ಭಾರತದಲ್ಲಿ ದುಬಾರಿ ಬೆಲೆಯ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಸೋಲ್ಡ್ ಔಟ್

ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ಸ್ಥಳೀಯವಾಗಿ ನಿರ್ಮಾಣಗೊಳಿಸಿದ ಮೇಬ್ಯಾಕ್ ಎಸ್-ಕ್ಲಾಸ್ ಆವೃತ್ತಿಯನ್ನು ಬಿಡುಗಡೆ ಮಾಡಿ ವಿತರಣೆಗೆ ಸಿದ್ದವಾಗುತ್ತಿದ್ದು, ಹೊಸ ಕಾರು ಬಿಡುಗಡೆ ಕೆಲವೇ ದಿನಗಳಲ್ಲಿ ಖರೀದಿಗೆ ಲಭ್ಯವಿದ್ದ ಸೀಮಿತ ಸಂಖ್ಯೆಯ ಯುನಿಟ್‌ಗಳು ಸಂಪೂರ್ಣವಾಗಿ ಮಾರಾಟಗೊಂಡಿವೆ.

ಭಾರತದಲ್ಲಿ ದುಬಾರಿ ಬೆಲೆಯ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಸೋಲ್ಡ್ ಔಟ್

ಭಾರತದಲ್ಲಿ ಈಗಾಗಲೇ ತನ್ನ ಪ್ರಮುಖ ಕಾರು ಮಾದರಿಗಳನ್ನು ಸ್ಥಳೀಯವಾಗಿ ಉತ್ಪಾದನೆ ಕೈಗೊಳ್ಳುತ್ತಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಹೈ ಎಂಡ್ ಮಾದರಿಗಳನ್ನು ಸಹ ಹಂತ-ಹಂತವಾಗಿ ಸ್ಥಳೀಯವಾಗಿ ಅಭಿವೃದ್ದಿಗೊಳಿಸಲಾದ ಬಿಡಿಭಾಗಗಳ ಜೋಡಣೆ ಮಾಡುವಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಭಾರತದಲ್ಲಿ ದುಬಾರಿ ಬೆಲೆಯ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಸೋಲ್ಡ್ ಔಟ್

ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರಿನ ಆರಂಭಿಕ ಮಾದರಿಯಾದ ಎಸ್580 ಆವೃತ್ತಿಯು ಭಾಗಶಃ ಭಾರತದಲ್ಲಿಯೇ ನಿರ್ಮಾಣಗೊಳ್ಳಲಿದ್ದರೆ ಎಸ್680 ಮಾದರಿಯು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಿದೆ.

ಭಾರತದಲ್ಲಿ ದುಬಾರಿ ಬೆಲೆಯ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಸೋಲ್ಡ್ ಔಟ್

ಮೇಬ್ಯಾಕ್ ಎಸ್-ಕ್ಲಾಸ್ ಕಾರಿನ ಹೈ ಎಂಡ್ ಮಾದರಿಯು ಸೀಮಿತ ಸಂಖ್ಯೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಇದೀಗ ಸೀಮಿತ ಸಂಖ್ಯೆಯ ಎಲ್ಲಾ ಮಾದರಿಗಳಿಗೂ ಬೇಡಿಕೆ ಸಲ್ಲಿಕೆಯಾಗಿದೆ. ಹೊಸ ಕಾರು ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2.50 ಕೋಟಿ ಮತ್ತು ಹೈ ಎಂಡ್ ಮಾದರಿಯು ರೂ. 3.20 ಕೋಟಿ ಬೆಲೆ ಹೊಂದಿದೆ.

ಭಾರತದಲ್ಲಿ ದುಬಾರಿ ಬೆಲೆಯ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಸೋಲ್ಡ್ ಔಟ್

7ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಂಡಿರುವ ಹೊಸ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಮಾದರಿಯು ಸ್ಟ್ಯಾಂಡರ್ಡ್ ಎಸ್-ಕ್ಲಾಸ್ ಮಾದರಿಯಂತೆಯೇ ಹೊರನೋಟವನ್ನು ಹೊಂದಿದ್ದರೂ ಮೇಬ್ಯಾಕ್ ಎಸ್-ಕ್ಲಾಸ್ ಕಾರಿನಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ತಂತ್ರಜ್ಞಾನ ಸೌಲಭ್ಯಗಳನ್ನು ನೀಡಲಾಗಿದೆ.

