Just In
- 26 min ago
ಎಸ್ಬಿಐ ಜೊತೆಗೂಡಿ ಇವಿ ಕಾರುಗಳಿಗಾಗಿ ವಿಶೇಷ ಸಾಲ ಸೌಲಭ್ಯ ಘೋಷಣೆ ಮಾಡಿದ ಟಾಟಾ ಮೋಟಾರ್ಸ್
- 14 hrs ago
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- 14 hrs ago
ಜುಲೈ ಎಲೆಕ್ಟ್ರಿಕ್ ಕಾರುಗಳ ನೋಂದಣಿಯಲ್ಲಿ ಶೇ 3.5 ರಷ್ಟು ಏರಿಕೆ: ಶೇ 90 ರಷ್ಟು ಪಾಲು ಟಾಟಾಗೆ
- 15 hrs ago
30.9 ಕಿ.ಮೀ ಮೈಲೇಜ್ನೊಂದಿಗೆ ಮಾರುತಿ ಸ್ವಿಫ್ಟ್ ಸಿಎನ್ಜಿ ಕಾರು ಬಿಡುಗಡೆ
Don't Miss!
- News
ಸ್ವಾತಂತ್ರ್ಯ ದಿನಾಚರಣೆ: ಜನ ಸೇರದಂತೆ ತಡೆಯಲು ಕೇಂದ್ರ ರಾಜ್ಯಗಳಿಗೆ ಸೂಚನೆ
- Sports
Asia Cup 2022: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ಈ ತಂಡ ಗೆಲ್ಲಲಿದೆ; ರಿಕಿ ಪಾಂಟಿಂಗ್
- Lifestyle
Today Rashi Bhavishya: ಶನಿವಾರದ ದಿನ ಭವಿಷ್ಯ: ತುಲಾ, ಮೇಷ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರಿಗೆ ಶುಭ ದಿನ
- Movies
ಅತ್ತ ಪೊಲೀಸ್, ಇತ್ತ ರೌಡಿ ಇಬ್ಬರನ್ನೂ ಎದುರಿಸುತ್ತಿರುವ ಕಂಠಿ!
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಹೊಸ ಹೋಂಡಾ ಸಿಆರ್-ವಿ ಎಸ್‍ಯುವಿ ಅನಾವರಣ
ಜಪಾನಿನ ವಾಹನ ತಯಾರಕ ಕಂಪನಿಯಾದ ಹೋಂಡಾ ತನ್ನ ಆರನೇ ತಲೆಮಾರಿನ ಸಿಆರ್-ವಿ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಹೊಸ ಹೋಂಡಾ ಸಿಆರ್-ವಿ ಎಸ್‍ಯುವಿಯು ಹೊಸ ಹೈಬ್ರಿಡ್ ಪವರ್‌ಟ್ರೇನ್ ಜೊತೆಗೆ ಕ್ಲೀನರ್ ವಿನ್ಯಾಸವನ್ನು ಹೊಂದಿದೆ. ಇದು ಎಸ್‍ಯುವಿಗೆ ಹೆಚ್ಚು ಒರಟಾದ ನೋಟವನ್ನು ನೀಡುತ್ತದೆ.

ಹೊಸ ಹೋಂಡಾ ಸಿಆರ್-ವಿ ಎಸ್‍ಯುವಿ ಎರಡು ಪೆಟ್ರೋಲ್ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಇದು 1.5-ಲೀಟರ್ ಟರ್ಬೊ ಮತ್ತು 2.0-ಲೀಟರ್ ಟರ್ಬೊ ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ನೀಡಲಾಗಿದೆ.. ಇದರಲ್ಲಿ 1.5-ಲೀಟರ್ ಟರ್ಬೊ ಎಂಜಿನ್ 187.4 ಬಿಹೆಚ್‍ಪಿ ಪವರ್ ಮತ್ತು 243 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ ಅದು ಎಲ್ಲಾ ನಾಲ್ಕು ವ್ಹೀಲ್ ಗಲಿಗೆ ಪವರ್ ಅನ್ನು ಕಳುಹಿಸುತ್ತದೆ. ಸಿಆರ್-ವಿ ಈ ಎಂಜಿನ್ ಎಕನಾಮಿ, ನಾರ್ಮಲ್, ಸ್ಪೋರ್ಟ್ ಮತ್ತು ಸ್ನೋ ಎಂಬ ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ.

