ADAS ದುರುಪಯೋಗ: ಕಾರು ಚಾಲನೆಯಲ್ಲಿದ್ದಾಗ ಡ್ರೈವರ್ ಸಿಟಿನಿಂದ ಎದ್ದುಬಂದು ವಿಡಿಯೋ ಮಾಡಿದ ಯುವಕ

ಬಹುತೇಕ ಎಲ್ಲಾ ವಾಹನ ಅಪಘಾತಗಳು ಚಾಲಕನ ನಿಯಂತ್ರಣ ದೋಷದಿಂದಲೇ ಸಂಭವಿಸುತ್ತವೆ. ಇಂತಹ ಅಪಘಾತಗಳನ್ನು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟ ಸಿಸ್ಟಮ್ (ADAS) ಮೂಲಕ ತಪ್ಪಿಸಬಹುದು. ಈ ನಿಟ್ಟಿನಲ್ಲಿ ಭಾರತದಲ್ಲಿ ಬಹುತೇಕ ಕಾರುಗಳು ಇತ್ತೀಚೆಗೆ ADAS ತಂತ್ರಜ್ಞಾನವನ್ನೊಳಗೊಂಡು ಬರುತ್ತಿವೆ.

ADAS ದುರುಪಯೋಗ: ಕಾರು ಚಾಲನೆಯಲ್ಲಿದ್ದಾಗ ಡ್ರೈವರ್ ಸಿಟಿನಿಂದ ಎದ್ದುಬಂದು ವಿಡಿಯೋ ಮಾಡಿದ ಯುವಕ

ಅದರಲ್ಲಿ ಮಹೀಂದ್ರಾ XUV700 ಕೂಡ ಒಂದಾಗಿದ್ದು, ಪ್ರಸ್ತುತ ಅದರ ವರ್ಗದಲ್ಲಿ ಹೆಚ್ಚು ಫೀಚರ್‌ಗಳನ್ನು ಹೊಂದಿರುವ ಟಾಪ್ SUV ಇದಾಗಿದೆ. ಈ ಕಾರು ಅತ್ಯಾಧುನಿಕ ತಂತ್ರಜ್ಞಾನದ ವೈಶಿಷ್ಟ್ಯಗಳ ಜೊತೆಗೆ, ADAS ವ್ಯವಸ್ಥೆಯೊಂದಿಗೆ ಬರುತ್ತದೆ. ಆದರೆ ಈ ವೈಶಿಷ್ಟ್ಯವನ್ನು ನಮ್ಮ ದೇಶದಲ್ಲಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ.

ADAS ದುರುಪಯೋಗ: ಕಾರು ಚಾಲನೆಯಲ್ಲಿದ್ದಾಗ ಡ್ರೈವರ್ ಸಿಟಿನಿಂದ ಎದ್ದುಬಂದು ವಿಡಿಯೋ ಮಾಡಿದ ಯುವಕ

ADAS ವೈಶಿಷ್ಟ್ಯ ದುರುಪಯೋಗ

ಈ ವೈಶಿಷ್ಟ್ಯವು ಮಹೀಂದ್ರಾ XUV700 ನಲ್ಲಿ ಜನಪ್ರಿಯವಾಗಿದ್ದರೂ ದುರುಪಯೋಗಪಡಿಸಿಕೊಂಡ ನಿದರ್ಶನಗಳೇ ಹೆಚ್ಚು. ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದು ಮತ್ತೊಮ್ಮೆ ADAS ವೈಶಿಷ್ಟ್ಯವನ್ನು ದುರುಪಯೋಗಪಡಿಸಿಕೊಂಡಿದ್ದನ್ನು ಖಚಿತ ಪಡಿಸಿದೆ.