ಭಾರತದಲ್ಲಿ ದುಬಾರಿ ಬೆಲೆಯ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಸೋಲ್ಡ್ ಔಟ್

ಹೊಸ ಕಾರು ಸ್ಟ್ಯಾಂಡರ್ಡ್ ಎಸ್-ಕ್ಲಾಸ್ ಮಾದರಿಗಿಂತಲೂ 180 ಎಂಎಂ ಹೆಚ್ಚುವರಿ ಉದ್ದಳತೆ ಹೊಂದಿದ್ದು, ಹೊಸ ಕಾರು ಒಟ್ಟು 5,469 ಎಂಎಂ ಉದ್ದಳತೆಯೊಂದಿಗೆ ವಿಶಾಲವಾದ ಕ್ಯಾಬಿನ್ ಸ್ಪೆಸ್ ಹೊಂದಿದ್ದು, ಸ್ಟ್ಯಾಂಡರ್ಡ್ ಮಾದರಿಗಿಂತೂ ವಿಭಿನ್ನವಾಗಿ ಗುರುತಿಸಲು ಹೊಸ ಕಾರಿನಲ್ಲಿ ಕಂಪನಿಯು ಡ್ಯುಯಲ್ ಟೋನ್ ಪೇಟಿಂಗ್ ಮತ್ತು ಆಕರ್ಷಕವಾದ ಸಿ ಪಿಲ್ಲರ್‌ ವಿನ್ಯಾಸದಲ್ಲಿ ಮೇಬ್ಯಾಕ್ ಬ್ಯಾಜ್ಡ್ ಬಳಸಿರುವುದು ಆಕರ್ಷಕವಾಗಿದೆ.

ಭಾರತದಲ್ಲಿ ದುಬಾರಿ ಬೆಲೆಯ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಸೋಲ್ಡ್ ಔಟ್

ಇದಕ್ಕಿಂತಲೂ ಮುಖ್ಯವಾಗಿ ಹೊಸ ಕಾರಿನಲ್ಲಿ ಕಂಪನಿಯು ವಿಶೇಷ ತಂತ್ರಜ್ಞಾನ ಪ್ರೇರಿತ ಇ-ಆಕ್ಟಿವ್ ಬಾಡಿ ಕಂಟ್ರೋಲ್ 48 ವೊಲ್ಟ್ ಆಕ್ಟಿವಾ ರೋಲ್ ಬಳಕೆ ಮಾಡಿದ್ದು, ಇದು ಚಾಲನೆ ವೇಳೆ ಹಂಪ್ ಮತ್ತು ರಸ್ತೆ ಗುಂಡಿಗಳಲ್ಲಿ ಕಾರಿನ ಅಂಡರ್ ಬಾಡಿ ಪ್ಯಾನೆಲ್‌ಗೆ ಹಾನಿಯಾಗದಂತೆ ತಡೆಯುತ್ತದೆ.

ಭಾರತದಲ್ಲಿ ದುಬಾರಿ ಬೆಲೆಯ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಸೋಲ್ಡ್ ಔಟ್

ಸಂಪೂರ್ಣವಾಗಿ ಸೆನ್ಸಾರ್ ಮೇಲೆಯೇ ಕಾರ್ಯನಿರ್ವಹಿಸುವ ಇ-ಆಕ್ಟಿವ್ ಬಾಡಿ ಕಂಟ್ರೋಲ್ 48 ವೊಲ್ಟ್ ಆಕ್ಟಿವಾ ರೋಲ್ ತಂತ್ರಜ್ಞಾನವು ರಸ್ತೆಗುಂಡಿಗಳಲ್ಲಿ ಅಥವಾ ಹಂಪ್‌ಗಳು ದಾಟುವ ಸಂದರ್ಭದಲ್ಲಿ ಅಗತ್ಯವಿದ್ದಲ್ಲಿ ಕಾರಿನ ಸಸ್ಷೆಂಷನ್ ಅನ್ನು ಸುಮಾರು 15 ಎಂಎಂ ತನಕ ಎತ್ತರಿಸಿ ಆಗಬಹುದಾದ ಹಾನಿಯನ್ನು ತಡೆಯುತ್ತದೆ.

