360-ಡಿಗ್ರಿ ಕ್ಯಾಮೆರಾ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಾರುತಿ ಬಲೆನೊ

ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯ ಕಾರುಗಳ ಸರಣಿಯಲ್ಲಿ ಬಲೆನೊ ಹ್ಯಾಚ್‌ಬ್ಯಾಕ್‌ ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿದೆ. ಈ ಬಹುಬೇಡಿಕೆಯ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಮಾರುತಿ ಸುಜುಕಿ ಬಲೆನೊ (Maruti Suzuki Baleno) ಹೊಸ ನವೀಕರಣಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

360-ಡಿಗ್ರಿ ಕ್ಯಾಮೆರಾ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಾರುತಿ ಬಲೆನೊ

ಹೊಸ ಮಾರುತಿ ಸುಜುಕಿ ಬಲೆನೊ 2022ರ ವರ್ಷದ ಅತ್ಯಂತ ನಿರೀಕ್ಷಿತ ಬಿಡುಗಡೆಗಳಲ್ಲಿ ಒಂದಾಗಿದೆ. ಇದೀಗ ಮಾರುತಿ ಮುಂಬರುವ ಬಲೆನೊ ಫೇಸ್‌ಲಿಫ್ಟ್‌ನ 360-ಡಿಗ್ರಿ ಕ್ಯಾಮೆರಾವನ್ನು ತೋರಿಸುವ ಟೀಸರ್ ವೀಡಿಯೊವನ್ನು ಬಿಡುಗಡೆ ಮಾಡಿದೆ. 2022ರ ಬಲೆನೊ ದೊಡ್ಡ 9-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ ಪ್ಲಸ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಈ ಸಿಸ್ಟಂ ಅನ್ನು ಟೊಯೋಟಾದೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಲಾಗುತ್ತದೆ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಪಡೆಯುತ್ತದೆ.

360-ಡಿಗ್ರಿ ಕ್ಯಾಮೆರಾ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಾರುತಿ ಬಲೆನೊ

ಕೆಲವು ದಿನಗಳ ಹಿಂದೆ ಟೀಸರ್ ಇನ್ನೊಂದು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬರುವ ಹೊಚ್ಚ ಹೊಸ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ತೋರಿಸುತ್ತದೆ. ವಾಸ್ತವವಾಗಿ, ಈ ಬಾರಿಯ ಪ್ರಮುಖ ಗಮನವು ಬಲೆನೊದ ಕನೆಕ್ಟಿವಿಟಿ ಮತ್ತು ಇನ್-ಕಾರ್ ಇನ್ಫೋಟೈನ್‌ಮೆಂಟ್ ಅನುಭವವನ್ನು ಅಪ್‌ಗ್ರೇಡ್ ಮಾಡಲಾಗುತ್ತದೆ.

360-ಡಿಗ್ರಿ ಕ್ಯಾಮೆರಾ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಾರುತಿ ಬಲೆನೊ

2022ರ ಮಾರುತಿ ಸುಜುಕಿ ಬಲೆನೊ ಹೊಸ 9-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ ಪ್ಲಸ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿರಲಿದೆ. ಇದು ಹಿಂದಿನ 7-ಇಂಚಿನ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗೆ ಹೋಲಿಸಿದರೆ ಇನ್ನೂ ಕೆಲವು ಫೀಚರ್ಸ್ ಗಳನ್ನು ನೀಡುವ ನಿರೀಕ್ಷೆಯಿದೆ.