ADAS ದುರುಪಯೋಗ: ಕಾರು ಚಾಲನೆಯಲ್ಲಿದ್ದಾಗ ಡ್ರೈವರ್ ಸಿಟಿನಿಂದ ಎದ್ದುಬಂದು ವಿಡಿಯೋ ಮಾಡಿದ ಯುವಕ

ಚಾಲಕನೊಬ್ಬ ಕಾರು ಚಾಲನೆಯಲ್ಲಿದ್ದಾಗ ಡ್ರೈವರ್ ಸೀಟನ್ನು ಬಿಟ್ಟು ಪ್ರಯಾಣಿಕ ಸೀಟಿನಲ್ಲಿ ಕುಳಿತು ವೀಡಿಯೊ ಮಾಡಿ ಹಂಚಿಕೊಂಡಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ XUV700 ಏಕ-ಪಥದ ರಸ್ತೆಯಲ್ಲಿ ಸುಮಾರು 60 ಕಿ.ಮೀ ವೇಗದಲ್ಲಿ ಪ್ರಯಾಣಿಸುವುದನ್ನು ಕಾಣಬಹುದು.

ADAS ದುರುಪಯೋಗ: ಕಾರು ಚಾಲನೆಯಲ್ಲಿದ್ದಾಗ ಡ್ರೈವರ್ ಸಿಟಿನಿಂದ ಎದ್ದುಬಂದು ವಿಡಿಯೋ ಮಾಡಿದ ಯುವಕ

ಆದರೆ, ಆಘಾತಕಾರಿ ಸಂಗತಿಯೆಂದರೆ ಚಾಲಕನ ಸೀಟಿನ ಮೇಲೆ ಒಮ್ಮೆ ಕಣ್ಣು ಹಾಯಿಸಿದರೆ ಅಲ್ಲಿ ಯಾರೂ ಇಲ್ಲ. ಚಾಲಕನು ಪ್ರಯಾಣಿಕರ ಸೀಟಿನಲ್ಲಿ ಕುಳಿತು ವಿಡಿಯೋ ಮಾಡಲಾಗಿದೆ. ಇದು ಅವರಿಗೆ ಮೋಜು ನೀಡುತ್ತಿರಬಹುದು ಆದರೆ ತುಂಬಾ ಅಪಾಯಕಾರಿ.

ADAS ದುರುಪಯೋಗ: ಕಾರು ಚಾಲನೆಯಲ್ಲಿದ್ದಾಗ ಡ್ರೈವರ್ ಸಿಟಿನಿಂದ ಎದ್ದುಬಂದು ವಿಡಿಯೋ ಮಾಡಿದ ಯುವಕ

ಅಡೆತಡೆಗಳನ್ನು ಗ್ರಹಿಸಿ ವಾಹನವು ತನ್ನನ್ನು ತಾನೇ ಸಂಪೂರ್ಣವಾಗಿ ನಿಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದರೂ, ಡ್ರೈವರ್ ಸೀಟಿನಲ್ಲಿ ಚಾಲಕನಿಲ್ಲದೇ ಈ ವೈಶಿಷ್ಟ್ಯವನ್ನು ಬಳಸಬಹುದು ಯಾವುದೇ ಕಂಪನಿ ಹೇಳಿಲ್ಲ. ADAS ತನ್ನ ಉದ್ದೇಶಿತ ಮಾರ್ಗದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಹಾಗೂ ಅದಕ್ಕೆ ಸರಿಯಾಗಿ ಗುರುತಿಸಲಾದ ರಸ್ತೆ, ಸಂಚಾರ ಚಿಹ್ನೆಗಳ ಆಧಾರದಲ್ಲಿ ತಾನಾಗಿಯೇ ಚಲಿಸುತ್ತದೆ.

