2022ರ ಕೊನೆಯ ತ್ರೈಮಾಸಿಕದಲ್ಲಿ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಇವಿ ಸೆಡಾನ್

ಇವಿ ನೀತಿಗಳ ಪರಿಣಾಮ ಹೈಬ್ರಿಡ್ ಮತ್ತು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬರುತ್ತಿದ್ದು, ಜರ್ಮನ್ ಕಾರು ಉತ್ಪಾದನಾ ಕಂಪನಿಯಾಗಿರುವ ಮರ್ಸಿಡಿಸ್ ಬೆಂಝ್ ಕೂಡಾ ಈಗಾಗಲೇ ಇಕ್ಯೂಸಿ 400, ಇಕ್ಯೂಎ ಎಲೆಕ್ಟ್ರಿಕ್ ಎಸ್‌ಯುವಿಯೊಂದಿಗೆ ಹಲವು ಹೊಸ ದಾಖಲೆಗಳಿಗೆ ಕಾರಣವಾಗಿದೆ.

2022ರ ಕೊನೆಯ ತ್ರೈಮಾಸಿಕದಲ್ಲಿ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಇವಿ ಸೆಡಾನ್

ದುಬಾರಿ ಬೆಲೆ ನಡುವೆಯೂ ಹೊಸ ಇವಿ ಕಾರುಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಮರ್ಸಿಡಿಸ್ ಬೆಂಝ್ ಕಂಪನಿಯು 2023ರ ವೇಳೆಗೆ ಒಟ್ಟು 6 ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಮಾರಾಟ ಮಾಡುವ ಗುರಿಹೊಂದಿದ್ದು, 2030ರ ವೇಳೆಗೆ ಸಂಪೂರ್ಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸುವ ಯೋಜನೆಯಲ್ಲಿದೆ.

2022ರ ಕೊನೆಯ ತ್ರೈಮಾಸಿಕದಲ್ಲಿ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಇವಿ ಸೆಡಾನ್

ಮರ್ಸಿಡಿಸ್ ಬೆಂಝ್ ಹೊಸ ಎಲೆಕ್ಟ್ರಿಕ್ ಕಾರುಗಳ ಪಟ್ಟಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಸೂಪರ್ ಕಾರು ಮಾದರಿಗಳು ಸಹ ಒಳಗೊಂಡಿದ್ದು, ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಳ್ಳಲಿರುವ ಭವಿಷ್ಯದ ಮರ್ಸಿಡಿಸ್ ಬೆಂಝ್ ಕಾರುಗಳು ಪ್ರತಿ ಚಾರ್ಜ್‌ಗೆ 1 ಸಾವಿರ ಕಿ.ಮೀ ಮೈಲೇಜ್ ಹಿಂದಿರುಗಿಸುವ ಬ್ಯಾಟರಿ ಪ್ಯಾಕ್ ಪಡೆದುಕೊಳ್ಳಲಿವೆ.

2022ರ ಕೊನೆಯ ತ್ರೈಮಾಸಿಕದಲ್ಲಿ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಇವಿ ಸೆಡಾನ್

ಹೊಸ ಯೋಜನೆಗಾಗಿ ಮರ್ಸಿಡಿಸ್ ಬೆಂಝ್ ಕಂಪನಿಯು ವಿಶ್ವಾದ್ಯಂತ ಕಾರ್ಯನಿರ್ವಹಣೆಯಲ್ಲಿರುವ ಪ್ರಮುಖ ಕಾರು ಉತ್ಪಾದನಾ ಘಟಕ ಉನ್ನತೀಕರಣಕ್ಕಾಗಿ ಅಂದಾಜು ರೂ. 3.50 ಲಕ್ಷ ಕೋಟಿ ಹೂಡಿಕೆ ಮಾಡುತ್ತಿದ್ದು, ಎಲೆಕ್ಟ್ರಿಕ್ ಪ್ಯಾಸೆಂಜರ್ ಕಾರುಗಳು, ಎಲೆಕ್ಟ್ರಿಕ್ ಸ್ಪೋರ್ಟ್ ವೆಹಿಕಲ್ ಮತ್ತು ಎಲೆಕ್ಟ್ರಿಕ್ ಕಮರ್ಷಿಯಲ್ ವೆಹಿಕಲ್ ವಿಭಾಗಗಳ ಮೇಲೆ ಪ್ರತ್ಯೇಕವಾಗಿ ಹೂಡಿಕೆ ಮಾಡುತ್ತಿದೆ.

