ಟಾಟಾ ಮೋಟಾರ್ಸ್‌ನಿಂದ ಮತ್ತೊಂದು ಸಿಎನ್‌ಜಿ ಕಾರು ಬಿಡುಗಡೆ

ಟಾಟಾ ಟಿಯಾಗೊ NRG CNG ರೂಪಾಂತರವನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಲೇಖನದಲ್ಲಿ ಈ ಕಾರಿನ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ.

ಭಾರತೀಯ ವಾಹನ ದೈತ್ಯ ಟಾಟಾ ಮೋಟಾರ್ಸ್ ಇತ್ತೀಚೆಗೆ Tiago NRG CNG ಆವೃತ್ತಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಇದೀಗ ಹೊಸ ಕಾರನ್ನು ಮಾರಾಟಕ್ಕೆ ಪರಿಚಯಿಸಲಾಗಿದೆ.

ಇದನ್ನು ಕಾರ್ಖಾನೆಯ ಸಿಎನ್‌ಜಿ ಕಿಟ್‌ನಂತೆ ಬಿಡುಗಡೆ ಮಾಡಲಾಗಿದೆ. ಇದರ ಪರಿಚಯಾತ್ಮಕ ಬೆಲೆಯನ್ನು ರೂ. 7.40 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಪ್ರಸ್ತುತ, CNG ವಾಹನಗಳು ಭಾರತದಲ್ಲಿ ಬಹಳ ಜನಪ್ರಿಯವಾಗುತ್ತಿದ್ದು, ಎಲ್ಲಾ ಕಾರು ತಯಾರಕರು ಸಿಎನ್‌ಜಿ ವರ್ಷನ್ ತರುತ್ತಿದ್ದಾರೆ. ಆದ್ದರಿಂದ ಸಿಎನ್‌ಜಿ ವಾಹನಗಳನ್ನು ಬಿಡುಗಡೆ ಮಾಡಲು ವಾಹನ ತಯಾರಕರ ನಡುವಿನ ಪೈಪೋಟಿ ಹಲವು ಪಟ್ಟು ಹೆಚ್ಚುತ್ತಿದೆ.

ನಿನ್ನೆ (ನವೆಂಬರ್ 18) ಮಾರುತಿ ಸುಜುಕಿ ತನ್ನ ಆಲ್ಟೊ ಕೆ10 ಸಿಎನ್‌ಜಿ ಕಾರನ್ನು ಬಿಡುಗಡೆ ಮಾಡಿದೆ. ಇದೀಗ ಟಾಟಾ ಮೋಟಾರ್ಸ್ ಕೂಡ ತನ್ನ Tiago NRG CNG ಅನ್ನು ಮಾರಾಟಕ್ಕೆ ತಂದಿದೆ. ಇದು ಕಂಪನಿಯ ಮೂರನೇ ಸಿಎನ್‌ಜಿ ವಾಹನವಾಗಿದೆ. ಕಂಪನಿಯು ಈಗಾಗಲೇ ಸಿಎನ್‌ಜಿ ಆಯ್ಕೆಯನ್ನು ಟಿಯಾಗೊ ಮತ್ತು ಡೆಕೋರ್ ಕಾರು ಮಾದರಿಯ ನಿಯಮಿತ ರೂಪಾಂತರದಲ್ಲಿ ನೀಡುತ್ತದೆ.

Tiago NRG CNG ಅನ್ನು ಈಗ ಈ ಸಾಲಿಗೆ ಸೇರಿಸಲಾಗಿದೆ. ಇದು ಎರಡು ರೂಪಾಂತರಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಅವುಗಳೆಂದರೆ XT NRG ಮತ್ತು XZ NRG. ಇದರಲ್ಲಿ XT NRG CNG ರೂ. 7.40 ಲಕ್ಷ ಮತ್ತು XZ NRG CNG ಗೆ ರೂ. 7.80 ಲಕ್ಷ ಬೆಲೆ ನಿಗದಿ ಮಾಡಲಾಗಿದೆ. ನೀವು ಅದೇ ಆಯ್ಕೆಗಳನ್ನು ನಾನ್-ಸಿಎನ್‌ಜಿ ಪೆಟ್ರೋಲ್ ಮೋಟರ್‌ನೊಂದಿಗೆ ಖರೀದಿಸಲು ಬಯಸಿದರೆ 90 ಸಾವಿರ ಕಡಿಮೆ ಬೆಲೆಗೆ ಪಡೆಯಬಹುದು.