ADAS ದುರುಪಯೋಗ: ಕಾರು ಚಾಲನೆಯಲ್ಲಿದ್ದಾಗ ಡ್ರೈವರ್ ಸಿಟಿನಿಂದ ಎದ್ದುಬಂದು ವಿಡಿಯೋ ಮಾಡಿದ ಯುವಕ

ಆದರೆ ನಮ್ಮ ಬಹುತೇಕ ಭಾರತೀಯ ರಸ್ತೆಗಳಲ್ಲಿ ಅದರ ಕೊರತೆಯಿದೆ. ಆದ್ದರಿಂದ SUV ಅನ್ನು ಏಕ-ಪಥದ ರಸ್ತೆಯಲ್ಲಿ ಚಾಲಕನ ಪ್ರಮೇಯವಿಲ್ಲದೇ ಬಿಡುವುದು ಅಪಾಯಕಾರಿ ಎಂದೇ ಹೇಳಬಹುದು.

ADAS ದುರುಪಯೋಗ: ಕಾರು ಚಾಲನೆಯಲ್ಲಿದ್ದಾಗ ಡ್ರೈವರ್ ಸಿಟಿನಿಂದ ಎದ್ದುಬಂದು ವಿಡಿಯೋ ಮಾಡಿದ ಯುವಕ

XUV700 ADAS ವೈಶಿಷ್ಟ್ಯ

XUV 700 SUV ಮಹೀಂದ್ರಾ ಮಾರಾಟ ಮಾಡುವ ಅತ್ಯಂತ ಐಷಾರಾಮಿ ಕಾರು ಮಾದರಿಗಳಲ್ಲಿ ಒಂದಾಗಿದೆ. ಈ ಕಾರು ಪ್ರಯಾಣಿಕರಿಗೆ ಸುರಕ್ಷತೆಯನ್ನು ಒದಗಿಸಲು ವ್ಯಾಪಕ ಶ್ರೇಣಿಯ ಸುರಕ್ಷತಾ ಸಾಧನಗಳು ಮತ್ತು ತಾಂತ್ರಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗೆಯೇ ಕಂಪನಿ ಒದಗಿಸುವ ಪ್ರಮುಖ ವೈಶಿಷ್ಟ್ಯಗಳಲ್ಲಿ ಅಡ್ವಾನ್ಸ್ಡ್ ಲೆವೆಲ್-2 ADAS ಕೂಡ ಒಂದಾಗಿದೆ.

ADAS ದುರುಪಯೋಗ: ಕಾರು ಚಾಲನೆಯಲ್ಲಿದ್ದಾಗ ಡ್ರೈವರ್ ಸಿಟಿನಿಂದ ಎದ್ದುಬಂದು ವಿಡಿಯೋ ಮಾಡಿದ ಯುವಕ

ಮಹೀಂದ್ರಾ XUV 700 ಲೆವೆಲ್ 2 ಸ್ವಾಯತ್ತ ವೈಶಿಷ್ಟ್ಯದೊಂದಿಗೆ ಬರುತ್ತದೆ, ಇದು ಕಾರನ್ನು ಲೇನ್‌ನಲ್ಲಿ ಇರಿಸಲು ಸಹಾಯ ಮಾಡುತ್ತದೆ. ಜೊತೆಗೆ ಮುಂಭಾಗದಲ್ಲಿರುವ ವಾಹನವನ್ನು ಪತ್ತೆ ಮಾಡಿ ವೇಗವನ್ನು ಕಡಿಮೆ ಮಾಡಲು ಸ್ವಯಂಚಾಲಿತವಾಗಿ ಬ್ರೇಕ್ ಅನ್ನು ಅನ್ವಯಿಸುತ್ತದೆ.