2022ರ ಕೊನೆಯ ತ್ರೈಮಾಸಿಕದಲ್ಲಿ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಇವಿ ಸೆಡಾನ್

ಸದ್ಯ ಇಕ್ಯೂಸಿ 400, ಇಕ್ಯೂಎ ಎಲೆಕ್ಟ್ರಿಕ್ ಕಾರುಗಳ ಮೂಲಕ ಜಾಗತಿಕ ಮಾರುಕಟ್ಟೆಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಉತ್ಪನ್ನಗಳಿಗಾಗಿ ಕಂಪನಿಯು ನಿರಂತರವಾಗಿ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿದೆ.

2022ರ ಕೊನೆಯ ತ್ರೈಮಾಸಿಕದಲ್ಲಿ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಇವಿ ಸೆಡಾನ್

ಮರ್ಸಿಡಿಸ್ ಬೆಂಝ್ ಕಂಪನಿಯು ಮುಂದಿನ ಎಲೆಕ್ಟ್ರಿಕ್ ಕಾರು ಮಾದರಿಯಾಗಿ ಇಕ್ಯೂಎಸ್ ಸೆಡಾನ್ ಮಾದರಿಯನ್ನು ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರನ್ನು ಎಂಟ್ರಿ ಲೆವಲ್ ಕಾರು ಮಾದರಿಗಳ ಪ್ಲ್ಯಾಟ್‌ಫಾರ್ಮ್ ಆಧರಿಸಿ ನಿರ್ಮಾಣಗೊಳ್ಳುತ್ತಿದೆ.

2022ರ ಕೊನೆಯ ತ್ರೈಮಾಸಿಕದಲ್ಲಿ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಇವಿ ಸೆಡಾನ್

ಹೊಸ ಕಾರಿನ ಉತ್ಪಾದನಾ ಮಾದರಿಯನ್ನು ಈಗಾಗಲೇ ಅನಾವರಣಗೊಳಿಸಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಹೊಸ ಕಾರಿನಲ್ಲಿ ಹಲವಾರು ಅತ್ಯಾಧುನಿಕ ಫೀಚರ್ಸ್‌ಗಳನ್ನು ಅಳವಡಿಸಿದ್ದು, ಹೊಸ ಕಾರು ಆಲ್ ವ್ಹೀಲ್ ಡ್ರೈವ್ ಮತ್ತು ರಿಯರ್ ವ್ಹೀಲ್ ಡ್ರೈವ್ ಆಯ್ಕೆ ಪಡೆದುಕೊಳ್ಳಲಿದೆ.

2022ರ ಕೊನೆಯ ತ್ರೈಮಾಸಿಕದಲ್ಲಿ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಇವಿ ಸೆಡಾನ್

ಹೊಸ ಕಾರಿನಲ್ಲಿ ಕಂಪನಿಯು ವಿವಿಧ ಮಾರುಕಟ್ಟೆಗಳಿಗಾಗಿ ರಿಯರ್ ವ್ಹೀಲ್ ಡ್ರೈವ್ ಆಯ್ಕೆಯನ್ನು ನೀಡಲಾಗುತ್ತಿದ್ದು, ಹೊಸ ಡ್ರೈವ್ ಸಿಸ್ಟಂ ಮೂಲಕ ಸುಮಾರು 10 ಡಿಗ್ರಿಗಳವರೆಗೂ ತಿರುಗಲು ಅನುವು ಮಾಡಿಕೊಡುತ್ತದೆ.

2022ರ ಕೊನೆಯ ತ್ರೈಮಾಸಿಕದಲ್ಲಿ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಇವಿ ಸೆಡಾನ್

ಜೊತೆಗೆ ಹೈಪರ್ ಸ್ಕ್ರೀನ್ ಸೌಲಭ್ಯವನ್ನು ಹೊಂದಿರುವ ಹೊಸ ಇಕ್ಯೂಎಸ್ ಸೆಡಾನ್ ಮಾದರಿಯು ಡ್ಯಾಶ್‍ಬೋರ್ಡ್‌ನಲ್ಲಿ ನಿಯಂತ್ರಿಸಬಹುದಾದ ಸುಮಾರು ಫೀಚರ್ಸ್‌ಗಳನ್ನು ನೀಡಿದ್ದು, ಹೊಸ ಕಾರು ಇಕ್ಯೂಎಸ್ 450 ಪ್ಲಸ್ ಮತ್ತು ಇಕ್ಯೂಎಸ್ 580 ಎರಡು ವೆರಿಯೆಂಟ್‌ಗಳೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 770 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

