ಐಷಾರಾಮಿ ಸೌಲಭ್ಯವುಳ್ಳ ಸ್ಟಾರಿಯಾ ಲಿಮೋಸಿನ್ ವೆರಿಯೆಂಟ್ ಪರಿಚಯಿಸಿದ ಹ್ಯುಂಡೈ

ದಕ್ಷಿಣ ಕೊರಿಯಾದ ಹ್ಯುಂಡೈ ಕಂಪನಿಯ ಸ್ಟಾರಿಯಾವನ್ನು ಕ್ಯಾಂಪರ್, ಕಮರ್ಷಿಯಲ್ ವ್ಯಾನ್ ಮತ್ತು ಸ್ಕೂಲ್ ಬಸ್ ಮಾದರಿಗಳಲ್ಲಿ ಮಾರಾಟ ಮಾಡುತ್ತಿದೆ. ಹ್ಯುಂಡೈ ಕಂಪನಿಯು ಇದೀಗ ಲೌಂಜ್ ಲಿಮೋಸಿನ್ ಎಂದು ಕರೆಯಲ್ಪಡುವ, ಹ್ಯುಂಡೈ ಸ್ಟಾರಿಯಾ ಎಂಪಿವಿಯ ಹೊಸ ರೂಪಾಂತರವನ್ನು ಪರಿಚಯಿಸಿದೆ.

ಐಷಾರಾಮಿ ಸೌಲಭ್ಯವುಳ್ಳ ಸ್ಟಾರಿಯಾ ಲಿಮೋಸಿನ್ ಕಾರನ್ನು ಪರಿಚಯಿಸಿದ ಹ್ಯುಂಡೈ

ಹ್ಯುಂಡೈ ಸ್ಟಾರಿಯಾ ಲೌಂಜ್ ಲಿಮೋಸಿನ್ ವೆರಿಯೆಂಟ್ ವಿಸ್ತೃತ ರೂಫ್ ಅನ್ನು ಹೊಂದಿದೆ ,ಕ್ಯಾಬಿನ್‌ನ ಒಳಗಿನ ಹೆಡ್‌ರೂಮ್ 8 ಇಂಚುಗಳಷ್ಟು (20.5 cm) ಹೆಚ್ಚಾಗುತ್ತದೆ ಮತ್ತು ಇದು 25-ಇಂಚಿನ ಬೃಹತ್ ಡಿಸ್ ಪ್ಲೇಯ ಫಿಟ್‌ಮೆಂಟ್‌ಗೆ ಸ್ಥಳಾವಕಾಶವನ್ನು ನೀಡುತ್ತದೆ, ಇದು ಸ್ಟಾರಿಯಾ ಸರಣಿಯಲ್ಲಿ ದೊಡ್ಡದಾಗಿದೆ ಎಂದು ಹ್ಯುಂಡೈ ಹೇಳಿಕೊಂಡಿದೆ. ಡಿಸ್ ಪ್ಲೇಯ ಜೊತೆಗೆ HDMI ಮತ್ತು USB ಕನೆಕ್ಟಿವಿಟಿ, HD ಡಿಜಿಟಲ್ ಮಲ್ಟಿಮೀಡಿಯಾ ಬ್ರಾಡ್‌ಕಾಸ್ಟಿಂಗ್ (DMB) ಮತ್ತು ಸ್ಮಾರ್ಟ್‌ಫೋನ್ ಪ್ರತಿಬಿಂಬಿಸುವಂತಹ ಮಲ್ಟಿಮೀಡಿಯಾ ಅಕ್ಸೆಸರೀಸ್ ಗಳ ಸಂಪೂರ್ಣ ಸೂಟ್ ಲಭ್ಯವಿದೆ. HD DMB ಅನ್ನು ಮೊಬೈಲ್ ಸಾಧನಗಳಿಗೆ ಹೈ-ಡೆಫಿನಿಷನ್ ರೇಡಿಯೋ ಮತ್ತು ಟಿವಿ ಸಿಗ್ನಲ್‌ಗಳನ್ನು ಪ್ರಸಾರ ಮಾಡಲು ಬಳಸಲಾಗುತ್ತದೆ.