ದೊಡ್ಡದಾದ 2.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಎರಡು ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ 201 ಬಿಹೆಚ್‍ಪಿ ಪವರ್ ಮತ್ತು 335 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ ಮತ್ತು ಎಂಜಿನ್ ನೊಂದಿಗೆ ಸಿವಿಟಿ ಗೇರ್‌ಬಾಕ್ಸ್‌ನೊಂದಿಗೆ ಹೈಬ್ರಿಡ್ ಸಿಸ್ಟಂನೊಂದಿಗೆ ಸಹ ನೀಡಲಾಗುತ್ತದೆ.

ಈ ಹೈಬ್ರಿಡ್ ಸಿಸ್ಟಂ ಎಕನಾಮಿ, ನಾರ್ಮಲ್, ಸ್ಪೋರ್ಟ್ ಮತ್ತು ಸ್ನೋ ಎಂಬ ನಾಲ್ಕು ಡ್ರೈವಿಂಗ್ ಮೋಡ್‌ಗಳನ್ನು ಒಳಗೊಂಡಿದೆ. ಈ ಹೊಸ ಹೋಂಡಾ ಸಿಆರ್-ವಿ ಎಸ್‍ಯುವಿಯು 4,694 ಎಂಎಂ, 1864 ಎಂಎಂ ಅಗಲ ಮತ್ತು 1,692 ಎಂಎಂ ಎತ್ತರವನ್ನು ಹೊಂದಿದೆ. ಈ ಆರನೇ ತಲೆಮಾರಿನ ಹೋಂಡಾ ಸಿಆರ್-ವಿ ಎಸ್‍ಯುವಿ ವ್ಹೀಲ್‌ಬೇಸ್ 2,700 ಎಂಎಂ ಉದ್ದವಿದ್ದರೆ ಮುಂಭಾಗ ಮತ್ತು ಹಿಂಭಾಗದ ಟ್ರ್ಯಾಕ್‌ಗಳು ಕ್ರಮವಾಗಿ 1,610 ಎಂಎಂ ಮತ್ತು 1,626 ಎಂಎಂ ಅಗಲವಿದೆ.

ಈ ಹೊಸ ಹೋಂಡಾ ಸಿಆರ್-ವಿ ಎಸ್‍ಯುವಿಯು EX, EX-L ಮತ್ತು ಸ್ಪೋರ್ಟ್ ರೂಪಾಂತರಗಳು 18-ಇಂಚಿನ ಅಲಾಯ್ ವ್ಹೀಲ್ ಗಳಲ್ಲಿ 235 / 60R18 103H ಟೈರ್‌ಗಳನ್ನು ಹೊಂದಿದೆ. ಈ ಸ್ಪೋರ್ಟ್ ಟೂರಿಂಗ್ ಸಿಆರ್-ವಿ ರೂಪಾಂತರವು 235 / 55R19 101H ಟೈರ್‌ಗಳಲ್ಲಿ 19-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ಹೊಸ ಹೋಂಡಾ ಸಿಆರ್-ವಿ ಎಸ್‍ಯುವಿಯು ಹೊಸ ಗ್ರಿಲ್‌ನೊಂದಿಗೆ ಪರಿಷ್ಕೃತ ಮುಂಭಾಗದ ವಿನ್ಯಾಸವನ್ನು ಹೊಂದಿದೆ. ಈ ಎಸ್‍ಯುವಿಯು ಸಂಯೋಜಿತ ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ ನಯವಾದ ಮತ್ತು ಕೋನೀಯ ಎಲ್ಇಡಿ ಹೆಡ್‌ಲೈಟ್‌ಗಳಿಂದ ಎರಡೂ ಬದಿಗಳಲ್ಲಿ ಸುತ್ತುವರಿಯಲ್ಪಟ್ಟಿದೆ. ಕೆತ್ತಿದ ಮುಂಭಾಗದ ಬಂಪರ್ ಸಣ್ಣ ಸೆಂಟ್ರಲ್ ಏರ್ ಡ್ಯಾಮ್ ಅನ್ನು ಎರಡೂ ಬದಿಗಳಲ್ಲಿ ಏರ್ ಇನ್ ಟೆಕ್ ಅನ್ನು ಸುತ್ತುವರೆದಿದೆ.