ಮೋಟರ್‌ಗೆ ಸಂಬಂಧಿಸಿದಂತೆ, ಈ ಸಿಎನ್‌ಜಿ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಮೋಟರ್ ಅನ್ನು ಬಳಸಲಾಗುತ್ತದೆ. ಸಿಎನ್‌ಜಿ ಮೋಡ್‌ನಲ್ಲಿ ಚಲಿಸುವಾಗ ಇದು ಗರಿಷ್ಠ 73.4 ಪಿಎಸ್ ಪವರ್ ಮತ್ತು 95 ಎನ್‌ಎಂ ಟಾರ್ಕ್ ಅನ್ನು ಹೊರಹಾಕುತ್ತದೆ. ಹಾಗೆಯೇ ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ನೊಂದಿಗೆ ಬರುತ್ತದೆ.

ಹೆಚ್ಚಿನ ಸಿಎನ್‌ಜಿ ತುಂಬುವ ಸಾಧನವಾಗಿ ಕಾರಿನಲ್ಲಿ 60 ಲೀಟರ್ ಸಾಮರ್ಥ್ಯದ ಸಿಎನ್‌ಜಿ ಸಿಲಿಂಡರ್ ಅನ್ನು ಒದಗಿಸಲಾಗಿದೆ. ಈ ದೊಡ್ಡ ಸಿಲಿಂಡರ್ ಅನ್ನು ಕಾರಿನ ಹಿಂಭಾಗದಲ್ಲಿ ನಿಲ್ಲಿಸಲಾಗಿದೆ. ಆದ್ದರಿಂದ, ಕಾರಿನ ಬೂಟ್ ಸ್ಪೇಸ್ ತೀವ್ರವಾಗಿ ಕಡಿಮೆಯಾಗಿದೆ. ಉಳಿದಂತೆ ಕಾರು ತನ್ನ ಅದೇ ಲುಕ್ ಅನ್ನು ಎಲ್ಲಾ ವಿಧಗಳಲ್ಲೂ ಉಳಿಸಿಕೊಂಡಿದೆ.

ಹೆಚ್ಚುವರಿ ಮುಖ್ಯಾಂಶಗಳನ್ನು ನೋಡುವುದಾದರೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೀಲೆಸ್ ಎಂಟ್ರಿ, ಕೂಲ್ಡ್ ಗ್ಲೋವ್ ಬಾಕ್ಸ್, ಎತ್ತರ-ಹೊಂದಾಣಿಕೆ ಡ್ರೈವರ್ ಸೀಟ್ ಮತ್ತು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ನೀಡಲಾಗಿದೆ.

ಇದಲ್ಲದೆ, ಟಿಯಾಗೊ NRG ನಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ನೀಡಲಾಗುತ್ತದೆ. ಪೆಟ್ರೋಲ್ ಡಿಯಾಗೋ NRG ನಲ್ಲಿ ನಾವು ಈ ವೈಶಿಷ್ಟ್ಯಗಳನ್ನು ಕಾಣಬಹುದು. ಟಾಟಾದಿಂದ ಈ ಹೊಸ ಸಿಎನ್‌ಜಿ ಕಾರಿನ ಆಗಮನವು ಮಾರುತಿ ಸುಜುಕಿ ವ್ಯಾಗನ್-ಆರ್ ಸಿಎನ್‌ಜಿ ಮತ್ತು ಸೆಲೆರಿಯೊ ಸಿಎನ್‌ಜಿಗೆ ಪ್ರತಿಸ್ಪರ್ಧಿಯಾಗಲಿದೆ.

Most Read Articles

Kannada
English summary
New cng car launched by tata motors
Story first published: Saturday, November 19, 2022, 15:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X