360-ಡಿಗ್ರಿ ಕ್ಯಾಮೆರಾ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಾರುತಿ ಬಲೆನೊ

ಮಾರುತಿ ಸುಜುಕಿ ಕಂಪನಿಯು ಹೊಸ ಬಲೆನೊಗಾಗಿ ಸ್ಮಾರ್ಟ್‌ಪ್ಲೇ ಪ್ರೊ ಟಚ್‌ಸ್ಕ್ರೀನ್ ಯುನಿಟ್ ಅನ್ನು ವಿನ್ಯಾಸಗೊಳಿಸಿದೆ. ಟೀಸರ್ ವೀಡಿಯೊದಲ್ಲಿ ನಾವು ನೋಡಿದಂತೆಯೇ, ಹೊಸ ಟಚ್‌ಸ್ಕ್ರೀನ್ ಹೆಚ್ಚು ತೀಕ್ಷ್ಣವಾದ ಮತ್ತು ಗರಿಗರಿಯಾದ ಗ್ರಾಫಿಕ್ಸ್ ಅನ್ನು ಒಳಗೊಂಡಿರುವ ಎಲ್ಲಾ-ಹೊಸ ಇಂಟರ್ಫೇಸ್ ಅನ್ನು ಪಡೆಯುತ್ತದೆ. ಇದು Apple CarPlay ಮತ್ತು Android Auto ಜೊತೆಗೆ ಕನೆಕ್ಟಿವಿಟಿ ಕಾರ್ ಫೀಚರ್ಸ್ ಗಳನ್ನು ಪಡೆಯುವ ನಿರೀಕ್ಷೆಯಿದೆ.

360-ಡಿಗ್ರಿ ಕ್ಯಾಮೆರಾ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಾರುತಿ ಬಲೆನೊ

ಹೊಸ SmartPlay Pro Plus ನಲ್ಲಿ ಮಾರುತಿ ಇನ್ ಬಿಲ್ಟ್ ನ್ಯಾವಿಗೇಷನ್ ಸಿಸ್ಟಂ ಸಹ ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದಲ್ಲದೆ, ಹೊಸ ಬಲೆನೊ ಹೊಸ ಟೀಸರ್‌ನಲ್ಲಿ ತೋರಿಸಿರುವಂತೆ ವಾಯ್ಸ್ ಅನುಭವಕ್ಕಾಗಿ ಪ್ರೀಮಿಯಂ ವಾಯ್ಸ್ ಪಡೆಯಬಹುದು.

360-ಡಿಗ್ರಿ ಕ್ಯಾಮೆರಾ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಾರುತಿ ಬಲೆನೊ

ಇನ್ನು ಮಾರುತಿ ಸುಜುಕಿ ಕಂಪನಿಯು 2022ರ ಬಲೆನೊ ಕಾರಿನ ಖರೀದಿಗಾಗಿ ಅಧಿಕೃತವಾಗಿ ದೇಶದಲ್ಲಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಮಾರುತಿ ಸುಜುಕಿ ಕಂಪನಿಯು 2015ರಲ್ಲಿ ಮೊದಲ ಬಾರಿಗೆ ಬಲೆನೊ ಕಾರನ್ನು ಬಿಡುಗಡೆಗೊಳಿಸಿತ್ತು. ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ.

360-ಡಿಗ್ರಿ ಕ್ಯಾಮೆರಾ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಾರುತಿ ಬಲೆನೊ

ಮಾರುತಿ ಸುಜುಕಿ ಕಂಪನಿಯು ಜನಪ್ರಿಯ ಬಲೆನೊ ಕಾರನ್ನು ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ. ಮಾರುತಿ ಸುಜುಕಿ ಕಂಪನಿಯು ತನ್ನ ಗುಜರಾತ್ ಮೂಲದ ಸ್ಥಾವರದಲ್ಲಿ ಹೊಸ 2022ರ ಮಾರುತಿ ಬಲೆನೊ ಕಾರಿನ ಉತ್ಪಾದನೆಯನ್ನು ಈಗಾಗಲೇ ಪ್ರಾರಂಭಿಸಿದೆ. ಈ ಹ್ಯಾಚ್‌ಬ್ಯಾಕ್‌ನ ಮೊದಲ ಯುನಿಟ್ ಅನ್ನು ಕಳೆದ ತಿಂಗಳ 24 ರಂದು ಹೊರತರಲಾಯಿತು.