ಮುಂಭಾಗದ ಬಂಪರ್‌ಗೆ ಪ್ಲಾಸ್ಟಿಕ್ ಬಾಡಿ ಪ್ರೊಟೆಕ್ಷನ್ ಸಹ ಇದೆ, ಇದನ್ನು ಹೊಸ ಹೋಂಡಾ ಸಿಆರ್-ವಿ ಎಸ್‍ಯುವಿಯು ವೀಲರ್‌ಗಳು, ಬದಿಗಳು ಮತ್ತು ಹಿಂಭಾಗದಲ್ಲಿ ಸಹ ಕಾಣಬಹುದು. ಹಿಂಬದಿಯ ವಿಭಾಗವು ಪರಿಚಿತವಾಗಿ ಕಾಣುತ್ತದೆ ಮತ್ತು ಈಗ ಸೂಕ್ಷ್ಮವಾದ ಸ್ಪಾಯ್ಲರ್ ಅಂಶವನ್ನು ಹೊಂದಿದೆ, ಆದರೆ ಪ್ಲಾಸ್ಟಿಕ್-ಹೊದಿಕೆಯ ಬಂಪರ್ ವಿಭಾಗವು ಎರಡೂ ಬದಿಗಳಲ್ಲಿ ಫಾಕ್ಸ್ ಎಕ್ಸಾಸ್ಟ್ ಟಿಪ್ ಗಳನ್ನು ಹೊಂದಿದೆ.

ಈ ಆರನೇ ಜನರೇಷನ್ ಹೋಂಡಾ ಸಿಆರ್-ವಿ ಒಳಗೆ ಹೆಜ್ಜೆ ಹಾಕಿ ಮತ್ತು ಬದಲಾವಣೆಗಳು ಹೆಚ್ಚು ಸ್ಪಷ್ಟವಾಗಿವೆ. ಹೊಸ ಹೋಂಡಾ ಸಿಆರ್-ವಿ ಎಸ್‍ಯುವಿಯಲ್ಲಿ ಲೆದರ್ ಹೊದಿಕೆಯ ಸ್ಟೀರಿಂಗ್ ವ್ಹೀಲ್ ಹಿಂದೆ 7-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಪ್ಯಾನೆಲ್ ಅನ್ನು ಹೊಂದಿದೆ. ಇದರೊಂದಿಗೆ ಫ್ರೀ-ಸ್ಟ್ಯಾಂಡಿಂಗ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ ಆಗಿದ್ದು, ರೂಪಾಂತರವನ್ನು ಅವಲಂಬಿಸಿ 7 ಅಥವಾ 9-ಇಂಚಿನ ಡಿಸ್‌ಪ್ಲೇ ಗಾತ್ರಗಳಲ್ಲಿ ಆಯ್ಕೆ ಮಾಡಬಹುದು.

ಇನ್ನು ದೊಡ್ಡ ಟಚ್‌ಸ್ಕ್ರೀನ್ ಹೊಂದಿರುವವರು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇಗೆ ಬೆಂಬಲವನ್ನು ಪಡೆಯುತ್ತಾರೆ ಆದರೆ 7-ಇಂಚಿನ ಯುನಿಟ್ ಹೊಂದಿರುವ ಮಾದರಿಗಳು ಇನ್ನೂ ಪ್ಲಗ್ ಇನ್ ಮಾಡಬೇಕಾಗುತ್ತದೆ.

ಈ ಹೊಸ ಹೋಂಡಾ ಸಿಆರ್-ವಿ ಎಸ್‍ಯುವಿಯಲ್ಲಿ ಸುರಕ್ಷಯೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಈ ಎಸ್‍ಯುವಿ ಮುಂಭಾಗದಲ್ಲಿ ವೈಡ್ ಆಂಗಲ್ ಕ್ಯಾಮೆರಾ ಮತ್ತು ಮಿಲಿಮೀಟರ್ ತರಂಗ ರಾಡಾರ್ ಸೇರಿದಂತೆ 10 ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ಒಳಗೊಂಡಂತೆ ಸುರಕ್ಷತಾ ತಂತ್ರಜ್ಞಾನದೊಂದಿಗೆ ಪ್ಯಾಕ್ ಮಾಡಲಾಗಿದೆ.

