521 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಚೀನಾದ ದೈತ ಕಂಪನಿ ಬಿವೈಡಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಬಿವೈಡಿ ತನ್ನ ಹೊಸ ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಗಿದೆ. ಈ ಹೊಸ ಬಿವೈಡಿ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿಯ ಬೆಲೆಗಳು ಒಂದು ತಿಂಗಳ ನಂತರ ಬಹಿರಂಗವಾಗಲಿದೆ.

521 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಚೀನಾದ ದೈತ ಕಂಪನಿ ಬಿವೈಡಿ

ಇದೀಗ ಬಿವೈಡಿ ಕಂಪನಿಯು ಈ ಹೊಸ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಲಾಗಿದೆ. ಆಸಕ್ತ ಖರೀದಿದಾರರು ಈಗ 50,000 ರೂಪಾಯಿಗಳನ್ನು ಪಾವತಿಸಿ ಬುಕ್ ಮಾಡಬಹುದು. ಮೊದಲ 500 ಯುನಿಟ್‌ಗಳ ವಿತರಣೆಯು ಜನವರಿ 2023 ರಿಂದ ಪ್ರಾರಂಭವಾಗಲಿದೆ ಎಂದು ಕಾರು ತಯಾರಕರು ದೃಢಪಡಿಸಿದ್ದಾರೆ. ಸುಮಾರು 30 ಲಕ್ಷ (ಎಕ್ಸ್ ಶೋ ರೂಂ) ಅಂದಾಜು ಬೆಲೆಯೊಂದಿಗೆ ಬಿಡುಗಡೆಯಾಗಬಹುದು. ಹ್ಯುಂಡೈ ಕೋನಾ ಇವಿ ಮತ್ತು ಎಂಜಿ ZS ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

521 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಚೀನಾದ ದೈತ ಕಂಪನಿ ಬಿವೈಡಿ

ಹೊಸ ಬಿವೈಡಿ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿಯ ಬ್ಯಾಟರಿ ಪ್ಯಾಕ್‌ಗೆ ಬರುವುದಾದರೆ, ಮೂಲ ರೂಪಾಂತರಗಳು ಸಣ್ಣ 49.92kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಸಜ್ಜುಗೊಳ್ಳುವ ಸಾಧ್ಯತೆಯಿದೆ. ಈ ಬ್ಯಾಟರಿ ಪ್ಯಾಕ್‌ನೊಂದಿಗೆ ಮಾಡೆಲ್ ಅನ್ನು ಪ್ರಾರಂಭಿಸುವ ಬಗ್ಗೆ ಬಿವೈಡಿ ಇನ್ನೂ ಅಧಿಕೃತವಾಗಿ ದೃಢೀಕರಿಸಿಲ್ಲ.

521 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಚೀನಾದ ದೈತ ಕಂಪನಿ ಬಿವೈಡಿ

ಮತ್ತೊಂದೆಡೆ, ಬಿವೈಡಿ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿ ದೊಡ್ಡದಾದ 60.48kWh ಬ್ಯಾಟರಿ ಪ್ಯಾಕ್‌ನೊಂದಿಗೆ ಪೂರ್ಣ ಚಾರ್ಜ್‌ನಲ್ಲಿ 521 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಅಲ್ಲದೆ, ಮಾದರಿಯು ಸೂಕ್ತವಾದ DC ಫಾಸ್ಟ್ ಚಾರ್ಜರ್ ಅನ್ನು ಬಳಸಿಕೊಂಡು ಕೇವಲ 50 ನಿಮಿಷಗಳಲ್ಲಿ 0 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು.

521 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಚೀನಾದ ದೈತ ಕಂಪನಿ ಬಿವೈಡಿ

ಪವರ್‌ಟ್ರೇನ್‌ಗೆ ಬರುವುದಾದರೆ, ಮುಂಬರುವ ವೈಡಿ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿ 201 ಬಿಹೆ‍ಪಿ ಪವರ್ ಮತ್ತು 310 ಎನ್ಎಂ ಟಾರ್ಕ್‌ನೊಂದಿಗೆ ಏಕ ಶಾಶ್ವತ ಮ್ಯಾಗ್ನೆಟ್ ಸಿಂಕ್ರೊನಸ್ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗುವ ಸಾಧ್ಯತೆಯಿದೆ. ವೈಡಿ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿ ಅದರ ವಿಭಾಗದಲ್ಲಿ ಅತ್ಯಂತ ಶಕ್ತಿಶಾಲಿ ಎಸ್‍ಯುವಿ ಆಗಿರುತ್ತದೆ.