ADAS ದುರುಪಯೋಗ: ಕಾರು ಚಾಲನೆಯಲ್ಲಿದ್ದಾಗ ಡ್ರೈವರ್ ಸಿಟಿನಿಂದ ಎದ್ದುಬಂದು ವಿಡಿಯೋ ಮಾಡಿದ ಯುವಕ

ಜೊತೆಗೆ ತುರ್ತು ಸಂದರ್ಭದಲ್ಲಿ ಚಾಲನೆಯಲ್ಲಿರುವ ವಾಹನವನ್ನು ಸ್ವಯಂಚಾಲಿತವಾಗಿ ನಿಲ್ಲಿಸುತ್ತದೆ. ಇದು ಕೇವಲ ಪ್ರಯಾಣಿಕರ ರಕ್ಷಣೆಗಾಗಿ ನೀಡಲಾಗುತ್ತದೆ. ಈ ವೈಶಿಷ್ಟ್ಯವನ್ನು ಹೊಂದಿರುವ ಅಗ್ಗದ ಕಾರು ಎಂಬ ಖ್ಯಾತಿಯನ್ನು ಸಹ ಮಹೀಂದ್ರಾ XUV700 ಪಡೆದುಕೊಂಡಿದೆ.

ADAS ದುರುಪಯೋಗ: ಕಾರು ಚಾಲನೆಯಲ್ಲಿದ್ದಾಗ ಡ್ರೈವರ್ ಸಿಟಿನಿಂದ ಎದ್ದುಬಂದು ವಿಡಿಯೋ ಮಾಡಿದ ಯುವಕ

ಮಹೀಂದ್ರಾ XUV 700 ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ವಾಹನವು ಚಲಿಸುತ್ತಿರುವಾಗ ಚಾಲಕನು ಸ್ಟೀರಿಂಗ್ ಚಕ್ರದಿಂದ ಕೈಗಳನ್ನು ತೆಗೆದರೆ, ತಕ್ಷಣವೇ ಎಚ್ಚರಿಸುತ್ತದೆ. ಅಲ್ಲದೆ ಸ್ಟೀರಿಂಗ್ ವೀಲ್ ಕಂಪಿಸುವ ಮೂಲಕ ಎಡಿಎಸ್ ಸಿಸ್ಟಮ್ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ.

ADAS ದುರುಪಯೋಗ: ಕಾರು ಚಾಲನೆಯಲ್ಲಿದ್ದಾಗ ಡ್ರೈವರ್ ಸಿಟಿನಿಂದ ಎದ್ದುಬಂದು ವಿಡಿಯೋ ಮಾಡಿದ ಯುವಕ

ಬಳಿಕ ಕಾರು ರಸ್ತೆಯ ಮೇಲಿನ ಬಿಳಿ ರೇಖೆಯನ್ನು (ಲೇನ್) ಅನುಸರಿಸುತ್ತದೆ. ಒಂದು ವೇಳೆ ರಸ್ತೆಯಲ್ಲಿ ಸರಿಯಾದ ಬಿಳಿ ಗೆರೆಗಳು ಇಲ್ಲದಿದ್ದರೇ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ಇದಕ್ಕಾಗಿಯೇ ಕಾರಿನ ಸ್ವಾಯತ್ತ ವೈಶಿಷ್ಟ್ಯವನ್ನು ಅನಗತ್ಯವಾಗಿ ಪರೀಕ್ಷಿಸಬೇಡಿ ಎಂದು ಕಂಪನಿಗಳು ಸಹ ಹೇಳುತ್ತವೆ.

ADAS ದುರುಪಯೋಗ: ಕಾರು ಚಾಲನೆಯಲ್ಲಿದ್ದಾಗ ಡ್ರೈವರ್ ಸಿಟಿನಿಂದ ಎದ್ದುಬಂದು ವಿಡಿಯೋ ಮಾಡಿದ ಯುವಕ

ನಮ್ಮ ರಕ್ಷಣೆಗಾಗಿ ADAS ಇದೆಯೆಂಬ ಧೈರ್ಯದಿಂದ ಇಂತಹ ಫೀಚರ್ ಬಳಸಿಕೊಂಡು ಯುವಜನತೆ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುತ್ತಿರುವ ಕ್ರಮಕ್ಕೆ ನಾನಾ ಕಡೆಯಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಕೆಲವು ಅನಪೇಕ್ಷಿತ ಚಟುವಟಿಕೆಗಳಿಗೆ ತಾಂತ್ರಿಕ ಸೌಲಭ್ಯಗಳನ್ನು ಬಳಸುವುದು ಉದ್ಧಟತನವೆಂದು ಕಮೆಂಟ್ ಮಾಡುತ್ತಿದ್ದಾರೆ.

