗಲಿದೆ.

ಒಂದೇ ಚಾರ್ಜ್‌ನಲ್ಲಿ 600 ಕಿ.ಮೀ ಮೈಲೇಜ್ ನೀಡಲಿದೆ ಹೊಸ Mercedes-Benz EQS

ಇದನ್ನು EQE, EQS ಮತ್ತು EQE ನ ಕ್ರಾಸ್ಒವರ್ ಮಾದರಿಗಳು ಅನುಸರಿಸುತ್ತವೆ. ಈ ಎಲ್ಲಾ ಎಲೆಕ್ಟ್ರಿಕ್ ಕಾರುಗಳನ್ನು ಮಾಡ್ಯುಲರ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುತ್ತಿದ್ದು, ಒಂದೇ ವೀಲ್‌ಬೇಸ್ ಮತ್ತು ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ.

ಒಂದೇ ಚಾರ್ಜ್‌ನಲ್ಲಿ 600 ಕಿ.ಮೀ ಮೈಲೇಜ್ ನೀಡಲಿದೆ ಹೊಸ Mercedes-Benz EQS

ಈ ವರ್ಷ 6 ಎಲೆಕ್ಟ್ರಿಕ್ ಮಾದರಿಗಳ ಬಿಡುಗಡೆ

2022ರ ಅಂತ್ಯದ ವೇಳೆಗೆ EQ ಶ್ರೇಣಿಯ 6 ವಿಭಿನ್ನ ಎಲೆಕ್ಟ್ರಿಕ್ ಮಾದರಿಗಳನ್ನು ಪ್ರಾರಂಭಿಸುವುದಾಗಿ Mercedes-Benz ಈಗಾಗಲೇ ಘೋಷಿಸಿದೆ. ಕಂಪನಿಯು ಪ್ರಮುಖ ಸೆಡಾನ್‌ಗಳಾದ EQA, EQB, EQE ಮತ್ತು EQS ಅನ್ನು EQ ಬ್ರಾಂಡ್‌ನ ಅಡಿಯಲ್ಲಿ ತರಲಿದೆ. ಅಲ್ಲದೇ, ಕಂಪನಿಯು 2025ರ ವೇಳೆಗೆ 25 ಹೊಸ ಪ್ಲಗ್-ಇನ್ ಹೈಬ್ರಿಡ್ ಮಾದರಿಗಳನ್ನು ತರಲಿದೆ.

ಒಂದೇ ಚಾರ್ಜ್‌ನಲ್ಲಿ 600 ಕಿ.ಮೀ ಮೈಲೇಜ್ ನೀಡಲಿದೆ ಹೊಸ Mercedes-Benz EQS

ಮೂಲಸೌಕರ್ಯಗಳ ಲಭ್ಯತೆಗೆ ಅನುಗುಣವಾಗಿ ಕಂಪನಿಯು ಈ ಕಾರುಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈಗಾಗಲೇ ಈ ಕಾರಿನ ಕುರಿತು ಗ್ರಾಹಕರಲ್ಲಿ ಹೆಚ್ಚಿನ ನಿರೀಕ್ಷೆಗಳಿದ್ದು, ಐಷಾರಾಮಿ ಇವಿ ಕಾರುಗಳಲ್ಲಿ ಇದು ಉತ್ತಮ ಕೊಡುಗೆಯಾಗಿದೆ.

ಒಂದೇ ಚಾರ್ಜ್‌ನಲ್ಲಿ 600 ಕಿ.ಮೀ ಮೈಲೇಜ್ ನೀಡಲಿದೆ ಹೊಸ Mercedes-Benz EQS

Mercedes-Benz EQS ಎಂಬುದು ಕಂಪನಿಯ S-ಕ್ಲಾಸ್ ಸೆಡಾನ್‌ನ ಎಲೆಕ್ಟ್ರಿಕ್ ಆವೃತ್ತಿಯಾಗಿದೆ ಮತ್ತು EQ ಸರಣಿಯಲ್ಲಿ ಬಿಡುಗಡೆಯಾಗುವ ಮೊದಲನೆಯದಾಗಿದೆ. Mercedes-Benz EQS ಅನ್ನು ಜರ್ಮನಿಯಲ್ಲಿರುವ ಸ್ಪ್ರಿಂಗ್‌ಫೀಲ್ಡ್ ಸ್ಥಾವರದಲ್ಲಿ ತಯಾರಿಸಲಾಗುತ್ತಿದ್ದು, 2022ರ ಮದ್ಯಾರ್ಧದಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

More from DriveSpark

Article Published On: Tuesday, April 19, 2022, 20:34 [IST]
English summary
Mercedes benz eqs unveiled with 600 kms range details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+