521 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಚೀನಾದ ದೈತ ಕಂಪನಿ ಬಿವೈಡಿ

ಇದಲ್ಲದೆ, ಬಿವೈಡಿ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿ ಕೇವಲ 7.3 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ, ಅದರ ಜೊತೆಗೆ, ಮುಂಬರುವ ವೈಡಿ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿ 4,455mm ಉದ್ದ, 1,875mm ಅಗಲ, 1,615mm ಎತ್ತರ ಮತ್ತು 2,720mm ವ್ಹೀಲ್‌ಬೇಸ್ ಅನ್ನು ಹೊಂದುವ ಅದರ ತಕ್ಷಣದ ಪ್ರತಿಸ್ಪರ್ಧಿಗಳಿಗಿಂತ ಸ್ವಲ್ಪ ದೊಡ್ಡದಾಗಿದೆ.

521 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಚೀನಾದ ದೈತ ಕಂಪನಿ ಬಿವೈಡಿ

ಹೊಸ ಬಿವೈಡಿ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿ ತನ್ನ ದೊಡ್ಡ LED ಹೆಡ್‌ಲ್ಯಾಂಪ್‌ಗಳು, ಬಲವಾದ ಲೈನ್ ಮತ್ತು ಪೂರ್ಣ-ಅಗಲದ LED ಟೈಲ್‌ಲೈಟ್‌ಗಳೊಂದಿಗೆ ಸ್ಪೋರ್ಟಿ ಮತ್ತು ಅತ್ಯಾಧುನಿಕವಾಗಿ ಕಾಣುತ್ತದೆ. ಅದರ ಜೊತೆಗೆ, ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿ ಬೌಲ್ಡರ್ ಗ್ರೇ, ಪಾರ್ಕರ್ ರೆಡ್, ಸ್ಕೀ ವೈಟ್ ಮತ್ತು ಸರ್ಫ್ ಬ್ಲೂ ಸೇರಿದಂತೆ 4 ವಿಭಿನ್ನ ಬಾಹ್ಯ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

521 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಚೀನಾದ ದೈತ ಕಂಪನಿ ಬಿವೈಡಿ

ಈ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 12.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್‌ನೊಂದಿಗೆ ಬರುತ್ತದೆ, ಇದನ್ನು ಲ್ಯಾಂಡ್‌ಸ್ಕೇಪ್ ಓರಿಯಂಟೇಶನ್ ಅಥವಾ ಪೋಟ್ರೇಟ್ ಓರಿಯಂಟೇಶನ್‌ಗೆ ತಿರುಗಿಸಬಹುದು. ಮುಂಬರುವ ಈ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿನ ಇತರ ಗಮನಾರ್ಹ ವೈಶಿಷ್ಟ್ಯಗಳು ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಮತ್ತು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಅನ್ನು ಹೊಂದಿದೆ,

521 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಚೀನಾದ ದೈತ ಕಂಪನಿ ಬಿವೈಡಿ

ಇದರೊಂದಿಗೆ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ಆಟೋ ಕ್ಲೈಮೇಟ್ ಕಂಟ್ರೋಲ್, 8-ಸ್ಪೀಕರ್ ಆಡಿಯೋ ಸಿಸ್ಟಮ್, ಪನೋರಮಿಕ್ ಸನ್‌ರೂಫ್, CN95 ಏರ್ ಫಿಲ್ಟರ್, ವಾಯ್ಸ್ ಕಂಟ್ರೋಲ್, ಹಿಂಭಾಗದ AC ವೆಂಟ್ ಗಳು ಮತ್ತು ಇನ್ನಷ್ಟು.ಫೀಚರ್ಸ್ ಗಳನ್ನು ಹೊಂದಿವೆ.