ಐಷಾರಾಮಿ ಸೌಲಭ್ಯವುಳ್ಳ ಸ್ಟಾರಿಯಾ ಲಿಮೋಸಿನ್ ಕಾರನ್ನು ಪರಿಚಯಿಸಿದ ಹ್ಯುಂಡೈ

ಸ್ಟಾರಿಯಾ ಎಂಪಿವಿ ಕ್ಯಾಂಪರ್‌ನಂತೆಯೇ, ಲೌಂಜ್ ಲಿಮೋಸಿನ್ ರೂಫ್ ಮೇಲೆ 'ಸ್ಟಾರಿ ಸ್ಕೈ' ಲೈಟಿಂಗ್‌ನೊಂದಿಗೆ ಬರುತ್ತದೆ ಮತ್ತು ಇದು ಏರ್ ಪ್ಯೂರಿಫೈಯರ್‌ನೊಂದಿಗೆ ಬರುತ್ತದೆ. ಎರಡನೇ ಮತ್ತು ಮೂರನೇ ಸಾಲಿನ ಪ್ರಯಾಣಿಕಕರು ಹೆಚ್ಚುವರಿ ಎಲ್ಇಡಿಗಳನ್ನು ಪಡೆಯುತ್ತಾರೆ, ಇದು 'ಸ್ಟಾರಿ ಸ್ಕೈ' ಲ್ಯಾಂಟ್ ಗಳೊಂದಿಗೆ ಕ್ಯಾಬಿನ್ ಅನ್ನು ಆರಾಮದಾಯಕವಾಗಿಸುತ್ತದೆ.

ಐಷಾರಾಮಿ ಸೌಲಭ್ಯವುಳ್ಳ ಸ್ಟಾರಿಯಾ ಲಿಮೋಸಿನ್ ಕಾರನ್ನು ಪರಿಚಯಿಸಿದ ಹ್ಯುಂಡೈ

ಇದು ಐಷಾರಾಮಿ ವಾಹನವಾಗಿರುವುದರಿಂದ, ಹ್ಯುಂಡೈ ಸುಗಮ, ಬೆಲೆಬಾಳುವ ಸವಾರಿಗಾಗಿ ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಮತ್ತು ಸಸ್ಪೆಂಕ್ಷನ್ ಅನ್ನು ಮತ್ತಷ್ಟು ಟ್ಯೂನ್ ಮಾಡಿದೆ. ಇಂಜಿನಿಯರ್‌ಗಳು ಪ್ರಯಾಣಿಕರ ಉತ್ತಮ ವಾರಿಯನ್ನು ಖಚಿತಪಡಿಸಿಕೊಳ್ಳಲು ಸುತ್ತಲೂ ಹೆಚ್ಚುವರಿ ವಸ್ತುಗಳನ್ನು ಸೇರಿಸಿದ್ದಾರೆ.

ಐಷಾರಾಮಿ ಸೌಲಭ್ಯವುಳ್ಳ ಸ್ಟಾರಿಯಾ ಲಿಮೋಸಿನ್ ಕಾರನ್ನು ಪರಿಚಯಿಸಿದ ಹ್ಯುಂಡೈ

ಹ್ಯುಂಡೈ ಸ್ಟಾರಿಯಾ ಲೌಂಜ್ ಲಿಮೋಸಿನ್ ಏಳು ಅಥವಾ ಒಂಬತ್ತು ಸೀಟುಗಳ ಆಯ್ಕೆಯೊಂದಿಗೆ ಬರುತ್ತದೆ ಮತ್ತು ಎರಡೂ ಆವೃತ್ತಿಗಳಲ್ಲಿ ಸಾಮಾನ್ಯವಾದ ಚಲಿಸಬಲ್ಲ ಸೆಂಟರ್ ಕನ್ಸೋಲ್ ಆಗಿದೆ. ಇದನ್ನು ಮುಂಭಾಗದಿಂದ ಕೊನೆಯ ಸಾಲಿಗೆ ಅಂತರ್ನಿರ್ಮಿತ ಟೇಬಲ್‌ನೊಂದಿಗೆ ಸರಿಸಬಹುದು. ಕನ್ಸೋಲ್‌ನಲ್ಲಿ ಕಪ್ ಹೋಲ್ಡರ್‌ಗಳು ಮತ್ತು ಟೈಪ್-ಸಿ ಯುಎಸ್‌ಬಿ ಅಳವಡಿಸಲಾಗಿದೆ.