360-ಡಿಗ್ರಿ ಕ್ಯಾಮೆರಾ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಾರುತಿ ಬಲೆನೊ

ಮಾರುತಿಯ ನೆಕ್ಸಾ ಡೀಲರ್‌ಶಿಪ್ ಶ್ರೇಣಿಯ ಮೂಲಕ ಮಾರಾಟ ಮಾಡುವ ಈ ಹೊಸ ಬಲೆನೊ ಗಮನಾರ್ಹವಾಗಿ ಪರಿಷ್ಕೃತ ಮುಂಭಾಗದ ವಿನ್ಯಾಸದೊಂದಿಗೆ ಬರಲಿದೆ. ಹ್ಯಾಚ್‌ಬ್ಯಾಕ್‌ನ ಬಾಡಿ ಪ್ಯಾನೆಲ್‌ಗಳನ್ನು ಮರು-ವಿನ್ಯಾಸಗೊಳಿಸಲಾಗಿದೆ ಮತ್ತು ಹೊಸ ಮಾದರಿಯು ಪ್ರಸ್ತುತ ಕಾರ್‌ಗಿಂತ ಅಗಲವಾಗಿ ಮತ್ತು ದಪ್ಪವಾಗಿ ಕಾಣುತ್ತದೆ. ಈ ಹೊಸ ಕಾರು ಹೊಸ ದೊಡ್ಡ ಗ್ರಿಲ್ ಅನ್ನು ಪಡೆಯುತ್ತದೆ,

360-ಡಿಗ್ರಿ ಕ್ಯಾಮೆರಾ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಾರುತಿ ಬಲೆನೊ

ಇದರೊಂದಿಗೆ ಎಲ್-ಆಕಾರದ ಸುತ್ತುವ ಹೆಡ್‌ಲ್ಯಾಂಪ್‌ಗಳಿಂದ ಸುತ್ತುವರೆದಿದೆ. ಹೆಡ್‌ಲ್ಯಾಂಪ್ ಯುನಿಟ್ ಡಿಆರ್‌ಎಲ್‌ಗಳು (ಡೇಟೈಮ್ ರನ್ನಿಂಗ್ ಲೈಟ್‌ಗಳು) ಮತ್ತು ಪ್ರೊಜೆಕ್ಟರ್ ಸೆಟಪ್ ಅನ್ನು ಹೊಂದಿರುತ್ತದೆ. ಬಾನೆಟ್ ವಿನ್ಯಾಸವನ್ನು ಸಹ ಬದಲಾಯಿಸಲಾಗಿದೆ.

360-ಡಿಗ್ರಿ ಕ್ಯಾಮೆರಾ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಾರುತಿ ಬಲೆನೊ

ಈ ಹೊಸ ಬಲೆನೊ ಕಾರಿನ ಸೈಡ್ ಪ್ರೊಫೈಲ್ ಹೊರಹೋಗುವ ಮಾದರಿಗೆ ಹೋಲುವಂತಿದೆ. ಆದರೆ ಮಾರುತಿ ಸುಜುಕಿ ಎಂಜಿನಿಯರ್‌ಗಳು ಹೊಸ ಮುಂಭಾಗದ ಫಾಸಿಕ ಮತ್ತು ಟೈಲ್-ಲೈಟ್‌ಗಳಿಗಾಗಿ ಮುಂಭಾಗ ಮತ್ತು ಹಿಂಭಾಗದ ಫೆಂಡರ್‌ಗಳನ್ನು ಪರಿಷ್ಕರಿಸಿದ್ದಾರೆ. ಈ ಹೊಸ ಹ್ಯಾಚ್‌ಬ್ಯಾಕ್‌ನ ಹಿಂಭಾಗದ ಪ್ರೊಫೈಲ್ ಹೊಸ ಶೈಲಿಯ ಎಲ್-ಆಕಾರದ ಟೈಲ್-ಲೈಟ್‌ಗಳನ್ನು ಪಡೆಯುತ್ತದೆ. ಇದು ಹೊಸ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ಸಹ ಹೊಂದಿದೆ. ಬಹಿರಂಗವಾದ ಸ್ಪೈ ಚಿತ್ರಗಳು 2022ರ ಮಾರುತಿ ಬಲೆನೊ ಸಂಪೂರ್ಣವಾಗಿ ಮರು-ವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಮತ್ತು ಬಣ್ಣದ ಸ್ಕೀಮ್‌ನೊಂದಿಗೆ ಎಲ್ಲಾ-ಹೊಸ ಒಳಾಂಗಣವನ್ನು ಒಳಗೊಂಡಿರುತ್ತದೆ ಎಂದು ಬಹಿರಂಗಪಡಿಸುತ್ತದೆ. ಒಳಾಂಗಣ ವಿನ್ಯಾಸವು ಜಾಗತಿಕ ಹೊಸ ಎಸ್-ಕ್ರಾಸ್ ಕ್ರಾಸ್‌ಒವರ್‌ನಿಂದ ಪ್ರೇರಿತವಾಗಿದೆ.