521 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಚೀನಾದ ದೈತ ಕಂಪನಿ ಬಿವೈಡಿ

ಈ ವೈಶಿಷ್ಟ್ಯಗಳ ಜೊತೆಗೆ, ಮುಂಬರುವ ಬಿವೈಡಿ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿ ಲೆವೆಲ್-2 ಆಟೋನೊಮಸ್ ಡ್ರೈವಿಂಗ್ ಸಿಸ್ಟಮ್ ಅನ್ನು ಸಹ ಹೊಂದುವ ಸಾಧ್ಯತೆಯಿದೆ. ಈ ಆಕ್ಟಿವ್ ಸೇಫ್ಟಿ ಸಿಸ್ಟಂ ಮತ್ತು ಗೋ ಫಂಕ್ಷನ್‌ನೊಂದಿಗೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವರ್ಡ್ ಘರ್ಷಣೆ ಎಚ್ಚರಿಕೆ (ಎಫ್‌ಸಿಡಬ್ಲ್ಯೂ), ಲೇನ್ ಕೀಪಿಂಗ್ ಅಸಿಸ್ಟ್, ಡೋರ್ ಓಪನ್ ವಾರ್ನಿಂಗ್, ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ಸಿಸ್ಟಮ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್ (ಎಇಬಿ), ರಿಯರ್ ಕ್ರಾಸ್-ಟ್ರಾಫಿಕ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

521 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಚೀನಾದ ದೈತ ಕಂಪನಿ ಬಿವೈಡಿ

ಪ್ರಸ್ತುತ, ಭಾರತದಲ್ಲಿ ಬಿವೈಡಿಗಾಗಿ 24 ಶೋರೂಮ್‌ಗಳು 21 ನಗರಗಳಲ್ಲಿವೆ. ಇದಲ್ಲದೆ, ವಾಹನ ತಯಾರಕರು 2023ರ ಅಂತ್ಯದ ವೇಳೆಗೆ ಕನಿಷ್ಠ 53 ಶೋರೂಮ್‌ಗಳನ್ನು ಅಭಿವೃದ್ಧಿಪಡಿಸಲು ಯೋಜಿಸುತ್ತಿದ್ದಾರೆ. ಅದರ ಜೊತೆಗೆ, ಕಂಪನಿಯು 2023 ರಲ್ಲಿ 15,000 ಯುನಿಟ್ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಮಾರಾಟ ಮಾಡಲು ಉದ್ದೇಶಿಸಿದೆ. ಇನ್ನು ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೆರಿದೆ. ಏರುತ್ತಿರುವ ಇಂಧನ ಬೆಲೆಗಳಿಂದ ಪಾರಾಗಲು ಜನರು ಪರ್ಯಾಯ ಆಯ್ಕೆಗಳನ್ನು ಹುಡುಕಲಾರಂಭಿಸಿದ್ದಾರೆ. ಇದರಿಂದ ಜನರು ಈಗ ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ.

521 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಚೀನಾದ ದೈತ ಕಂಪನಿ ಬಿವೈಡಿ

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಹೊಸ ಬಿವೈಡಿ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿ ಬಿಡುಗಡೆಯು ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಆಯ್ಕೆಯನ್ನು ನೀಡುತ್ತದೆ. ಇದಲ್ಲದೆ, ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿಯ ಬಿಡುಗಡೆಯು ಭಾರತದಲ್ಲಿ ಇವಿಗಳನ್ನು ಇನ್ನಷ್ಟು ಜನಪ್ರಿಯಗೊಳಿಸಲು ನಾವು ನಿರೀಕ್ಷಿಸುತ್ತೇವೆ ವೈಶಿಷ್ಟ್ಯ-ಲೋಡ್ ಮತ್ತು ಆಕರ್ಷಕವಾಗಿ ಕಾಣುವ ಎಲೆಕ್ಟ್ರಿಕ್ಎಸ್‍ಯುವಿ ಆಗಿದ್ದರೂ, ಯಶಸ್ಸು ಬೆಲೆಯ ಮೇಲೆ ಅವಲಂಬಿತವಾಗಿರುತ್ತದೆ.

Most Read Articles

Kannada
Read more on ಬಿವೈಡಿ byd
English summary
New byd atto 3 electric suv unveiled range features details
Story first published: Tuesday, October 11, 2022, 19:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X