ಐಷಾರಾಮಿ ಸೌಲಭ್ಯವುಳ್ಳ ಸ್ಟಾರಿಯಾ ಲಿಮೋಸಿನ್ ಕಾರನ್ನು ಪರಿಚಯಿಸಿದ ಹ್ಯುಂಡೈ

ಸ್ಲೈಡಿಂಗ್ ಡೋರ್ ಅನ್ನು ತೆರೆಯುವಾಗ, ಒಳಗೆ ಪ್ರವೇಶ ಮತ್ತು ಹೊರಹೋಗುವಿಕೆಯನ್ನು ಸುಲಭಗೊಳಿಸುತ್ತದೆ. ಎತ್ತರದ ರೂಫ್ ಹೊರತಾಗಿ, ಸ್ಟಾರಿಯಾ ಲೌಂಜ್ ಲಿಮೋಸಿನ್ ಅನ್ನು ಇತರ ರೂಪಾಂತರಗಳಿಂದ ಪ್ರತ್ಯೇಕಿಸುವ ಇತರ ವೈಶಿಷ್ಟ್ಯಗಳು ಎರಡು-ಟೋನ್ ಅಲಾಯ್ ವ್ಹೀಲ್ ಗಳು, ಇದು ಉನ್ನತ ರೂಪಾಂತರಕ್ಕೆ ಪ್ರತ್ಯೇಕವಾಗಿದೆ.

ಐಷಾರಾಮಿ ಸೌಲಭ್ಯವುಳ್ಳ ಸ್ಟಾರಿಯಾ ಲಿಮೋಸಿನ್ ಕಾರನ್ನು ಪರಿಚಯಿಸಿದ ಹ್ಯುಂಡೈ

ಹ್ಯುಂಡೈ ಸ್ಟಾರಿಯಾ ಲೌಂಜ್ ಲಿಮೋಸಿನ್ ಕ್ರೀಮಿ ವೈಟ್ ಮತ್ತು ಬ್ಲ್ಯಾಕ್ ಪರ್ಲ್ ಎಂಬ ಎರಡೂ ಬಣ್ಣಗಳ ಆಯ್ಕೆಗಳನ್ನು ಹೊಂದಿವೆ. ಈ ಹುಂಡೈ ಸ್ಟಾರಿಯಾ ಎಂಪಿವಿ ಮೂರು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ: ಪೆಟ್ರೋಲ್, LPG ಮತ್ತು ಡೀಸೆಲ್. ಪೆಟ್ರೋಲ್ ಸ್ಮಾರ್ಟ್‌ಸ್ಟ್ರೀಮ್ G3.5 3470 ಸಿಸಿ ವಿ6 268 ಬಿಹೆಚ್‍ಪಿ ಪವರ್ ಮತ್ತು 331 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಐಷಾರಾಮಿ ಸೌಲಭ್ಯವುಳ್ಳ ಸ್ಟಾರಿಯಾ ಲಿಮೋಸಿನ್ ಕಾರನ್ನು ಪರಿಚಯಿಸಿದ ಹ್ಯುಂಡೈ

ಇನ್ನು LPG 3470 ಸಿಸಿ ವಿ6 237 ಬಿಒಹೆಚ್‍ಪಿ ಪವರ್ ಮತ್ತು 310 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 2.2-ಲೀಟರ್ ಟರ್ಬೊ ಡೀಸೆಲ್ ಮಾದರಿಯು 177-ಬಿಹೆಚ್‌ಪಿ, 431-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಐಷಾರಾಮಿ ಸೌಲಭ್ಯವುಳ್ಳ ಸ್ಟಾರಿಯಾ ಲಿಮೋಸಿನ್ ಕಾರನ್ನು ಪರಿಚಯಿಸಿದ ಹ್ಯುಂಡೈ

