ಹೊಸ ಹೈಬ್ರಿಡ್ ಇನ್ನೋವಾ ಎಂಟ್ರಿ...ಅಧಿಕೃತ ವೆಬ್‌ಸೈಟ್‌ನಿಂದ ಕ್ರಿಸ್ಟಾವನ್ನು ಕೈಬಿಟ್ಟ ಟೊಯೊಟಾ!

ಜಪಾನಿನ ವಾಹನ ದೈತ್ಯ ಟೊಯೊಟಾ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಇನ್ನೋವಾ ಕ್ರಿಸ್ಟಾವನ್ನು ತೆಗೆದುಹಾಕುವ ಮೂಲಕ ಈಗ ಭಾರತೀಯ ವಾಹನ ಮಾರುಕಟ್ಟೆಯನ್ನು ಆಘಾತಗೊಳಿಸಿದೆ. ಹೊಸ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಕೂಡ ಇತ್ತೀಚೆಗೆ ದೇಶಿಯ ವಾಹನ ಮಾರುಕಟ್ಟೆಯಲ್ಲಿ ಅನಾವರಣಗೊಂಡಿರುವ ಬೆನ್ನಲ್ಲೇ ಟೊಯೊಟಾ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೆ ಟೊಯೋಟಾ ಇಂಡಿಯಾ ಇತ್ತೀಚೆಗೆ ತನ್ನ ಪೆಟ್ರೋಲ್ ಚಾಲಿತ ಇನ್ನೋವಾ ಕ್ರಿಸ್ಟಾ MPV ಯ ಹೊಸ ಸೀಮಿತ ಆವೃತ್ತಿಯ ಮಾದರಿಯನ್ನು ಪರಿಚಯಿಸಿತ್ತು. ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಮತ್ತು MPV ಯ ಡೀಸೆಲ್ ಆವೃತ್ತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರಿಂದ ಕಂಪನಿಯ ಒಟ್ಟಾರೆ ಮಾರಾಟದ ಅಂಕಿಅಂಶಗಳನ್ನು ಸುಧಾರಿಸಲು ಪೆಟ್ರೋಲ್ ಚಾಲಿತ ಇನ್ನೋವಾ ಕ್ರಿಸ್ಟಾ MPV ಅನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿತ್ತು. ಇದು ಹೆಚ್ಚುವರಿ ಇಂಟೀರಿಯರ್ ಫೀಚರ್‌ಗಳೊಂದಿಗೆ ಬಿಡುಗಡೆಯಾಗಿತ್ತು.

ಹಬ್ಬದ ಋತುವಿನಲ್ಲಿ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ಪ್ರಯತ್ನದ ಭಾಗವಾಗಿ, ಕಂಪನಿಯು ಹೊಸ ಸೀಮಿತ-ಆವೃತ್ತಿಯ ಟೊಯೋಟಾ ಇನ್ನೋವಾ ಕ್ರಿಸ್ಟಾವನ್ನು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳೆರಡರಲ್ಲೂ ಇದು ಲಭ್ಯವಾಗಿಸಿತ್ತು. ಹೊಸ ಸೀಮಿತ ಆವೃತ್ತಿಯ ಪ್ಯಾಕ್‌ನ ಭಾಗವಾಗಿ 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಏರ್ ಪ್ಯೂರಿಫೈಯರ್, ವೈರ್‌ಲೆಸ್ ಚಾರ್ಜರ್ ಮತ್ತು 16-ಬಣ್ಣದ ಪ್ರಕಾಶದೊಂದಿಗೆ ಪ್ರಕಾಶಿತ ಸ್ಕಫ್ ಪ್ಲೇಟ್‌ಗಳಂತಹ ವೈಶಿಷ್ಟ್ಯಗಳನ್ನು ಟೊಯೋಟಾ ಇನ್ನೋವಾದಲ್ಲಿ ನೀಡಲಾಗಿದೆ.

ಆದರೂ ಸೀಮಿತ ಆವೃತ್ತಿಯ ಇನ್ನೋವಾ ಕ್ರಿಸ್ಟಾ MPV ಅನ್ನು ಯಾವುದೇ ಪ್ರೀಮಿಯಂ ಶುಲ್ಕವಿಲ್ಲದೆ ಮಾರಾಟ ಮಾಡಲಾಗಿತ್ತು. ಗ್ರಾಹಕರಲ್ಲಿ ಬೇಡಿಕೆ ಕೂಡ ಎಂದಿನಂತೆ ಸ್ಥಿರವಾಗಿಯೇ ಇತ್ತು. ಟೊಯೊಟಾ ಇನ್ನೋವಾ ಕ್ರಿಸ್ಟಾದಲ್ಲಿನ ಪೆಟ್ರೋಲ್ ಪವರ್‌ಟ್ರೇನ್ 2.7-ಲೀಟರ್, ನ್ಯಾಚುಲರಲ್ಲಿ ಆಸ್ಪಿರೇಟೆಡ್ ಘಟಕವಾಗಿದ್ದು 166bhp ಗರಿಷ್ಠ ಶಕ್ತಿ ಮತ್ತು 245Nm ಪೀಕ್ ಟಾರ್ಕ್ ಹೊಂದಿದೆ. ಆದರೆ ಇಂಧನ ದಕ್ಷತೆಯ ವಿಷಯದಲ್ಲಿ ಪ್ರಸ್ತುತದ ಪೈಪೋಟಿಯಲ್ಲಿ ಈ ಪವರ್‌ಟ್ರೇನ್ ಬಾಯಾರಿಕೆಯ ಬದಿಯಲ್ಲಿರುವ ಕಾರಣ ಪೆಟ್ರೋಲ್ ಎಂಜಿನ್‌ನ ಪರಿಷ್ಕರಣೆಯನ್ನು ಇಲ್ಲಿ ಗಮನಿಸಬಹುದಾಗಿದೆ.