ಭಾರತದಲ್ಲಿ ದುಬಾರಿ ಬೆಲೆಯ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಸೋಲ್ಡ್ ಔಟ್

ಹೊಸ ಕಾರಿನಲ್ಲಿ ಮತ್ತೊಂದು ಆಸಕ್ತಿದಾಯಕ ವೈಶಿಷ್ಟ್ಯವೆಂದರೆ ಪ್ರತ್ಯೇಕ ವ್ಹೀಲ್ ಕಂಟ್ರೋಲ್ ಮೂಲಕ ಹಿಂದಿನ ಚಕ್ರವನ್ನು 4.5 ಡಿಗ್ರಿಗಳವರೆಗೆ ತಿರುಗಿಸಲು ಅನುವು ಮಾಡಿಕೊಡಲಿದ್ದು, ಇದರಿಂದಾಗಿ ಕಾರನ್ನು ಇಕ್ಕಟ್ಟಾದ ಯು ಟರ್ನ್‌ಗಳನ್ನು ಸುಲಭವಾಗಿ ತಿರುಗಿಸಬಹುದಾಗಿದೆ.

ಭಾರತದಲ್ಲಿ ದುಬಾರಿ ಬೆಲೆಯ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಸೋಲ್ಡ್ ಔಟ್

ಇನ್ನು ಹೊಸ ಕಾರಿನ ಒಳಭಾಗವು ಸಹ ಹೊಸ ವಿನ್ಯಾಸದೊಂದಿಗೆ ವಿಶ್ವದರ್ಜೆ ಸೌಲಭ್ಯಗಳನ್ನು ನೀಡಲಿದ್ದು, ಹೊಸ ಕಾರಿನಲ್ಲಿ ಬಳಸಲಾಗಿರುವ ಲೆದರ್ ಕೂಡಾ ಮೇಬ್ಯಾಕ್ ಎಕ್ಸ್‌ಕ್ಲೂಸಿವ್ ನಪ್ಪಾ ಲೆದರ್ ಮಾದರಿಯಾಗಿದೆ. ಇದರೊಂದಿಗೆ ಹೊಸ ಕಾರಿನಲ್ಲಿ ಕೇವಲ ನಾಲ್ಕು ಆಸನಗಳ ಸೌಲಭ್ಯವಿದ್ದು, ವಿಸ್ತರಿತವಾಗಿ ಸೆಂಟರ್ ಕನ್ಸೊಲ್ ಹಿಂಬದಿಯ ಸವಾರಿಗೆ ಹೆಚ್ಚಿನ ಮಟ್ಟದ ಸವಾರಿ ಅನುಭವ ನೀಡಲು ಇದನ್ನು ಅಭಿವೃದ್ದಿಗೊಳಿಸಲಾಗಿದೆ.

ಭಾರತದಲ್ಲಿ ದುಬಾರಿ ಬೆಲೆಯ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಸೋಲ್ಡ್ ಔಟ್

ಇದರೊಂದಿಗೆ ಹೊಸ ಕಾರಿನಲ್ಲಿ ಅಡಾಪ್ಟಿವ್ ಡಿಜಿಟಲ್ ಎಲ್ಇಡಿ ಹೆಡ್‌ಲೈಟ್ಸ್, ಹಿಂತೆಗೆದುಕೊಳ್ಳಬಹುದಾದ ಡೋರ್ ಹ್ಯಾಂಡಲ್‌, ಫಿಂಗರ್‌ಪ್ರಿಂಟ್ ರೀಡರ್, ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ ಸಿಸ್ಟಮ್ ಮತ್ತು ಚಾಲಿತ ಹ್ಯಾಂಡ್ಸ್-ಫ್ರೀ ಬೂಟ್ ಲಿಡ್‌ನೊಂದಿಗೆ ಪೋರ್ ವಾಲ್‌ನಟ್ ಮರದ ಟ್ರಿಮ್ ಹೊಂದಿದೆ.