ಹೊಸ ಹೋಂಡಾ ಸಿಆರ್-ವಿ ಎಸ್‍ಯುವಿ ಟ್ರಾಫಿಕ್ ಜಾಮ್ ಅಸಿಸ್ಟ್ (TJA), ಕಡಿಮೆ ವೇಗದ ಬ್ರೇಕಿಂಗ್ ಕಂಟ್ರೋಲ್ ಮತ್ತು ಟ್ರಾಫಿಕ್ ಸೈನ್ ರೆಕಗ್ನಿಷನ್ (TSR), ಬ್ಲೈಂಡ್ ಸ್ಪಾಟ್ ಅಸಿಸ್ಟ್, ಕಡಿಮೆ ವೇಗದೊಂದಿಗೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (ACC) ಸೇರಿದಂತೆ ಅಡಾಪ್ಟಿವ್ ಡ್ರೈವರ್ ಸಹಾಯಗಳ ಹೋಂಡಾ ಸೆನ್ಸಿಂಗ್ ಸೂಟ್ ಅನ್ನು ಸಹ ಹೊಂದಿದೆ.

ಇನ್ನು ಹೋಂಡಾ ಕಾರ್ಸ್ ಇಂಡಿಯಾ 2022ರ ಜೂನ್ ತಿಂಗಳಿನ ಕಾರು ಮಾರಾಟ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. ಇದರ ಪ್ರಕಾರ, ಜಪಾನಿನ ಕಾರು ತಯಾರಕರು ಕಳೆದ ತಿಂಗಳು ಒಟ್ಟು 10,336 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ಈ ಪೈಕಿ 7,834 ಯುನಿಟ್‌ಗಳು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗಿವೆ. ಮೇ ತಿಂಗಳಲ್ಲಿ ಹೋಂಡಾ 8,188 ಯುನಿಟ್‌ಗಳನ್ನು ಮಾರಾಟ ಮಾಡಿದ್ದರಿಂದ ದೇಶೀಯ ಮಾರಾಟದ ಅಂಕಿ ಅಂಶವು ತಿಂಗಳಿನಿಂದ ತಿಂಗಳಿಗೆ ಶೇಕಡಾ 4.3 ರಷ್ಟು ಕುಸಿತವನ್ನು ಕಂಡಿದೆ. ಆದರೆ ವರ್ಷದಿಂದ ವರ್ಷಕ್ಕೆ 64.3 ಶೇಕಡಾ ಬೆಳವಣಿಗೆಯನ್ನು ಕಂಡಿತು. 2021ರ ಜೂನ್ ತಿಂಗಳಿನಲ್ಲಿ ಕಾರೋನಾ ಸೋಂಕು ಹೆಚ್ಚಳದಿಂದ ಕಾರು ಮಾರಾಟದ ಮೇಲೆ ಪರಿಣಾಮವನ್ನು ಬೀರಿತು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಹೊಸ ಹೋಂಡಾ ಸಿಆರ್-ವಿ ಎಸ್‍ಯುವಿಯು ಹೊಸ ವೈಶಿಷ್ಟ್ಯಗಳ ಹೋಸ್ಟ್‌ನೊಂದಿಗೆ ಪ್ಯಾಕ್ ಮಾಡಲ್ಪಟ್ಟಿದೆ ಮತ್ತು ಪರಿಷ್ಕೃತ ವಿನ್ಯಾಸವನ್ನು ಒಳಗೊಂಡಿದೆ, ಇದು ದೈನಂದಿನ ಎಸ್‌ಯುವಿಯನ್ನು ಹುಡುಕುತ್ತಿರುವವರಿಗೆ ಈ ಎಸ್‍ಯುವಿಯು ಉತ್ತಮ ಆಯ್ಕೆಯಾಗಿರಲಿದೆ.