ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿಯ ಟೀಸರ್ ಬಿಡುಗಡೆ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಕಂಪನಿಯು ಎನ್ ಸರಣಿಯ ಪರ್ಫಾಮೆನ್ಸ್ ಕಾರುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿದೆ. ಭಾರತದಲ್ಲಿಯು ಹ್ಯುಂಡೈ ಕಂಪನಿಯು ತನ್ನ ಐ20 ಎನ್ ಲೈನ್ ಪರ್ಫಾಮೆನ್ಸ್ ಕಾರನ್ನು ಮಾರಾಟ ಮಾಡುತ್ತಿದೆ.

ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿಯ ಟೀಸರ್ ಬಿಡುಗಡೆ

ಹ್ಯುಂಡೈ ಕಂಪನಿಯು ತನ್ನ ಎನ್ ಲೈನ್ ಪರ್ಫಾಮೆನ್ಸ್ ಕಾರುಗಳ ಸರಣಿನ್ನು ವಿಸ್ತರಿಸುತ್ತಿದೆ. ಶೀಘ್ರದಲ್ಲೇ ಪ್ರಾರಂಭಿಸಲಿರುವ ವೆನ್ಯೂ ಸಬ್-4 ಮೀಟರ್ ಎಸ್‍ಯುವಿಯ ಎನ್ ಲೈನ್ ರೂಪಾಂತರವನ್ನು ಪರೀಕ್ಷಿಸುತ್ತಿದೆ. ಇದೀಗ ಹುಂಡೈ ಬ್ರೆಜಿಲ್ ಕ್ರೆಟಾ ಎಸ್‌ಯುವಿಯಲ್ಲಿ ಎನ್ ಲೈನ್ ಬ್ಯಾಡ್ಜ್ ಅನ್ನು ಬಹಿರಂಗಪಡಿಸುವ ಟೀಸರ್ ಚಿತ್ರವನ್ನು ಬಿಡುಗಡೆ ಮಾಡಿದೆ. ಕ್ರೆಟಾ ಎನ್ ಲೈನ್ ಬಗ್ಗೆ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಇತರ ಎನ್ ಲೈನ್ ಮಾದರಿಗಳಲ್ಲಿ ಲಭ್ಯವಿರುವಂತಹ ಬದಲಾವಣೆಗಳು ಮತ್ತು ಯಾಂತ್ರಿಕ ನವೀಕರಣಗಳನ್ನು ಇದು ಸ್ವೀಕರಿಸುವ ಸಾಧ್ಯತೆಯಿದೆ.

ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿಯ ಟೀಸರ್ ಬಿಡುಗಡೆ

ಎನ್ ಬ್ರ್ಯಾಂಡ್‌ನ ಎರಡು ಅಭಿವೃದ್ಧಿ ಕೇಂದ್ರಗಳನ್ನು ಪ್ರತಿನಿಧಿಸುತ್ತದೆ. ಇದು ಹ್ಯುಂಡೈ ನಮ್ಯಾಂಗ್‌ನಲ್ಲಿರುವ ಜಾಗತಿಕ R&D ಕೇಂದ್ರ ಮತ್ತು ಜರ್ಮನಿಯ ನರ್ಬರ್ಗ್ರಿಂಗ್‌ನಲ್ಲಿರುವ ಹ್ಯುಂಡೈನ ಯುರೋಪಿಯನ್ ತಾಂತ್ರಿಕ ಕೇಂದ್ರವಾಗಿದೆ.

ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿಯ ಟೀಸರ್ ಬಿಡುಗಡೆ

ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಬ್ಯಾಡ್ಜ್, ಮುಂಭಾಗದ ಬಂಪರ್, ಬದಿಗಳು ಮತ್ತು ಕೆಂಪು ಬ್ರೇಕ್ ಕ್ಯಾಲಿಪರ್‌ಗಳಲ್ಲಿ ಕೆಂಪು ಅಸ್ಸೆಂಟ್ ಗಳೊಂದಿಗೆ ಚೆಕ್ಕರ್ ಫ್ಲ್ಯಾಗ್ ಪ್ರೇರಿತ ಫ್ರಂಟ್ ಗ್ರಿಲ್ ಅನ್ನು ಪಡೆಯುವ ಸಾಧ್ಯತೆಯಿದೆ. ಎಸ್‍ಯುವಿ ಹೊಸ ಬಂಪರ್‌ಗಳು ಮತ್ತು ಅಲಾಯ್ ವ್ಹೀಲ್ ಗಳನ್ನು ಸಹ ಪಡೆಯಬಹುದು.

ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿಯ ಟೀಸರ್ ಬಿಡುಗಡೆ

ಕ್ಯಾಬಿನ್ ಒಳಗೆ, ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಕೆಂಪು ಅಸ್ಸೆಂಟ್ ಗಳು, ಕೆಂಪು ಆಂಬಿಯೆಂಟ್ ಲೈಟಿಂಗ್ ಮತ್ತು ಸೀಟ್‌ಗಳ ಮೇಲೆ ವ್ಯತಿರಿಕ್ತವಾದ ಕೆಂಪು ಸ್ಟೀಜ್ ಗಳನ್ನು ಹೊಂದಿರುವ ನಿರೀಕ್ಷೆಯಿದೆ. ಕ್ಯಾಬಿನ್‌ನ ವಿವಿಧ ಭಾಗಗಳಲ್ಲಿ ಎನ್ ಲೈನ್ ಬ್ಯಾಡ್ಜ್ ಅನ್ನು ಸೇರಿಸಲಾಗುತ್ತದೆ.

ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿಯ ಟೀಸರ್ ಬಿಡುಗಡೆ

ಹೊಸ ಕ್ರೆಟಾ ಎನ್ ಲೈನ್ ಯಾವುದೇ ಮಹತ್ವದ ಮೆಕ್ಯಾನಿಕಲ್ ನವೀಕರಣವನ್ನು ಪಡೆಯುವ ಸಾಧ್ಯತೆಯಿಲ್ಲ. ಉತ್ತಮ ಸ್ಟೀರಿಂಗ್ ಪ್ರತಿಕ್ರಿಯೆಗಾಗಿ ಹ್ಯುಂಡೈ ಸಸ್ಪೆಂಕ್ಷನ್ ಸೆಟ್-ಅಪ್ ಅನ್ನು ತಿರುಚುವ ಸಾಧ್ಯತೆಯಿದೆ. ಬ್ರೆಜಿಲಿಯನ್ ಮಾರುಕಟ್ಟೆಯಲ್ಲಿ, ಹೊಸ ಕ್ರೆಟಾವನ್ನು 2.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುತ್ತದೆ.

ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿಯ ಟೀಸರ್ ಬಿಡುಗಡೆ

ಭಾರತ-ಸ್ಪೆಕ್ ಮಾದರಿಯು ಅಸ್ತಿತ್ವದಲ್ಲಿರುವ ಎಂಜಿನ್ ಲೈನ್-ಅಪ್‌ನೊಂದಿಗೆ ಮುಂದುವರಿಯುತ್ತದೆ, ಹುಂಡೈ ಈ ವರ್ಷದ ಅಂತ್ಯದ ಮೊದಲು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕ್ರೆಟಾ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಲಿದೆ. ಹೊಸ ಮಾದರಿಯು ಇಂಡೋನೇಷ್ಯಾ, ಥೈಲ್ಯಾಂಡ್ ಮತ್ತು ಇತರ ಸೇರಿದಂತೆ ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಮಾರಾಟದಲ್ಲಿದೆ.

ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿಯ ಟೀಸರ್ ಬಿಡುಗಡೆ

ಇನ್ನು ಹ್ಯುಂಡೈ ಕ್ರೆಟಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಅತ್ಯಂತ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ಜನಪ್ರಿಯ ಮಾದರಿಯಾಗಿದೆ.

ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿಯ ಟೀಸರ್ ಬಿಡುಗಡೆ

ಹೊಸ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯನ್ನು 2021ರ ಗೈಕಿಂಡೋ ಇಂಡೋನೇಷ್ಯಾ ಇಂಟರ್‌ನ್ಯಾಶನಲ್ ಆಟೋ ಶೋ (GIIAS) ನಲ್ಲಿ ಜಾಗತಿಕವಾಗಿ ಇತ್ತೀಚೆಗೆ ಹ್ಯುಂಡೈ ಕಂಪನಿಯು ಅನಾವರಣಗೊಳಿಸಿತ್ತು. 2022ರ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್(Hyundai Creta Facelift) ಎಸ್‍ಯುವಿಯು ಹೊಸ ನವೀಕರಣಗಳನ್ನು ಪಡೆದುಕೊಂಡಿದೆ. ಬ್ರ್ಯಾಂಡ್ ಈಗ ಕಾರಿನ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿಯ ಟೀಸರ್ ಬಿಡುಗಡೆ