ಎಲ್ಲಾ ಎಂಜಿನ್‌ಗಳು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತವೆ, ಆದರೆ ಡೀಸೆಲ್ 6-ಸ್ಪೀಡ್ ಮ್ಯಾನುವಲ್ ಆಯ್ಕೆಯನ್ನು ಸಹ ಪಡೆಯುತ್ತದೆ. ಹ್ಯುಂಡೈ ಭಾರತದಲ್ಲಿ ಸ್ಟಾರಿಯಾ ಎಂಪಿವಿಯನ್ನು 2023 ರಲ್ಲಿ ಬಿಡುಗಡೆ ಮಾಡಬಹುದೆಂದು ಊಹಿಸಲಾಗಿದೆ ಮತ್ತು ಅದು ಪ್ರೀಮಿಯಂ ಬೆಲೆಯನ್ನು ಹೊಂದಿರಬಹುದು ಎಂದು ನಿರೀಕ್ಷಿಸಬಹುದು.

ಐಷಾರಾಮಿ ಸೌಲಭ್ಯವುಳ್ಳ ಸ್ಟಾರಿಯಾ ಲಿಮೋಸಿನ್ ಕಾರನ್ನು ಪರಿಚಯಿಸಿದ ಹ್ಯುಂಡೈ

ಇನ್ನು ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ 2022ರ ಮಾರ್ಚ್ ತಿಂಗಳ ಕಾರು ಮಾರಾಟದ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿತ್ತು. ವರದಿಗಳ ಪ್ರಕಾರ, ಕಳೆದ ತಿಂಗಳು ಹ್ಯುಂಡೈ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 44,600 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ 52,600 ಯುನಿಟ್‌ಗಳನ್ನು ಹ್ಯುಂಡೈ ಕಂಪನಿಯು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 15.20 ರಷ್ಟು ಕುಸಿತವನ್ನು ಕಂಡಿದೆ,

ಐಷಾರಾಮಿ ಸೌಲಭ್ಯವುಳ್ಳ ಸ್ಟಾರಿಯಾ ಲಿಮೋಸಿನ್ ಕಾರನ್ನು ಪರಿಚಯಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಕಳೆದ ತಿಂಗಳು ಭಾರತದಿಂದ 10,687 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಕಳೆದ ವರ್ಷ ಇದೇ ತಿಂಗಳಲ್ಲಿ ರಫ್ತು ಮಾಡಿದ 12,021 ಯುನಿಟ್‌ಗಳಾಗಿತ್ತು. ಇದನ್ನು ಕಳೆದ ತಿಂಗಳ ಕಂಪನಿಯ ರಫ್ತಿಗೆ ಹೋಲಿಸಿದರೆ ಶೇ.11.09 ರಷ್ಟು ಇಳಿಕೆ ಕಂಡಿದೆ. ಇನ್ನು ಹಣಕಾಸು ವರ್ಷ 2022 ಮಾರಾಟಕ್ಕೆ ಬಂದರೆ, ಕಂಪನಿಯು ಶೇಕಡಾ 2.1 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ, ಇದು ಒಂದು ವರ್ಷದ ಹಿಂದಿನ ಅವಧಿಯಲ್ಲಿ ಮಾರಾಟವಾದ 4,71,535 ಯುನಿಟ್‌ಗಳಿಗೆ ಹೋಲಿಸಿದರೆ ದೇಶೀಯ ಮಾರುಕಟ್ಟೆಯಲ್ಲಿ 4,81,500 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಐಷಾರಾಮಿ ಸೌಲಭ್ಯವುಳ್ಳ ಸ್ಟಾರಿಯಾ ಲಿಮೋಸಿನ್ ಕಾರನ್ನು ಪರಿಚಯಿಸಿದ ಹ್ಯುಂಡೈ

ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕಂಪನಿಯು ತನ್ನ ಪೋರ್ಟ್‌ಫೋಲಿಯೊವನ್ನು ಬಲಪಡಿಸಲು ಈ ವರ್ಷದ ಅವಧಿಯಲ್ಲಿ ಹೊಸ ಮಾದರಿಗಳನ್ನು ತರುವ ಸಾಧ್ಯತೆಯಿದೆ .ಹುಂಡೈ ಮುಂಬರುವ ತಿಂಗಳುಗಳಲ್ಲಿ ವೆನ್ಯೂ ಕಾಂಪ್ಯಾಕ್ಟ್ ಎಸ್‌ಯುವಿಯ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

Most Read Articles

Kannada
English summary
New hyundai staria lounge limousine debuts features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X