ಭಾರತದಲ್ಲಿ ದುಬಾರಿ ಬೆಲೆಯ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಸೋಲ್ಡ್ ಔಟ್

ಹಾಗೆಯೇ ಹೊಸ ಕಾರಿನಲ್ಲಿ ಮರ್ಸಿಡಿಸ್ ಕಂಪನಿಯು ಬರ್ಮೆಸ್ಟರ್‌ 4ಡಿ ಸರೌಂಡ್ ಸೌಂಡ್ ಸಿಸ್ಟಂ ಜೊತೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯತೆಗಳನ್ನು ನೀಡಿದ್ದು, ಮೇಬ್ಯಾಕ್ ಎಸ್-ಕ್ಲಾಸ್‌ನಲ್ಲಿ ಒಟ್ಟು 13 ಏರ್‌ಬ್ಯಾಗ್‌ಗಳು, ಲೆವೆಲ್-2 ಅಟೋನಮಸ್ ಡ್ರೈವಿಂಗ್ ಟೆಕ್ನಾಲಜಿ ಹೊಂದಿದೆ.

ಭಾರತದಲ್ಲಿ ದುಬಾರಿ ಬೆಲೆಯ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಸೋಲ್ಡ್ ಔಟ್

ಲೆವೆಲ್-2 ಅಟೋನಮಸ್ ಡ್ರೈವಿಂಗ್ ಟೆಕ್ನಾಲಜಿಯಲ್ಲಿ ಮರ್ಸಿಡಿಸ್ ಬೆಂಝ್ ಭಾರತದಲ್ಲಿ ಮೊದಲ ಬಾರಿಗೆ 'ಎವೇಸಿವ್ ಸ್ಟೀರಿಂಗ್ ಅಸಿಸ್ಟ್' ಮತ್ತು 'ಕ್ರಾಸ್ ಟ್ರಾಫಿಕ್ ಫಂಕ್ಷನ್' ಜೊತೆಗೆ ಆಕ್ಟಿವ್ ಬ್ರೇಕ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ. ಇನ್ನು ಹೊಸ ಕಾರು ಮಾದರಿಯಲ್ಲಿ 4 ಮ್ಯಾಟಿಕ್ ತಂತ್ರಜ್ಞಾನ ಪ್ರೇರಿತ 9 ಸ್ಪೀಡ್ ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಎರಡು ಎಂಜಿನ್ ಆಯ್ಕೆಗಳಿದ್ದು, ಎಸ್580 ಮಾದರಿಯಲ್ಲಿ 4.0-ಲೀಟರ್ ವಿ8 ಎಂಜಿನ್ ಮತ್ತು ಎಸ್680 ಮಾದರಿಯಲ್ಲಿ 6.0-ಲೀಟರ್ ವಿ12 ಎಂಜಿನ್ ಜೋಡಿಸಲಾಗಿದೆ.

ಭಾರತದಲ್ಲಿ ದುಬಾರಿ ಬೆಲೆಯ 2022ರ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಸೋಲ್ಡ್ ಔಟ್

4.0-ಲೀಟರ್ ವಿ8 ಎಂಜಿನ್ ಮಾದರಿಯು 48 ವೊಲ್ಟ್ ಇಕ್ಯೂ ಬೂಸ್ಟ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 496 ಬಿಎಚ್‌ಪಿ ಮತ್ತು 700 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ ಎಸ್680 ಮಾದರಿಯಲ್ಲಿರುವ 6.0-ಲೀಟರ್ ವಿ12 ಎಂಜಿನ್ ಮಾದರಿಯು 612 ಬಿಎಚ್‌ಪಿ ಮತ್ತು 900 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

More from DriveSpark

Article Published On: Monday, March 14, 2022, 10:55 [IST]
English summary
Mercedes benz maybach s class completely sold in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+