360-ಡಿಗ್ರಿ ಕ್ಯಾಮೆರಾ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಾರುತಿ ಬಲೆನೊ

2022ರ ಬಲೆನೊ ಹ್ಯಾಚ್‌ಬ್ಯಾಕ್‌ ಕಾರು ಹೊಸ ಬ್ರಷ್ಡ್ ಅಲ್ಯೂಮಿನಿಯಂನೊಂದಿಗೆ ಎಲ್ಲಾ-ಹೊಸ ಡ್ಯಾಶ್‌ಬೋರ್ಡ್ ಅನ್ನು ಕೂಡ ಒಳಗೊಂಡಿದೆ. ಈ ಮಾದರಿ ಉತ್ತಮ ಗುಣಮಟ್ಟದ ಪ್ಲಾಸ್ಟಿಕ್, ಹೊಸ ಸ್ಟೀರಿಂಗ್ ವೀಲ್ ಮತ್ತು ಹೊಸ ಕ್ಲೈಮೇಂಟ್ ಕಂಟ್ರೋಲ್ ಬಟನ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹ್ಯಾಚ್‌ಬ್ಯಾಕ್ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ವೈಪರ್‌ಗಳನ್ನು ಸಹ ಹೊಂದಿರಲಿದೆ.

360-ಡಿಗ್ರಿ ಕ್ಯಾಮೆರಾ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಾರುತಿ ಬಲೆನೊ

2022ರ ಮಾರುತಿ ಸುಜುಕಿ ಬಲೆನೊ ಕಾರಿನಲ್ಲಿ ಅದೇ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 82 ಬಿಎಚ್‌ಪಿ ಪವರ್ ಮತ್ತು 113 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ. ಇನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಣಗೊಂಡ ಮೊದಲ ಹ್ಯಾಚ್‌ಬ್ಯಾಕ್ ಇದಾಗಿದೆ.

360-ಡಿಗ್ರಿ ಕ್ಯಾಮೆರಾ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಾರುತಿ ಬಲೆನೊ

ಈ ಹೊಸ ಬಲೆನೊ ಮಾದರಿಯು ಕೆಲವು ಹೆಚ್ಚುವರಿ ಫೀಚರ್ಸ್ ಗಳನ್ನು ಕೂಡ ಒಳಗೊಂಡಿರುತ್ತದೆ. ಬಲೆನೊ ಪ್ರೀಮಿಯಂ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಐ20, ಟಾಟಾ ಆಲ್ಟ್ರೊಜ್, ಹೋಂಡಾ ಜಾಝ್, ಫೋಕ್ಸ್‌ವ್ಯಾಗನ್ ಪೊಲೊ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Article Published On: Tuesday, February 15, 2022, 15:23 [IST]
English summary
New 2022 maruti suzuki baleno hatchback to get 360 degree camera details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+