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಈ ಕ್ಯಾಲೆಂಡರ್ ವರ್ಷದ ದ್ವಿತೀಯಾರ್ಧದಲ್ಲಿ ಕ್ರೆಟಾದ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹೊಸ ನ್ಯೂ ಜನರೇಷನ್ ಟ್ಯೂಸಾನ್ ಮಾದರಿಯಂತೆ ಸ್ಪೋರ್ಟಿನೆಸ್ ವಿನ್ಯಾಸವನ್ನು ಕ್ರೆಟಾ ಫೇಸ್‌ಲಿಫ್ಟ್ ಪಡೆದುಕೊಂಡಿದೆ. ಹೆಚ್ಚು ಯುವ ಗ್ರಾಹಕರನ್ನು ಸೆಳೆಯುವಂತಿದೆ. ಅದರ ಮುಂಭಾಗವು ಹ್ಯುಂಡೈ ಕ್ರೆಟಾ ಗ್ರ್ಯಾಂಡ್ ಮಾದರಿಯಿಂದ ಎರವಲು ಪಡೆದುಕೊಂಡಿದೆ. 2022ರ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿ ಹೊಸ ಪ್ಯಾರಾಮೆಟ್ರಿಕ್ ಜ್ಯುವೆಲ್ ಪ್ಯಾಟರ್ನ್ ಗ್ರಿಲ್ ಅನ್ನು ಹೊಂದಿದ್ದು ಅದು ಎಲ್‌ಇಡಿ ಡಿಆರ್‌ಎಲ್‌ ಗಳನ್ನು ಸಂಯೋಜಿಸುತ್ತದೆ.

ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿಯ ಟೀಸರ್ ಬಿಡುಗಡೆ

ಇದು ಈ ಎಸ್‍ಯುವಿಯನ್ನು ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿದೆ. ಇನ್ನು ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ತೆಳ್ಳನೆಯ ಏರ್ ಇನ್ ಟೆಕ್ ನೊಂದಿಗೆ ಪರಿಷ್ಕೃತ ಬಂಪರ್, ಸಿಲ್ವರ್ ಬಣ್ಣದ ಫಾಕ್ಸ್ ಸ್ಕಿಡ್ ಪ್ಲೇಟ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಫಾಗ್ ಲ್ಯಾಂಪ್ ಅಸೆಂಬ್ಲಿ ಅದರ ಸ್ಪೋರ್ಟಿಯರ್ ನೋಟವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯಲ್ಲಿ ಹೊಸ, ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಇದರ ಸೈಡ್ ಪ್ರೊಫೈಲ್ ಬದಲಾಗದೆ ಉಳಿಯುತ್ತದೆ. ಪ್ರಸ್ತುತ ಮಾದರಿಗಿಂತ ಭಿನ್ನವಾಗಿ, ಹೊಸ ಕ್ರೆಟಾದ ಫೇಸ್‌ಲಿಫ್ಟ್ ಎಸ್‍ಯುವಿಯು ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು ಟೈಲ್‌ಗೇಟ್‌ನ ಅಗಲದಲ್ಲಿ ಚಲಿಸುವ ಸಂಪರ್ಕಿಸುವ ಪಟ್ಟಿಯನ್ನು ತಪ್ಪಿಸುತ್ತದೆ.

ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿಯ ಟೀಸರ್ ಬಿಡುಗಡೆ

2022ರ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಇಂಟಿರಿಯರ್ ವಿನ್ಯಾಸವು ಬದಲಾಗದೆ ಹಾಗೇ ಉಳಿದಿದೆ, ಆದರೆ ಹೊಸ ಫೀಚರ್ಸ್ ಗಳನ್ನು ಪಡೆದುಕೊಂಡಿದೆ. ಈ ಎಸ್‍ಯುವಿಯು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ನೊಂದಿಗೆ ಬರುತ್ತದೆ. ಇದನ್ನು ಇಂಡಿಯಾ-ಸ್ಪೆಕ್ ಮಾದರಿಯಲ್ಲಿ ಸಹ ನೀಡಬಹುದು. ಹೊಸ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ನವೀಕರಿಸಿದ ಬ್ಲೂಲಿಂಕ್ ಕನೆಕ್ಟಿವಿಟಿಯ ಕಾರ್ ತಂತ್ರಜ್ಞಾನ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಹೊಂದಿರಲಿದೆ.

Most Read Articles

Kannada
English summary
New hyundai creta n line officially teased ahead of global debut details
Story first published: Friday, May 27, 2022, 12:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X