ಈ ಮೂಲಕ ಟೊಯೊಟಾ ಇನ್ನೋವಾ ಕ್ರಿಸ್ಟಾವನ್ನು ಈಗ ಅಧಿಕೃತ ವೆಬ್‌ಸೈಟ್‌ನಲ್ಲಿ ಇನ್ನೋವಾ ಹೈಕ್ರಾಸ್ ಎಂಟ್ರಿಯಿಂದಾಗಿ ಬದಲಾಯಿಸಲಾಗಿದೆ. ಮುಂಬರುವ ಇನ್ನೋವಾ ಹೈಕ್ರಾಸ್‌ಗೆ ದೇಶದಲ್ಲಿ ಬೇಡಿಕೆ ಹೆಚ್ಚಾಗಿದ್ದು, ನಾವು Innova Hycross ವಿಶಾಲವಾದ ಗ್ರಾಹಕರ ನೆಲೆಯನ್ನು ಹೊಂದಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನೋವಾ ಹೈಕ್ರಾಸ್‌ನ ಅತಿ ದೊಡ್ಡ ಹೈಲೈಟ್‌ಗಳಲ್ಲಿ ಒಂದು ಅದರ ಹೈಬ್ರಿಡ್ ಪವರ್‌ಟ್ರೇನ್ ಆಗಿದೆ. ಟೊಯೊಟಾ ತನ್ನ ಅರ್ಬನ್ ಕ್ರೂಸರ್ ಹೈರೈಡರ್‌ನಂತೆಯೇ ಇಲ್ಲಿಯೂ ತನ್ನ ಮೆಕಾನಿಕ್ಸ್ ಬಳಸಿದೆ.

ಹೊಸ Innova Hycross ಮಾದರಿಯನ್ನು ತನ್ನ ಹಳೆಯ ಮಾದರಿಗೆ ಹೋಲಿಸಿದರೆ ಹೆಚ್ಚು ಮೈಲೆಜ್ ಹಾಗೂ ಪ್ರೀಮಿಯಂ ಆಗಿರುವುದರ ಜೊತೆಗೆ ಈ ಬಾರಿ ಎಸ್‌ಯುವಿಯಾಗಿ ಹೊರ ಹೊಮ್ಮಿದೆ. ಈ ಹೈಬ್ರಿಡ್ ಪವರ್‌ಟ್ರೇನ್ ವಿಷಯದಲ್ಲಿ ಟೊಯೊಟಾ ಯಶಸ್ಸು ಕಂಡಿರುವುದು ಈಗಾಗಾಲೇ ಅರ್ಬನ್ ಕ್ರೂಸರ್ ಹೈರೈಡರ್ ವಿಷಯದಲ್ಲಿ ಸಾಭೀತಾಗಿದೆ. ಮುಂಬರುವ ಇನ್ನೋವಾ ಹೈಕ್ರಾಸ್ ಇನ್ನೋವಾ ಮಾಡೆಲ್ ಶ್ರೇಣಿಯ ಅತ್ಯಂತ ಇಂಧನ-ಸಮರ್ಥ ವಾಹನವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಟೊಯೊಟಾ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಇನ್ನೋವಾ ಕ್ರಿಸ್ಟಾವನ್ನು ತೆಗೆದುಹಾಕಿರುವುದರಲ್ಲಿ ಆಶ್ಚರ್ಯವೇನಿಲ್ಲ, ಏಕೆಂದರೆ ಮುಂಬರುವ ಇನ್ನೋವಾ ಹೈಕ್ರಾಸ್ ಅದರ ಪೂರ್ವವರ್ತಿಗಿಂತ ಹೆಚ್ಚಿನ ಮೌಲ್ಯಗೊಳೊಂದಿಗೆ ಬಿಡುಗಡೆಯಾಗಲಿದೆ ಎಂಬುದನ್ನು ಕಂಪನಿ ಹೇಳಲು ಹೊರಟಿರುವ ಪ್ರಯತ್ನದ ಭಾಗವಾಗಿದೆ. ಈಗಾಗಲೇ ಡೀಸಲ್ ಆವೃತ್ತಿಗಳನ್ನು ಸ್ಥಗಿತಗೊಳಿಸಿರುವ ಟೊಯೊಟಾ, ಮುಂಬರುವ ಇನ್ನೋವಾ ಹೈಕ್ರಾಸ್ ಅನ್ನು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ನೀಡಲಾಗುವುದು. ಹೊಸ ಇನ್ನೋವಾ ಹೈಕ್ರಾಸ್ ಒಟ್ಟಾರೆ ಎಲ್ಲಾ ವೇರಿಯೆಂಟ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಡ್ರೈವ್‌ಸ್ಪಾರ್ಕ್ ವೆಬ್‌ತಾಣಕ್ಕೆ ಭೇಟಿ ನೀಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
Read more on ಟೊಯೊಟಾ toyota
English summary
New hybrid innova entry toyota drops crysta from official website
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X