ADAS ದುರುಪಯೋಗ: ಕಾರು ಚಾಲನೆಯಲ್ಲಿದ್ದಾಗ ಡ್ರೈವರ್ ಸಿಟಿನಿಂದ ಎದ್ದುಬಂದು ವಿಡಿಯೋ ಮಾಡಿದ ಯುವಕ

ಏಕೆಂದರೆ ಈ ಹಿಂದೆಯೂ ಇಂತಹ ಅನಾವಶ್ಯಕ ಕಾರ್ಯಗಳನ್ನು ಮಾಡಿ ಸಮಸ್ಯೆ ಎದುರಿಸಿದವರು ಬಹಳ ಮಂದಿ ಇದ್ದಾರೆ. ಅದರಲ್ಲೂ ಹೆಚ್ಚಿನ ತಾಂತ್ರಿಕ ಸೌಲಭ್ಯಗಳಿರುವ ಟೆಸ್ಲಾ ಎಲೆಕ್ಟ್ರಿಕ್ ಕಾರಿನಲ್ಲಿ ಈ ರೀತಿಯ ಚಟುವಟಿಕೆಯಲ್ಲಿ ತೊಡಗಿ ಹಲವರು ಅಪಘಾತಕ್ಕೀಡಾಗಿದ್ದಾರೆ.

ADAS ದುರುಪಯೋಗ: ಕಾರು ಚಾಲನೆಯಲ್ಲಿದ್ದಾಗ ಡ್ರೈವರ್ ಸಿಟಿನಿಂದ ಎದ್ದುಬಂದು ವಿಡಿಯೋ ಮಾಡಿದ ಯುವಕ

ಅದರಲ್ಲಿ ಒದಗಿಸಲಾದ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸದೆ ಅಪಘಾತಗಳು ಸಂಭವಿಸಿದ ಘಟನೆಗಳು ಇವೆ. ಇಷ್ಟು ದೊಡ್ಡ ಫೀಚರ್ ಅನ್ನು ಯುವಕರು ದುರುಪಯೋಗಪಡಿಸಿಕೊಳ್ಳುವುದು ಮೂರ್ಖತನ ಎಂದು ಟೀಕೆಗಳು ವ್ಯಕ್ತವಾಗುತ್ತಿವೆ.

ADAS ದುರುಪಯೋಗ: ಕಾರು ಚಾಲನೆಯಲ್ಲಿದ್ದಾಗ ಡ್ರೈವರ್ ಸಿಟಿನಿಂದ ಎದ್ದುಬಂದು ವಿಡಿಯೋ ಮಾಡಿದ ಯುವಕ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

XUV700 ವಿಷಯಕ್ಕೆ ಬಂದರೆ ಕಾರು ಅತ್ಯಂತ ಉತ್ತಮವಾದ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಭಾರತದಲ್ಲಿ ಉತ್ತಮ ಸ್ವಾಗತವನ್ನು ಪಡೆಯುತ್ತಿದೆ. ಆದರೆ XUV700 ಸುರಕ್ಷಿತ ಕಾರು ಆಗಿದ್ದರೂ, ಈ ರೀತಿ ಆಡುವುದು ತುಂಬಾ ಅಪಾಯಕಾರಿ ಎಂಬುದನ್ನು ನೆನಪಿನಲ್ಲಿಡಬೇಕು.

Article Published On: Monday, October 31, 2022, 16:46 [IST]
English summary
Misuse of adas technology a young man who got out of the drivers seat while the car was running
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+