2022ರ ಕೊನೆಯ ತ್ರೈಮಾಸಿಕದಲ್ಲಿ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಇವಿ ಸೆಡಾನ್

ಇನ್ನು ಟಾಪ್ ಎಂಡ್ ಇಕ್ಯೂಎಸ್ 580 ಮಾದರಿಯಲ್ಲಿ ಮಾತ್ರವೇ ಆಲ್ ವೀಲ್ಹ್ ಡ್ರೈವ್ ವ್ಯವಸ್ಥೆ ಹೊಂದಿದ್ದು, ಹೊಸ ಕಾರು ಮುಂದಿನ ಕೆಲವೇ ತಿಂಗಳುಗಳಲ್ಲಿ ಯುರೋಪ್ ಮತ್ತು ಅಮೆರಿಕದ ಪ್ರಮುಖ ಮಾರುಕಟ್ಟೆಗಳನ್ನು ಪ್ರವೇಶಿಸಲಿದೆ.

2022ರ ಕೊನೆಯ ತ್ರೈಮಾಸಿಕದಲ್ಲಿ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಇವಿ ಸೆಡಾನ್

ತದನಂತರವಷ್ಟೇ ಭಾರತದಲ್ಲೂ ಬಿಡುಗಡೆಯಾಗಲಿರುವ ಹೊಸ ಕಾರು ಮುಂಬರುವ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಬಿಡುಗಡೆಯಾಗಬಹುದು ಎನ್ನಲಾಗಿದ್ದು, ಭಾರತದಲ್ಲಿ ಹೆಚ್ಚಿನ ಮಟ್ಟದ ಚಾರ್ಜಿಂಗ್ ಮೂಲಭೂತ ಸೌಕರ್ಯ ಹೆಚ್ಚಳಕ್ಕೆ ಎದುರುನೋಡುತ್ತಿದೆ.

2022ರ ಕೊನೆಯ ತ್ರೈಮಾಸಿಕದಲ್ಲಿ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಇವಿ ಸೆಡಾನ್

ಕೊನೆಯ ಮೈಲಿಯ ತನಕವು ಚಾರ್ಜಿಂಗ್ ನಿಲ್ದಾಣಗಳ ಸೌಲಭ್ಯವಿದ್ದಲ್ಲಿ ಮಾತ್ರ ಇವಿ ಕಾರುಗಳ ಬಿಡುಗಡೆಗೆ ಸೂಕ್ತ ಎನ್ನುತ್ತಿರುವ ವಾಹನ ಉತ್ಪಾದನಾ ಕಂಪನಿಯು ಹಂತ-ಹಂತವಾಗಿ ತಮ್ಮ ಭವಿಷ್ಯ ಇವಿ ಮಾದರಿಗಳನ್ನು ರಸ್ತೆಗಿಳಿಸಲು ನಿರ್ಧರಿಸಿವೆ.

2022ರ ಕೊನೆಯ ತ್ರೈಮಾಸಿಕದಲ್ಲಿ ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ಹೊಸ ಇಕ್ಯೂಎಸ್ ಇವಿ ಸೆಡಾನ್

ಒಟ್ಟಿನಲ್ಲಿ ಹೊಸ ಕಾರು ಹಲವಾರು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಕಾರು ಪ್ರಯಾಣವನ್ನು ಮತ್ತಷ್ಟು ಸುಲಭವಾಗಿಸುವುದಲ್ಲದೆ ಸುರಕ್ಷಿತ ಕಾರು ಚಾಲನೆಗೆ ಸಹಕಾರಿಯಾಗಿದ್ದು, ಹೊಸ ಕಾರು ಇಕ್ಯೂಸಿ 400, ಇಕ್ಯೂಎ ಮಾದರಿಗಿಂತಲೂ ಹೊಸ ಮಾದರಿಯ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮಾರಾಟಗೊಳ್ಳುವುದು ಖಚಿತವಾಗಿದೆ.

Most Read Articles

Kannada
English summary
Mercedes benz new eqs ev sedan india launch timeline revealed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X